ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ಎಂಬಾತ ಡೆಸೈನ್ ಮಾಡಿದ ಒಂದು ಹೊಸ ತರದ ಗಡಿಯಾರದ ಚರ್ಚೆ ಪೇಪರುಗಳ ತುಂಬೆಲ್ಲಾ ನಡೆಯುತ್ತಿದೆ. ಅದರ ಚಿತ್ರ ನೋಡಿದರೆ ಮುಳ್ಳೇ ಇಲ್ಲದ ಈ ಗಡಿಯಾರದಲ್ಲಿ ಸಮಯ ನೋಡುವುದು ಹೇಗೆ ಅಂತ ಅರ್ಥವಾಗುವುದಿಲ್ಲ. ಅದು ಆಗಾಗ ನಿಧಾನಕ್ಕೆ, ಆಗಾಗ ಬೇಗ ಓಡಿ, ಆಗಾಗ ನಿಂತು ಹೋಗಿ “ಸಮಯ” ಎಂಬುದು ಕಾರಾರುವಾಕ್ಕಾದದ್ದು ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದಂತೆ. ಇದರ ಮೇಲೆ ಕೂತ ಬೃಹತ್ ಮಿಡತೆ ಆಗಾಗ ಬಾಲ ಅಲ್ಲಾಡಿಸ್ಸುತ್ತಾ, ಕಣ್ಣುಗಳನ್ನು ಹಳದಿ, ಕೆಂಪು ಬಣ್ಣಕ್ಕೆ ತಿರುಗಿಸುತ್ತಾ ಸಮಯವನ್ನು ಹೊಂಚುಹಾಕಿ ನುಂಗುತ್ತಾ ಕೂತಿರುತ್ತದಂತೆ.
ಅಚಲವಾಗಿ ಕೂತು ನಮ್ಮ ದಿನದ ಓಟವನ್ನು ಅರ್ಥ ಸ್ವಾರ್ಥಗಳಿಗೆ ಎಡೆಗೊಡದೆ ನಿರ್ಭಾವದಿಂದ ಅಳೆಯುವ ನಮ್ಮೆಲ್ಲರ ಮನೆಯ ಗೋಡೆಯ ಮೇಲಿನ ಗಡಿಯಾರ ಎಂಬ ಯಂತ್ರ ಒಂದು installation ಕೃತಿಯೂ, ಮೆಟಫಿಸಿಕಲ್ ಸಿಂಬಲ್ಲೂ ಹೌದಲ್ಲವಾ ಅಂತ ಪೇಪರ್ರಿನ ಸುದ್ದಿ ಓದುವಾಗ ಅನ್ನಿಸುತ್ತಾ ಇದೆ. ಮೇಲೆ ಮಿಡತೆ ಕೂರದ ಮಾಮೂಲು ಗಡಿಯಾರಗಳೂ ನಮ್ಮ ಧಾವಂತವನ್ನು ನೋಡಿ ಒಳಗೊಳಗೇ ನಗುತ್ತಾ “ಓಡು, ಓಡು” ಅಂತ ತಮಾಷೆ ನೋಡುತ್ತಿರಬಹುದು!
ಗಡಿಯಾರದ ಕಣ್ಣು ತಪ್ಪಿಸಿ ಒಂದೆರಡು ಗಳಿಗೆಗಳನ್ನು ಕದ್ದು ಅನುಭವಿಸುವ ವಿಫಲ ಪ್ರಯತ್ನಗಳನ್ನು ನಾವೆಲ್ಲಾ ಮಾಡುತ್ತಿರುತ್ತೇವೆ ಅಲ್ಲವಾ? ಪ್ರೀತಿ, ಕಲೆ, ದೇವರ ಕಲ್ಪನೆ ಅಲ್ಲವೂ ಈ ಕಾಲದ ಚಕ್ರದ ಕೆಳಗೆ ಒಂದು ಪುಟ್ಟ ಕಲ್ಲಿಟ್ಟು ಸ್ವಲ್ಪವಾದರೂ ನಿಧಾನ ಮಾಡುವ ಪ್ರಯತ್ನಗಳೇ ಅನ್ನಬಹುದು. Read the rest of this entry »
Archive for September, 2008
ಸಮಯವನ್ನು ನುಂಗುವ ಸಮಯ
ನಾಟಿ ಕಥಲು ವ್ಯಥಲೇನಾ?
ಅಂದರೆ “ನಿನ್ನೆಯ ಕಥೆಗಳು ಬರೀ ಗೋಳೇನಾ?” ಅಂತ. ಭಾನುಮತಿ ೧೯೫೧ನಲ್ಲಿ ರಿಲೀಸ್ ಆದ ಮಲ್ಲೇಸ್ವರಿ ಎಂಬ ತೆಲುಗು ಸಿನೆಮಾದಲ್ಲಿ “ಅವ್ನಾ ನಿಜಮೇನಾ?” ಎಂಬ ಹಾಡಿನಲ್ಲಿ ಹಾಡಿನ ಒಂದು ಸಾಲು.
ಇವತ್ತು ಗಣೇಶ ಹಬ್ಬಕ್ಕೆ ರಜ. ಇಡೀ ದಿನ ಹಳೆ ಹಾಡುಗಳನ್ನು ಕೇಳ್ತಾ ಇದ್ದೇನೆ. ಈ ಹಾಡಿನ ಬಗ್ಗೆ ಗೂಗಲ್ ಮಾಡಿದರೆ ಯೂಟ್ಯೂಬ್ನಲ್ಲಿ ಎನ್ ಟಿ ಆರ್ (ವಯಸ್ಸು ಕಾಣಿಸಬಾರದು ಅಂತ ಮುಖಕ್ಕೆ ಮೈದಾಹಿಟ್ಟಿನಂತೆ ಮೇಕಪ್ ಹಚ್ಚುವುದಕ್ಕೆ ಮುಂಚಿನ ಕಾಲದ ರೂಪದಲ್ಲಿ) ಮತ್ತು ಭಾನುಮತಿಯ ಈ ಹಾಡಿನ ತುಣುಕು ಕೂಡ ಸಿಕ್ಕಿ ಖುಶಿ ಆಯಿತು. ಮತ್ತೆ ಒಂದಷ್ಟು ಜಿಕ್ಕಿ, ಬಾಲ ಸರಸ್ವತಿ, ಶಂಶಾದ್ ಬೇಗಂ, ಗೀತಾ ದತ್… ಹೀಗೆ ಏನೇನೋ random ಆಗಿ ಹಾಡುಗಳನ್ನು ತುಂಬ ದಿನದ ನಂತರ ಒಂದೇ ಸಮ ಕಾರಿನಲ್ಲಿ, ಮನೆಯಲ್ಲಿ ಕೇಳುತ್ತಾ ಇದ್ದೇವೆ. ಹಬ್ಬದ ಹುಚ್ಚು ಶಾಪಿಂಗ್ ಗಿಜಿಗಿಜಿ, ಟ್ರಾಫಿಕ ಜ್ಯಾಮು ದಿನಾ ಆಗುವಷ್ಟು ಕಿರಿಕಿರಿ ಆಗ್ತಾ ಇಲ್ಲ. Read the rest of this entry »