Bageshree

ಭಾರತ ಬಿಟ್ಟು ಎಲ್ಲಿಗೆ ತೊಲಗುವುದು?
ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಮೇಲೆ ಇನ್ನು ಏನು ದಾರಿ ಉಂಟು.

ಕಾಗೇರಿಯವರು ಆ ರೀತಿ ಕೋಲಾರದಲ್ಲಿ ಹೇಳಿದ ದಿನ ಅವರ ಒಂದು ಪಕ್ಕ ಪೇಜಾವರ ಶ್ರೀಗಳೂ ಇನ್ನೊಂದೆಡೆ ನಮ್ಮ ಸ್ಕೂಲುಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಸಿ ಸಿಕ್ಕಾಪಟ್ಟೆ ಪುಣ್ಯ ಕಟ್ಟಿಕೊಂಡಿರುವ ಸೊಂದಾ ಶ್ರೀಗಳೂ ವಿರಾಜಮಾನರಾಗಿದ್ದರು. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಉಮೇದು ಬಂದು ಇದು ಶಾಖೆಯ ಕಾರ್ಯಕ್ರಮ ಅಲ್ಲ  ಎಂಬುದನ್ನು ಒಂದು ಕ್ಷಣ ಮೈಮರೆತು ಹೇಳಿರಬಹುದಾ ಅಂತ ಅನ್ನಿಸಿತು. ಮುಂದಿನ ದಿನ ಮಂತ್ರಿಗಳ ಮಾಮೂಲಿ ಸ್ಟೈಲಿನಲ್ಲಿ ನಾನು ಹಾಗೆ ಹೇಳಲೇ ಇಲ್ಲ, ನನ್ನನ್ನು ಮಿಸ್ ಕೋಟ್ ಮಾಡಿದ್ದಾರೆ ಅಂತ ಹೇಳಿಯಾರು ಅಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅಷ್ಟೆ ಅಲ್ಲದೆ ಅವರ ಪಾರ್ಟಿಯ ಭೀಷಣ ಭಾಷಣಕಾರರಾದ ಈಶ್ವರಪ್ಪ ಅದೇ ಅರ್ಥದ ಮಾತುಗಳನ್ನು ಪುನರುಚ್ಛರಿಸಿದ್ದಾರೆ.

ಇನ್ನೂ ಆಶ್ಚರ್ಯವೆಂದರೆ ಯಾವುದೇ ಅನುಮಾನ ಇಲ್ಲದೆ ಫಾಸಿಸ್ಟ್ ಅಂತ ಕರೆಯಬಹುದಾದ  ಕಾಗೇರಿಯವರ ಮಾತನ್ನು ಖಂಡಿಸಬೇಕಾದಷ್ಟು ಯಾರೂ ತಕ್ಷಣದಲ್ಲಿ ಖಂಡಿಸಿಲಿಲ್ಲ. ಭೈರಪ್ಪನವರ ಕಾದಂಬರಿಯ ಬಗ್ಗೆ ತುಂಬಾ ತಲೆಕೆಡಿಕೊಂಡ ಮಂದಿಯೂ ಸೇರಿದಂತೆ ಎಲ್ಲರೂ ಒಬ್ಬ ಮಂತ್ರಿಯ ನೇರ ಧಮಕಿಯ ಬಗ್ಗೆ ಅದೇನೂ ವಿಶೇಷ ಅಲ್ಲ ಎಂಬಂತೆ ತಣ್ಣಗಿರುವುದು ಆಶ್ಚರ್ಯವೇ.

ಈ ಅಭಿಯಾನ ಶುರುವಾದ ಮೊದಲ ಹಂತದಲ್ಲಿ ಎದ್ದ ಪ್ರಶ್ನೆಗಳಿಗೆ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಖಡ್ಡಾಯ ಅಲ್ಲ ಅಂತ ಮತ್ತೆ ಮತ್ತೆ ಇಲಾಖೆಯ ಅಧಿಕಾರಿಗಳು, ಮಂತ್ರಿಗಳು ಹೇಳುತ್ತಾ ಇದ್ದರು. ತಾವು ಡಿಡಿಪಿಐಗಳಿಗೆ ಕಳಿಸಿದ ಸರ್ಕ್ಯುಲರ್ರುಗಳಲ್ಲಿ ಟ್ರೈನಿಂಟ್ ಗೆ ಪ್ರಾಧ್ಯಾಪಕರನ್ನು ಕಳಿಸುವುದು ಖಡ್ಡಾಯ ಅಂದಾಗಲೂ ಎಲ್ಲಾ ಮಕ್ಕಳು ಭಾಗವಹಿಸುವುದು ಖಡ್ಡಾಯ ಅಂತ ನೇರ ಹೇಳದೆ ambiguity ಕಾದುಕೊಂಡಿದ್ದರು.

ಎರಡು ವರ್ಷಗಳ ನಂತರ ಸಚಿವರು ಗೀತೆ ಬೇಡದವರು ದೇಶ ಬಿಟ್ಟು ಹೋಗಿ ಅನ್ನುತ್ತಿರುವುದು ಗಮನಿಸಬೇಕಾದ ಬದಲಾವಣೆ. ಇದನ್ನು ಗಮನಿಸದೆ ಹೋದಲ್ಲಿ ಅದು ಅಪಾಯಕಾರಿ ಕುರುಡುತನವಾದೀತು. ಮೌಲಿಕ ಶಿಕ್ಷಣ ಎಂಬ ನೇಪದಲ್ಲಿ ಗೀತೆಯನ್ನು ಹೇಳಿಕೊಡುತ್ತಿರುವುದರ ಹಿಂದಿನ ತರ್ಕವನ್ನೂ ಗಮನಿಸಬೇಕು. ನೈತಿಕತೆಯನ್ನು ಧರ್ಮಕ್ಕೂ, ಧರ್ಮವನ್ನು ಹಿಂದೂ ಧರ್ಮಕ್ಕೂ, ಹಿಂದೂ ಧರ್ಮವನ್ನು ಭಗವದ್ಗೀತೆಗೂ ನೇರ ಇಲ್ಲಿ ಸಮೀಕರಿಸಲಾಗುತ್ತಿದೆ.

ಇಲ್ಲಿ ನಾವೆಲ್ಲಾ ಒಮ್ಮೆ ಗೋಲ್ವಾಲ್ಕರ್ ಅವರು ಹೇಳಿದ ಒಂದು ಮಾತನ್ನು ನೆನೆದರೆ ಒಳಿತು:

“From the standpoint sanctioned by the experience of shrewd nations, the non-Hindu people in Hindustan must either adopt the Hindu culture and language, must learn to respect and revere Hindu religion, must entertain no idea but the glorification of Hindu nation i.e. they must not only give up their attitude of intolerance and ingratitude towards this land and its age long traditions, but must also cultivate the positive attitude of love and devotion instead; in one word, they must cease to be foreigners or may stay in the country wholly subordinated to the Hindu nation, claiming nothing, deserving no privileges, for less any preferential treatment, not even the citizen’s rights.

("We Or Our Nationhood Defined", 1938, Page 52)

ನಮ್ಮ  ದೇಶದಲ್ಲಿ ಭಗವದ್ಗೀತೆಯನ್ನು ಒಪ್ಪಿ ಪೂಜಿಸುವವರು, ಅದನ್ನು ಪ್ರಶ್ನಿಸಿ ಅದರ ಜೊತೆ ಜಗಳ ತೆಗೆದವರೂ, ಅದನ್ನು ಸಂಪೂರ್ಣ ತಿರಸ್ಕರಿಸುವವರೂ (ಹಿಂದೂಗಳೂ, ಹಿಂದೂಗಳಲ್ಲದವರೂ ಸೇರಿದಂತೆ) ಇದ್ದಾರೆ. ನನಗೆ ವೈಯ್ಯಕ್ತಿಕವಾಗಿ ಗೀತೆಯ ಬಗ್ಗೆ ಇರುವ ಜಗಳಗಳ ಬಗ್ಗೆ ಹಿಂದೆ “ಗೀತೆಯ ಬಗ್ಗೆ ಸುಮ್ಮನೆ ಹೀಗೇ ಮಾತಿಗೆ” ಅನ್ನುವ ಲೇಖನ ಹೋದ ವರ್ಷ ಇದೇ ಬ್ಲಾಗಿನಲ್ಲಿ ಬರೆದಿದ್ದೆ.  ಅದನ್ನೇ ಮತ್ತೆ ಹೇಳುವ ಬದಲು ಲಿಂಕ್ ಕೊಟ್ಟಿದ್ದೇನೆ:

http://bageshree.wordpress.com/2010/06/29/%E0%B2%97%E0%B3%80%E0%B2%A4%E0%B3%86%E0%B2%AF-%E0%B2%AC%E0%B2%97%E0%B3%8D%E0%B2%97%E0%B3%86-%E0%B2%B8%E0%B3%81%E0%B2%AE%E0%B3%8D%E0%B2%AE%E0%B2%A8%E0%B3%86-%E0%B2%B9%E0%B3%80%E0%B2%97%E0%B3%87/

ಅದೇನೆ ಇದ್ದರೂ, ಇವತ್ತಿನ ಸಂದರ್ಭದಲ್ಲಿ ಪ್ರಶ್ನೆ ಭಗವದ್ಗೀತೆಯ ಸಾರ ಏನು ಅನ್ನುವುದೂ ಅಲ್ಲ. ಅವೆಲ್ಲಾ ಆಯ್ಕೆಯ ಪ್ರಶ್ನೆ. ಈ ಆಯ್ಕೆ ಮಾಡುವ ಹಕ್ಕನ್ನು ನಮ್ಮ  ಸಂವಿಧಾನ ಸ್ಪಷ್ಟವಾಗಿ ಕೊಡುತ್ತದೆ. ಮತ್ತು ಯಾವುದೇ ಧರ್ಮ ಸಂಹಿತೆ ಮತ್ತು ಅದರ ಗುರುತುಗಳನ್ನು ಇನ್ನೊಬ್ಬರ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲ ಅಂತಲೂ ಹೇಳುತ್ತದೆ.

ಸರ್ಕಾರಿ ಶಾಲೆ ನಮ್ಮ ಸಂವಿಧಾನ ಚೌಕಟ್ಟಿನೊಳಗೇ ಇರುವ ಸೆಕ್ಯುಲರ್ ಸ್ಫೇಸ್ ಅನ್ನುವುದನ್ನು ನಾವು ಒಪ್ಪುವುದಾದರೆ ಕಾಗೇರಿಯವರ ಮಾತಿನ ಅರ್ಥ ಏನು ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಯೋಚಿಸಬೇಕು.  (In fact, ಗೀತೆ ಬೇಡದವರು ದೇಶವನ್ನೇ ಬಿಟ್ಟು ತೊಲಗಿ ಎಂದು ಹೇಳಿದ ಸಂದರ್ಭದಲ್ಲಿ ಇದು ಬರೀ ಶಾಲೆಯ ಪ್ರಶ್ನೆಯಷ್ಟೇ ಕೂಡಾ ಅಲ್ಲ!) ಇನ್ನು ನಾವು ಸೆಕ್ಯುಲರ್ ಆದ್ದರಿಂದ ಎಲ್ಲಾ ಧರ್ಮಗ್ರಂಥಗಳನ್ನೂ ನಮ್ಮ ಶಾಲೆಗಳಲ್ಲಿ ಕಲಿಸೋಣವೇ? ಅದೂ ಮಾಡಬಹುದು. ಆದರೆ ಗಣಿತ, ಸಯನ್ಸ್ ಎಲ್ಲಾ ಕೈಬಿಟ್ಟು ಇದೇ ಕಲಿಸುತ್ತಾ ಕೂರಬೇಕಾದೀತು. ಕಲಿಸಬೇಕಾದನ್ನು ಕಲಿಸಲಾಗದ, ಎಲ್ಲದರ ಬಗ್ಗೆ ಮಕ್ಕಳಿಗೆ ಸಹಜವಾಗಿಯೇ ಇರುವ ಕುತೂಹಲ, ಆಸಕ್ತಿ, ಪ್ರಶ್ನೆಗಳನ್ನು ಪೊರೆಯಲಾರದ, ಕಲಿಕೆಯಲ್ಲಿ ಖುಶಿ ನೀಡಲಾರದ ಶಾಲೆಗಳಲ್ಲಿ ಇಂದು ನಾವು ತುರುಕಬೇಕಾಗಿರುವುದು ಧಾರ್ಮಿಕ ಗ್ರಂಥಗಳ ಪಾಠವೇ?

P.S.: By the way, ಇನ್ನೊಂದು ಮಾತು. ನಮ್ಮ ರಾಜ್ಯ ಬರಬರುತ್ತಾ ಪುರಾತನ ಈಜಿಪ್ಟಿನಲ್ಲಿ ಇದ್ದಂತೆ ಪುರೋಹಿತರ ಆಡಳಿತದ ರಾಜ್ಯ ಆಗುವ ಲಕ್ಷಣಗಳು ಕಾಣುತ್ತಿವೆ ಅಲ್ಲವೇ? ಹಳ್ಳಿಗುಡಿಯಲ್ಲಿ ರೈತರ ಹೋರಾಟಕ್ಕೆ ಕ್ಯಾರೆ ಅನ್ನದೆ ಕೂತಿದ್ದ ಸರ್ಕಾರ ತೋಂಟದಾರ್ಯರಿಗೆ ಹೆದರಿ ಪೋಸ್ಕೋಗೆ ಗದಗದಿಂದ ಗಾಡಿ ಕಟ್ಟಲಿಕ್ಕೆ ಹೇಳಿದೆ. ಕೆಲ ರೈತರು ನಾವು ಭೂಮಿ ಕೊಡುತ್ತೇವೆ ಅಂತ ಯೆಡ್ಯೂರಪ್ಪನವರನ್ನು ಭೇಟಿ ಮಾಡಿ ಹೇಳಿದಾಗ ಅವರು “ನೀವು ಸ್ವಾಮಿಯವರ permission ತಗೊಂಡು ಬನ್ನಿ” ಅಂತ ಹೇಳಿ ಕಳಿಸಿದರು!  ಪೇಜಾವರರು ಉಪವಾಸ ಕೂರುತ್ತೇನೆ ಅಂತ ಹೆದರಿಸಿದ ಮೇಲೆ ಮಂಗಳೂರಿನ SEZ ಕೈಯಿಟ್ಟ ನೋಟಿಫಿಕೇಶನ್ನು ಕೈಗೇ ತೆಗೆದುಕೊಂಡು ಹೋಗಿ ಕೊಟ್ಟು ಕಾಲಿಗೆ ಬಿದ್ದು ಬಂದಿದೆ. ಈಗ ನಮ್ಮ ಶಾಲೆಗಳಲ್ಲಿ ನೀತಿ ಪಾಠ ಹೇಳುವ ಕಾಂಟ್ರಾಕ್ಟೂ  ಸ್ವಾಮಿಜಿಗಳಿಗೇ. ಮುಂದೆ ಏನು?

ತೇಜಸ್ವಿ ಎಂಬ ‘ಹೀರೋ’ ಬಗ್ಗೆ
ಕೃಷಿ, ಶಿಕಾರಿ, ಚಿತ್ರಗ್ರಹಣ, ಸಂಗೀತ, ಪರಿಸರ ಅಧ್ಯಯನ, ಲೋಹಿಯಾ ಚಳುವಳಿ, ರೈತ ಚಳುವಳಿ, ಕನ್ನಡ ಕಂಪ್ಯೂಟಿಂಗ್… ಕೊನೆಗೆ ಸ್ಕೂಟರ್ ರೆಪೇರಿ… ಹೀಗೆ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ಸಕಲಕಲಾವಲ್ಲವನ್ ಪೂರ್ಣಚಂದ್ರ ತೇಜಸ್ವಿ. ನಮ್ಮ ಟೀವಿಗಳಲ್ಲಿ ಎಲ್ಲದರ ಬಗ್ಗೆಯೂ ಮಾಡುವ ಹಾಗೆ ಕನ್ನಡ ಸಾಹಿತ್ಯ ಲೋಕದ  ”ಹೀರೋ”ಗಳ ಬಗ್ಗೆ ರೇಟಿಂಗ್ ಏನಾದರೂ ಮಾಡಿದರೆ ನಮ್ಮಂತ ಮಧ್ಯವಯಸ್ಕ ಹೆಂಗಸರಂತೂ en-masse ಮೊದಲ ಸ್ಥಾನಕ್ಕೆ ತೇಜಸ್ವಿಗೆ ವೋಟ್ ಹಾಕಿಯೇವು . ಹೀರೋತನವನ್ನು ಮೆರೆಯದೆ, ಈ ನಮ್ಮ ಉಳಿದ ಪೇಟೆ ಸಾಹಿತಿ ಹೀರೋಗಳ ಸಹವಾಸ ಜಾಸ್ತಿ ಸಹಿಸಿಕೊಳ್ಳುವುದು ಕಷ್ಟ ಅನ್ನುವ ಧಾಟಿಯಲ್ಲಿ ಮಲೆನಾಡಿನ ಮೂಲೆಗೆ ಹೋಗಿ ಇದ್ದುಬಿಟ್ಟ ಕಾರಣಕ್ಕೆ ತೇಜಸ್ವಿ ಇನ್ನಷ್ಟು ಹೀರೋ!

ಸರಿ. ಊರವರಿಗೆಲ್ಲ ಹೀರೋ ಆಗುವುದು ಅಷ್ಟೇನೂ ಕಷ್ಟ ಅಲ್ಲ. ಆದರೆ ಗಂಡಂದಿರ ನಿಜವಾದ ದಶಾವತಾರಗಳನ್ನು ಬಲ್ಲ ಹೆಂಡತಿಯರ ಹತ್ತಿರ ಹೀರೋ ಅನ್ನಿಕೊಳ್ಳುವುದು ಸುಲಭವಲ್ಲ. ಆದರೆ ನೋಡಿ, ಈ ತೇಜಸ್ವಿ ಈ ಅಸಂಭವವನ್ನೂ ಸಂಭವ ಮಾಡಿ ಇವರ ಸುಧೀರ್ಘ ೫೦ ವರ್ಷ ಜೊತೆಗಿದ್ದ ಹೆಂಡತಿಯ ಕಣ್ಣಿಗೂ ಹೀರೋ ಆಗಿ ಕಂಡಿದ್ದಾರೆಂದರೆ… ಇವರನ್ನು ಹೀರೋ ಅನ್ನದೆ ಮತ್ತ್ಯಾವ ಹೆಸರಿಟ್ಟು ಕರೆಯಲಿಕ್ಕೆ ಸಾಧ್ಯ?ರಾಜೇಶ್ವರಿ ಅವರ ”ನನ್ನ ತೇಜಸ್ವಿ” ಪುಸ್ತಕ ಅರವತ್ತರ ದಶಕದಲ್ಲಿ “ಪೂರ್ಣಚಂದ್ರನಂತೆ” ಹೊಳೆಯುತ್ತಾ ಪಾಪದ ಸಣ್ಣ ಹುಡುಗಿಯರಿಗೆ ಸಿಕ್ಕಾಪಟ್ಟೆ ಬೀಪಿ ಬರುವ ಹಾಗೆ ಮಾಡುತ್ತಿದ್ದ ತೇಜಸ್ವಿಯ ಮೈಸೂರಿನ ಕಾಲೇಜಿನ ದಿನಗಳೊಂದಿಗೆ ಆರಂಭವಾಗುತ್ತದೆ.  ಹೇಗೆ ಬೀಪಿ ಬರಿಸಿಕೊಂಡು ಒದ್ದಾಡಿದವರಲ್ಲಿ ರಾಜೇಶ್ವರಿಯೂ ಒಬ್ಬರು.ಇದು ಪ್ರೇಮಕ್ಕೆ ತಿರುಗಿದ್ದು, ನಿರಂತರ ಒಬ್ಬರೊಬ್ಬರಿಗೆ ಬರೆದ ಪ್ರೇಮಪತ್ರಗಳು, ಬಹು ದಿನಗಳ ಕೋರ್ಟ್ ಶಿಪ್, ವಿಶಿಷ್ಟವಾದ ಮಂತ್ರ ಮಾಂಗಲ್ಯ ಪದ್ಧತಿಯ ಸರಳ ಮಾಡುವೆ, ಮಕ್ಕಳು ಬೆಳೆದು ದೊಡ್ದವರಾದದ್ದು, ಕುವೆಂಪು ಸಂಸಾರದೊಂದಿಗೆ ಒಡನಾಟ… ಹೀಗೆ ಸಾಗುತ್ತಾ ಹೋಗಿ ತೇಜಸ್ವಿಯ ಅನಿರೀಕ್ಷಿತ ಮರಣ ಮತ್ತು ಅದು ಹುಟ್ಟಿಸಿದ ನಿರ್ವಾತದವರೆಗೂ ರಾಜೇಶ್ವರಿ ಸವಿವರವಾಗಿ ಬರೆಯುತ್ತಾರೆ. “ನೆನಪುಗಳೆಲ್ಲಾ ಬಿಡಿ ಬಿಡಿಯಾಗಿ ಪ್ರತ್ಯೇಕ ಘಟನೆಗಳಂತೆ ಕಾಲದ ಸರಪಳಿಯಲ್ಲಿ ಕೂಡಿಕೊಳ್ಳದೆ ಎಳೆ ತುಂಡಾಗಿ ಉರುಳಾಡುವ ಮಣಿಗಳಂತೆ ಸ್ಮೃತಿ ಪಟಲದಲ್ಲಿ ಆವರಿಸಿದವು” ಎಂಬ “ಕರ್ವಾಲೋ” ಕಾದಂಬರಿಯ ಸಾಲಿನೊಂದಿಗೆ ಮುಕ್ತಾಯವಾಗುತ್ತದೆ.ಬರೆದ ಪ್ರೇಮಪತ್ರಗಳಿಂದ ಹಿಡಿದು, ತೇಜಸ್ವಿ ಹಕ್ಕಿ ಪಿಕ್ಚರ್ ತೆಗೆಯಲು ಕಟ್ಟುತ್ತಿದ್ದ ಹೈಡೌಟು, ಮನೆಗೆ ಬಂದು ಹೋದ, ಬಾರದೆ ಹೋದ ವ್ಯಕ್ತಿಗಳ ವಿವರಗಳವರೆಗೆ ಗಂಡ ಹಿಡಿದದ್ದು ಮುಟ್ಟಿದ್ದು ಯಾವುದನ್ನೂ ಬಿಡದೆ ೫೪೮ ಪುಟಗಳಷ್ಟು ಸುಧೀರ್ಘವಾಗಿ (ಕೆಲವು ಸಲ ಅಯ್ಯೋ ಶಿವಾ ಇದೂ ಬರೆಯಬೇಕಾ ಅನ್ನಿಸುವಷ್ಟರ ಮಟ್ಟಿಗೆ) ರಾಜೇಶ್ವರಿ ಬರೆದಿದ್ದಾರೆ.  ಇವರು ಹೆಕ್ಕಿ ತೋರುವ ಪ್ರತಿ ಮಣಿಯಲ್ಲಿ ತೇಜಸ್ವಿ ವ್ಯಕ್ತಿತ್ವದ ವಿವಿಧ ರೂಪ ಕಾಣುತ್ತದೆ.

ಉದಾಹರಣೆಗೆ ಇವರ ಪ್ರೇಮಪತ್ರಗಳ ಕೋಪ, ತಾಪ, ತುಂಟಾಟ, ಉತ್ಕಟ ಹಂಬಲ ಇತ್ಯಾದಿ ವಿವಿಧ ಮೂಡುಗಳು… “ರಾಜೇಶ್, ಲವ್ ಅಂದರೆ ಏನು ಗೊತ್ತಾ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತೆಯನ್ನು ಸ್ವೀಕರಿಸುವುದು. ದೈಹಿಕವಾಗಿ, ಮಾನಸಿಕವಾಗಿ. ನೀವು ತಿಳಿದಿರೋ ಅಂತ ಸುಲಭದ್ದಲ್ಲ. ಕೆಲವರು ಮುನ್ನೋಟಕ್ಕೆ ಹೆದರಿ ಅಂಬಿಕೆಯಂತೆ ಬಿಳಿಚಿಕೊಳ್ಳುತ್ತಾರೆ. ಇಲ್ಲ ಅಂಬಾಲಿಕೆಯಂತೆ ಅಂಧರಾಗುತ್ತಾರೆ. ಇದೆಲ್ಲಾ ಯಾಕೆ ಹೇಳಿದೆನಂದರೆ ನಿನ್ನ spiritual ಸ್ಲೋಗನ್ನುಗಳಿಗೆ ಹೆದರಿ ಹೇಳಿದ್ದು ರಾಜೇಶ್. I love you. – ನಿಮ್ಮ ಪೂ.ಚಂ, ತೇ.” ಮತ್ತೊಂದು ಕಡೆ ರಾಜೇಶ್ವರಿ ಸೌಂದರ್ಯವರ್ಧನೆಗೆ ಮುಖಕ್ಕೆ ಮೀನೆಣ್ಣೆ ಪುಸುತ್ತಿದ್ದರ ಬಗ್ಗೆ ಛೇಡಿಸುತ್ತಾ  “ಮದುವೆಯಾದ ನಂತರ ಮಲಗುವಾಗ ಅದನ್ನು ಹಚ್ಚಿಕೊಳ್ಳುವಂತಿಲ್ಲ.  ಏಕೆಂದರೆ ನನಗೇನೋ ಮೀನೆಣ್ಣೆ ನೆಕ್ಕಬೇಕೆಂದು ಡಾಕ್ಟರ್ ಹೇಳಿಲ್ಲವಲ್ಲ…” ಎಂದು ಬರೆಯುತ್ತಾರೆ. ಇನ್ನೇನು ಸುಮಾರು ರೊಮ್ಯಾಂಟಿಕ್ ಆಗುತ್ತಿದ್ದಾರಲ್ಲ ಅನ್ನಿಸುವಷ್ಟರಲ್ಲಿ ವ್ಯಂಗ್ಯದ ಮೊನಚಿನಿಂದ ಚುಚ್ಚಿಬಿಡುವ ಟಿಪಿಕಲ್ ತೇಜಸ್ವಿಯ ಶೈಲಿ ಪ್ರೇಮ ಪಾತ್ರಗಳಲ್ಲೂ ಇದೆ.

ಪುಸ್ತಕದಲ್ಲಿ ತುಂಬ ಖುಷಿ ಕೊಡುವುದು ರಾಜೇಶ್ವರಿ ಅವರು ಕಟ್ಟಿ ಕೊಡುವ ಗಂಡ ಹೆಂಡತಿ ಸೇರಿ ಕಾಡು ಮೇಡು ಸುತ್ತಿದ, ಬೆಟ್ಟ ಗುಡ್ಡ ಅಲೆದ, ಮನೆಯ ಸುತ್ತಲ ತೋಟ ಮಾಡಿದ, ಹೊಸರೀತಿಯ ಪಾಕ ಪ್ರಯೋಗಗಳನ್ನು ಮಾಡಿದ ಚಿತ್ರಣಗಳು. ಮೋಡದಿಂದ ಆವೃತವಾದ ಚಾರ್ಮಡಿ ಘಾಟ್, ಮಲೆನಾಡಿನ ಹನಿ ಕಡಿಯದ ಮಳೆ, ರಾಶಿಗಟ್ಟಲೆ ದೀರ್ಕ ಹಣ್ಣನ್ನು ತಂದು ಇಬ್ಬರೂ ಸೇರಿ ”ಆಡುಳಿ” ತಯಾರಿಸಿದ್ದು, ಬದಲಾಗುತ್ತಾ ಹೋದ ಮೂಡಿಗೆರೆಯ ಚಿತ್ರಣ (ಗೊಬ್ಬೆ ಸೀರೆ ಉಡುವ ಹೆಂಗಸರು ಕಾಣೆಯಾಗಿ ಪುಟ್ಟ ಊರಿಗೆ ೧೩ ಬ್ಯೂಟಿ ಪಾರ್ಲರ್ರುಗಳು ಬಂದದ್ದು!) , ಇಬ್ಬರೂ ಸಿಟ್ ಔಟಿನಲ್ಲಿ ಕುಳಿತು ಸುಮ್ಮನೆ ತೋಟ, ಅದರಾಚೆಯ ಕಾಡು ಬೆಟ್ಟ ಗುಡ್ಡ ನೋಡುತ್ತಿದ್ದದ್ದು… ಹೀಗೆ ಹತ್ತು ಹಲವು ಘಟನೆಗಳನ್ನು ರಾಜೇಶ್ವರಿ ತಣ್ಣಗೆ ಮೆಲುಕು ಹಾಕುತ್ತಾರೆ.

ಹೇಗೆ ಬರೆಯುವಾಗ ಅವರ ಶೈಲಿಯಲ್ಲಿ  ಹೆದರಿಕೆ ಆಗುವಷ್ಟು ಖ್ಯಾತಿಯ ತಮ್ಮ ಗಂಡನನ್ನಾಗಲಿ ಅಥವಾ ಮಾವನನ್ನಾಗಲಿ ಅನುಕರಿಸುವ ಪ್ರಯತ್ನವಾಗಲೀ, ಕೃತಕವಾಗಿ ಆಲಂಕಾರಿಕವಾಗಿಯೋ ಕಾವ್ಯಮಯವಾಗಿಯೋ ಬರೆಯುವ ತಹತಹವಾಗಲಿ ಕಾಣುವುದಿಲ್ಲ. ಅನ್ನಿಸಿದ್ದನ್ನು ನೇರವಾಗಿ, ಅಳುಕಿಲ್ಲದೆ ಬರೆಯುವ ರಾಜೇಶ್ವರಿ ಅವರ ಶೈಲಿ ಚೆಂದ. ಕೆಲವೊಮ್ಮೆ ಪ್ರಯತ್ನಪೂರ್ವಕ ಅನ್ನಿಸದೆ ಕಾವ್ಯ ಧ್ವನಿಸುತ್ತದೆ. ತೇಜಸ್ವಿಯ ಸಾವಿನ ಬಗ್ಗೆ ರಾಜೇಶ್ವರಿ ಬರೆಯುವ ರೀತಿ ಭಾವಾತಿರೇಕಕ್ಕೆ  ಎಡೆಮಾಡದೆ, ಮನಮಿಡಿಯುವಂತಿದೆ. “ನನ್ನ ತೇಜಸ್ವಿ ಕಾಡಿನ ಉಸಿರಿನಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ, ನನಗೆ ಅವರು ಬೇಕು.” ಅನ್ನುವ ಸರಳ ಮಾತು ಇಡೀ ಜೀವನ ಇಬ್ಬರೂ ಒಟ್ಟಿಗೆ ಏಗಿದ ಕತೆಯನ್ನು ಎರಡೇ ವಾಕ್ಯದಲ್ಲಿ ಹೇಳುತ್ತದೆ.

ಮೊದಲಿಂದ ಕೊನೆಯವರೆಗೂ ರಾಜೇಶ್ವರಿಯವರ ಧ್ವನಿ ಅತ್ಯಂತ ಸಹನಶೀಲ ಸದ್ಗೃಹಿಣಿ ಹಾಗೂ ಸಹಧರ್ಮಿಣಿಯದ್ದು.  ಈ ದೊಡ್ಡ ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿ ಹುಡುಕಿದರೂ ರಾಜೇಶ್ವರಿ ಅವರು ತೇಜಸ್ವಿ ಮೇಲೆ ಸಿಟ್ಟಾಗಿ ಸಿಡುಕಿದ ಪ್ರಸಂಗಗಲಾಗಲಿ, ಅವರ ಜೊತೆ ಯಾವುದೇ ವಿಷಯಕ್ಕೆ ತಗಾದೆ ತೆಗೆದು ತಮ್ಮನ್ನು ತಾವು ಅಸರ್ಟ್ ಮಾಡಿಕೊಂಡು ನಾನೇ ಸರಿ ಎಂದು ವಾದಿಸಿದ ಉದಾಹರಣೆಯಾಗಲಿ ಸಿಗುವುದಿಲ್ಲ (ಕಡೆಯ ದಿನಗಳಲ್ಲಿ ತೇಜಸ್ವಿಗೆ ಇಷ್ಟ ಇಲ್ಲದಿದ್ದರೂ ಕ್ರಿಕೆಟ್ ನೋಡುತ್ತಿದ್ದದ್ದು, ಮೀನಿನ ಕಟ್ಲೆಟ್ಟು ಮಾಡಿ ಮಾಡಿ ಸಾಕಾಗಿ ನೀರಿನಲ್ಲಿ ಮೀನ್ಯಾಕಾದರೂ ಇದೆಯಪ್ಪಾ ಅನ್ನಿಸಿತ್ತು ಅಂತ ಒಮ್ಮೆ ಒಮ್ಮೆ ಹೇಳುವ ತಮಾಷೆಯ ಕಂಪ್ಲೇಂಟು ಬಿಟ್ಟರೆ!). ಎಂ.ಎ. ತತ್ವಶಾಸ್ತ್ರ ಓದಿದ ರಾಜೇಶ್ವರಿ ತನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೇಜಸ್ವಿಯ ಪ್ರಖರ ವರ್ಚಸ್ಸಿನ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು ಬದುಕಿದ್ದರ ಬಗ್ಗೆ ವಿಷಾದದ ಛಾಯೆ ಎಲ್ಲೂ ಇಣುಕುವುದಿಲ್ಲ. ಯಾವತ್ತೂ ಧನ್ಯತಾ ಭಾವ, ಅರ್ಪಣಾ ಭಾವವೇ ಎದ್ದು ಕಾಣುತ್ತದೆ. ತಾವು ಯಾಕೆ ತಮ್ಮದೇ ಆಸಕ್ತಿಗಳ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಎಂದು ಬರೆಯುತ್ತಾ ”ಮುಖ್ಯವಾಗಿ ಮನದಾಳದಲ್ಲಿ ‘ನನ್ನ ಗಂಡ ಹೀಗೆಲ್ಲ ಇದ್ದಾನೆ’ ಎನ್ನುವ ಹೆಮ್ಮೆ ಆನಂದವೇ ದೊಡ್ಡದಾಗಿತ್ತು ನನಗೆ” (ಪುಟ ೪೨೮) ಅನ್ನುತ್ತಾರೆ ರಾಜೇಶ್ವರಿ.  ಇನ್ನೊಂದೆಡೆ ”ಉದಯ ರವಿ”ಯಲ್ಲಿ “ಇಬ್ಬರು ಸರಸ್ವತಿ ಸುಪುತ್ರರ ನಡುವೆ ನಾನು ಬದುಕಿದ್ದು, ನನ್ನ ಬಾಳ್ವೆ ಸಾಗಿದ್ದು ನನ್ನ ಬದುಕಿನ ಸಾರ್ಥಕತೆಯ ದೊಡ್ಡ ಹೆಮ್ಮೆ”  ಎಂದು ಉಲ್ಲೇಖಿಸುತ್ತಾರೆ.

ಈ ರಾಜೇಶ್ವರಿಯವರ ಎಂದೂ ಕುಗ್ಗದ ಪ್ರಶಂಸೆಯ, ವಿಮರ್ಶಾರಹಿತ ಆರಾಧನಾ ದೃಷ್ಟಿಕೋನ ವಿಶೇಷವಾಗಿ ಇರುಸುಮುರಿಸು ತರುವುದು ತೇಜಸ್ವಿ ಭಾಗವಹಿಸಿದ ಚಳುವಳಿಗಳು ಮತ್ತು ಕೆಲವು ವಿವಾದಾತ್ಮಕ ಘಟನೆಗಳ ಬಗ್ಗೆ ಇವರು ಬರೆಯುವಾಗ. ಕುದುರೆಮುಖ ಗಣಿಗಾರಿಕೆ ಸಂದರ್ಭದಲ್ಲಿ ತೇಜಸ್ವಿಯ ನಿಲುವು,  ಕುವೆಂಪು ಹಸ್ತಪ್ರತಿ ವಿವಾದ, ರೈತ ಸಂಘ ಮತ್ತು ನವ ನಿರ್ಮಾಣ ಕ್ರಾಂತಿಯ ಸುತ್ತಲಿನ ವಿಷಯ, ವಿವಾದಗಳ ಬಗ್ಗೆ ಬರೆಯುವಾಗ ಒಂದೋ ಸಂಪೂರ್ಣ ತೇಲಿಸಿ ಅಥವಾ ತೇಜಸ್ವಿಯದೆ ಮತ್ತೊಂದು ಕಣ್ಣಿನಂತೆ ರಾಜೇಶ್ವರಿ ನೋಡುವುದರಿಂದ ನಿರಾಸೆಯಾಗುತ್ತದೆ. ಈ ವಿಷಯಗಳ ಬಗ್ಗೆ ರಾಜೇಶ್ವರಿಯವರಿಗೆ ತೇಜಸ್ವಿಯನ್ನು ಅನುಸರಿಸದ ವೈಯ್ಯಕ್ತಿಕ ಅಭಿಪ್ರಾಯ ಏನಾದರೂ ಇದ್ದರೆ ಅದು ಇಲ್ಲಿ ಕಾಣುವುದಿಲ್ಲ. ಉದಾಹರಣೆಗೆ ನವ ನಿರ್ಮಾಣ ಕ್ರಾಂತಿಯ ನಾಯಕತ್ವದ ಬಗ್ಗೆ ಎದ್ದ ವಿವಾದದ ಬಗ್ಗೆ ಮಾತಾಡುತ್ತಾ “ತೇಜಸ್ವಿ ನೊಂದರು. ನಾವು ನೊಂದೆವು”  (ಪುಟ ೨೨೮) ಅನ್ನುತ್ತಾರೆಯೇ ಹೊರತು ತೇಜಸ್ವಿಯ ದೃಷ್ಟಿಕೊನದಿಂದಾಚೆ ಇರಬಹುದಾದ ಯಾವ ಹೊಸ ಹೊಳವೂ ನಮಗೆ ಕಾಣುವುದಿಲ್ಲ.

”ನನ್ನ ತೇಜಸ್ವಿ” ಓದುತ್ತಿರುವಾಗ ಒಮ್ಮೊಮ್ಮೆ ಬರಹಗಾರ್ತಿಗೆ ಅಲ್ಲದಿದ್ದರೂ ಓದುಗರಿಗೆ ತೇಜಸ್ವಿಯ ವ್ಯಕ್ತಿತ್ವ  ಸಿಕ್ಕಾಪಟ್ಟೆ ಸ್ವಕೇಂದ್ರಿತವಾಗಿಯೂ, ಅಸಹನೆ ತುಂಬಿದ್ದಾಗಿಯೂ ತೋರಬಹುದು. ಹೆಂಡತಿಯ ವ್ಯಕ್ತಿತ್ವವನ್ನು ಸಂಪೂರ್ಣ ತಮಗೆ ತಕ್ಕಂತೆ ಹೊಸ ಎರಕದಲ್ಲಿ ಹೊಯ್ದು, ತಿದ್ದಿ, ತೀಡಿಬಿಟ್ಟರಲ್ಲವೇ ಅನ್ನಿಸುತ್ತದೆ. ತಮಗೆ ಇಷ್ಟವಾದ ಕ್ರೋಷಾ ಹಾಕುವಾಗಲೂ (“ಕಸುಬಿಲ್ಲ” ಅನ್ನಿಸಿಕೊಂಡು), ಮನೆಗೆ ಬೀಸೇಕಲ್ಲು ತರುವಾಗಲೂ ಗಂಡನಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಯೋಚನೆ ರಾಜೇಶ್ವರಿಯರಿಗೆ ಬರದೆ ಇರುತ್ತಿರಲಿಲ್ಲ! ”ಆ ತೋಟ ತಗೋ, ಈ ಕೆಲಸ ಮಾಡು ಎಂದು ನನಗೆ ಒತ್ತಾಯ ಹೇರಬೇಡ, ನನಗೆ ಬೇಕಾದ ಹಾಗೆ ತಿರುಗಾಡಿ ನನಗೆ ಬೇಕಾದ ಹಾಗೆ ಮಾಡುತ್ತೇನೆ” ಅಂತ ತೇಜಸ್ವಿ “ಬಿರುಸಾಗಿಯೇ” ಹೇಳಿದ್ದನ್ನು (ಪುಟ ೨೪೫) ರಾಜೇಶ್ವರಿ ನೆನೆಯುತ್ತಾರೆ. ಇನ್ನೊಂದು ಪತ್ರದಲ್ಲಿ ತೇಜಸ್ವಿ “ಏನು ರಾಜೇಶ್, ನಿನ್ನ ಉಪಚಾರ ಪ್ರೀತಿಗಳೇ ನನಗೆ ಭಯಂಕರ ಎಡರುಗಲಾಗುತ್ತವೆ. ತಿಳುಕೋ. ಕಾರ್ಯರಂಗವೆಂದರೆ ಜೀವನದೊಂದಿಗೆ ಮುಖಾಮುಖಿ ನಿಲ್ಲುವುದೆಂದರೆ ಅದರಲ್ಲೂ ಈಗ ನಾ ಕೈ ಹಾಕಿದ ಕ್ಷೇತ್ರದಲ್ಲಿ ಅದೊಂದು ಭಯಂಕರ ಕುರುಕ್ಷೇತ್ರ ರಣರಂಗ ಗೊತ್ತಾ. ನೀನೆಲ್ಲೋ ಕಾಡಿನಲ್ಲಿ ಬೆಪ್ಪಾಗಿ ಕೂತುಕೊಂಡು ಯೋಚಿಸುತ್ತಿರಬಹುದು ಅದೇನು ಮಹಾ ಎಂದು…” (ಪುಟ ೧೧೫) ನನ್ನಂಥ ಓದುಗರಿಗೆ ಸ್ವಾರ್ಥದ, ಅಹಮಿಕೆಯ ಧ್ವನಿ ಇದರಲ್ಲಿ ಕಂಡರೂ ರಾಜೇಶ್ವರಿಯವರಿಗೆ ಹಾಗೆ ಅನ್ನಿಸಿದಂತೆ ತೋರುವುದಿಲ್ಲ.

ಈ ಮಾತುಗಳನ್ನೆಲ್ಲಾ ತೇಜಸ್ವಿ ಯಾವ ”ಧ್ವನಿ”ಯಲ್ಲಿ ಹೇಳಿದರೋ ಗೊತ್ತಿಲ್ಲ. ಗೊತ್ತಾಗುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಪ್ಯಾಸೆಜುಗಳನ್ನು ಓದಿದಾಗ ನನಗೆ ಲೋಹಿಯಾ ಮಹಿಳೆಯರ ಬಗ್ಗೆ ಮತ್ತು ಸಮಾನ ಸಮಾಜದ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆಹೇಳಿದ ಮಾತುಗಳು ನೆನಪಾದದ್ದಂತೂ ಹೌದು. “‘…ಅವತ್ತಿನಿಂದ ಇವತ್ತಿನವರೆಗೆ ಭಾರತೀಯ ಮನಸ್ಸಿನಲ್ಲಿ ತನ್ನ ಪತಿಯ ಶರೀರ, ಮನಸ್ಸು ಅಥವಾ ಆತ್ಮದೊಂದಿಗೆ ತಾದಾತ್ಮ್ಯ ಗೊಂಡಿರುವ” ಮಹಿಳೆಯರು ಇದ್ದ ಹಾಗೆ ಒಬ್ಬ ಗಂಡನೂ ಸಿಗುವುದಿಲ್ಲವಲ್ಲ ಅಂತ “ದ್ರೌಪದಿಯೋ? ಸಾವಿತ್ರಿಯೋ?” ಲೇಖನದಲ್ಲಿ ಹೇಳುತ್ತಾರೆ ಲೋಹಿಯಾ. ಇನ್ನೊಂದೆಡೆ ಕಾಫೀ ಟೇಬಲ್ಲಿನಲ್ಲಿ ಕುಳಿತು ಫ್ರೆಂಚ್ ಕ್ರಾಂತಿಯ ಬಗ್ಗೆ ಮಾತಾಡುತ್ತಿದ್ದ ಗಂಡಸರನ್ನು ನೋಡಿ “ಜಾತಿ, ಲಿಂಗ ಕುರಿತ ಪ್ರತ್ಯೇಕತೆ” ಲೇಖನದಲ್ಲಿ “ನನಗೆ ಮೈ ಉರಿಯತೊಡಗಿತು. ಅಲ್ಲಿ ನೋಡಿದರೆ ಒಬ್ಬ ಶೂದ್ರನಾಗಲಿ, ಹೆಣ್ಣುಮಗಳಾಗಲಿ ಇರಲಿಲ್ಲ. ಇಂಥ ನಿರ್ಜೀವ ಗುಂಪಿನಲ್ಲಿ ನಮ್ಮಂಥ ಗೊಡ್ಡು ಜನರೆಲ್ಲಾ ನೆನ್ನೆಯ ಮೇವನ್ನು ಸುಮ್ಮನೆ ಮೆಲುಕು ಹಾಕುತ್ತಿರುವ ದನಗಳಂತಿದ್ದರು” ಅನ್ನುತ್ತಾರೆ. (ಎರಡೂ ಲೇಖನಗಳ ಅನುವಾದ ”ಸ್ವಾತಂತ್ರದ ಅಂತರ್ಜಲ” ಸಂಕಲನದಲ್ಲಿದೆ.) ಸಹಚರ್ಯ ಎನ್ನುವುದು ಆಧುನಿಕ ಹೋರಾಟಗಾರರ ಮತ್ತು ಚಿಂತಕದ ಬದುಕಿನಲ್ಲೂ ಹದಿಬದೆಯ ಧರ್ಮದ ಚೌಕಟ್ಟನ್ನೂ ಏಕೆ ಮೀರುವುದಿಲ್ಲ ಅನ್ನುವ ಪ್ರಶ್ನೆ ಮನಸ್ಸಿನಲ್ಲಿ “ನನ್ನ ತೇಜಸ್ವಿ” ಓದುವಾಗ ಆಗಾಗ ಏಳುತ್ತದೆ.

ಕೊನೆಯ ದಿನಗಳಲ್ಲಿ ತೇಜಸ್ವಿಯವರಿಗೂ ೫೦ ವರ್ಷ ತನ್ನ ಎಲ್ಲಾ ಚಿತ್ರವಿಚಿತ್ರ ಈಡಿಯೋಸಿಂಕ್ರಸಿಗಳ ನಡುವೆಯೂ ಜೊತೆ ನಿಭಾಯಿಸಿದ ವ್ಯಕ್ತಿಯ ಬಗ್ಗೆ ಮೆಚ್ಚುಗೆ, ಆಶ್ಚರ್ಯ ಎಲ್ಲವೂ ಇದ್ದಂತೆ ತೋರುತ್ತದೆ. ಸಾವಿಗೆ ಕೆಲ ದಿನಗಳ ಮುಂಚೆ “ನೀನು ನನಗೆ ಕಂಪನಿ ಕೊಟ್ಯಲ್ಲೇ ಮಾರಾಯ್ತಿ. ನನಗಂತೂ ಎಲ್ಲವು ಆಶ್ಚರ್ಯವಾಗುತ್ತೆ. ಇವತ್ತು ಈ ತುದಿಯಲ್ಲಿ ನಿಂತು ನೋಡಿದರೆ — ಆ ದಿನ ಭೂತನಕಾಡಿನಲ್ಲಿ ಹುಣ್ಣಿಮೆ ದಿನದಿಂದ ನೆನೆದರೆ — ಆ ತುದಿಯಲ್ಲಿದ್ದಾಗ ನುಗ್ಗುವುದೊಂದೇ. ಆಮೇಲೆ ಏನೇನೆಲ್ಲ ನಡೆಯಿತು ಮಾರಾಯ್ತಿ.” ಅಂದದ್ದನ್ನು ರಾಜೇಶ್ವರಿ ನೆನೆಯುತ್ತಾರೆ.

ಇವತ್ತು ಇಷ್ಟು ಧೀರ್ಘವಾದ ಪುಸ್ತಕವೊಂದನ್ನು ರಾಜೇಶ್ವರಿ ಬರೆದಿರುವುದು ತೇಜಸ್ವಿಯವರಿಗೂ ಆಶ್ಚರ್ಯ ತರುತ್ತಿತ್ತೇನೋ. ಒಮ್ಮೆ ಶಾಂತವೇರಿ ಗೋಪಾಲಗೌಡರು ಮನೆಗ ಬಂದಾಗ ನೀವೇನಾದರೂ ಬರೆಯುತ್ತೀರಾ ಅಂತ ಗೌಡರು ರಾಜೇಶ್ವರಿಯನ್ನು ಕೇಳಿದ್ದರಂತೆ. “ಅವಳೇನು ಬರೀತಾಳೆ, ಮನೆ ಅಗತ್ಯ ಸಾಮಾನಿನ ಪಟ್ಟಿ ಬರೀತಾಳೆ, ಬೇಕಾದರೆ ಸೋಡಚೀಟಿ ಬರೆದಾಳು” ಅಂತ ಅದಕ್ಕೆ ತಾವೇ ಉತ್ತರ ಹೇಳಿ ತೇಜಸ್ವಿ ನಕ್ಕಿದ್ದರಂತೆ. ಆಗ ಯಾವುದೇ ಕಹಿ ಇಲ್ಲದೆ ರಾಜೇಶ್ವರಿಯವರು ತಾವೂ ನಕ್ಕಿದ್ದಾಗಿ ಪುಸ್ತಕದಲ್ಲಿ ದಾಖಲಿಸುತ್ತಾರೆ.

ತೇಜಸ್ವಿಯ ಅತ್ಯಂತ ದೊಡ್ಡ ಫ್ಯಾನ್ ಆಗಿ ಬದುಕಿದ, ಈಗಲೂ ಆಗಿರುವ ರಾಜೇಶ್ವರಿ, “ನನ್ನ ತೇಜಸ್ವಿ” ಬರೆಯುವ ಮೂಲಕ ತೇಜಸ್ವಿಯ ಮಾತನ್ನು ಸುಳ್ಳಾಗಿಸಿರುವುದು ನಿಜವಾಗಿಯೂ ಖುಷಿ ಕೊಡುವ ಸಮಾಚಾರವೆ ಸರಿ!

P.S.: ಮತ್ತೆ ಹೀರೋಗಳ ವಿಷಯದ ಬಗ್ಗೆ ಒಂದು ಮಾತು… ತೇಜಸ್ವಿ “ಸಾಹಿತ್ಯ, ಸಂಸ್ಕೃತಿ, ರಾಜಕಾರಣ” ಎಂಬ ತಮ್ಮ ಲೇಖನದಲ್ಲಿ ತಾನು ಫೋಟೋಗ್ರಾಫಿ ಯಾಕೆ ಆಯ್ಕೆ ಮಾಡಿಕೊಂಡೆ ಅನ್ನುವುದರ ಬಗ್ಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ: “ಫೋಟೋಗ್ರಾಫಿಯಲ್ಲಿ the first discipline is that the photographer cannot be a hero of his statement. ಅವನು ಯಾವಾಗಲೂ ಕ್ಯಾಮರಾ ಹಿಂದೆ ಇರಬೇಕೆ ಹೊರತು ಮುಂದೆ ಹೋಗುವುದಕ್ಕೆ ಆಗುವುದಿಲ್ಲ. Whereas in writing I can be a hero, in photography you can exist only as a perspective, as an interpreter, not as a hero… ಹೀಗೆ ಹಂತಹಂತವಾಗಿ ನನ್ನನ್ನು ನಾನು ಕಳೆದುಕೊಳ್ಳುತ್ತಾ ಬಂದಿರೋದು…” (”ತಲೆಮಾರಿನ ತಳಮಳ” ಸಂಕಲನ) ಹೇಗೆ ಬರೆದ ತೇಜಸ್ವಿಯ ಬಗ್ಗೆ ನಾನು, ನನ್ನಂತವರು, ಅವರ ಹೆಂಡತಿ ಎಲ್ಲರೂ ಸೇರಿ ಎಂತಾ ”mystique” ಬೆಳೆಸಿಬಿಟ್ಟಿದ್ದೇವೆ ಅಲ್ಲವಾ? ಹೇಗೆ ಸಾಹಿತ್ಯ ಲೋಕದಲ್ಲಿ charismatic ಅನ್ನಿಸಿಕೊಳ್ಳುವ ವ್ಯಕ್ತಿಗಳ ಸುತ್ತ ಹುಟ್ಟುವ personality cultಗಳು ಎಲ್ಲಾ ಭಾಷೆಯಲ್ಲೂ ಇದೆಯಾ ಅಥವಾ ಇದು ಕನ್ನಡದಲ್ಲಿಯೇ ಜಾಸ್ತಿಯಾ?

ಕಣ್ಣು ಪಿಳಿಪಿಳಿ, ಬಾಯಿ ಪಚಪಚ… ಭಾಗ ೨
ಕಾಟ್-ಕ-ನಾಲಾದಲ್ಲೊಂದು ಗುಡಿಸಲು

ನೈನಿತಾಲ್  ಮತ್ತು ಕಾಲಧುಂಗಿಯ ಆಚೆಯ ಜನರಿಗೆ ಜಿಮ್ ಕಾರ್ಬೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ.  ಕಾರ್ಬೆಟ್ ಹೆಸರು ಹೇಳಿದ ಕೂಡಲೆ ಇಲ್ಲಿನ ಜನ ಅವನ ಹೆಸರಿಟ್ಟಿರುವ ರಾಷ್ಟ್ರೀಯ  ಅರಣ್ಯಧಾಮದ ಬಗ್ಗೆಯೇ ಮಾತಾಡುತ್ತಿದ್ದೇವೆ ಅಂತ ಅಂದುಕೊಂಡುಬಿಡುತ್ತಾರೆ. ಆದರೆ ನರಭಕ್ಷಕ  ಹುಲಿ ಅಂದರೆ ಮಾತ್ರ ಬಹಳ ಉತ್ಸುಕರಾಗಿ ಅವು ಮನುಷ್ಯರನ್ನು ಹೇಗೆ ಕೊಂದು ತಿಂದು  ತೇಗಿದವು ಅಂತ ವಿವರವಾಗಿ ಕತೆ ಹೇಳಲಿಕ್ಕೆ ಶುರು ಮಾಡುತ್ತಾರೆ.

ಈ “ಒಂದಾನೊಂದು ಕಾಲದ”  ಕತೆಗಳಲ್ಲಿ “ಬಿಳಿ ಸಾಧು”, “ಬಿಳಿ ಘಡವಾಲೀ”,  “ಚಡ್ಡಿ ತೊಟ್ಟ ಸಾಹೇಬ್” ಇತ್ಯಾದಿ  ನಾಮಾವಳಿಗಳಿಂದ ಕರೆಯಲ್ಪಡುವ, ಅವರ ಭಾಷೆಯೂ ಬಲ್ಲ ವ್ಯಕ್ತಿಯೊಬ್ಬ ಹೇಗೆ  ಕಾಡುಮೇಡಲೆಯುತ್ತಾ ನರಭಕ್ಷಕ ಹುಲಿಗಳನ್ನು ಕೊಲ್ಲುತ್ತಿದ್ದ ಅನ್ನುವ ಪ್ರಸ್ತಾಪಗಳು  ಬಹಳಷ್ಟು ಬರುತ್ತವೆ.

ಆದ್ದರಿಂದಲೇ ನಾವು  ಮೋಹನ್ ನರಭಕ್ಷಕ ಹುಲಿಯನ್ನು ಕಾರ್ಬೆಟ್ ಕೊಂದ  ಜಾಗ ಹುಡುಕಿ ಹೊರಟಾಗ ನಮಗೆ ದಾರಿ ತೋರಿಸಿದ್ದು ಕಾರ್ಬೆಟ್ಟೆ ತನ್ನ ಪುಸ್ತಕಗಳಲ್ಲಿ  ಬರೆದ ಕತೆಗಳ ಜೊತೆಜೊತೆಗೆ ಈ ಸ್ಥಳೀಯ ಜನರು ಪುರಾಣದೋಪಾದಿಯಲ್ಲಿ  ಹೇಳುವ ಈ ಎಲ್ಲ  ಕತೆಗಳೂ ಕೂಡ.

ಕಾರ್ಬೆಟ್  ರಾಮನಗರದ ರೈಲು ನಿಲ್ದಾಣದಲ್ಲಿ ಬಂದು ಇಳಿದದ್ದು ಮೇ ತಿಂಗಳ ಒಂದು ಸುಡು ಮಧ್ಯಾಹ್ನ.  ಅಲ್ಲಿಂದ ಮೋಹನ್ ೨೨ ಕಿಲೋಮೀಟರ್ರುಗಳ ದಾರಿ. ಅದು ೨೦ ಕುಟುಂಬಗಳಿರುವ ಒಂದು ಸಣ್ಣ  ಹಳ್ಳಿ. ಕಾರ್ಬೆಟ್ ಜೊತೆ ಇದ್ದದ್ದು ಇಬ್ಬರು ಕೆಲಸಗಾರರು ಮತ್ತು ಅವರು  ಕ್ಯಾಂಪ್ ಮಾಡಲು  ಬೇಕಾದ ಸಾಮಾನುಗಳು ಮತ್ತು ರೇಷನ್ ಸಾಮಾನುಗಳನ್ನು ಹೊತ್ತ ಆರು ಗಟ್ಟಿಮುಟ್ಟಾದ  ಘಡವಾಲಿಗಳು.

ರಾಮನಗರ  ಇವತ್ತು ಹತ್ತಾರು ಟೂರಿಸ್ಟ್ ಜಿಪ್ಸಿಗಳು ಓಡಾಡುವ ಸುಮಾರು ದೊಡ್ಡದಾಗ ಪಟ್ಟಣ.  ಟ್ರಾಫಿಕ್ ಜಾಮುಗಳಿಗೂ ಬರ ಇಲ್ಲ.  ಈಗ ವಾಹನಗಳು ಓಡಾಡಲು ಯೋಗ್ಯವಾದ ರೋಡು  ಧಿಕುಲಿಯವರೆಗೆ ಘಟ್ಟ ಹತ್ತುತ್ತಾ ಹೋಗಿ ಅಲ್ಲಿಂದ ಮುಂದೆ ಗಾರ್ಜಿಯಾಗೆ ಇಳಿಜಾರಿನಲ್ಲಿ  ಸಾಗಿ ಹೋಗುತ್ತದೆ. ಕೋಸಿ ನದಿಯ ದಡದಲ್ಲಿರುವ ಗಾರ್ಜಿಯಾದಲಿ ಒಂದು ಪ್ರಸಿದ್ಧವಾದ ದೇವಿಯ  ದೇವಸ್ಥಾನವಿದೆ. ಅಲ್ಲಿಂದ ಮೋಹನ್ ವರೆಗೂ ಈಗ ರಸ್ತೆ ಇದೆ. ನೈನಿತಾಲ್ ಜಿಲ್ಲೆ ಮತ್ತು  ಅಲ್ಮೋರ ಜಿಲ್ಲೆಗಳ ಗಡಿಯಾ ಚೆಕ್ ಪೋಸ್ಟ್ ವರೆಗೂ ರೋಡ್ ಸಾಗುತ್ತದೆ.

ಮೋಹನ್  ನಲ್ಲಿ ಇದ್ದ ನರಭಕ್ಷಕ ಹುಲಿ ಕುಮಾವ್ ನ ಬ್ರಿಟಿಶ್ ಸರ್ಕಾರದ ಕಚೇರಿಯ ಮಂದಿಗೆ ಎರಡನೆಯ  ದೊಡ್ಡ ತಲೆನೋವಾಗಿತ್ತು. ಮೊದಲನೆಯದು ಚೌಘರ್ ನಲ್ಲಿ ಇದ್ದ ಜೋಡಿ ನರಭಕ್ಷಕ ಹುಲಿಗಳು.   ಕಾಂಡಾದ ನರಭಕ್ಷಕ ಇವರನ್ನು ಥರಗುಟ್ಟಿಸಿದ  ಇನ್ನೊಂದು  ಹುಲಿ.

ಕಾರ್ಬೆಟ್  ಕಾಲದಲ್ಲಿ ರಾಮನಗರದಿಂದ ಗರ್ಜಿಯಾಕ್ಕೆ ಏರಿನ ಪಯಣ ಕೇವಲ ೧೪ ಕಿಲೋಮಿಟರ್ ಮಾತ್ರವೇ ಆದರೂ  ಸುಲಭದ್ದಾಗಿರಲಿಲ್ಲ. ಅಲ್ಲಿಯವರೆಗೆ ಉಸ್ಸಪ್ಪೋ ಅಂತ ಹತ್ತಿಕೊಂಡು ಹೋದರೆ ಅಲ್ಲಿಂದ  ಕಡಿದಾದ ಇಳಿಜಾರು. ಕಾರ್ಬೆಟ್ ಕೋಸಿ ನದಿಯ ಪಕ್ಕದಲ್ಲಿಯೇ ನಡೆಯುತ್ತಾ ಗಾರ್ಜಿಯಾ  ತಲುಪಿರಬೇಕು. ಇದರ ಬಗ್ಗೆ ಬರೆಯುತ್ತಾ ಕಾರ್ಬೆಟ್ ತಾನು ಸೂರ್ಯಾಸ್ತಕ್ಕೆ ಮುಂಚೆ  ಗಾರ್ಜಿಯ ತಲುಪಿದ್ದಾಗಿ ಹೇಳುತ್ತಾನೆ. ಈಗ ರೋಡು ಇರುವ ದಾರಿಯಲ್ಲಿ ಅವನೇನಾದರು ಟ್ರೆಕ್  ಮಾಡಿಕೊಂಡು ಹೋಗಿದ್ದಾರೆ ಅಷ್ಟು ಬೇಗ ತಲುಪುವುದು ಸಾಧ್ಯವೇ ಇಲ್ಲ. ಇವತ್ತು ಹುಲಿಗಳನ್ನು  ಅರಸುತ್ತಾ ಬರುವ ಸಾವಿರಾರು ಟೂರಿಸ್ಟುಗಳಿಗಾಗಿ ಇರುವ ಡಜನ್ನುಗಟ್ಟಲೆ ರೆಸಾರ್ಟುಗಳ  ಹಿತ್ತಲಿನಲ್ಲಿಯೇ ಕೋಸಿ ನದಿ ಹರಿಯುತ್ತದೆ.

ತನ್ನ  ಮೋಹನ್ ಸಾಹಸದ ಬಗ್ಗೆ ಬರೆಯುತ್ತಾ ಕಾರ್ಬೆಟ್ ಗಾರ್ಜಿಯಾ ಕೋಸಿ ದಂಡೆಯಲ್ಲಿ ಟೆಂಟ್ ಹಾಕಿ  ಇದ್ದಾಗ ಆದ ಘಟನೆಯ ಬಗ್ಗೆ ಹೇಳುತ್ತಾನೆ. ನಡುರಾತ್ರಿಯಲ್ಲಿ ಅವನಿಗೆ ಒಂದು ವಿಚಿತ್ರವಾದ  ಸದ್ದು ಕೇಳಿ ಎಚ್ಚರವಾಗುತ್ತದೆ. ಎರಡು ಕಲ್ಲುಗಳನ್ನು ಬಲವಾಗಿ ಉಜ್ಜಿದರೆ ಯಾವ ಥರದ  ಸದ್ದು ಆಗಬಹುದೋ ಥೇಟ್ ಅಂಥಾದ್ದೆ ಸದ್ದು ಅನ್ನುತ್ತಾನೆ. ಸದ್ದಿನ ಜಾಡು ಹಿಡಿದು  ಹುಡುಕಿದಾಗ ಅವನಿಗೆ ಅದು ಮೇ ತಿಂಗಳಲ್ಲಿ ಕಪ್ಪೆಗಳು ವಿಚಿತ್ರವಾಗಿ ವಟಗುಟ್ಟುವ  ಸದ್ದು  ಅಂತ ಗೊತ್ತಾಗುತ್ತದೆ. ನವೆಂಬರ್ ತಿಂಗಳಲ್ಲಿ ಅಲ್ಲಿ ಹೋಗಿದ್ದ ನನಗೆ ಈ ಥರದ ಯಾವ ಸದ್ದೂ  ಕೇಳಲಿಲ್ಲ. ಮೇ ತಿಂಗಳಲ್ಲಿಯೇ ಹೋಗಿದ್ದರೂ ಎಷ್ಟರಮಟ್ಟಿಗೆ ಕೇಳುತ್ತಿತ್ತೋ ಅನುಮಾನ.

ರಾಮನಗರ  ಬದಲಾದಷ್ಟು ಮೋಹನ್ ಬದಲಾಗಿಲ್ಲ. ಸುಮಾರಷ್ಟು ಮಟ್ಟಿಗೆ ಕಾರ್ಬೆಟ್ ಅಂದು  ವಿವರಿಸಿದಂತೆಯೇ ಇಂದೂ ಮೋಹನ್ ಇದೆ. ಬಜಾರಿನಲ್ಲಿ ಮೂರು ನಾಲ್ಕು ಚಾಯ್ ಬಿಸ್ಕತ್ತು  ಮಾರುವ ಅಂಗಡಿಗಳನ್ನು ಬಿಟ್ಟರೆ ಇನ್ನೇನೂ ಇಲ್ಲ. ರಾಣಿಖೇತ್ ವರೆಗೆ ಜನರನ್ನು ಒಯ್ಯುವ  ಒಂದೆರಡು ಬಸ್ಸುಗಳು ಆಗೀಗ ಓಡಾಡುವುದು ಬಿಟ್ಟರೆ ಹೆಚ್ಚು ವಾಹನ ಸಂಚಾರ ಇಲ್ಲ.

ಅಲ್ಲಿ  ಆರಾಮವಾಗಿ ಕೂತಿದ್ದ ಒಂದು ಗುಂಪು ಮುದುಕರ ಜೊತೆಗೆ ಮಾತಿಗಿಳಿದೆ. ಕಾರ್ಬೆಟ್ ಬಗ್ಗೆ  ನಿಮಗೆ ಗೊತ್ತಾ? ಅಂತ ಕೇಳಿದರೆ ನಾನು ಅರಣ್ಯಧಾಮದ ಬಗ್ಗೆ ಕೇಳುತ್ತಾ ಇದ್ದೇನೆ  ಅಂದುಕೊಂಡು “ಪಾರ್ಕಾ?” ಅಂತ ಕೇಳಿದರು. ನರಭಕ್ಷಕ ಹುಲಿಗಳ ವಿಷಯ ಗೊತ್ತಾ ಅನ್ನುವ  ಪ್ರಶ್ನೆ ಕೇಳಿದಾಗ ಮಾತ್ರ ಉತ್ತರಗಳು ಧಾರಾಕಾರ ಬಂದವು!

ಐದು  ವರ್ಷಗಳ ಹಿಂದೆಯಷ್ಟೇ ಹುಲಿಯೊಂದು ಹೇಗೆ ಕಾಡಿನಿಂದ ನಾವು ನಿಂತಿದ್ದ ಮಾರ್ಕೆಟ್ಟಿಗೆ  ನುಗ್ಗಿ ಬಂದು ಜನರ ಮೇಲೆ ಧಾಳಿ ಮಾಡಿತ್ತು ಅಂತ ಸವಿವರವಾಗಿ ಹೇಳಿದರು. ಅಲ್ಲೇ ಒಂದು  ಕಬ್ಬಿಣದ ನೇಮ್ ಬೋರ್ಡಿನ ಮೇಲೆ ಮೂಡಿದ್ದ ಮೂರು ಆಳವಾದ ಗುರುತುಗಳನ್ನು ತೋರಿಸಿ ಅದು  ಹುಲಿಯೇ ಮಾಡಿದ್ದು ಅಂತ ಹೇಳಿದರು. “ಹುಲಿ ಪಂಜಾದಿಂದ ಹೊಡೆದಿದ್ದು” ಅಂತ ನರೇಂದ್ರ  ಸಿಂಗ್ ರಾವತ್ ಎಂಬ ಚಾಯ್ ಅಂಗಡಿ ನಡೆಸುವವನೊಬ್ಬ ಹೇಳಿದ. ಇವನ ಅಪ್ಪನಿಗೆ ಗಾಯವೂ  ಆಗಿತ್ತಂತೆ. ಆ ಹುಲಿ ನರಭಕ್ಷಕ ಆಗಿರುವುದಕ್ಕೆ ಸಾಧ್ಯವಿಲ್ಲ ಅನ್ನುವುದು  ಸ್ಪಷ್ಟವಾಗಿತ್ತು. ಕಾಡಿನಿಂದ ದಾರಿ ತಪ್ಪಿ ಬಂದು ಹಳ್ಳಿಗೆ ನುಸುಳಿಬಿಟ್ಟ  ಹುಲಿಯಾಗಿರಬೇಕು.

ಜನರನ್ನು ಹೊತ್ತುಕೊಂಡು ಹೋಗಿ ತಿಂದುಬಿಡುವಂಥ ಹುಲಿಯನ್ನು ಇಲ್ಲಿಯ ಜನ ನೋಡಿ ಎಷ್ಟು ಕಾಲ ಆಗಿತ್ತು?

ಈ  ಪ್ರಶ್ನೆ ಕೇಳಿದ ನಂತರ ಸ್ವಲ್ಪ ಕಾಲ ಗುಂಪಿನಲ್ಲಿ ಮೌನ ಆವರಿಸಿತು. ನಂತರ ಮಂಗಲ್ ಸಿಂಗ್  ಅನ್ನುವ ವ್ಯಕ್ತಿ ಹಳೆಯ ಕಾಲದ ಮಸುಕಾಗಿದ್ದ ನೆನಪುಗಳನ್ನು ಕೆದಕುತ್ತಾ ಮಾತಿಗಿಳಿದ.  “ನನ್ನ ಚಿಕ್ಕಪ್ಪ ಹಿಂದೆ ಇಲ್ಲಿಯೇ ಇದ್ದುಕೊಂಡು ನಮ್ಮಷ್ಟೇ ಚೆನ್ನಾಗಿ ನಮ್ಮ ಭಾಷೆ  ಮಾತಾಡುತ್ತಿದ್ದ ಗೋರಾ ಒಬ್ಬನ ಬಗ್ಗೆ ಹೇಳುತ್ತಾ ಇದ್ದ. ಆ ಘಡವಾಲಿ ಯಾವಾಗಲೂ ಚೆಡ್ಡಿ  ಹಾಕಿಕೊಂಡು ಓಡಾಡುತ್ತಾ ಇದ್ದನಂತೆ. ಬಹಳ ದಿಲ್ದಾರ್ ಮನುಷ್ಯ, ಒಳ್ಳೆ ನಿಶಾನೆಬಾಜ್  ಅಂತೆ. ಅವನು ಅಗೋ ಆ ಬೆಟ್ಟದ ಮೇಲೆ ಒಂದು ನರಭಕ್ಷಕ ಹುಲಿ ಹೊಡೆದಿದ್ದ ಅಂತ ಚಿಕ್ಕಪ್ಪ  ಹೇಳ್ತಿದ್ದ” ಅಂದ.

ಕಾರ್ಬೆಟ್  ಹುಲಿಯನ್ನು ಆಕರ್ಷಿಸುವುದಕ್ಕೆ ಹೊಲದಲ್ಲಿ ಕೆಲಸ ಮಾಡುವ ಹೆಂಗಸರ ಹಾಗೆ ಸೀರೆ ತೊಟ್ಟು  ಹಾಡುತ್ತಾ ಇದ್ದದ್ದೂ ಉಂಟು ಅಂತ ಒಂದು ಪ್ರಚಲಿತ ಕತೆ ಬಹಳ ಹಿಂದಿನಿಂದಲೂ ಇದೆ. ಇದೇ  ಕತೆಯನ್ನು ಮಂಗಲ್ ಸಿಂಗ್ ಕೂಡಾ ಮಸಾಲೆಭರಿತವಾಗಿ ಪುನರಾವರ್ತನೆ ಮಾಡಿದ. (ಹುಲಿಗಳಿಗೂ  ಸೀರೆಯ ಬಗ್ಗೆ ಆಕರ್ಷಣೆ ಇದೆ ಅಂತ ಜನರಿಗೆ ನಂಬಿಕೆ ಅನ್ನುವುದು ಗಮನಿಸಬೇಕಾದ ಮಾತು!)

ಚಂಪಾವಟ್  ನರಭಕ್ಷಕ ಹುಲಿಯ ಬಗ್ಗೆ ತಾನು ಬರೆದ ಲೇಖನದಲ್ಲಿ ಈ ಗಾಳಿಮಾತಿನ ಬಗ್ಗೆಯೂ ಕಾರ್ಬೆಟ್  ಬರೆಯುತ್ತಾನೆ. ತಾನು ಸೀರೆ ಉಟ್ಟು ಕಾಡಿಗೆ ಹೋಗಿ ಬರೀ ಕತ್ತಿಯಲ್ಲಿ ವೀರ ರಮಣಿಯಂತೆ  ಹುಲಿ ಕೊಂದ ಕಥೆಯೆಲ್ಲಾ ಸುಳ್ಳೆಂದೂ, ಒಂದೆರಡು ಬಾರಿ ಸೀರೆ ಹೊದ್ದುಕೊಂಡು ಹುಲ್ಲು  ಕೊಯ್ಯುತ್ತಲೋ, ಮರ ಏರಿಯೋ ಹುಲಿಯನ್ನು ಸೆಳೆಯುವ ಪ್ರಯತ್ನ ಮಾಡಿದಾಗಳು ಅದು  ಸಫಲವಾಗಿಲ್ಲವೆಂದೂ ಹೇಳುತ್ತಾನೆ. “ಒಂದೆರಡು ಬಾರಿ ನಾನು ಹತ್ತಿದ್ದ ಮರದ ಬಳಿ ಹುಲಿ  ಸುಳಿದದ್ದುಂಟು ಅಷ್ಟೇ,” ಅಂತ ಬರೆಯುತ್ತಾನೆ.

ಆ  ಗುಂಪಿನ ಮುದುಕರು ಅಲ್ಲಿಂದ ಸುಮಾರು ೧೭ ಕಿಲೋಮೀಟರ್ ದೂರದ ಬೆಟ್ಟದತ್ತ ಬೆರಳು ಮಾಡಿ  ತೋರಿಸಿ ಈ ಬಿಳಿ ಆಸಾಮಿ ನರಭಕ್ಷಕ ಹುಲಿ ಕೊಂದದ್ದು ಅಲ್ಲಿಯೇ ಎಂದರು. ಕಾರ್ಬೆಟ್ ಬರೆದ  ಲೇಖನದಲ್ಲಿಯೂ ತನಗೆ ಕಾಡಿನ ಗಾರ್ಡ್ ಒಬ್ಬ ಬೆಟ್ಟ ತೋರಿಸಿ ಅಲ್ಲೊಂದು ಪುಟ್ಟ ಫಾರೆಸ್ಟರ್  ಗುಡಿಸಲಿದೆ, ಅಲ್ಲಿ ಇದ್ದು ಹುಲಿ ಬೇಟೆ ಆಡಬಹುದು ಅಂತ ಹೇಳಿದ್ದಾಗಿ ಬರೆಯುತ್ತಾನೆ. ಆ  ಗುಡಿಸಲು ಇನ್ನೂ ಇರುವ ಸಾಧ್ಯತೆಗಳಿವೆಯೇ?

ಕಾರ್ಬೆಟ್  ವಿವರಿಸುವ ಕಾಟ್-ಕ-ನಾಲ ಹಳ್ಳಿಯನ್ನು ಇಂದು ಕಾಟ್ಕನೌ ಅಂತ ಚುಟುಕು ಮಾಡಿ  ಕರೆಯುತ್ತಾರೆ. ಬೆಟ್ಟದ ಆಚೆಯ ಜನರಿಗೆ ಕಾರ್ಬೆಟ್ ನ ನೆನಪು ಇಲ್ಲ. ಅಲ್ಲಿಯ ಬಾಲಗಂಜೀ  ಮಾಸ್ತರ್ ಸಾಬ್ ಅನ್ನುವವರಿಗೆ ಮಾತ್ರ ಒಂದಷ್ಟು ಕತೆಗಳು ಗೊತ್ತು ಅಂತ ಮೋಹನ್ ನ ಜನ ನನಗೆ  ಹೇಳಿದರು.  ಆದರೆ ಈ ಮಾಸ್ತರ್ ಸಾಹೇಬರು ಹಳ್ಳಿಯಲ್ಲಿ ಇರಲಿಲ್ಲ. ಅವರ ಕುಟುಂಬದ ಯಾರೋ  ತೀರಿಕೊಂಡಿದ್ದರಿಂದ ದೂರದ ಪಟ್ಟಣಕ್ಕೆ ಹೋಗಿದ್ದರಂತೆ. ಅದರರ್ಥ ನಮಗೆ ದಾರಿ ತೋರಿಸುವ  ಮಂದಿ ಯಾರೂ ಇಲ್ಲ ಅಂತ.  ಕಾಟ್ಕನೌ ಕಡೆಯಿಂದ ಬೆಟ್ಟ ಹತ್ತಿ ಆ ಗುಡಿಸಲು ಹುಡುಕುತ್ತಾ  ಹೊರಟೆವು. ಆ ಬಾವಲಿಗಳು ಮನೆ ಮಾಡಿಕೊಂಡಿದ್ದ ಜಾಗದಲ್ಲಿ ರಾತ್ರಿ ಕಳೆದ ನಂತರ ತನಗೆ  ಲ್ಯಾರಿನ್ ಜೈಟಿಸ್ (ಗಂಟಲು ಊತ ಮತ್ತು ನೋವು ಇತ್ಯಾದಿ ಉಂಟು ಮಾಡುವ ಒಂದು ಸೋಂಕು)  ಬಂದದ್ದಾಗಿ ಬರೆಯುತ್ತಾನೆ ಕಾರ್ಬೆಟ್.

ಏದುಸಿರು  ಬಿಡುತ್ತಾ ಬೆಟ್ಟ ಹತ್ತಿ ಮೇಲೆ ತಲುಪಿದ ನನಗೆ ಮುರುಕಲು ಗುಡಿಸಲು ಕಣ್ಣಿಗೆ ಬಿದ್ದಾಗ  ಒಂದು ರೀತಿಯ ರೋಮಾಂಚನ ಆಯಿತು. ಕಾರ್ಬೆಟ್ ವಿವರಿಸುವ ಬಾಗಿಲ ಸರಪಳಿಗಳೂ ಕೂಡ ಇನ್ನೂ  ಹಾಗೆಯೇ ಇವೆ! ಗುಡಿಸಲು ಇನ್ನೇನು ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಗೋಡೆಯ ತುಂಬಾ  ಥರಾವರಿ ಆಶುಕವಿಗಳ ಬರಹಗಳು, ನೆಲದ ತುಂಬಾ ಕಾಲು ಇಡಲಾಗದಷ್ಟು ಕಸ. ಆ ಗುಡಿಸಲಿನ ಮಧ್ಯ  ಭಾಗದಲ್ಲಿ ಒಂದು ಗೋಡೆಯಿದ್ದು ಅದು ಗುಡಿಸಲನ್ನು ಎರಡು ಭಾಗವನ್ನಾಗಿ ವಿಭಾಗಿಸುತ್ತದೆ  ಎಂದು ಕಾರ್ಬೆಟ್ ಬರೆಯುತ್ತಾನೆ. ಆ ಗೋಡೆ ಈಗ ಇಲ್ಲ. ಗುಡಿಸಲಿನ ಪಕ್ಕದಲ್ಲಿ ಒಂದು ಕಾಡಿನ  ವಾಚ್ ಟವರ್ ಇದೆ.

ಕಾರ್ಬೆಟ್ ಹೇಳುವಂತೆ ಅಲ್ಲಿಂದ ಸ್ಪಷ್ಟವಾಗಿ ಮೋಹನ್ ನ ಬಜಾರ್ ಕಾಣುತ್ತದೆ.  ಅಲ್ಲಿಂದ ಕೆಳಗಿಳಿದರೆ ಕಣಿವೆ. ಅಲ್ಲಿಯೇ ಕಾರ್ಬೆಟ್ ಮೋಹನ್ ನರಭಕ್ಷಕನನ್ನು  ಸಾಯಿಸಿದ್ದು. ಆ ರೋಚಕ ಕತೆ ನಡೆದ ದಾರಿಯಲ್ಲಿ ಮುಂದೆ ನಡೆಯುವ ಆಸೆ ನಮಗೆ. ಆದರೆ ಆಗಲೇ  ಲೇಟಾಗಿತ್ತು. ಕತ್ತಲೆ ಕವಿಯುವುದಕ್ಕೆ ಅರ್ಧ ಗಂಟೆ ಅಷ್ಟೇ ಇತ್ತು. ಕಾಟ್ಕನೌ ಗೆ ವಾಪಾಸು  ಹೋಗುವುದೇನೂ ಸುಲಭದ ದಾರಿಯಾಗಿರಲಿಲ್ಲ. ನಾವು ನಿಂತ ಉತ್ತರ ದಿಕ್ಕಿಗೆ ನಂದಾ ದೇವಿ  ಪರ್ವತ ಸಂಜೆಯ ಬೆಳಕಿನಲ್ಲಿ ಬಾಯಿ ಕಟ್ಟಿ ಹೋಗುವಷ್ಟು ಭವ್ಯವಾಗಿ ಕಾಣುತ್ತಿತ್ತು. ನಂದಾ  ದೇವಿಯನ್ನು ನೋಡುತ್ತಾ ಮೂಕವಿಸ್ಮಿತರಾಗಿ ಒಂದಷ್ಟು ಹೊತ್ತು ನಿಂತು ಮತ್ತೆ ಕಾಟ್ಕನೌ  ಕಡೆಗೆ ಹೆಜ್ಜೆ ಹಾಕಿದೆವು. ಕಾರ್ಬೆಟ್ ನಂದಾ ದೇವಿಯ ಬಗ್ಗೆ ತನ್ನ ಕತೆಯಲ್ಲಿ ಏನೂ  ಬರೆಯುವುದಿಲ್ಲವಲ್ಲ ಯಾಕೆ ಅನ್ನುವ ಪ್ರಶ್ನೆ ನನ್ನನ್ನು ದಾರಿಯುದ್ದಕ್ಕೂ  ಕಾಡುತ್ತಿತ್ತು.

ಜಿಮ್ ನಿರ್ಮಿಸಿದ ಪುಟ್ಟ ಸ್ವರ್ಗ

ಕಾರ್ಬೆಟ್  ನ ಪುಟ್ಟ ಹಳ್ಳಿ ಛೋಟಿ ಹಲ್ದ್ವಾನಿ  ಕಾಲಾಧುಂಗಿಯ ಹತ್ತಿರ ಇದೆ. ಅವನು ಒಂದು ಶತಮಾನದ  ಹಿಂದೆ ಹೇಗೆ ವರ್ಣಿಸಿದ್ದನೋ ಅಷ್ಟೇ ಸುಂದರವಾಗಿ ಇಂದೂ ಇದೆ.

ಆತ ತನ್ನ ಜೊತೆ ಇರಲು ೧೯೧೫ರಲ್ಲಿ ಬೆಟ್ಟ ಪ್ರದೇಶದಿಂದ ಕರೆ ತಂದಿದ್ದ ೪೦ ಕುಟುಂಬಗಳು ಈಗ  ಬೆಳೆದು ಅವುಗಳ ಸಂಖ್ಯೆ ಹೆಚ್ಚಿದೆ. ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇನ್ನೂ  ಕಾರ್ಬೆಟ್ ಕೊಟ್ಟ ಒಟ್ಟು ೨೨೧ ಎಕರೆ ಪ್ರದೇಶದಲ್ಲಿ ಕಬ್ಬು, ಸೋಯಾ, ಅರಿಶಿನ, ಶುಂಟಿ,  ಟೊಮಾಟೊ, ಹಣ್ಣು ಇತ್ಯಾದಿಗಳನ್ನು ಬೆಳೆಯುತ್ತಾರೆ. ಆತ ಭಾರತದಿಂದ ೧೯೪೭ರಲ್ಲಿ ಕೆನ್ಯಾಗೆ  ಹೋಗುವ ಮೊದಲು ಈ ಭೂಮಿಯನ್ನು ೪೦ ಭಾಗ ಮಾಡಿ ಎಲ್ಲರಿಗೂ ಹಂಚಿ ಹೋದ.

ಈಗ ಹಳ್ಳಿಯಲ್ಲಿ ಇರುವವರಲ್ಲಿ ಕಾರ್ಬೆಟ್ ಅನ್ನು ಕಂಡವರು ಕಡಿಮೆ.  ಹಣ್ಣು ಹಣ್ಣು ಮುದುಕಿ ಜೀವಂತಿ  ದೇವಿಗೆ ಕ್ರಿಸ್ಮಸ್ ಸಮಯದಲ್ಲಿ ಮಕ್ಕಳೆಲ್ಲಾ ಕಾರ್ಬೆಟ್ ಮನೆಯ ಮುಂದೆ ಸಾಲಾಗಿ  ನಿಲ್ಲುತ್ತಿದ್ದದು ಇನ್ನೂ ಚೆನ್ನಾಗಿ ನೆನಪಿದೆ. ಚಳಿಗಾಲದ ತಿಂಗಳುಗಳಲ್ಲಿ ಮಾತ್ರ  ಕಾರ್ಬೆಟ್ ಈ ಮನೆಯಲ್ಲಿ ಬಂದು ಇರುತ್ತಿದ್ದ ಅಂತ ಹೇಳಿದಳು ಜೀವಂತಿ. “ಕಾರ್ಬೆಟ್ ಸಾಬ್  ಮತ್ತು ಅವನ ತಂಗಿ ಮ್ಯಾಗಿ ಮೇಮ್ ಸಾಬ್ ನಮಗೆ ಟಾಫಿ, ಕೇಕು ಎಲ್ಲಾ ಕೊಡ್ತಾ ಇದ್ದರು.  ನಮ್ಮ ಹಬ್ಬ ಇದ್ದಾಗ ಅವರಿಗೆ ಸಿಹಿ ಕೊಡ್ತಾ ಇದ್ವಿ” ಅಂದಳು. ಜೀವಂತಿಯ ಗಂಡ ಕೇಶವ್ ದತ್  ಪಾಂಡೆಯ ಕುಟುಂಬವನ್ನು ಕಾರ್ಬೆಟ್ ರಾಣಿಖೇತ್ ಇಂದ ಕರೆದುಕೊಂಡು ಬಂದಿದ್ದ. ಕೇಶವ್ ಇಲ್ಲಿ  ಮನೆ ಮಾಡಿ ಬೇಸಾಯ ಶುರು ಮಾಡಿದ ಮೊಟ್ಟ ಮೊದಲ ಗೇಣಿ ರೈತರಲ್ಲಿ ಒಬ್ಬ. ೨೨೩ ಎಕರೆ  ಜಾಗವನ್ನು ೧,೫೦೦ ರೂಪಾಯಿಗಳಿಗೆ ಕೊಂಡಿದ್ದ ಕಾರ್ಬೆಟ್ ಕೇಶವ್ ನಂತಹ ಅನೇಕ  ಕುಟುಂಬಗಳನ್ನು  ಘಢವಾಲ್, ಕುಮಾವ್ ಪ್ರದೇಶಗಳಿಂದ ಇಲ್ಲಿ ನಿಮ್ಮ ಜೀವನ ಹಸನಾಗುತ್ತದೆ ಅಂತ ಭರವಸೆ ನೀಡಿ ಬೇಸಾಯ ಮಾಡಲಿಕ್ಕೆ ಕರೆತಂದಿದ್ದ. ಈ ಜಾಗಕ್ಕೆ ಛೋಟಿ ಹಲ್ದ್ವಾನಿ — ಅಂದರೆ ಪುಟ್ಟ ಸ್ವರ್ಗ — ಎಂದು ಹೆಸರಿಟ್ಟ. ಇದು ಕಾರ್ಬೆಟ್ ನ ಜಮೀನ್ದಾರಿ ಅವತಾರ.

ಹೇಗೆ ಬಂದ ಕುಟುಂಬಗಳ ಜೀವನ ಇಲ್ಲಿ ಮುಂಚಿಗಿಂತ ಸ್ವಲ್ಪ ಮೇಲಾದ್ದದ್ದಂತೂ ಹೌದು.

ಕಾರ್ಬೆಟ್  ಇಲ್ಲಿ ದೊರಕಿಸಿಕೊಟ್ಟ ಮೊದಲ ಸೌಕರ್ಯಗಳಲ್ಲಿ ಇಲ್ಲಿನ ಭೂಮಿಗೆ ನೀರಿನ ಸೌಕರ್ಯವೂ  ಒಂದು.  ಪಕ್ಕದಲ್ಲಿ ಹರಿಯುವ ಬೋರ್ ನದಿಗೆ ಆಣೆಕಟ್ಟು ಕಟ್ಟಿ ಅಲ್ಲಿನ ನೀರನ್ನು ಗದ್ದೆಯ  ಕಾಲುವೆಗಳ ಮೂಲಕ ಹಾಯಿಸುವ ವ್ಯವಸ್ಥೆ ಮಾಡಿದ.  ಇಲ್ಲಿ ಹರಿಯುವ ನೀರು ಇಲ್ಲದ ಋತುವೇ  ಇಲ್ಲ ಅಂತ ಜೀವಂತಿಯ ಮೊಮ್ಮಗ ಮೋಹನ್ ಪಾಂಡೆ ಹೇಳಿದ. “ನಾವು ಮೊದಲು ಇಲ್ಲಿ ಬಂದಾಗ ತುಂಬಾ  ಕಲ್ಲು, ಮುಳ್ಳು ಇತ್ತು. ಕಾರ್ಬೆಟ್ ಸಾಬ್ ಸುಮಾರು ಸಲ ನೆಲವನ್ನು ಉತ್ತಿಸಿದ್ದನಂತೆ.  ನಂತರ ಕುದುರೆಗಳನ್ನು ಇಲ್ಲಿ ಒಂದೇ ಸಮನೆ ಓಡಿಸಲಾಯಿತಂತೆ” ಅಂತ ಕತೆ ಶುರುಮಾಡಿದ ಮೋಹನ್.

ಕಾರ್ಬೆಟ್ ನ ಈ ಹಳ್ಳಿಯಲ್ಲಿ ಕತೆ, ಪುರಾಣ, ವಾಸ್ತವ ಇವೆಲ್ಲ ಒಳ್ಳೆ ಎಂತಾ ಕಲಸು  ಮೇಲೋಗರ ಅಂದರೆ ಒಂದರಿಂದ ಇನ್ನೊಂದನ್ನು ಬೇರ್ಪಡಿಸುವುದೇ ಕಷ್ಟ.  ದೇವ್ಬನ್ ಗೋಸ್ವಾಮಿ  ಎಂಬ ಮುದುಕ ಕಾರ್ಬೆಟ್ ಬಗ್ಗೆ ಮಾತಾಡುವುದು ಕೇಳಿದರೆ ಈತ ಕಾರ್ಬೆಟ್ ಅನ್ನು ನೆನ್ನೆ  ತಾನೇ ಭೇಟಿ ಮಾಡಿರಬೇಕು ಅನ್ನಿಸುತ್ತದೆ!

ಪ್ರತಿ ದಿನ ಹಾಲು ಮತ್ತು ಜೇನುತುಪ್ಪವನ್ನು ಕಾರ್ಬೆಟ್ ಮನೆಗೆ ತಾನೇ  ಒಯ್ಯುತ್ತಿದ್ದುದಾಗಿ ಗೋಸ್ವಾಮಿ ಹೇಳುತ್ತಾನೆ. “ನವೆಂಬರ್ ಇಂದ ಮಾರ್ಚ್ ವರೆಗೆ  ಕಾರ್ಬೆಟ್ ಇಲ್ಲಿ ಇರುತ್ತಿದ್ದ. ನಾನು ಮತ್ತು ಅಪ್ಪ ಹಾಲು ಕೊಡಲಿಕ್ಕೆ ಹೋದಾಗಲೆಲ್ಲ  ಮ್ಯಾಗಿ ಮೇಮ್ ಸಾಬ್ ನನ್ನ ಅಪ್ಪ ಪನ್ಬನ್  ಗೋಸ್ವಾಮಿಗೆ ‘ಈ ಸಣ್ಣ ಹುಡುಗನ್ನ ಈ  ಚಳಿಯಲ್ಲಿ ಕರೆದುಕೊಂಡು ಬರಬೇಡ. ನ್ಯುಮೋನಿಯ ಬರತ್ತೆ’ ಅಂತ ಹೇಳುತ್ತಿದ್ದರು. ಆದರೆ  ನಾನು ಹೋಗುವುದನ್ನು ಯಾವತ್ತೂ ನಿಲ್ಲಿಸಲಿಲ್ಲ,” ಅಂತ ನಮಗೆ ಮತ್ತೊಂದು ಕತೆ ಹೇಳಲಿಕ್ಕೆ  ಶುರು ಮಾಡಿದ.

ಅಲ್ಲಿಂದ ಮುಂದೆ ಕತೆ ಇನ್ನಷ್ಟು ಮತ್ತಷ್ಟು ರೋಚಕವಾಗುತ್ತಾ ಹೋಗಿ ಒಂದು ಹಂತದಲ್ಲಿ  ನಂಬಲು ಅಸಾಧ್ಯವಾದ ಪುರಾಣವಾಗಿ ತೋರಲಾರಂಭಿಸುತ್ತದೆ. ಕಾರ್ಬೆಟ್ ಹುಲಿ ಬೇಟೆಗೆ  ಹೊರಟಾಗಲೆಲ್ಲಾ ತಾನೂ ಹೋಗುತ್ತಿದ್ದೆ ಅಂದ. ಪೋವಲ್ಗರ್ ನ ಏಕಾಂಗಿ ಹುಲಿ (“ಬ್ಯಾಚುಲರ್  ಆಫ್ ಪೋವಲ್ಗರ್”) ಅನ್ನು ಕಾರ್ಬೆಟ್ ಕೊಂದಾಗ ತಾನು ಜೊತೆಗೆ ಇದ್ದುದಾಗಿ ಕೊಚ್ಚಿಕೊಂಡ.   ಕಾರ್ಬೆಟ್ ಹುಲಿಯನ್ನು ಆನೆಯೇರಿ ಕೊಂದ ಅಂತ ಮತ್ತೊಂದು ಸವಿವರ ಕತೆ ಶುರು ಮಾಡಿಕೊಂಡ.

ಕಾರ್ಬೆಟ್ ಅನ್ನು ಅವನ ಪುಸ್ತಕಗಳಿಂದ ಬಲ್ಲವರಿಗೆ ಈತ ನರಭಕ್ಷಕ ಹುಲಿಗಳನ್ನು  ಯಾವತ್ತೂ ಒಬ್ಬನೇ, ಕಾಲ್ನಡಿಗೆಯಲ್ಲಿ ಬೇಟೆ ಮಾಡಿದ್ದು ಅಂತಲೂ ಗೊತ್ತಿರುತ್ತದೆ.  ಈ  ಪೋವಲ್ಗರ್ ಬ್ರಹ್ಮಚಾರಿಯ ಕತೆಯನ್ನೂ ಹೇಳುವ ತನ್ನ ‘ಮಾನ್ ಈಟರ್ಸ್ ಆಫ್ ಕುಮಾವ್’ ಎಂಬ  ಸಂಕಲನದಲ್ಲಿ ಈ ಹುಲಿರಾಯನನ್ನು ಹೆಣ್ಣು ಹುಲಿಯ ಘರ್ಜನೆ ಅನುಕರಿಸಿ ತಾನು ಸೆಳೆದಿದ್ದಾಗಿ  ಕಾರ್ಬೆಟ್ ಬರೆಯುತ್ತಾನೆ! ಹುಲಿ ತಾನು ಅಂದುಕೊಂಡದ್ದಕ್ಕಿಂತ ತುಂಬಾ ಮುಂಚಿತವಾಗಿ  ಬಂದುಬಿಟ್ಟಾಗ ಕಾರ್ಬೆಟ್ ಗೆ ಹತ್ತಿ ಕೂರಲಿಕ್ಕೆ ಮರ ತಕ್ಷಣಕ್ಕೆ ಸಿಕ್ಕುವುದಿಲ್ಲ. ಹುಲಿ  ಮುಂದಿನ ಗಿಡಗಳ ಸಂದಿನಿಂದ ಹೊರಬರಬಹುದು ಎಂದುಕೊಂಡು ಹುಲ್ಲಿನ ಮೇಲೆ ಸಾಪಾಟಾಗಿ  ಮಲಗುತ್ತಾನೆ. ಆದರೆ ಆ ಬ್ರಹ್ಮಚಾರಿ ಕಾರ್ಬೆಟ್ ಬಲ ಭಾಗದ ಪೊದೆಗಳಿಂದ ಇದ್ದಕ್ಕಿದ್ದಂತೆ  ಪ್ರತ್ಯಕ್ಷ ಆಗಿಬಿಟ್ಟು ಕಾರ್ಬೆಟ್ ಅನ್ನು ಕಕ್ಕಾಬಿಕ್ಕಿ ಮಾಡಿಬಿಡುತ್ತಾನೆ. ಒಂದು  ಗುಂಡು ಹಾರಿಸಿ ಬ್ರಹ್ಮಚಾರಿಗೆ ಭಾರಿ ಗಾಯ ಮಾಡುತ್ತಾನೆ. ಅಂದು ತಪ್ಪಿಸಿಕೊಂಡ  ಹುಲಿಯನ್ನು ಮುಂದಿನ ದಿನ ಕಾರ್ಬೆಟ್ ಮತ್ತೆ ಹುಡುಕಿ ಸಾಯಿಸುತ್ತಾನೆ.

ದೇವ್ಬನ್ ಹೇಳಿದ ಕಾರ್ಬೆಟ್ ಆನೆಯ  ಬನ್ನೇರಿ ಹುಲಿ ಕೊಂದ ಕತೆ ಸಂಪೂರ್ಣ ಸುಳ್ಳು ಅಂತಲೂ ಅಲ್ಲ. ಆ ಮುದುಕ ಘಟನೆಯನ್ನು  ಕಣ್ಣಿಗೆ ಕಟ್ಟುವಂತೆ ಸವಿವರವಾಗಿ ಹೇಳಿದ: “ಹುಲಿ ಅಲ್ಲೇ ಇತ್ತು. ಆದರೆ ಅದು ನಮ್ಮನ್ನು  ನೋಡೇ ಇರಲಿಲ್ಲ. ಆಗ ಕಾರ್ಬೆಟ್ ಸಾಬ್ ಬೇಕಂತ ಒಂದು ಒಣ ಟೊಂಗೆ ಮುರಿದರು. ಆಗ ಹುಲಿ ಈ  ಕಡೆ ತಿರುಗಿ ನಮಗೆ ಸರಿಯಾಗಿ ಗುರಿಗೆ ಸಿಕ್ಕಿತ್ತು. ತಕ್ಷಣ ಕಾರ್ಬೆಟ್ ಸಾಬ್ ಗುಂಡು  ಹೊಡೆದರು.”

ದೆವ್ಬನ್ ಜೊತೆ ಇದ್ದ ಬಿಳಿ ಶಿಕಾರಿ ಬೇರೆ ಯಾರೋ ಆಗಿದ್ದಿರಲೂಬಹುದು. ಕಾರ್ಬೆಟ್  ತನ್ನ “ಮೈ ಇಂಡಿಯಾ” ಪುಸ್ತಕದಲ್ಲಿ ಹೇಗೆ ಬಂಡಿಗಟ್ಟಲೆ ಬ್ರಿಟೀಷರು ಯುನೈಟೆಡ್  ಪ್ರಾವಿನ್ಸ್ (ಈಗಿನ ಉತ್ತರ ಪ್ರದೇಶ್ ಮತ್ತು ಉತ್ತರಾಂಚಲ್)ಗೆ ಆನೆ ಮೇಲೇರಿ ಹುಲಿ  ಬೇಟೆಯಾಡಲು ಬಂದು ಇಳಿಯುತ್ತಿದ್ದರು ಅಂತ ಬರೆಯುತ್ತಾನೆ. ಇಂತಹ ಬಹಳಷ್ಟು “ಶಿಕಾರಿ  ಆಟ”ವನ್ನು ಸ್ಥಳೀಯ ಹಳ್ಳಿಗರ ಸಹಕಾರದಿಂದ ಏರ್ಪಾಟು ಮಾಡಲಾಗುತ್ತಿತ್ತು.

ನಾನು ಇದರ ಬಗ್ಗೆ ಯೋಚನೆ ಮಾಡುತ್ತಿರುವಂತೆ ದೆವ್ಬನ್ ಕತೆ ಇನ್ನೊಂದು ತಿರುವು  ಪಡೆದುಕೊಂಡಿತ್ತು. ಪುರಾಣದ ಶೈಲಿ ಬಿಟ್ಟು ವಾಸ್ತವ ಚಿತ್ರಣದ ಶೈಲಿಗೆ ಇಳಿದಿದ್ದ: “ಬ್ಯಾಚುಲರ್  ಆಫ್ ಪೋವಲ್ಗರ್”ನ್ನು ಊರಿಗೆ ತಂದು ಅಳೆದು ನೋಡಿದಾಗ ಅದು ಮೂಗಿನಿಂದ ಬಾಲದ ತುದಿಯವರೆಗೆ  ೧೦ ಅಡಿ ಏಳು ಇಂಚು ಇತ್ತಂತೆ! ಇಡೀ ಯುನೈಟೆಡ್ ಪ್ರಾವಿನ್ಸ್ ನಲ್ಲಿ ಇದೇ ಅವನು ಕಂಡ  ಅತ್ಯಂತ ದೊಡ್ಡ ಹುಲಿ ಅಂತ ಕಾರ್ಬೆಟ್ ಕೂಡ ಬರೆಯುವುದೇನೋ ಸತ್ಯವೇ. ಈ ಹುಲಿ ಅಸಲಿನಲ್ಲಿ  ನರಭಕ್ಷಕ ಆಗಿರಲೇ ಇಲ್ಲ ಸುಮ್ಮನೆ ಸಾಯಿಸಿಬಿಟ್ಟೆ ಅಂತ ಆಮೇಲೆ ಕಾರ್ಬೆಟ್ ಬೇಜಾರು  ಮಾಡಿಕೊಳ್ಳುತ್ತಾನೆ.

ಛೋಟಿ ಹಲ್ದ್ವಾನಿಯ ಜನರಿಗೆ  ತಮ್ಮ ಪೈರನ್ನು ಕಾಡು ಪ್ರಾಣಿಗಳ ಕಾಟದಿಂದ ಕಾಪಾಡಿಕೊಳ್ಳಲು ಕಾರ್ಬೆಟ್ ಕೊಟ್ಟ ಬಂದೂಕನ್ನು ಇನ್ನೂ ತುಂಬಾ  ಜತನದಿಂದ ಅಲ್ಲಿನ ಜನ ಇಟ್ಟುಕೊಂಡಿದ್ದಾರೆ. ಆಗಿನ ಕಾಲಕ್ಕೆ ಸರ್ಕಾರ ಇಡೀ ನಲವತ್ತು  ಕುಟುಂಬಗಳ ಹಳ್ಳಿಗೆ ಒಂದು ಬಂದೂಕು ಇಟ್ಟುಕೊಳ್ಳಲು ಮಾತ್ರ ಪರವಾನಿಗೆ ಕೊಟ್ಟಿತ್ತು.  ಆದರೆ ಬಿಳಿ ಸಾಹೇಬ ಕಾರ್ಬೆಟ್ ಹತ್ತಿರ ಬಂದೂಕುಗಳ ಒಂದು ದೊಡ್ಡ ಸಂಗ್ರಹವೇ ಇತ್ತು!

ಕಾರ್ಬೆಟ್ ಕೊಟ್ಟ ಈ ಸಿಂಗಲ್ ಬ್ಯಾರಲ್ ಬಂದೂಕು ಈಗ ತ್ರಿಲೋಕ್  ಸಿಂಗ್ ಕುಟುಂಬದ ಸುಪರ್ದಿಯಲ್ಲಿದೆ. ಅದು ಈಗಲೂ ಕೆಲಸ ಮಾಡುತ್ತದೆ! “ನೀವೇ ನೋಡಿ” ಅಂತ  ತ್ರಿಲೋಕ್ ಸಿಂಗ್ ಹೆಂಡತಿ ಪಾರ್ವತೀ ದೇವಿ ನನ್ನ ಕೈಗೆ ಬಂದೂಕು ಕೊಟ್ಟಳು.  ಹ್ಯಾಮರ್ ಬಳಸಿ ಬಳಸಿ ಸವೆದಂತೆ ಕಂಡರೂ, ಬಂದೂಕಿನ ಕುದುರೆ ಮಾತ್ರ ಸ್ವಲ್ಪವೂ ತೊಂದರೆ ಇಲ್ಲದೆ ಸರಿಯಾಗಿ ಕೆಲಸ ಮಾಡುತ್ತಿದೆ!

ಪಾರ್ವತಿಯ ಮನೆಯ ಹಿಂದಿನ ಅಂಗಳ ಕಾರ್ಬೆಟ್ ಕಾಲದ  ಸಂಗ್ರಹಾಲಯದ ಮತ್ತೊಂದು ವಸ್ತುವಿನಂತೆ ತೋರುತ್ತದೆ. ಹಿಂದೆ ಎಲ್ಲರೂ ಒಟ್ಟಿಗೆ ಕೂತು  ಹಳ್ಳಿಯ ವ್ಯಾಜ್ಯಗಳನ್ನೆಲ್ಲಾ ಪರಿಹರಿಸಿಕೊಳ್ಳುತ್ತಿದ್ದ “ಚೌಪಾಲ್” ಅನ್ನುವ ಮಂಟಪದಂತಹ  ಜಾಗ ಇನ್ನೂ ಹಾಗೆಯೇ ಇದೆ. ಸ್ವಲ್ಪ ಎತ್ತರದ ಜಾಗದಲ್ಲಿರುವ ಈ ಸ್ಥಳವನ್ನು ಫಸಲು ಬೆಳೆದು  ನಿಂತಾಗ ಅದರ ಮೇಲೆ ಕಣ್ಣಿಟ್ಟು ಕಾಯಲೂ ಬಳಸಲಾಗುತ್ತದೆ. ಇದರ ಮೆಟ್ಟಿಲುಗಳನ್ನು  ಹತ್ತುವಾಗ ಈ ಪ್ರಪಂಚ ಕಾರ್ಬೆಟ್ ಕಾಲದಿಂದ ಈಗಿಗೆ ನಿಜವಾಗಿಯೂ ಭೌತಿಕ ಅರ್ಥದಲ್ಲಿ  ಅಷ್ಟೇನೂ ಬದಲಾಗಿಲ್ಲವೇನೋ ಅನ್ನಿಸಿತು. ದೂರದಲ್ಲಿ ನೀರಾವರಿ ಪಂಪ್ ಸೆಟ್ ಮತ್ತು  ಟ್ರ್ಯಾಕ್ಟರ್ ನ ಛಗ್ -ಛಗ್ ಸದ್ದು ಬಿಟ್ಟರೆ ಇನ್ನೆಲ್ಲ ನೂರು ವರ್ಷದ ಹಿಂದಿನ ಚಿತ್ರದಂತೆ ಕಾಣುತ್ತಿತ್ತು.

ಕಾಡು ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ಕಾಡುಹಂದಿಗಳಿಗೆ,  ತಡೆಗೋಡೆಯಾಗಿ ಕಾರ್ಬೆಟ್ ಕಟ್ಟಿದ ಗೋಡೆ ಇನ್ನೂ ಹಾಗೆಯೇ ಇರುವುದಷ್ಟೇ ಅಲ್ಲದೆ ಕಟ್ಟಿದ  ಉದ್ದೇಶವನ್ನು ಈಗಲೂ ಪೂರೈಸುತ್ತಲೂ ಇದೆ. ಕೆಲವು ಕಡೆ ಸ್ವಲ್ಪ ಹಾಳಾಗಿದ್ದರೂ  ಛೋಟಿ  ಹಲ್ದ್ವಾನಿ ಮತ್ತು ಅದನ್ನು ಮೂರು ದಿಕ್ಕುಗಳಲ್ಲಿ ಸುತ್ತಿರುವ ಕಾಡಿನ ಮಧ್ಯೆ ಇರುವುದು  ಇದೊಂದೇ ತಡೆಗೋಡೆ.

ತನ್ನ “ಮೋತಿ” ಎಂಬ ಲೇಖನದಲ್ಲಿ ಕಾರ್ಬೆಟ್ ಈ  ತಡೆಗೋಡೆ ಇದ್ದರೂ ಮೋತಿ ಸಿಂಗ್ ನ ಆಲೂಗೆಡ್ಡೆ ಬೆಳೆಯನ್ನು ಒಂದು ದೊಡ್ಡ ಹಂದಿ ನಾಶ  ಮಾಡಿತು ಎಂದು ಬರೆಯುತ್ತಾನೆ.  ಮೋತಿಯ ಹೆಂಡತಿಗೆ ಆಗ ಕಾರ್ಬೆಟ್ ಸಾಬ್ ಮೇಲೆ ಕೆಂಡಾಮಂಡಲ  ಕೋಪ ಬರುತ್ತದೆ. ಅವನಿಗೆ ಶಿಕಾರಿ ಹುಚ್ಚು ಈ ಬಿಳಿ ಸಾಬ್ ಹತ್ತಿಸದೆ ಇದ್ದರೆ ಅವನು  ಊರಲ್ಲೇ ಇದ್ದು ಎಲ್ಲ ಗಂಡಸರ ಹಾಗೆ ಹೊಲ ಕಾಯುತ್ತಿದ್ದ, ಆಲೂಗೆಡ್ಡೆಗಳು  ಉಳಿಯುತ್ತಿದ್ದವು ಅನ್ನೋದು ಅವಳ ವಾದ.

ಮೋತಿಗಾಗಿ ಕಾರ್ಬೆಟ್ ಕಟ್ಟಿಸಿ ಕೊಟ್ಟ ಪಕ್ಕಾ ಮನೆಯಲ್ಲಿ ಈಗ  ಮೋತಿಯ ಮೊಮ್ಮಗ ಭುವನ್ ಸಿಂಗ್ ಇದ್ದಾನೆ. ಭುವನ್ ಮೋತಿಯ ದೊಡ್ಡ ಮಗ ಒಳ್ಳೆ  ಶಿಕಾರಿಯಾಗಿದ್ದ ಪಾನ್ ಸಿಂಗ್ ನ ಮಗ. ಪಾನ್ ಸಿಂಗ್ ಗೆ (ಅವನನ್ನು ಕಾರ್ಬೆಟ್ ಪುನ್ವಾ  ಎಂದು ಕರೆಯುತ್ತಾನೆ) ತಾನು ಒಮ್ಮೆ ಶಿಕ್ಷೆ ಕೊಟ್ಟದ್ದರ ಬಗ್ಗೆ ಕಾರ್ಬೆಟ್  ಬರೆಯುತ್ತಾನೆ. ಬಂದೂಕನ್ನು ಮರಳಿನ ಮೇಲೆ ಇಟ್ಟಿದ್ದಕ್ಕೆ ಕೋಪಗೊಂಡು ಅವನ ಕೈಯ್ಯಲ್ಲೇ  ಬಹಳಷ್ಟು ದೂರ ಆ ಭಾರಿ ತೂಕದ ಬಂದೂಕನ್ನು ಹೊರಿಸುತ್ತಾನೆ.

ಮೋತಿಯ ಮೊಮ್ಮಗನ ಕಣ್ಣಿನಲ್ಲಿ ಕಾರ್ಬೆಟ್ ತುಂಬಾ ಪ್ರೀತಿಯಿಂದ ವರ್ಣಿಸುವ ಮೋತಿಯ  ಛಾಯೆಯೇನಾದರು ಕಾಣಬಹುದೇ ಅಂತ  ಸಂಜೆಯ ಬೆಳಕಿನಲ್ಲಿ ಹುಡುಕಿದೆ. ಆದರೆ ಕಾರ್ಬೆಟ್ ಈ  ಜನರ ಜೊತೆಗೆ ಒಂದು ಇಡೀ ಜೀವನ ಕಳೆದು ಕಂಡುಕೊಂಡದ್ದನ್ನು ನಾನು  ನನ್ನ ಪ್ರವಾಸಿ  ಕಣ್ಣಿನಿಂದ ಒಂದು ಸಂಜೆಯಲ್ಲಿ ಅಳೆಯಲು ಹೇಗೆ ತಾನೇ ಸಾಧ್ಯ?

ನನ್ನ ಕಣ್ಣು ಭುವನ್ ಸಿಂಗ್ ಎತ್ತಿಕೊಂಡಿದ್ದ  ನಾಯಿಮರಿಯ ಕಡೆ ಹರಿಯಿತು. ಆ ನಾಯಿ ಕಾರ್ಬೆಟ್ ನ ತುಂಬಾ ಪ್ರೀತಿಯ ಬೇಟೆ ನಾಯಿ ರಾಬಿನ್  ಥರಾನೇ ಇದೆ ಅನ್ನಿಸಿತು.  ನಾನು ಹಾಗೆ ಹೇಳಿದ್ದನ್ನು ಕೇಳಿ ಭುವನ್ ಗೆ ಭಯಂಕರ ನಗು  ಬಂತು. “ಇದು ಭುತಿಯ ಎಂಬ ಜಾತಿಯ ಈ ಬೆಟ್ಟಗಳಲ್ಲಿ ಸಾಮಾನ್ಯಾಗಿ ಇರುವ ನಾಯಿ ಅಷ್ಟೇ.  ಎಲ್ಲವೂ ಸುಮಾರು ಹಿಂಗೆ ಇರ್ತಾವೆ” ಅಂತ ನಿನಗೆ ಇಷ್ಟೂ ಅರ್ಥ ಆಗೋದಿಲ್ಲವಾ ಎಂಬ  ದನಿಯಲ್ಲಿ ಹೇಳಿದ.

ಛೋಟಿ ಹಲ್ದ್ವಾನಿಯಲ್ಲಿರುವ ಕಾರ್ಬೆಟ್ ನ ಮನೆ ಈಗ ಮ್ಯೂಸಿಯಂ  ಆಗಿದೆ. ಅಲ್ಲಿ ವಿಶಾಲ ಅಂಗಳದ ಒಂದು ಮೂಲೆಯಲ್ಲಿ ರಾಬಿನ್ ನ ಗೋರಿ ಇದೆ. ಬಂಗಲೆಯ ಒಳಗೆ  ಕಾರ್ಬೆಟ್ ಬಳಸಿದ ಅನೇಕ ವಸ್ತುಗಳು ಇವೆ. ಟೇಬಲ್, ಕುರ್ಚಿ, ಬಂದೂಕಿನ ಕೇಸುಗಳು, ಅವನು  ಅನೇಕ ಲೇಖನಗಳಲ್ಲಿ ಪ್ರಸ್ತಾಪಿಸುವ ಅವನ ನಲವತ್ತು ಪೌಂಡು ತೂಕದ ಟೆಂಟು, ಬರೆದ ಪತ್ರಗಳ,  ಲೇಖನಗಳ ಹಲವು ಪ್ರತಿಗಳು, ಅವನ ಕುಟುಂಬದ ಸದಸ್ಯರ ಚಿತ್ರಗಳು ಇತ್ಯಾದಿ.

ಕೆನ್ಯಾದಿಂದ ೧೯೫೧ರಲ್ಲಿ ಅವನು  ಸಾಯುವುದಕ್ಕೆ ಮೂರು ವರ್ಷ ಮುಂಚೆ ಇವನು ಬರೆದ ಪತ್ರದ ಜೆರಾಕ್ಸ್ ಪ್ರತಿ ಇಲ್ಲಿ ಇದೆ.  ಅದರಲ್ಲಿ ಅವನ ಗೆಳೆಯರಾಗಿದ್ದ ಸುತ್ತಮುತ್ತಲ ಅನೇಕ ದೇವಾಲಯಗಳ ಅರ್ಚಕರಿಗೆ ದುಡ್ಡು  ಕಳಿಸಿದ್ದರ ಬಗ್ಗೆ ಬರೆಯುತ್ತಾನೆ. ಬೆಳೆ ಚೆನ್ನಾಗಿ ಆಗ್ತಾ ಇದೆಯಾ, ಕಾಡು ಹಂದಿಗಳ ಕಾಟ  ಇನ್ನೂ ಇದೆಯಾ ಅಂತೆಲ್ಲಾ ವಿಚಾರಿಸಿಕೊಳ್ಳುತ್ತಾನೆ.

ಈ ಎಲ್ಲಾ ಪತ್ರಗಳ ನಡುವೆ ನನ್ನ ಕಣ್ಣಿಗೆ ವಿಶೇಷವಾಗಿ ಬಿದ್ದದ್ದು  ಒಂದು ಪುಟ್ಟ ಜೆರಾಕ್ಸ್ ಅಲ್ಲದ ಮೂಲ ಪ್ರತಿಯೇ ಆಗಿದ್ದ ಪೇಪರ್. ಅದರ ಮೇಲೆ ಕಾರ್ಬೆಟ್  ತನ್ನ ಅಷ್ಟೇನೂ ಸುಂದರವಲ್ಲದ ಬರಹದಲ್ಲಿ ಎರಡು ವಾಕ್ಯ ಬರೆದು ಸಹಿ ಹಾಕಿದ್ದ:

“ಎಲ್ಲದರಲ್ಲೂ ತುಂಬಾ ಹುಳುಕು ಹುಡುಕಬೇಡಿ. ಒಬ್ಬ ಕಾಡು ಮನುಷ್ಯ ತನ್ನ ಕತೆಗಳನ್ನು ಕಾಡಿನ ಭಾಷೆಯಲ್ಲಿ ಮಾತ್ರ ಹೇಳಲು ಸಾಧ್ಯ” – ಜಿಮ್ ಕಾರ್ಬೆಟ್.

ಕಣ್ಣು ಪಿಳಿಪಿಳಿ, ಬಾಯಿ ಪಚಪಚ…
ಮೊನ್ನೆ ಟೈಗರ್ ಸೆನ್ಸಸ್ ಮಾತು ಆಫೀಸಿನಲ್ಲಿ ಚರ್ಚೆ ಆಗುತ್ತಿದ್ದಾಗ ನನಗೆ ನಮ್ಮ ತಾತ  ಹೇಳುತ್ತಿದ ಹುಲಿ ಬೇಟೆಯ ಕತೆ, ಅಜ್ಜಿ ಅಮ್ಮ ಚಿಕ್ಕಮ್ಮಂದಿರು ಹೇಳುತ್ತಿದ್ದ “ಕೆಂಪು  ಕಣ್ಣಜ್ಜಿ” ಕತೆ ನೆನಪಾಗಿ ನಾವು ಈಗ ಹುಲಿಯ ಬಗ್ಗೆ ಮಾತಾಡುವ ರೀತಿಗೂ ಬಾಲ್ಯದಲ್ಲಿ  ನನಗಿದ್ದ ಹುಲಿಯ ಕಲ್ಪನೆಗೂ ಎಷ್ಟು ಅಜಗಜಾಂತರ ಅನ್ನಿಸಿತು.

ನಾನು ಹುಟ್ಟುವ ಹೊತ್ತಿಗೆ ಕೊಟ್ಟಿಗೆಗೆ ಹುಲಿ ಬಂದು ಹಸುವನ್ನೋ ಕರುವನ್ನೋ  ಎತ್ತಿಕೊಂಡು ಹೋಗುವ ಜಮಾನ ಮುಗಿದಿತ್ತು. ಆದರೆ ನಮ್ಮ ಅಜ್ಜ ಹೀಗೆ ಎತ್ತುಕೊಂಡು ಹೋಗುವ  ಹುಲಿಗಳನ್ನು ಹೇಗೆ ಹೊಂಚು ಹಾಕಿ ಹೊಡೆಯುತ್ತಿದ್ದರು ಅಂತ ಹೇಳುತ್ತಿದ್ದ ಕತೆಗಳು ಅತ್ಯಂತ  ರೋಚಕ ಅನ್ನಿಸುತ್ತಿದ್ದವು. ಪುಟ್ಟವರಾಗಿದ್ದಾಗ ನನ್ನ ಮಾವಂದಿರು ಇದೇ ಹುಲಿ ಕತೆ ಕೇಳಿ  ಹೇಗೆ ಹೆದರಿ ಉಚ್ಚೆ ಹುಯ್ಕೊಳ್ಳುತ್ತಿರು ಅಂತ ಅವರು ಹೇಳುವ ಉಪಕಥೆಗಳು ಒಂದು ತರದ comic  relief. ಕರೆಂಟ್ ಇಲ್ಲದ ಆ ಕಾಲದಲ್ಲಿ ನನ್ನ ಮಾವ, ಅಮ್ಮ, ಚಿಕ್ಕಮ್ಮ ಎಲ್ಲರೂ ಅಡಿಗೆ  ಮನೆಯ ಒಲೆಯ ಸುತ್ತಾ ಕೂತು ಕತೆ ಕೇಳುತ್ತಿದ್ದರಂತೆ. ಕತೆ ಕೇಳಿಯಾದ ಮೇಲೆ ಮಲೆನಾಡಿನ ಜಡಿ  ಮಳೆಯಲ್ಲಿ ಹಿಂದೆ ಜಗಲಿಯವರೆಗೆ ಹೋಗಿ ಕೈ ತೊಳೆದುಕೊಳ್ಳು ವುದಕ್ಕೂ  ನಮ್ಮ ಭಾರಿ brave  ಅಂತ ನಾವು ಅಂದುಕೊಂಡಿದ್ದ  ಇಬ್ಬರೂ ಮಾವಂದಿರಿಗೆ (ಹಕ್ಕೆ ಮನೆಯಲ್ಲಿ ರಾತ್ರಿ ಕೂತು  ಕಾಡು ಹಂದಿ ಕಾಡಿಗೆ ಬರದಂತೆ ಕಾಯುವುದು ಸಣ್ಣ ಮಾತಾ?!!) ಹೆದರಿಕೆ ಆಗುತ್ತಿತ್ತಂತೆ…  ನಮಗೆಲ್ಲ ಅದೇ ದೊಡ್ಡ ತಮಾಷೆಯ ವಿಷಯ.

ನಮ್ಮ ಅಜ್ಜ ಸತ್ತಾಗ ನನಗೆ ಹತ್ತು ವರ್ಷ ಇರಬಹುದು. ಈಗ ನನಗೆ ಬಹಳಷ್ಟು ಕತೆಗಳು  ಮರೆತು ಹೋಗಿದೆ. “ಯಾರದ್ರೂ ಇದಾರಾ ಅಂತ ಹುಲಿ ಒಂದು ಹೆಜ್ಜೆ ಮುಂದಿಟ್ರೆ ನಾಲ್ಕು  ಹೆಜ್ಜೆ ಹಿಂದಿಡ್ತಾ ಇತ್ತು… ಬಾಲ ಮೇಲೆ, ಕೆಳಗೆ, ಮೇಲೆ ಕೆಳಗೆ ಮಾಡ್ತಾ ಇತ್ತು…”  ಅಂತ ಹುಲಿ ತಾನು ಬಚ್ಚಿಟ್ಟ ಅರ್ಧ ತಿಂದ ಕರುವನ್ನೋ ಹಸುವನ್ನೋ ಮತ್ತೆ ತಿನ್ನಲು ಬಂದಾಗ  ಎಷ್ಟು ಹುಷಾರಾಗಿ ಬರ್ತಾ ಇತ್ತು ಅಂತ ಅಜ್ಜ ಹೇಳುತ್ತಿದ್ದು ಮಾತ್ರ ಚೆನ್ನಾಗಿ ನೆನಪಿದೆ.  ಆಮೇಲೆ ಹುಲಿ ಹೊಡೆಯುವುದು ತಪ್ಪು ಅಂತ ಕಾನೂನು ಬಂದ ಮೇಲೆ ಹುಲಿ ಬೇಟೆ ನಿಂತು ಹೋಯಿತು  ಅಂತ ಅಜ್ಜ ಹೇಳುವಾಗ “ಅಯ್ಯೋ ಛೆ, ಎಂಥ ಲಾಸಾಯ್ತಪ್ಪ” ಅನ್ನಿಸುತ್ತಿತ್ತು!

ಮತ್ತೆ  ಮನೆಯ ಹೆಂಗಸರು ಉಟಕ್ಕೆ ಅದು ಇದು ಚೊರೆ ಮಾಡುವ ಮಕ್ಕಳಿಗೆ ಒಂದು ಹುಲಿ ಕತೆ  ಹೇಳುತ್ತಿದ್ದರು. ಒಂದಾನೊಂದು ಕಾಲದಲ್ಲಿ ಒಬ್ಬ ಅಜ್ಜಿ ಮತ್ತು ಮೊಮ್ಮಗ ಇಬ್ಬರೇ ಒಂದು  ದೂರದ ಉರಿನಲ್ಲಿ ಮನೆ ಮಾಡಿಕೊಂಡು ಇದ್ದರಂತೆ. ಸುತ್ತ ದಟ್ಟ ಕಾಡು. ಒಂದು ದಿನ ಅಜ್ಜಿ  ಮನೆಯಲ್ಲಿ ಒಂದೇ ಒಂದು ರೊಟ್ಟಿ ಮಾಡಿದ್ದಳಂತೆ. ಹುಡುಗ ಇಡೀ ರೊಟ್ಟಿ ತನಗೊಬ್ಬನಿಗೆ ಬೇಕು  ಅಂತ ಹಠ ಮಾಡಿದಕ್ಕೆ ರೋಸಿ ಹೋದ ಅಜ್ಜಿ ಅವನನ್ನು ಹೊರಗೆ ಹಾಕಿ ಬಾಗಿಲು  ಹಾಕಿಬಿಡುತ್ತಾಳೆ. ರಾತ್ರಿ ಕವಿದಂತೆ ಒಂದು ಹುಲಿ ಅಲ್ಲಿಗೆ ಬರುತ್ತದೆ. ಅದರ ಆಕಾರ ಕಂಡು  ಹೆದರಿದ ಹುಡುಗ ಅಜ್ಜಿಗೆ ಗೋಗರೆಯುತ್ತಾನೆ: “ಕಣ್ಣು ಪಿಳಿಪಿಳಿ, ಬಾಯಿ ಪಚ ಪಚ, ಬಾಲ  ಪಟಪಟ, ಬೇಲಿ ಸರಸರ… ಕೆಂಪು ಕಣ್ಣಜ್ಜಿ ಬಂತು, ಅರ್ಧ ರೊಟ್ಟಿನೇ ಸಾಕು  ಬಾಗಿಲು  ತೆಗಿ…”

ಅಜ್ಜಿ ಏನೋ ತಲೆಹರಟೆ ಮಾಡುತ್ತಿದೆ ಹುಡುಗ ಅಂತ ಅಂದುಕೊಂಡು ಬಾಗಿಲು ತೆರೆಯುವುದೇ ಇಲ್ಲ. ಬೆಳಗ್ಗೆ ಅಜ್ಜಿ ಬಾಗಿಲು ತೆಗೆಯುವಷ್ಟರಲ್ಲಿ ಹುಡುಗ ಇರುವುದಿಲ್ಲ.

ಈ  ಕತೆಯ ಬಗ್ಗೆ ನಮಗೆ ಒಂದು ಥರದ ವಿಚಿತ್ರ fascination ಇತ್ತು. ನಮ್ಮಲ್ಲಿ “ಪುಸ್ಕಿ”  ಅಂತ ಕರೆಯುತ್ತಿದ್ದ ಕೆಲವು ಕಸಿನ್ನುಗಳಿಗೆ ಈ ಕತೆ ಕೇಳಿ ಅಳು ಬರುತ್ತಿತ್ತು. ಆಗ  ಸಾಂದರ್ಭಿಕವಾಗಿ ಕೆಲವು ಹೆಂಗರುಳಿನ ಆಂಟಿಯರು ಅಜ್ಜಿ ಇನ್ನೇನು ಹುಲಿ ತಿನ್ನಬೇಕು  ಅನ್ನುವಷ್ಟರಲ್ಲಿ ಹುಡುಗನನ್ನು ಅಜ್ಜಿ ಒಳಕ್ಕೆ ಎಳೆದುಕೊಂಡಳು, ಇನ್ಯಾವತ್ತೂ ಆ ಹುಡುಗ ಊಟದ ವಿಷಯದಲ್ಲಿ ಹಠವನ್ನೇ ಮಾಡಲಿಲ್ಲ ಅಂತೆಲ್ಲಾ ತಲೆ ಬಾಲ ಸೇರಿಸಿ ಹೇಳುತ್ತಿದ್ದರು.

ಮತ್ತೆ ನಮಗೆ ಅಳು ತರಿಸುವ ಕತೆ ಅಂದರೆ ಪುಣ್ಯಕೋಟಿಯ ಕತೆ. ಪುಣ್ಯಕೋಟಿ ಪಾಪ, ಪಾಪ  ಅಂದುಕೊಂಡು ಪೂರ್ತಿ ಕತೆ ಕೇಳಿದ ಮೇಲೆ ಕೊನೆಗೆ  ಅರ್ಬುದನೆ ಪಾಪ ಅನ್ನಿಸಿಯೂ  ಬಿಡುತ್ತಿತ್ತು. ಮೊನ್ನೆ ನನ್ನ ಮಗಳು ಈ ಕತೆ ಕೇಳಿ (ಅವಳ ಸ್ಕೂಲಿನ ಕನ್ನಡ ಪುಸ್ತಕದಲ್ಲಿ  ಈ ಪದ್ಯ ಇದೆ) “ಅಲ್ಲಮ್ಮಾ ಟೈಗರ್ರಿಗೆ ಹಸು ಪ್ರೇ ಅಲ್ಲವಾ? ಯಾಕೆ ತಿನ್ನಬಾರದು?” ಅಂತ  ಪ್ರಶ್ನೆ ಕೇಳಿ ಸ್ವಲ್ಪ ಬೆಪ್ಪು ಮಾಡಿದಳು. ಅವಳಿಗಿಂತ ಸ್ವಲ್ಪ ಸಣ್ಣ ವಯಸ್ಸಿನ ನನ್ನ  ಸೋದರ ಸೊಸೆ ಅದಕ್ಕೆ “ಅಲ್ಲ ಕಣೆ, ಅದು ಹಸುನ  ಮನೆಗೆ ಬಿಟ್ಟರೆ ಬಿಡಲಿ. ಆದರೆ ಸೂಯಿಸೈಡ್ ಯಾಕೆ ಮಾಡ್ಕೊಬೇಕೆಮ್ಮಾ? ಲೂಸ್ ಅಲ್ಲವಾ?”  ಅಂತ ರಾಗವಾಗಿ  ಕೇಳಿದಳು.  ಈ ಕತೆಯ ಬಗ್ಗೆ ನಮ್ಮ ಸಾಹಿತ್ಯಿಕ ಪ್ರಪಂಚದಲ್ಲಿ ಬಹಳಷ್ಟು ಚರ್ಚೆ ಆಗಿದೆ.  ಆದರೆ ಇವರದ್ದು ತುಂಬಾ ಸರಳ ಲಾಜಿಕ್ಕಿನ ಪ್ರಶ್ನೆ. ಅದೇನೇ ಇರಲಿ ನಾನಾಗಲಿ ನನ್ನ  ಕಸಿನ್ನುಗಳ ದಂಡಿನ ಯಾರಾಗಲಿ ತುಂಬ ಭಯಭಕ್ತಿಯಿಂದ ಕತೆ ಕೇಳುತ್ತಿದ್ದೆವೆ  ಹೊರತು ಈ ಥರದ ಪ್ರಶ್ನೆಗಳನ್ನೇ ಕೇಳಿರಲಿಲ್ಲ.

ಒಟ್ಟಲ್ಲಿ ಹುಲಿ ಕತೆ ಸುಮಾರಿದೆ ಹೇಳುತ್ತಾ ಹೋದರೆ…

ಈಗ ನಾನು ಇಷ್ಟು ದೊಡ್ಡ ಪೀಠಿಕೆ ಹಾಕುತ್ತಾ ಇರುವುದು ಈ ಕೆಳಗಿನ ಅನುವಾದಕ್ಕೆ. ಇದು “ದಿ  ವೀಕ್” ಪತ್ರಿಕೆಯಲ್ಲಿ ಪ್ರಕಟವಾಗಿರುವ ಹುಲಿ ಬೇಟೆಗಾರನಾಗಿ ಹೊರಟು ಕೊನೆಗೆ ಪರಿಸರ  ಪ್ರೇಮಿಯಾಗಿ ಕನ್ವರ್ಟ್ ಆದ ಜಿಮ್ ಕಾರ್ಬೆಟ್ ಬಗೆಗಿನ ಲೇಖನದ ಅನುವಾದ. ಜಿಮ್ ಕಾರ್ಬೆಟ್  ಲೇಖನಗಳು ಕನ್ನಡಿಗರಿಗೆ ತೇಜಸ್ವಿ ಮೂಲಕ ಪರಿಚಿತ. ಇದು ಕಾರ್ಬೆಟ್ ಸುತ್ತಿದ ಕಾಡಿನಲ್ಲಿ  ಮತ್ತೆ ಸುತ್ತುಹೊಡೆದು ಭಾನುತೇಜ್ (incidentally ನನ್ನ ಗಂಡ) ಬರೆದ ಲೇಖನ.

ಸಿಕ್ಕಾಪಟ್ಟೆ ಉದ್ದ ಇರುವುದರಿಂದ ಇದನ್ನ ಎರಡು ಭಾಗ ಮಾಡಿ, ಇನ್ನೊಂದು ಭಾಗವನ್ನು ಮುಂದಿನ ವಾರ ಹಾಕುತ್ತೇನೆ.

ಕಾರ್ಬೆಟ್ ನ ಕಾಡಿನಲ್ಲಿ

1. ಪ್ರವೇಶ

ಕಾಡೆಂದರೆ ಮೈ ಜುಮ್ಮೆನ್ನುವ ನಿಗೂಢತೆ ಅಂತ ಅನ್ನಿಸುವ ಮಂದಿಯಲ್ಲಿ ನೀವೂ ಒಬ್ಬರಾದಲ್ಲಿ ಜಿಮ್ ಕಾರ್ಬೆಟ್ ನೀವು ಮಿಸ್ ಮಾಡದೆ ಓದಬೇಕಾದ ವ್ಯಕ್ತಿ.

ಕಾರ್ಬೆಟ್  ಬರೆದ ಪುಸ್ತಕಗಳು ಕಾಡಿನ ರೀತಿ-ರಿವಾಜುಗಳ, ಪ್ರಾಣಿ ಪಕ್ಷಿಗಳ, ಸಾಹಸಗಳ ರೋಚಕ ಕಥೆಗಳ  ಸರಮಾಲೆ. ಕಾಡಿನ ವೈಜ್ಞಾನಿಕ ಅಧ್ಯಯನ ಮಾಡುಲು ಆಸಕ್ತಿ ಉಳ್ಳವರಿಗೆ ಕೈಪಿಡಿಯೂ ಹೌದು.  ಒಮ್ಮೊಮ್ಮೆ ಕಾಡಿನ ಬಗ್ಗೆ ಪರಿಸರವಾದಿಗಳಿಗೆ ಗೊತ್ತಿರುವುದಕ್ಕಿಂತಾ ಹೆಚ್ಚು  ಬೇಟೆಗಾರರಿಗೆ ತಿಳಿದಿರುತ್ತದೆ! ಬೇಟೆಗಾರನಾಗಿ ಬಹಳಷ್ಟು ಹುಲಿಗಳನ್ನು ಕೊಂದ ಕಾರ್ಬೆಟ್  ತನ್ನ ಜೀವನದ ಉತ್ತರಾರ್ಧದಲ್ಲಿ ಪರಿಸರವಾದಿಯಾಗಿ ಮತಾಂತರಗೊಂಡವನು. ಹಾಗಾಗಿ ಕಾಡನ್ನು  ಅನೇಕ ಕಣ್ಣುಗಳಲ್ಲಿ  ಕಂಡವನು. ಈಗ ಉತ್ತರಾಖಂಡದಲ್ಲಿರುವ ಕುಮಾವ್ ಅರಣ್ಯಗಳಲ್ಲಿ ನರ  ಭಕ್ಷಕ ಹುಲಿ ಚಿರತೆಗಳ ಜಾಡು ಹಿಡಿದು ಹೊಡೆದು ಹಾಕುವುದರಲ್ಲಿ ಕಾರ್ಬೆಟ್  ನಿಷ್ಣಾತನಾಗಿದ್ದ. ಹೀಗೆ ಕಾಡಿನ ಜೊತೆಗೆ ನಿರಂತರ ಒಡನಾಡುತ್ತಾ ಇದ್ದ ಕಾರ್ಬೆಟ್ ಗೆ  ಕಾಡು ಮತ್ತು ಅಲ್ಲಿನ ಪ್ರಾಣಿಗಳು ದಿನೇದಿನೇ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ  ಕ್ಷೀಣಿಸುತ್ತಾ ಹೋಗುತ್ತಿದುದು ಕಾಣದೆ ಇರಲಿಕ್ಕೆ ಸಾಧ್ಯ ಇರಲಿಲ್ಲ. ತೀರ ಹತ್ತಿರದಿಂದ  ಕಂಡ ಈ ಸತ್ಯವೇ ಇವನನ್ನು ಪರಿಸರವಾದಿಯನ್ನಾಗಿ ಪರಿವರ್ತಿಸಿತ್ತು.

ಕಾರ್ಬೆಟ್ ಕಾಲದ ಪರಿಸ್ಥಿತಿ ಮತ್ತು ಮಾನದಂಡಗಳೇ ಬೇರೆ.  ಅದು ಬ್ರಿಟಿಷರ ಆಳ್ವಿಕೆಯ  ಕಾಲ. ಕಾಡಿನ ಸಂಪತ್ತಿನ, ವಿಶೇಷವಾಗಿ ಮರಗಳ, ಬಲು ದೊಡ್ಡ ಲೂಟಿಗಾರರು ವಸಾಹತು ಸರ್ಕಾರ.  ಸಾವಿರಾರು ಮಂದಿ ಕೆಲಸಗಾರನ್ನು ನೇಮಿಸಿ ಮರಗಳನ್ನು ಇಂಗ್ಲಿಶ್ ಸರ್ಕಾರ ಹಿಗ್ಗಾಮುಗ್ಗಾ  ಕಡಿಸುತ್ತಿತ್ತು. ಕೋಸಿ ಮತ್ತು ರಾಮಗಂಗಾ ನದಿಗಳಲ್ಲಿ ಕಡಿದ ಮರದ ದಿಮ್ಮಿಗಳನ್ನು  ಹರಿಬಿಟ್ಟು ಕೆಳಗಿನ ತಪ್ಪಲು ಪ್ರದೇಶಕ್ಕೆ ಇವುಗಳನ್ನು ತರಲಾಗುತ್ತಿತ್ತು. ಈ ನಿರಂತರ  ಮತ್ತು ನಿರ್ಲಜ್ಜ ಲೂಟಿ ಕಾಡು ಮತ್ತು ಅಲ್ಲಿನ ಪ್ರಾಣಿಗಳ ಪ್ರಪಂಚವನ್ನು ಅಲ್ಲೋಲ ಕಲ್ಲೋಲ  ಮಾಡಿತು ಅನ್ನುವುದು ನಿಸ್ಸಂದೇಹ. ಹೀಗೆ ತಮ್ಮ ತಾಣವನ್ನು ಕಳೆದುಕೊಂಡ ಕಾಡುಪ್ರಾಣಿಗಳು  ಆಹಾರ ಹುಡುಕುತ್ತಾ ಮನುಷ್ಯ ಪ್ರಪಂಚದ ಇನ್ನಷ್ಟು, ಮತ್ತಷ್ಟು ಹತ್ತಿರ  ಸುಳಿಯಲಾರಂಭಿಸಿದವು. ಇದು ಪ್ರಾಣಿ-ಮನುಷ್ಯ ಸಂಘರ್ಷಗಳಿಗೆ ನಾಂದಿ ಹಾಡಿತು.

ಅಷ್ಟೇ ಅಲ್ಲದೆ ಆಗಿನ ಕಾಲದ ಕೋವಿ ಹಿಡಿದು ಟೀವಿಯಿಂದ  ಓಡಾಡುವ ಪ್ರತಿಯೊಬ್ಬ ಬಿಳಿ ತೊಗಲಿನ ಶಿಕಾರಿಗೂ ಹುಲಿಯನ್ನೋ ಚಿರತೆಯನ್ನೋ ಹೊಡೆದು ಅದರ  ಚರ್ಮವನ್ನೋ, ಚರ್ಮದೊಳಗೆ ಹುಲ್ಲು ತುಂಬಿ ಮಾಡಿದ ಗೊಂಬೆಯನ್ನೋ ತಮ್ಮ ಸಂಗ್ರಹಕ್ಕೆ  ಸೇರಿಸಿಕೊಳ್ಳುವುದು ಮಹಾ ಹೆಮ್ಮೆಯ ವಿಚಾರ.  ಕಲ್ಕತ್ತಾದಲ್ಲಿದ್ದ ಬ್ರಿಟನ್ನಿನ ಬಂದೂಕು  ತಯಾರಿಕಾ ಕಂಪನಿಯೊಂದು ಭಾರತದ ಬೆಟ್ಟ ಪ್ರದೇಶಗಲ್ಲಿ ಮಾಡುವ ಶಿಕಾರಿಗಳಿಗೆ  ಅನುಕೂಲಕರವಾಗಲೆಂದೇ ವಿಶೇಷ ಬಂದೂಕನ್ನು ತಯಾರಿಸುತ್ತಿತ್ತು ಎಂದು ಕಾರ್ಬೆಟ್ ಒಂದು  ಲೇಖನದಲ್ಲಿ ಉಲ್ಲೇಖಿಸುತ್ತಾನೆ. ಇಂಥ ಶಿಕಾರಿಗಳು ಎಷ್ಟು ಮಂದಿ ಇದ್ದಿರಬಹುದು  ಅನ್ನುವುದಕ್ಕೆ ಇದೊಂದು ಮಾಪನವನ್ನು ಒದಗಿಸುತ್ತದೆ.

ಇಷ್ಟೊಂದು ಜನ ಶಿಕಾರಿಗಳಲ್ಲಿ ಕೆಟ್ಟ ಶಿಕಾರಿಗಲಿಗೇನೂ ಬರ ಇರಲಿಲ್ಲ. ಇವರೆಲ್ಲಾ  ಸರಿಯಾಗಿ ಗುರಿ ಇಡಲಾರದೆ  ಹುಲಿಯನ್ನು ಸಾಯಿಸಲಾರದೆ ಬರಿ ಗಾಯ ಮಾಡಿಬಿಡುವ ಯೋಗ್ಯತೆ  ಮಾತ್ರ ಇದ್ದವರು. ಹೀಗೆ ಮಾಂಸಾಹಾರಿ ಪ್ರಾಣಿಯನ್ನು ಅರ್ಧಂಬರ್ಧ ಸಾಯಿಸಿ, ದೊಡ್ಡ ಗಾಯ  ಮಾಡಿ ಬಿಟ್ಟುಬಿಡುವುದು ಅಪಾಯವನ್ನು ಆಹ್ವಾನಿಸಿದಂತೆಯೇ ಸರಿ. ತಾನು ಕೊಂದ ಬಹಳಷ್ಟು  ನರಭಕ್ಷಕ ಹುಲಿಗಳು ಹೀಗೆ ಯಾವುದೋ ಕೆಟ್ಟ ಶಿಕಾರಿಯಿಂದ ಘಾಸಿಗೊಂಡವೋ ಅಥವಾ ಮುಳ್ಳುಹಂದಿಯ  ಮುಳ್ಳಿನ ಪ್ರಹಾರ ಎದುರಿಸಿದವೋ ಆಗಿದ್ದವು ಅನ್ನುವ ಮಾತನ್ನು ಕಾರ್ಬೆಟ್ ಬರೆಯುತ್ತಾನೆ.

ಕಾರ್ಬೆಟ್ ವನ್ಯಪ್ರಾಣಿ ರಕ್ಷಣೆಯ ಬಗ್ಗೆ ಮಾತನಾಡಿ ಒಂದು ಶತಮಾನ ಕಳೆದಿದೆ. ಈಗ ಇವನ  ಹೆಸರಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಅರಣ್ಯ ಧಾಮದಲ್ಲಿ ೧೦೦ ಚದರ ಕಿಲೋಮಿಟರ್ರುಗಳಿಗೆ  ಸರಾಸರಿ ೨೦ ಹುಲಿಗಳು ಉಳಿದಿವೆ. ಅಸ್ಸಾಮಿನ ಕಾಸಿರಂಗಾ ಅರಣ್ಯಧಾಮ ಮತ್ತು ಇದು ನಮ್ಮ  ದೇಶದಲ್ಲಿ ಅತಿ ಹೆಚ್ಚು ಹುಲಿಗಳು ಉಳಿದಿರುವ ಪ್ರದೇಶಗಳು. ಆದರೆ ಈ ಧಾಮದ ಈಗಿನ ಒಟ್ಟು  ವಿಸ್ತೀರ್ಣ ಕಾರ್ಬೆಟ್ ಆ ಕಾಲದಲ್ಲಿ ಓಡಾಡಿದ ದಟ್ಟ, ನಿಗೂಢ ಕಾಡಿನ ವಿಸ್ತಿರ್ಣದ ಒಂದು  ಅತಿ ಸಣ್ಣ ಭಾಗ ಮಾತ್ರ. ಹೀಗಾಗಿ ಕಾರ್ಬೆಟ್ ನ ಜಾಡು ಹಿಡಿದು ಹೊರಡುವುದೆಂದರೆ ಅವನ ಭವ್ಯ  ಭಯಾನಕ ಪಯಣದ ಒಂದು ಸಣ್ಣ ಭಾಗವನ್ನು ಕ್ರಮಿಸುವ ಪ್ರಯತ್ನವಷ್ಟೇ ಆಗಲಿಕ್ಕೆ ಸಾಧ್ಯ.  ಆದರೂ…

2.  ಹೆಜ್ಜೆ ಗುರುತು…

ಹುಲಿಯೊಂದರ ಹೆಜ್ಜೆ ಗುರುತಿನ ಜಾಡು ಹಿಡಿದು ನಾವು ಹೊರಟಿದ್ದೇವೆ.

ಪಕ್ಕದ  ಭೆಲ್ಗಟ್ಟಿ ಗ್ರಾಮದ ವ್ಯಕ್ತಿಯೊಬ್ಬ ಹಳ್ಳಿ ಮುಗಿದು ಕಾಡು ಆರಂಭವಾಗುವ ದಿಕ್ಕಿಗೆ  ಬೆರಳು ಮಾಡಿ ತೋರಿಸಿ “ಊರಿನ ಕೆಲವು ಜನ ಬೆಳಿಗ್ಗೆ ಕಾಡಿನ ಕಡೆಗೆ ಹೊರಟಾಗ ಹುಲಿ ಅಲ್ಲೇ  ಮಲಗಿತ್ತು  ಸಾಬ್. ಇಲ್ಲೇ ಎಲ್ಲೋ ಇರಬೇಕು, ಹುಷಾರು” ಅಂತ ಹೇಳಿದ. ನಮ್ಮೊಟ್ಟಿಗೆ  ಬರ್ತಿಯಾ ಅಂತ ಕೇಳಿದೆ. “ಇಲ್ಲ ಸಾಬ್. ಎಮ್ಮೆ ಹೊಡೆದುಕೊಂಡು ಹೋಗಬೇಕು” ಅಂದ.

ಹಾಗಂತ ನಮಗೆ ಜೊತೆಗಾರರಿಗೇನು ಕಡಿಮೆ ಇರಲಿಲ್ಲ. ಗುಲಾಂ ನಬಿ ಅನ್ನುವ ೧೮ ವರ್ಷದ  ಹುಡುಗ ಮತ್ತು ಅವರಮ್ಮ ಸಗೀನ ಬೀಬೀ ನಮ್ಮ ಜೊತೆ ಬಂದರು. ಹಿಂದಿನ ದಿನವಷ್ಟೇ ಇವರ ಎರಡು  ಎಮ್ಮೆಗಳನ್ನು ಹುಲಿ ಕೊಂದು ಹಾಕಿತ್ತು. ಕಾರ್ಬೆಟ್ ಫೌಂಡೆಶನ್ ಸಂಸ್ಥೆಗೆ ಸೇರಿದ  ಇದ್ರಿಸ್ ಮತ್ತು ಜೋಷಿ ಅನ್ನುವ ಮತ್ತಿಬ್ಬರು ನಮ್ಮ ಜೊತೆ ಇದ್ದರು. ಅರಣ್ಯ ಧಾಮದ  ಸುತ್ತಲಿನ “ಬಫರ್ ಜೋನ್”ನಲ್ಲಿ ಹುಲಿ ಚಿರತೆಗಳಿಂದ ಸತ್ತ ಜಾನುವಾರುಗಳ ಲೆಕ್ಕ ಇಡುವುದೇ ಈ  ಇಬ್ಬರ ಕೆಲಸ. ಈ ಕೆಲಸ ಸುಲಭದ್ದಲ್ಲ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಹುಲಿಯೋ,  ಚಿರತೆಯೋ ಕೊಂದು ಅರ್ಧ ತಿಂದು ಬಿಟ್ಟು ಹೋದ ಪ್ರಾಣಿಯ ಚಿತ್ರ ತೆಗೆದು, ಅದನ್ನು  ತಿಂದದ್ದು ಹುಲಿಯೇ ಅನ್ನುವುದಕ್ಕೆ ಒಂದಷ್ಟು ಪುರಾವೆ ಒಟ್ಟು ಮಾಡಿ ತಕ್ಷಣ ಜಾನುವಾರು  ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವುದು ಇವರ ಪಾಲಿನ ಕೆಲಸ.

ಜೀಪನ್ನು ಸುಮಾರು ಕಾಡಿನ ಅಂಚಿನವರೆಗೆ ತೆಗೆದುಕೊಂಡು ಹೋದೆವು. ಅದಕ್ಕಿಂತ ಮುಂದೆ  ಹೋಗುವುದು ಸಾಧ್ಯ ಇರಲಿಲ್ಲ. ಉಳಿದ ಹುಡುಕಾಟ – ಅಂದರೆ ನಿಜವಾದ ಹುಡುಕಾಟ –  ಕಾಲ್ನಡಿಗೆಯಲ್ಲಿ ಮಾತ್ರ ಸಾಧ್ಯ. ಜೀಪಿನ ಒಳಗೆ ಸುರಕ್ಷಿತವಾಗಿ ಕೂತು ಬೈನಾಕ್ಯುಲರ್  ಕಣ್ಣಿಗೆ ಅಂಟಿಸಿಕೊಂಡು ಹುಲಿಯನ್ನು ಹುಡುಕುವುದು ಯಾವಾಗಲೂ ಒಳ್ಳೆ ಮಜಾ ಕೊಡುವ ಅನುಭವ.  ಆದರೆ ಲಾಂಟಾನ ಗಿಡಗಳ ದಟ್ಟ ಪೊದೆಗಳಿಂದ ತುಂಬಿ ಹೋದ, ಮರದ ಅತಿ ಕೆಳಗಿನ ರೆಂಬೆ ನೆಲದಿಂದ  ಕನಿಷ್ಠ ೧೨ ಅಡಿ ಮೇಲೆ ಇರುವಂತ ಕಾಡಿನಲ್ಲಿ ನಡೆದುಕೊಂಡು ಹೊರಟಾಗ ನಾವು ಆತ್ಮಹತ್ಯೆ  ಮಾಡಿಕೊಳ್ಳಲಿಕ್ಕೆ ಹೊರಟಿದ್ದೇವಾ ಅನ್ನುವ ಅನುಮಾನ ಖಂಡಿತ ಕಾಡದೆ ಬಿಡಲಾರದು!

ಲಾಂಟಾನ  ಪೊದೆಗಳು ಹುಲಿಗೆ ಒಳ್ಳೆಯ ಅಡಗುವ ಅವಕಾಶಗಳನ್ನು ಒದಗಿಸುತ್ತದೆ. ಹಾಗೆಯೇ ನಮ್ಮ ಮುಂದಿನ  ಕಾಡಿನ ಚರ್ಯೆಯನ್ನು ಸಂಪೂರ್ಣ ಮಸುಕುಗೊಳಿಸುತ್ತವೆ. ಅದೂ ಅಲ್ಲದೆ ಈ ಹುಲಿ ಅರ್ಧ  ಎಮ್ಮೆಯನ್ನು ತಿಂದು ಉಳಿದರ್ಧ ಊಟವನ್ನು ಇನ್ಯಾವುದೋ ಪ್ರಾಣಿ ಕದ್ದಿತೆಂದು ಕಣ್ಣಿಗೆ  ಎಣ್ಣೆ ಬಿಟ್ಟುಕೊಂಡು ಕಾಯುತ್ತಾ ಇರಬೇಕು ಅನ್ನುವುದೇ ಎಲ್ಲರ ಅನುಮಾನವಾಗಿತ್ತು. ಹುಲಿಯ  ದೃಷ್ಟಿಯಲ್ಲಿ ನಾವೂ ಅದರ ಊಟ ಕಸಿಯಲು ಬಂದ ಪ್ರಾಣಿಗಳೇ. ನಮ್ಮ ಪರಿಸ್ಥಿತಿ ಒಟ್ಟಾರೆ  ಹುಲಿಯ ಬಾಯಿಗೆ ಹೋಗುವ ಪುಣ್ಯಕೋಟಿಯಂದದಲ್ಲಿ ಇತ್ತು.

ಆದರೆ ಪ್ರಯಾಣ ಮುಂದುವರಿಸದೆ ಬೇರೆ ದಾರಿ ಇರಲಿಲ್ಲ. ಇದ್ರಿಸ್ ಮತ್ತು ಜೋಷಿಗೆ  ಪುರಾವೆಗಳನ್ನು ಕಲೆಹಾಕುವುದು, ಹಲ್ಲು ಮತ್ತು ಉಗುರಿನ ಗುರುತುಗಳನ್ನು ಪರಿಶೀಲಿಸುವುದು,  ಗುಲಾಂ ನಬಿಯ ಕೈಯ್ಯಲ್ಲಿ ಒಂದು ಅವನ ಹೆಸರು ಬರೆದ ಸ್ಲೇಟ್ ಹಿಡಿಸಿ ಕಳ್ಳ ಕಾಕರನ್ನು  ಪೊಲೀಸರು ನಿಲ್ಲಿಸುವಂತೆ ಸತ್ತ ಎಮ್ಮೆಯ ಪಕ್ಕ  ನಿಲ್ಲಿಸಿ ಫೋಟೋ ತೆಗೆಯುವುದು   ಅನಿವಾರ್ಯ ಕರ್ಮ. ನಮ್ಮ ಪ್ರಯಾಣಕ್ಕೆ ಈ ರೀತಿಯ ಕೆಲಸದ ತುರ್ತಿರಲಿಲ್ಲದಿದ್ದರೂ ಒಂದು  ರೀತಿಯ ಹುಚ್ಚು ತೆವಲಿನ ತುರ್ತಂತೂ  ಇತ್ತು.

ಇದ್ರಿಸ್ ಮತ್ತು ಜೋಶಿಗೆ ಎಷ್ಟೇ ಅನುಭವ ಇದ್ದರು, ಈ ಕೇಸಿನಲ್ಲಿ ಸ್ವಲ್ಪ  ಕಂಗಾಲಾದವರಂತೆ, ದಿಕ್ಕುತೊಚದವರಂತೆಯೇ ನಮ್ಮ ಕಣ್ಣಿಗಂತೂ ಕಾಣುತ್ತಿದ್ದರು. ಅವರ ಹೃದಯದ  ಬಡಿತ ನನಗೆ ಕೇಳುತ್ತಿದೆ ಅಂತ ನನಗೆ ಅನ್ನಿಸುತ್ತಿತ್ತು. ಅವರಿಗೂ ಅಷ್ಟೇ ಸ್ಪಷ್ಟವಾಗಿ  ನನ್ನ ಹೃದಯದ ಬಡಿತ ಕೇಳುತ್ತಿದ್ದೀತು.

ಕಾಡಿನೊಳಗೆ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿಯೇ ನಮ್ಮ ಮುಂದೆ ಒಂದಷ್ಟು ಜಾಗದಲ್ಲಿ  ಹುಲ್ಲು ಇದ್ದಕ್ಕಿದ್ದಂತೆ ಬಾಗಿರುವುದು ಕಾಣಿಸಿತು. ಬಾಗಿದ ಭಾಗವನ್ನು ಹತ್ತಿರದಿಂದ  ನೋಡಿದ ಯಾರಿಗಾದರು ಅದು ಈಗಷ್ಟೇ ಹುಲಿ ಮಲಗಿ ಎದ್ದು ಹೋಗಿರುವ ಜಾಗ ಅಂತ ಗೊತ್ತಾಗುವುದು  ಕಷ್ಟ ಇರಲಿಲ್ಲ. ಬೆಳಿಗ್ಗೆಯ ಊಟ ಮುಗಿಸಿ ಹಾಗೆ ಇಲ್ಲಿ ಸ್ವಲ್ಪ ಹೊತ್ತು ಒರಗಿ ಹುಲಿ  ಎದ್ದು ಹೋಗಿರಬೇಕು. ಮನೆಯ ಬೆಕ್ಕು ಹೊಟ್ಟೆ ತುಂಬಿಸಿಕೊಂಡು ಸೋಮಾರಿತನದಿಂದ ಮೈ ಮುರಿದು  ಬಿಸಿಲಲ್ಲಿ ಮಲಗುವ ಹಾಗೆಯೇ ಹುಲಿ ಮಲಗಿ ತನ್ನ ಮುಂದಿನ ದೃಶ್ಯವನ್ನು ಅರ್ಧನಿಮೀಲಿತ  ನಯನಗಳಿಂದ ನೋಡುತ್ತಾ ಇರುವ ಚಿತ್ರ ನನ್ನ ತಲೆಯಲ್ಲಿ ಓಡುತ್ತಿತ್ತು. ಅಲ್ಲಿಂದ ಹೊರಟ  ಹುಲಿಯ ಹೆಜ್ಜೆ ಗುರುತುಗಳು ಲಂಟಾನ ಪೊದೆಯ ಪಕ್ಕದವರೆಗೂ ಇತ್ತು.

ಅದಕ್ಕೂ ಸ್ವಲ್ಪ ಮುಂದೆ ಕಾಳಗ ನಡೆದ ಕುರುಹುಗಳಿದ್ದವು. ಸುಮಾರು ಐದು ಮೀಟರ್ರಿನಷ್ಟು  ಸುತ್ತಳತೆಯ ಜಾಗದಲ್ಲಿ ಹುಲ್ಲು, ಲಂಟಾನ ಪೊದೆ ಎಲ್ಲಾ ಹರಿದು ಚೆಲ್ಲಾಪಿಲ್ಲಿ ಆಗಿತ್ತು.  ಬಡಪಾಯಿ ಎಮ್ಮೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ದಿಕ್ಕಾಪಾಲಾಗಿ ಓಡಿದ್ದು  ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.  ಎಮ್ಮೆಗಳು ಗೋಧೂಳಿಯ ಸಮಯಕ್ಕೆ ಹಳ್ಳಿಗೆ  ಹಿಂದಿರುಗುವ ಹೊತ್ತಿಗೆ ಹುಲಿ ಅಡ್ಡ ಹಾಕಿದ್ದೀತು. ಮಳೆ ಬಂದಿದ್ದರಿಂದ ಕಾಲು ದಾರಿಗಳು  ಅಳಿಸಿಹೋದಂತೆ ಆಗಿತ್ತು.

ಒಂದು ಹುಲಿ ಎರಡು ಎಮ್ಮೆಗಳನ್ನು ಒಂದೇ ಬಾರಿಗೆ ಹಿಡಿದುಕೊಂಡಿರಲಿಕ್ಕೆ ಸಾಧ್ಯವೇ ಅನ್ನುವ  ಅನುಮಾನ ನನ್ನನ್ನು ಕಾಡುತ್ತಿತ್ತು. ಅದರಲ್ಲಿಯೂ ಈ ಘಟನೆ ನಡೆದ ಹಿಂದಿನ ದಿನವಷ್ಟೇ  ಇನ್ನೊಂದು ಎಮ್ಮೆಯನ್ನು ಬೇಟೆಯಾಡಿ, ತಿನ್ನದೇ ಪೊದೆಯಲ್ಲಿ  ಊರಿನ ದಕ್ಷಿಣ ಸರಹದ್ದಿನ  ಹತ್ತಿರ ಅಡಗಿಸಿ ಇಟ್ಟಿದ್ದನ್ನು ಹಳ್ಳಿಗರು ಪತ್ತೆ ಹಚ್ಚಿದ್ದರು.

ಸ್ವಲ್ಪ ಮುಂದೆ ಹುಲಿ ಹಿಕ್ಕೆ ಹಾಕಿತ್ತು. ಹಿಂದೆಯೂ ನಾನು ಹುಲಿಯ ಹಿಕ್ಕೆಯನ್ನು  ನೋಡಿದ್ದುಂಟು. ಆದರೆ ಇಷ್ಟು ಭಾರಿ ಪ್ರಮಾಣದ ಅಥವಾ ಇಷ್ಟು ಫ್ರೆಶ್ ಆದದ್ದನ್ನು ಖಂಡಿತ  ಕಂಡಿಲ್ಲ! ಕಳೆದ ಒಂದೂವರೆ ದಿನಗಳಲ್ಲಿ ಹುಲಿರಾಯ ಭರ್ಜರಿ ಭೋಜನವನ್ನೇ ಮಾಡಿರುವುದು  ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನು ಸ್ವಲ್ಪ ಮುಂದೆ ನೆಲವನ್ನು ತನ್ನ ಉಗುರುಗಳಿಂದ  ಕೆರದು ಹೊಂಡಮಾಡಿ ಮಹಾಶಯ ಉಚ್ಚೆ ಹುಯ್ದಿದ್ದ. ಇನ್ನೂ ಒದ್ದೆ ಇದ್ದ ಈ ಉಚ್ಚೆ ನಮ್ಮಲ್ಲೂ  ಉಚ್ಚೆ ಹೊಯ್ದುಕೊಳ್ಳುವ ಮನಸ್ಥಿತಿಯನ್ನೇ ಸೃಷ್ಟಿಸಿತ್ತು. ನಾವು ಬರುತ್ತಿರುವ ಸದ್ದು  ಕೇಳಿ ಹುಲಿ ಈಗಷ್ಟೇ ಜಾಗ ಖಾಲಿ ಮಾಡಿರಬಹುದು.

ಅಷ್ಟರಲ್ಲಿ ನಮ್ಮ ಜೊತೆಗಿದ್ದ ಅಮ್ಮ ಮಗನ ಜೋಡಿ ಗುಜ್ಜಾರ್ ಭಾಷೆಯಲ್ಲಿ ಏನೋ  ಮಾತಾಡಿಕೊಳ್ಳಲಿಕ್ಕೆ ಶುರು ಮಾಡಿದರು. ಗುಲಾಂ ಬಾಯಿಯ ಸುತ್ತ ವೃತ್ತಾಕಾರದಲ್ಲಿ  ಅಂಗೈಯ್ಯನ್ನು ಇಟ್ಟುಕೊಂಡು ಕಂಠ ಬಿರುಯುವಷ್ಟು ಜೋರಾಗಿ ಒದರಲು ಪ್ರಾರಂಭಿಸಿದ. ಅಮ್ಮನೂ  ಅವನ ಜೊತೆ ಜುಗಲ್ಬಂದಿ ಶುರು ಮಾಡಿದಳು.

ಹುಲಿ ಹತ್ತಿರದಲ್ಲಿಯೇ ಇರುವುದು ಎಲ್ಲರಿಗಿಂತಾ ಮೊದಲು ಅವರಿಗೆ ಗೊತ್ತಾಗಿತ್ತು. ಅದನ್ನು  ಓಡಿಸುವ ಪ್ರಯತ್ನದಲ್ಲಿ ಗುಲಾಮ್ ತೊಡಗಿದ್ದ. ಈ ಇಬ್ಬರು ಹುಲು ಮಾನವರು ಸೇರಿ  ಮಾಡುತ್ತಿದ್ದ ಗಲಾಟೆ ಯಾವುದೇ ಬರೋಬರಿ ಸೈನ್ಯ ಯುದ್ಧ ಮಾಡುವಾಗ ಎಬ್ಬಿಸುವ ದೊಂಬಿಗಿಂತ  ಸ್ವಲ್ಪವು ಕಡಿಮೆ ಇರಲಿಲ್ಲ. ಹುಲಿಯನ್ನು ಕಣ್ಣಾರೆ ಕಂಡೇವೆಂಬ ಆಸೆ ಅಲ್ಲಿಗೆ  ಮುಕ್ತಾಯವಾಯಿತು. ಈ ಅಮ್ಮ ಮಗನ ಗಲಾಟೆ ಸೈನ್ಯವನ್ನು ಎದುರಿಸಿಯೂ ತಾನು ಬೇಟೆಯಾಡಿದ  ಎಮ್ಮೆಯನ್ನು ಕಾಯ್ದುಕೊಳ್ಳುವ ಛಾತಿ ಆ ಹುಲಿಗೆ ಇದ್ದ ಪಕ್ಷದಲ್ಲಿ ಕತೆಯೇ ಬೇರೆ!

ಹೆಜ್ಜೆ ಗುರುತುಗಳು ದಕ್ಷಿಣದ ದಿಕ್ಕೆಗೆ ಮುಂದುವರೆಯುತ್ತಿದ್ದವು. ಗುಲಾಂನ ಕಣ್ಣು  ಮಾತ್ರ ಪೂರ್ವ ದಿಕ್ಕಿಗೇ ನೆಟ್ಟಿತ್ತು. ಸತ್ತ ಎಮ್ಮೆಯ ಸುಳಿವಿರಲಿಲ್ಲ. ಇನ್ನೊಂದೆರಡು  ನಿಮಿಷ ಲಾಂಟಾನ ಪೊದೆಗಳ ಮಧ್ಯೆ ನಡೆಯುವಷ್ಟರಲ್ಲಿ ನಮ್ಮ ಮೂಗು ಎಮ್ಮೆಯ ಕಳೇಬರ  ಎಲ್ಲಿರಬಹುದು ಎಂದು ನಮಗೆ ಹೇಳತೊಡಗಿತು. ತಗ್ಗಿ ಬಗ್ಗಿ ಅತ್ತ ಇತ್ತ ಒಂದೆರಡು ನಿಮಿಷ  ಹುಡುಕುವಷ್ಟರಲ್ಲಿ ಒಂದು ಎಮ್ಮೆ ಕಾಣಿಸಿತು. ಹುಲಿ ಸುಮಾರಷ್ಟು ತಿಂದು ಮುಗಿಸಿತ್ತಾದರೂ  ಅದು ಮತ್ತೆ ಬಂದು ತಿನ್ನುವುದಕ್ಕೆ ಪ್ರೇರೆಪಿಸುವಷ್ಟು ಮಾಂಸ ಇನ್ನು ಉಳಿದಿತ್ತು.  ಸ್ವಲ್ಪ ಮುಂದೆ ಎರಡನೆಯ (ಸಣ್ಣ ಗಾತ್ರದ) ಎಮ್ಮೆಯ ಕಾಲು ಮಾತ್ರ ಬಿದ್ದಿತ್ತು.

ಭಯದಿಂದ ಒಂದು ಥರದ ಭ್ರಮೆಗೆ ಎಲ್ಲರೂ ಒಳಗಾಗಿದ್ದರಿಂದಲೋ ಏನೋ, ವನ್ಯ ಮೃಗಗಳ ಬಗ್ಗೆ  ಪರಿಣತಿ ಇದ್ದ ಇದ್ರಿಸ್ ಮತ್ತು ಜೋಷಿ ಮತ್ತೆ ಮತ್ತೆ ಗುಲಾಂನನ್ನು “ಉಳಿದ ಎಮ್ಮೆ  ಏನಾಯ್ತು?! ಉಳಿದ ಎಮ್ಮೆ ಎಲ್ಲಿ?!” ಅಂತ ಕೇಳಲಿಕ್ಕೆ ಶುರು ಮಾಡಿದರು. ಗುಲಾಂ ಅತಿ  ವಿನಯದ ಧಾಟಿಯಲ್ಲಿ “ಈ ಪ್ರಶ್ನೆಯನ್ನು ಮಾತ್ರ ನೀವು ಹುಲಿಯನ್ನೇ ಕೇಳಬೇಕಾದೀತು ಸಾಬ್!”   ಅಂದ. ನಗುವ ಸಂದರ್ಭ ಅದಲ್ಲದಿದ್ದರೂ ನಗು ಬಂದದ್ದಂತು ಹೌದು.

ಒಂದು ಹುಲಿ ಒಂದೂವರೆ ದಿನದಲ್ಲಿ ಎರಡು ಎಮ್ಮೆಗಳನ್ನು ತಿಂದು ಮುಗಿಸುವ ಸಾಧ್ಯತೆ  ಇರಲಿಲ್ಲ. ಈ ಪ್ರಶ್ನೆಯ ಬಗ್ಗೆ ನಾವು ಗಹನವಾಗಿ ಚರ್ಚೆ ಪ್ರಾರಂಭಿಸಿದಾಗ ಗುಲಾಂ ಇದೇನು  ಮಹಾ ಪ್ರಶ್ನೆ ಅನ್ನುವ ಧಾಟಿಯಲ್ಲಿ “ಒಂದಲ್ಲ ಎರಡು ಹುಲಿಗಳಿದ್ದಾವೆ ಸಾಬ್. ನಮ್ಮಪ್ಪ  ಮರದ ಮೇಲಿಂದ ಇವತ್ತು ಬೆಳಗ್ಗೆ ನೋಡಿದನಂತೆ. ಅವನು ಓಡಿಸಲಿಕ್ಕೆ ಪ್ರಯತ್ನ ಮಾಡಿದರೂ ಓಡಿ  ಹೋಗುವುದಿರಲಿ ಇದ್ದ ಜಾಗದಿಂದ ಅಲ್ಲಾಡಲಿಲ್ಲವಂತೆ” ಅಂದ.

ಫೋಟೋ ಸೆಶನ್ ಇತ್ಯಾದಿಗಳನ್ನು ಮುಗಿಸಿಕೊಂಡು ನಾವು ಹಿಂದಿರುಗುತ್ತಾ ಇರುವಾಗ ನಾನು  ಗುಲಾಂನನ್ನು ಈ ಭಾಗಗಳಲ್ಲಿ ಹುಲಿಗಳನ್ನು ಸುಮಾರು ಎಷ್ಟು ಸಲ ಕಾಣುತ್ತೀರಿ ಅಂತ ಕೇಳಿದೆ.  ಏನೋ ಅವನ ಪಕ್ಕದ ಮನೆಯ ಹುಡುಗಿಯ ಬಗ್ಗೆ ವಿಚಾರಿಸುತ್ತಿದ್ದೀನೇನೋ ಅನ್ನುವ ಧಾಟಿಯಲ್ಲಿ  “ದಿನಾ ಸಾಬ್” ಅಂದ.

ಅಂದು ಬೆಳಗ್ಗೆ ತಾನೇ ಈ ಅರಣ್ಯ ಧಾಮಕ್ಕೆ ಗುಂಪು ಗುಂಪಾಗಿ ಬರುವ ಪ್ರವಾಸಿಗರಲ್ಲೊಬ್ಬ  “ಅಯ್ಯೋ ಹುಲೀನೆ ಕಾಣಲಿಲ್ಲ. ಕಂಡದ್ದು ಬರೀ ಒಂದಷ್ಟು ಜಿಂಕೆ” ಅಂತ ಗೊಣಗಿಕೊಳ್ಳುತ್ತಾ  ಇದ್ದದ್ದನ್ನು ಕೇಳಿದ್ದೆ. ಈ ಹುಲಿ ಯಾರ ಕಣ್ಣಿಗೆ ಕಾಣತ್ತೆ, ಯಾರಿಗೆ ಕಾಣಲ್ಲ, ಯಾರಿಗೆ  ಏನಾಗಿ ತೋರತ್ತೆ ಎನ್ನುವುದೆಲ್ಲ ಎಂತಾ ಮಾಯೆ ಅಲ್ಲವಾ ಅನ್ನಿಸಿತು. ಗುಲಾಂನಂತ ನೂರಾರು  ಜನರ ಜೀವನಾಧಾರವನ್ನೇ ಕಸಿದುಕೊಳ್ಳುವ ಈ ಹುಲಿ ರಾಮನಗರ ಮತ್ತು ಧಿಕುಲಿಯ ಸುತ್ತ ಮುತ್ತ    ಜೀವಕ್ಕೆ ಆಧಾರ. ಯಾಕೆಂದರೆ ಈ ಊರುಗಳ ಇಡೀ ಆರ್ಥಿಕತೆಯೇ ಹುಲಿ-ಕೇಂದ್ರಿತ   ಪ್ರವಾಸೋದ್ಯಮವನ್ನು ಆಧರಿಸಿದೆ.

ಸುಮಾರು ತೊಂಭತ್ತರ ದಶಕದವರೆಗೆ ಈ ಹಳ್ಳಿಗಳ ಜನ ಈ ರೀತಿಯ ಘಟನೆ ನಡೆದಾಗ ಎಮ್ಮೆಯ ಮೇಲೆ  ಒಂದಷ್ಟು ವಿಷ ಸಿಂಪಡಿಸಿ ಹುಲಿಯನ್ನು ಸಾಯಿಸಿಬಿಡುತ್ತಿದ್ದರು. ಈಗಿನ ಹೊಸ ಸ್ಕೀಮುಗಳ  ಪ್ರಭಾವದಿಂದಾಗಿ ಗುಲಾಂನಂತಹ ಜನ ಈಗ ಮುಂಚಿನ ವಿಧಾನಗಳನ್ನು ಕೈಬಿಟ್ಟಿದ್ದಾರೆ.

ಕಾರ್ಬೆಟ್ ಅರಣ್ಯದ ಸುತ್ತಮುತ್ತಲ “ಬಫರ್ ಝೋನ್” ಪ್ರದೇಶದಲ್ಲಿ ೨೦೦೯-೧೦ ಸಾಲಿನಲ್ಲಿ  ೧,೩೦೦ ಜಾನುವಾರುಗಳನ್ನು ಹುಲಿಗಳು ಬೇಟೆಯಾಡಿವೆ ಎಂದು ಅಲ್ಲಿನ ಅಧಿಕಾರಿಗಳು ಲೆಕ್ಕ  ಕೊಡುತ್ತಾರೆ. ಅಂದರೆ ದಿನಕ್ಕೆ ಸರಾಸರಿ ಮೂರು! ಒಂದು ಕಾಲದಲ್ಲಿ ನರಭಕ್ಷಕ ಹುಲಿಗಳ  ತಾಣವಾಗಿದ್ದ ಈ ಕಾಡು ಈಗ ಜಾನುವಾರು ಭಕ್ಷಕ ಹುಲಿಗಳ ತಾಣವಾಗಿದೆ.

(ಉಳಿದದ್ದು ಇನ್ನೊಂದು ಪೋಸ್ಟ್ ನಲ್ಲಿ)

ಫೈಜ್ ಗೆ ನೂರು – ಭಾಗ ೨
ಕತ್ತಲು  ಕವಿಯುವುದು ಮತ್ತು ಬೆಳಕು ಮೂಡುವುದರ ಬಗ್ಗೆ ಅದೆಷ್ಟು ಕವಿಗಳು ಬರೆದಿದ್ದಾರೋ!  ಜಾನ್ ಡನ್ ತನ್ನ ಪ್ರೇಯಸಿಯಿಂದ ತನ್ನನಗಲಿಸುವ ಸೂರ್ಯನನ್ನು “busy old fool” ಅಂತ  ಬೈದು ಜಾಲಾಡುವುದರಿಂದ ಹಿಡಿದು “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಅಂತ ಹಾಡುವ ನಮ್ಮದೇ  ಖಾಸಾ ಕವಿರತ್ನ ಕಾಳಿದಾಸನವರೆಗೆ… ಲಕ್ಷಲಕ್ಷ.

ಫೈಜ್ ನ ಸುಮಾರು ಕವಿತೆಗಳೂ   ಬೆಳಕು, ನೆರಳು, ಕತ್ತಲೆಯ ಇಮೇಜುಗಳ ಸುತ್ತ ಹೆಣೆದವು. ಇಲ್ಲಿ ನನಗೆ ಚೆಂದ ಅನ್ನಿಸಿದ  ಎರಡು ಸ್ವಲ್ಪ ಧೀರ್ಘ ಮತ್ತು ಒಂದು ಪುಟ್ಟ ಕವನದ ಅನುವಾದ ಇದೆ. ಎರಡನೆಯದು ಟಿಪಿಕಲ್ ಫೈಜ್ ಪದ್ಯ. ತುಂಬಾ ರೊಮ್ಯಾಂಟಿಕ್ ಇಮೆಜುಗಳಿಂದ ಶುರುವಾಗಿ ಮತ್ತೆ ಇನ್ನೆಲ್ಲಿಗೋ ಓದುಗರನ್ನು ಎಳೆದುಕೊಂಡು ಹೋಗುವಂಥದು.

ನಿಜ ಹೇಳಬೇಕೆಂದರೆ ಮೂರನೆಯದು  ಅನುವಾದ ಅನ್ನಿಸಿಕೊಳ್ಳಲಾರದೇನೋ. ಅಲ್ಲಿ ಬಳಸುವ “ಸಾಕಿಗರಿ” ಅನ್ನುವ ಶಬ್ದಕ್ಕೆ ಏನು  ಹೇಳುವುದಪ್ಪ ಅಂತ ಹುಡುಕ ಹೊರಟು ಅದು ಬೇರೆಯೇ ಆಗಿಬಿಟ್ಟಿದೆ. ಸಾಕಿ ಅನ್ನುವ ಪದವನ್ನು  ಕನ್ನಡ ಗಜಲುಗಳಲ್ಲಿ ಬಳಸುತ್ತಾರಾದರೂ ಅದು ಸರಿ ಹೋಗೋದಿಲ್ಲ ಅನ್ನಿಸಿ ಅದನ್ನು ಬಿಟ್ಟು  ಬೇರೆ ಅರಸಿದ್ದರ ಫಲ ಮೂರನೆ ಪದ್ಯ. ಕನ್ನಡದಲ್ಲಿ ನಾವು ಜಾಣತನದಿಂದ  ಭಾವಾನುವಾದ ಅನ್ನುವ ಪದ ಬಳಸಿ ಎಂಥ ಆಟ ಆಡಿಯೂ ತಪ್ಪಿಸಿಕೊಳ್ಳಬಹುದಲ್ಲ. ಆ ಧೈರ್ಯದ ಮೇಲೆ  ಮೂರನೆಯದನ್ನೂ ಸೇರಿಸುತ್ತಿದ್ದೇನೆ!

ಸೆರೆಮನೆಯಲ್ಲೊಂದು ಸಂಜೆ

ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ

ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ.

ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ

ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ.

ಅಂಗಳದಲಿ ನಿಂತ ನಿರಾಶ್ರಿತ ಮರಗಳು

ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.

ಚಾವಣಿಯ ಮೇಲೆ ಮೆರುಗುತ್ತಿವೆ

ಬೆಳದಿಂಗಳ ಕರುಣೆಯ ಬೆರಳು.

ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು

ನೀಲಿ ಕದಡಿದೆ ಆಗಸದ ತುಂಬಾ.

ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು,

ಆವರಿಸಿದಂತೆ ಮನಸ

ಸ್ವಲ್ಪ ಸ್ವಲ್ಪವೇ ವಿರಹದ ನೋವು.

ಆಹಾ! ಎಷ್ಟು ಸಿಹಿ ಈ ಗಳಿಗೆ.

ಗೆಲ್ಲಲಾರದು ಇಂದು ಎಂದೆಂದೂ

ಇಲ್ಲಿ ವಿಷವ ಬೆರೆಸುವ ಮನಸು.

ಮಿಲನದ ಮನೆಯ ದೀಪ

ಆರಿಸಿಯಾರು ಬಿಡಿ.

ಚಂದ್ರನನ್ನಳಿಸುವವರು

ಯಾರಾದರೂ ಇದ್ದರೆ ಹೇಳಿ.

ಸೆರೆಮನೆಯಲ್ಲೊಂದು ಬೆಳಗು

ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’

ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು.

‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ

ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.

ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ.

ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ  ಮೇಲೆ

ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ.

ಚಂದ್ರನ ಕೈಯ್ಯಿಂದ ಉದುರುತ್ತಿವೆ

ಒಂದೊಂದೆ ತಾರೆ ತಾವರೆಯ ಪಕಳೆಗಳು.

ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ

ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ  ಹೊತ್ತು.

ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ

ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ.

ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ

ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು.

ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು.

ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ.

ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ.

ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ.

ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು.

ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ.

ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ.

ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು.

ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ  ಇನ್ನೆಲ್ಲೋ.

ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ  ವೈರಿಗಳು.

ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು,

ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ

ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.

ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು

ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .

ಒಂಟಿತನ

ಸಂಜೆ ಮಾಗಿದ ಹಾಗೆ ಒಟ್ಟೊಟ್ಟಿಗೆ

ಹೆಂಡ ಹೀರುವ ಹಳೆಯ ಗೆಳೆಯರಂತೆ,

ಇಂದು ನನ್ನ ಜೋಡಿ ನನ್ನ ಒಂಟಿತನ.

ಇಬ್ಬರೂ ಕಾದಿದ್ದೇವೆ ಚಂದ್ರನುದಯಕ್ಕಾಗಿ

ಕಾಣಲು ನಿನ್ನ ಪ್ರತಿಬಿಂಬ ಪ್ರತಿ ಛಾಯೆಯಲ್ಲೂ.

PostScript:

ಮೊನ್ನೆ ಸೆನೆಟ್ ಹಾಲಿನಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರ ಹೊಸ  ಕಾವ್ಯದ ಪ್ರತಿ ಕೊಂಡೆ. ಅದರ ಪೇಜುಗಳನ್ನು ತಿರುವಿ ಹಾಕುವಾಗ ಸುಮಾರಷ್ಟು ಬೆಳಗು ರಾತ್ರಿಯ  ಥೀಮಿನ ಪದ್ಯಗಳು ಕಂಡವು. ಉದಾಹರಣೆಗೆ ಇಲ್ಲಿ ಕೆಲವು

ಚಂದ್ರಕಾಂತ ಕುಸನುರರ ಒಂದು ಪದ್ಯ:

ಕೋಳಿ ಕೂಗಿಲ್ಲೆಂದು, ಬೆಳಕು ಹರಿದಿಲ್ಲೆಂದು

ಹಚ್ಚಡದ ಪದರದಲಿ ಮುಖ ಮುಚ್ಚಿಕೊಂಡು ನಾ

ಹಗಲು ಹೆಗಲಿನ ಮೇಲೆ

ಮಲಗಿಕೊಂಡೆ.

ವೈದೇಹಿಯ “ಕಂಡದ್ದು ಹೇಳಿದರೆ”:

ಈಗಿಷ್ಟು ಶಾಂತ ಕಾಣುತ್ತಾನಲ್ಲ

“ರಾತ್ರಿ ಸವಾರಿ ಹೋದದ್ದೆಲ್ಲಿಗೆ?”

ಕೇಳಿ ನೋಡು.

ಹಗಲಿಡೀ

ಉರಿದುರಿದು ಬೀಳುತ್ತಾನೆ.

ಮಂಗೇಶ ನಾಡಕರ್ಣಿ “ಸಂಜೆ ಆಯಿತು” ಪದ್ಯದ ಮೊದಲ ಮೂರು ಸಾಲು. ಪೂರ್ತಿ ಇಲ್ಲಿ ಟೈಪ್  ಮಾಡಲಿಕ್ಕೆ ಬೋರು. ಪೇಜ್ ೧೩೩.

“ನಮ್ಮೂರಲ್ಲಿ

ಅಕಾರಣವಾಗಿ

ಬೆಳಕಾದ ತಪ್ಪಿಗೆ

ಸಂಜೆ ಆಯಿತು…”

ಶ್ರೀಕೃಷ್ಣ ಆಲನಹಳ್ಳಿಯ ‘ಬೆಳಕು’ ಕವಿತೆ ಸ್ವಲ್ಪ ಉದ್ದ. ಉಳಿದದ್ದನ್ನು ಪುಟ ೨೭೯/೮೦/೮೧ ರಲ್ಲಿ  ಓದಿಕೊಳ್ಳಬಹುದು.

ಇರುಳು ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ

ಸೂರ್ಯ ಜಿಬುರುಗಣ್ಣೊರೆಸುತ್ತಾ ಆಕಳಿಸಿ

ಕೊಬ್ಬಿದಾಡು ಕುರಿ ಕೋಳಿ ಸಿಗಿದು ಸೀಳಿ

ಕಂದು ನೀಲಿ ಬಿಳಿ ಕೆಂಪು ಖಂಡಗಳ ತೂಗಿಟ್ಟು

ಬಣ್ಣಬಣ್ಣದ ಮೂಡಲಂಗಳದ ಮಾಂಸದಂಗಡಿ ತೆರೆದಾಗ

ನನ್ನೂರಿನಲ್ಲಿ ಬೆಳಗಾಯಿತು.

(ನಿಮಗೆ ಬೆಳಗು ರಾತ್ರಿಯ ಚೆಂದದ ಪದ್ಯಗಳು ನಿಮಗೆ ಯಾವುದಾದರೂ ನೆನಪಾದರೆ ಈ ಲಿಸ್ಟಿಗೆ ಸೇರಿಸಿ)

ಫೈಜ್ ಗೆ ನೂರು
ಫೈಜ್ ಅಹಮೆದ್ ಫೈಜ್ ಬದುಕಿದ್ದರೆ ಈ ಫೆಬ್ರವರಿಗೆ ನೂರು ವರ್ಷ ತುಂಬುತ್ತಿತ್ತು. ಫೈಜ್  ತುಂಬಾ ಜನರ ಫೇವರೆಟ್  ಕವಿ. ಪ್ರೇಮದ ಬಗ್ಗೆ ಮುಟ್ಟಿದರೆ ಮುದುರೀತು ಅನ್ನುವಷ್ಟು  ಕೋಮಲ-ಮಧುರವಾಗಿ ಮತ್ತು ಕ್ರಾಂತಿಯ ಬಗ್ಗೆ ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ  ಫೆವರೇಟ್ ಆಗದೆ ಇರಲಿಕ್ಕೆ ಹೇಗೆ ಸಾಧ್ಯ ಅಲ್ಲವಾ? “ಮೇರೆ ಮೆಹಬೂಬ್ ಮುಜ್ಸೆ ಪೆಹಲೀಸಿ  ಮೊಹಾಬ್ಬತ್ ನ ಮಾಂಗ್”ನಂತ ಕವಿತೆಗಳಲ್ಲಿಯಂತೂ ಫೈಜ್ ಇವನ್ಯಾವ ಮಾಯಕಾರನಪ್ಪ ಅನ್ನಿಸುವ  ಹಾಗೆ ಪ್ರೇಮ ಮತ್ತು ರೋಮಾಂಟಿಕ್ ಪ್ರೇಮದಾಚದ ಕ್ರೂರ ಪ್ರಪಂಚ ಎರಡರ ಬಗ್ಗೆಯೂ  ಬರೆಯುತ್ತಾನೆ. ಈ ಪದ್ಯದಲ್ಲಿ ಆಧುನಿಕ ಕಾವ್ಯ ಮತ್ತು ಸಾಂಪ್ರದಾಯಿಕ ಉರ್ದು ಕವಿತ್ವದ  ಭಾವುಕ, ಭಾವಗೀತಾತ್ಮಕ ಪ್ರತಿಮೆಗಳನ್ನು ಒಟ್ಟೊಟ್ಟಿಗೆ ಬಳಸುತ್ತಾನೆ ಈ ಮಾರ್ಕ್ಸಿಸ್ಟ್  ಕವಿ.

ಈತ ಕವಿಯಷ್ಟೇ ಅಲ್ಲದೆ ಪತ್ರಕರ್ತ, ಸಂಸ್ಕೃತಿ ಚಿಂತಕ, ಗದ್ಯ ಬರಹಗಾರ, ಅನುವಾದಕ,  ಹೋರಾಟಗಾರ ಇತ್ಯಾದಿ. ಪಾಕಿಸ್ತಾನ್ ಟ್ರೇಡ್ ಯೂನಿಯನ್ ಫೇಡರೇಷನ್ನಿನ ಮೊದಲ  ಉಪಾಧ್ಯಕ್ಷನಾಗಿ ಮತ್ತು ದೇಶದ ಅಂಚೆ ತೆರಪು ಇಲಾಖೆಯ ನೌಕರರ ಮತ್ತು ರೈಲ್ವೆ ಇಲಾಖಾ  ನೌಕಾರರ ಸಂಘಟಕನಾಗಿ ಕೆಲಸ ಮಾಡಿದವ. ಪಾಕಿಸ್ತಾನ ಯುದ್ಧ ಹೂಡಿದಾಗಲೆಲ್ಲಾ ಯುದ್ಧ ವಿರೋಧಿ  ಪದ್ಯಗಳನ್ನು ಬರೆದು “ದೇಶದ್ರೋಹಿ” ಅಂತಲೂ ಕೆಲವರಿಂದ ಅನ್ನಿಸಿಕೊಂಡವನು. ಝುಲ್ಫಿಕರ್  ಅಲಿ ಭುಟ್ಟೋ ಆಳ್ವಿಕೆಯ ಕೆಲ ವರ್ಷಗಳು ಪ್ರಭುತ್ವಕ್ಕೆ ಹತ್ತಿರದವನಾದ ಫೈಜ್  ಈ  ಸಮಯದಲ್ಲಿ ಪಾಕಿಸ್ತಾನ್ ಆರ್ಟ್ಸ್ ಕೌನ್ಸಿಲ್ ಸಂಸ್ಥಾಪಿಸಿದ. ಭುಟ್ಟೋ ಗಲ್ಲಿಗೇರಿಸಿದ  ಜಿಯಾನ ಕಾಲದಲ್ಲಿ ದೇಶ ಬಿಟ್ಟು ಹೋಗಬೇಕಾಯಿತು. ಈ ಸಂದರ್ಭದಲ್ಲಿ ಎಡ್ವರ್ಡ್ ಸಯಿದ್  ಮತ್ತು ಫೈಜ್ ಭೇಟಿ ಆಗಿದ್ದರಂತೆ. ಈ ಭೇಟಿಯ ಬಗ್ಗೆ ಇಬ್ಬರೂ ಬರೆದಿದ್ದಾರೆ…  ಒಟ್ಟಾರೆಯಾಗಿ ಫೈಜ್ ನ ವ್ಯಕ್ತಿತ್ವದ ಈ ಎಲ್ಲಾ ಮುಖಗಳು ಅವನ ಪದ್ಯಗಳಲ್ಲಿ ಕಾಣುತ್ತವೆ.

ಶತಮಾನೋತ್ಸವಗಳು ಸಾಮಾನ್ಯವಾಗಿ ತುಂಬಾ ಸುದ್ದಿ, ಸಭೆ ಸಮಾರಂಭಗಳನ್ನು  ಹುಟ್ಟಿಹಾಕುತ್ತವೆ. ಆದರೆ ಫೈಜ್ ವಿಷಯದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೆಚ್ಚು  ಸುದ್ದಿ ನಮ್ಮಲ್ಲಂತೂ ಕಾಣುತ್ತಿಲ್ಲ. ಎಲ್ಲಾ “ಪಾಕಿ”ಗಳ ಬಗ್ಗೆ ನಮಗೆ ಇರುವ ಅನುಮಾನದ  ಅಭಿವ್ಯಕ್ತಿ ಇದಾಗಿರಬಹುದೋ ಅಥವಾ ಅಷ್ಟಾಗಿ ಈ ವಿಷಯ ಯಾರ ಗಮನಕ್ಕೂ ಬಂದಿಲ್ಲವೋ  ಗೊತ್ತಿಲ್ಲ. ಪಾಕಿಸ್ತಾನದಲ್ಲಿ ಕತೆ ಏನೋ.

ಫೈಜ್ ಪದ್ಯಗಳು ಸುಮಾರಷ್ಟು ಕನ್ನಡಕ್ಕೆ ಬಂದಿವೆ. ಮೂರು ಸಣ್ಣ ಪದ್ಯಗಳನ್ನು ಇಲ್ಲಿ ಅನುವಾದ ಮಾಡಿದ್ದೇನೆ. ಇನ್ನಷ್ಟು ಪದ್ಯಗಳನ್ನು ಇನ್ನೊಂದು ಕಂತಿನಲ್ಲಿ ಮಾಡುತ್ತೇನೆ.

ನೆನಪು

ಹಾಳು ಬಿದ್ದ ತೋಟಕ್ಕೆ ಮೆಲ್ಲನೆ ವಸಂತ ಕಾಲಿಟ್ಟಂತೆ

ಬೆಳಗಿನ ತಂಗಾಳಿ ಬೆಂಗಾಡಲ್ಲಿ ಕಮ್ಮನೆ ಬಿಸಿದಂತೆ

ನರಳುವ ರೋಗಿ ನೆಪವೇ ಇಲ್ಲದೆ ಗೆಲುವಾದಂತೆ

ನೆನ್ನೆ ರಾತ್ರಿ  ನಿನ್ನ ಕಳೆದು ಹೋದ ನೆನಪು

ಸುಮ್ಮಸುಮ್ಮನೆ ಬಂದು ನನ್ನೆದೆ  ಕದ ತಟ್ಟಿತು.

ಚಿಂತೆ ಇಲ್ಲ

ಮಂದಿ ನನ್ನ ಶಾಯಿ-ಲೇಖನಿ ಕಿತ್ತುಕೊಂಡರೆ ಚಿಂತೆ ಇಲ್ಲ

ಬೆರಳನ್ನೇ ಅದ್ದಿದ್ದೇನೆ ಗುಂಡಿಗೆಯ ಬಿಸಿ ರಕ್ತದಲ್ಲಿ

ನಾಲಿಗೆಗೆ ಸಂಕೋಲೆ ಹಾಕಿದರೆ ಚಿಂತೆ ಏನೇನೂ ಇಲ್ಲ

ಸರಪಳಿಯ ಉಂಗುರುಂಗುರವು ಉಸಿರೀತು ನನ್ನ ಮಾತು.

ಮಾತಾಡು

ತುಟಿಗಳಿಗೆ ಅಂಕೆ ಇಲ್ಲ

ಆಡು ಮಾತಾಡು

ನಾಲಿಗೆ ಇನ್ನೂ ನಿನ್ನದೇ

ಆಡು ಮಾತಾಡು.

ದೇಹ ನಿನ್ನ ಸ್ವಂತದ್ದು

ಆಡು ಮಾತಾಡು.

ಜೀವ ಇನ್ನೂ ಉಳಿದಿದೆ

ಆಡು ಮಾತಾಡು

ನೋಡು ಕಮ್ಮಾರನ ಕುಲುಮೆಯಲಿ

ಜಿಗಿದೆದ್ದಿದೆ ಜ್ವಾಲೆ, ಕೆಂಪೇರಿದೆ ಲೋಹ

ಸಡಿಲಾಗಿದೆ ಎಲ್ಲ ಬೀಗಗಳ ಬಾಯಿ

ತುಂಡಾಗಿ ಬಿದ್ದಿದೆ ಸರಪಳಿ.

ದೇಹ ನಾಲಿಗೆಗಳ ಸಾವಿನ ಮುಂಚಿನ

ಈ ಎರಡು ಗಳಿಗೆ ಸಮಯವೇ ಸಾಕು

ಆಡು ಮಾತಾಡು

ಸತ್ಯ ಇನ್ನೂ ಉಸಿರಾಡುತ್ತಲಿದೆ

ಆಡು ಮಾತಾಡು

ಹೇಳಲೇ ಬೇಕಾದ್ದು ಹೇಳಿಯೇಬಿಡು

ಆಡು ಮಾತಾಡು.

ಕಾಗೆ ನರಿಗಳ ಹೊಸ ಅವತಾರಗಳು
ನಾವು ಸ್ಕೂಲಿಗೆ ಹೋಗ್ತಿದ್ದಾಗ ಏಕಪಾತ್ರಾಭಿನಯ ಬಹಳ popular ಆಗಿತ್ತು. ಈಗ ಬೆಂಗಳೂರಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಹೀಗೆಂದರೇನಂತಲೂ ನೆಟ್ಟಗೆ ಗೊತ್ತಿದ್ದ ಹಾಗಿಲ್ಲ.   ಧರಣಿ ಮಂಡಲ ಮಧ್ಯದ ಕರ್ನಾಟ ದೇಶದೊಳ್ ಇಂದು ರಾರಾಜಿಸುತ್ತಿರುವ ರಾಜಕಾರಣಿಗಳ ಪ್ರತಿಭೆ ನೋಡಿ ನನಗೆ ನಮ್ಮ ಸ್ಕೂಲಿನಲ್ಲಿ ನಾವು ಆಡುತ್ತಿದ್ದ ಏಕಪಾತ್ರಾಭಿನಯ ನೆನಪಾಯಿತು. “ಇಲ್ಲಿ ನಿಂತರೆ ಪಕ್ಷಕ್ಕೆ ನಿಷ್ಟ, ಇಲ್ಲಿ ನಿಂತರೆ ಭಿನ್ನಮತೀಯ” ಅಂತ ಸಲೀಸಾಗಿ ನಟನೆಯ ಶೈಲಿ,  ದನಿಯನ್ನು  ಬದಲಾಯಿಸುವ ವರ್ತೂರ್ ಪ್ರಕಾಶರು, ರೇಣುಕಾಚಾರ್ಯರು…   “ಇಲ್ಲಿ ನಿಂತರೆ ಜಾತ್ಯಾತೀತ, ಇಲ್ಲಿ ನಿಂತರೆ ‘ಜಾತ್ಯಾತೀತ ಅಂದರೆ ಏನ್ರೀ’ ಅಂತ ಕೇಳುವವನು” ಅಂತ ಉವಾಚಿಸುವ ನಮ್ಮ ಅದ್ವಿತೀಯ ಕುಮಾರ ಪ್ರತಿಭೆ… ಇವರಲ್ಲಿ ಯಾರಾದ್ರೂ ನಮ್ಮ   ಸ್ಕೂಲಿನಲ್ಲಿದ್ದಿದ್ದರೆ ಎಂಥಾ ದೊಡ್ಡ ಸ್ಟಾರುಗಳೇ ಆಗ್ತಿದ್ರಲ್ಲ ಅಂತ!

ಒಟ್ಟಾರೆ, ಕೋಟಿಗಟ್ಟಲೆ ದುಡ್ಡು ಹರಿಸಿ ನಡೆದಿರುವ, ನಡೆಯುತ್ತಿರುವ ಶಾಸಕರ ಕೊಡುಕೊಳ್ಳಾಟದ ಘೋರತೆಯನ್ನು ಪಕ್ಕಕ್ಕಿಟ್ಟು ಬರೀ ಟಿವಿಯಲ್ಲಿ ಲೈವ್ ಕವರೇಜ್ ತಮಾಶೆ ನೋಡಿ ನಗಲಿಕ್ಕೆ ಶಕ್ತಿ ಇದ್ದವರು ಸ್ಕೂಲಿನ ತೆನಾಲಿರಾಮ- ಕೃಷ್ಣದೇವರಾಯ ಏಕಪಾತ್ರಾಭಿನಯ ನೋಡಿ ನಕ್ಕ ಹಾಗಿ ನಕ್ಕುಬಿಡಬಹುದು. ಯಾರೋ ಅಂಗಿ ಹರ್ಕೊಂಡಿದ್ದು, ಇನ್ಯಾರೋ ಬೆಂಚ್ ಮೇಲೆ ಹತ್ತಿದ್ದು ಇತ್ಯಾದಿಗಳನ್ನು ಮತ್ತೆ ಮತ್ತೆ ಟಿವಿ ಚಾನೆಲ್ಲುಗಳು ರಂಜನೀಯ ಕಾಮೆಂಟ್ರಿಗಳ ಜೊತೆಗೆ ತೋರಿಸುತ್ತಲೇ ಇವೆ. ಅದನ್ನು ಬೋಂಡಾ ತಿನ್ನುತ್ತಾ ನೋಡುವ ನಮ್ಮಂತವರಿಗೆ ಈ ರೀತಿಯ so-called “ಅಸಭ್ಯ” ವರ್ತನೆಯೇ ಮಹಾಪರಾಧ ಮತ್ತು ತಮಾಶೆ ಎರಡೂ ಆಗಿ ಏಕಕಾಲಕ್ಕೆ ಕಂಡು, ಇದಕ್ಕಿಂತ ದೊಡ್ಡ ರಾಜಕೀಯ  ಕ್ರೈಂಗಳೆಲ್ಲಾ ಮರೆತೇ ಹೋಗತ್ತಾ ಅಂತಲೂ ಅನ್ನಿಸುತ್ತದೆ.

ಅದೇನೆ ಇರಲಿ, ಸಜ್ಜನಿಕೆ ಮತ್ತು ಸುಸಂಸ್ಕೃತಿ ನಮ್ಮ ರಾಜ್ಯದ ನೆಲದ ಸಹಜ ಗುಣ ಅಂತೆಲ್ಲ ಭ್ರಮೆ ನಮ್ಮಲ್ಲಿ ಏನಾದರೂ ಇನ್ನೂ ಉಳಿದಿದ್ದರೆ ಅದು ಇಷ್ಟು ಹೊತ್ತಿಗೆ ಗಣಿಯ ದಟ್ಟ ಕೆಂಪು ಧೂಳಿನಲ್ಲಿ ಉಸಿರು ಕಟ್ಟಿ ಸತ್ತಿರಬಹುದು ಅಂದುಕೊಂಡಿದ್ದೇನೆ. After all, ನಾವು, ನಮ್ಮ ಸಂಸ್ಕೃತಿ, ನಮ್ಮ ರಾಜಕಾರಣ ಬೇರೆ ಬೇರೆ ಕಂಪಾರ್ಟುಮೆಂಟುಗಳಲ್ಲಿ ಹಾಕಿಡುವುದಕ್ಕೆ ಬರುವುದಿಲ್ಲ ಅಲ್ಲವಾ?

ಬೋಂಡಾ ತಿನ್ನುತ್ತಾ ಕೂತಿದ್ದ ನನಗೆ ಈ MLAಗಳು  ನಮಗೆ ಸೇರಿದವರು, ಇಲ್ಲ ನಮಗೆ ಸೇರಿದವರು ಅಂತ ಪಾರ್ಟಿಗಳು ಚಿ ತ್ರವಿಚಿತ್ರ ಹಿಗ್ಗುಜಗ್ಗಾಟದಲ್ಲಿ ತೊಡಗಿರುವುದನ್ನು ನೋಡಿ ಜೇಮ್ಸ್ ಥರ್ಬರನ “Fables for Our Times”ನ ಕೆಲವು ಕತೆಗಳು ನೆನಪಾದವು. ಥರ್ಬರ್ ನಮಗೆಲ್ಲಾ ನಮ್ಮಮ್ಮ ಹೇಳುತ್ತಿದ್ದ ಕಾಗೆ-ನರಿ ಕತೆಯ ಐದು ಆಧುನಿಕ version ಗಳನ್ನು ಹೇಳುತ್ತಾನೆ:

೧. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. “ನೀನು ಎಷ್ಟು ಚೆಂದ ಇದ್ದೀಯೋ ಅಷ್ಟೆ ಚೆಂದ ನಿನಗೆ ಹಾಡಲಿಕ್ಕೂ ಬಂದರೆ, ನಿನ್ನಷ್ಟು ಸುಂದರಿ ಕಾಗೆ ನಾಲ್ಕು ದಿಸೆಯಲ್ಲೆಲ್ಲೂ ಸಿಗಲಿಕ್ಕಿಲ್ಲ” ಎಂದಿತು. ಕಾಗೆಯ ದನಿಯನ್ನು ಹೊಗಳಿದರೆ ಬಾಯಯಲ್ಲಿನ ಮಾಂಸದ ತುಂಡನ್ನು ಬಿಟ್ಟುಬಿಡುತ್ತದೆ ಅಂತ ನರಿ ಎಲ್ಲೋ ಓದಿತ್ತು.

ಆದರೆ ಈ ಕಾಗೆಯ ಕತೆ ಬೇರೆ. “ನೀನು ಬಹಳ ಪಾಕಡ ಆಸಾಮಿ ಅಂತ ನನಗೆ ಗೊತ್ತು” ಅಂತ ಭದ್ರವಾಗಿ ತುಂಡನ್ನು ಕೊಕ್ಕಿನಿಂದ ತೆಗೆದು ಕಾಲಿನಲ್ಲಿ ಸಿಕ್ಕಿಸಿಕೊಂಡು ಕಾಗೆ ಹೇಳಿತು. “ನಿನಗೆ ಬುದ್ಧಿ ಆಷ್ಟೇ ಅಲ್ಲ ಕಣ್ಣೂ ಐಬಿರಬೇಕು. ಬಣ್ಣದ ರೆಕ್ಕೆ ಪುಕ್ಕ ಕೊಕ್ಕು ಇರೋದು ನನಗಲ್ಲ, ಗಿಳಿಗೆ. ರುಪಾಯಿಗೆ ನೂರು ಕೊಳ್ಳಬಹುದು. ನನ್ನದು ಕಪ್ಪು ಹೊಳೆಯುವ ಪುಕ್ಕ. ಬೇರೆ ಯಾರಿಗೂ ಇಲ್ಲ.” ಅಂತ ಬಿಂಕದಿಂದ ಹೇಳಿ, ಒಂದು ಚೂರೂ ಕೆಳಗೆ ಬೀಳದ ಹಾಗೆ ಮಾಂಸದ ತುಂಡು ತಿನ್ನತೊಡಗಿತು. “ಹೌದು ನೋಡು ನಿನ್ನ ಚೆಂದವೇ ಚೆಂದ. ನಿನ್ನ ಚೆಂದದ ವರ್ಣನೆಯನ್ನು ನಿನ್ನಿಂದಲೇ ಕೇಳಬೇಕಂತ ನನಗೇನೋ ಆಸೆ, ಆದರೆ ಹೊಟ್ಟೆ ಹಸೀತಾ ಇದೆ ನಾನು ಊಟ ಹುಡುಕಲಿಕ್ಕೆ ಹೋಗಬೇಕು” ಅಂದಿತು ನರಿ. “ಹೇ… ಇರು ಇರು. ನನ್ನ ಊಟದಲ್ಲಿ ನೀನೂ ತೊಗೊ” ಅಂತ ಮಾಂಸದ ದೊಡ್ಡ ಚೂರನ್ನು ನರಿಗೆ ಕೊಟ್ಟು ಕಾಗೆ ತನ್ನ ವರ್ಣನೆಯಯಲ್ಲಿ ತಾನೇ ತೊಡಗಿತು. “ಹಕ್ಕಿಗಳು ಹಾರಲು ಕಲಿತದ್ದೇ ನನ್ನಿಂದ….”

“ಹೌದ್ ಹೌದು…” ಅನ್ನುತ್ತಾ ನರಿ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು.

೨. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. ಹತ್ತಿರ ಬಂದು “ಒಹೋ ತುಂಡು ಮಾಂಸನಾ… ಅದೇನಿದ್ರೂ ಇಲಿಗಳು ತಿನ್ನೋದು ಬಿಡು” ಅಂತ ಮೂಗು ಮುರಿಯಿತು. ಭದ್ರವಾಗಿ ತುಂಡನ್ನು ಕೊಕ್ಕಿನಿಂದ ತೆಗೆದು ಕಾಲಿನಲ್ಲಿ ಸಿಕ್ಕಿಸಿಕೊಂಡ ಕಾಗೆ “ನೀನು ಯಾವಗಲೂ ಹಾಗೆ. ನಿನಗೆ ಯಾವುದು ಸಿಕ್ಕಲ್ಲವೋ ಅದು ಕೆಲಸಕ್ಕೆ ಬಾರದ್ದು ಅಂತ ಹೇಳ್ತೀಯ. ದ್ರಾಕ್ಷಿತೋಟಕ್ಕೆ ನರಿ ಹೋದ ಕತೆ ನನಗೆ ಗೊತ್ತಿಲ್ಲವಾ?” ಅಂದಿತು. “ಅಯ್ಯೊ, ದ್ರಾಕ್ಷಿ ತಿನ್ನೋದು ಬರಿ ಪಕ್ಷಿಗಳು. ನಾನು ನಳಮಹರಾಜನ ಭೋಜನ ಬಿಟ್ಟು ಬೇರೆ ತಿನ್ನುವವನೇ ಅಲ್ಲ” ಅಂತ ಬೀಗಿತು ನರಿ. ಇಂಥವನ ಮುಂದೆ ಹಳಸಲು ಮಾಂಸ ತಿನ್ನೋದಕ್ಕೆ ನಾಚಿಕೆ ಆಗಿ ಕಾಗಿ ತುಂಡು ಎಸೆದುಬಿಟ್ಟಿತು. ಟಕ್ಕಂತ ಕ್ಯಾಚ್ ಹಿಡಿದ ನರಿ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು.

೩. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. ಆದರೆ ಅದರ ಯಾವ ಉಪಾಯವೂ ಕಾಗೆಯ ಹತ್ತಿರ ನಡೆಯಲಿಲ್ಲ. ಇದ್ದಕ್ಕಿದ್ದಂತೆ ಕಾಗೆ ಮಾಂಸದ ತುಂಡನ್ನು ತಾನೇ ಎಸೆದುಬಿಟ್ಟಿತು. ಅಷ್ಟರಲ್ಲಿ ಯಾರ ಅಂಗಳದಿಂದ ಮಾಂಸದ ತುಂಡನ್ನು ಕದ್ದು ತಂದಿತ್ತೋ ಆ ರೈತ ಕೈಯ್ಯಲ್ಲಿ ಕೋವಿ ಹಿಡಿದು ಕಳ್ಳನನ್ನು ಹಿಡಿಯಲು ಬಂದ. ನರಿ ಸತ್ತೆನೋ ಕೆಟ್ಟೆನೋ ಅಂತ ಕಾಡಿಗೆ ಓಡಿತು. “ಅಲ್ಲಿ ಹೋಗ್ತಿದಾನೆ ನೋಡಿ ಕಳ್ಳ!” ಅಂತ ಕಾಗೆ ಒದರಿತು. ಕಾಗೆ ಕಣ್ಣಿಗೆ ಹೊಳೆವ ಕೋವಿ ನಳಿಕೆ ದೂರದಿಂದಲೇ ಕಾಣುತ್ತದೆ ಅಂತ ನರಿಗೆ ಹೇಗೆ ಗೊತ್ತಾಗಬೇಕು?

೪. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು,  ಮೂಗು ಚುರುಕಾಯಿತು… ಆದರೆ ಈ ಸಲ ಕಾಗೆಯ ಉಪಾಯಗಳಿಗೆ ಪೆಗ್ಗಿಬೀಳಬಾರದೆಂದು ನಿರ್ಧರಿಸಿದ್ದ ನರಿ ರೈತ ಕೋವಿ ಹಿಡಿದು ಬಂದರೂ ಹಂದದೆ ಅಲ್ಲೇ ನಿಂತಿತ್ತು. “ಈ ಮಾಂಸದ ತುಂಡಿನ ಮೇಲಿರುವ ಹಲ್ಲಿನ ಗುರುತೇನೋ ನನ್ನದೇ. ಆದರೆ ಈ ಕೊಕ್ಕಿನ ಗುರುತು ಆ ಮರದ ಮೇಲೆ ಕೂತ ನಿಜವಾದ ಕಳ್ಳನದು. ಇದಕ್ಕೆ ಪುರಾವೆಯಾಗಿ ಈ ಮಾಂಸದ ತುಂಡನ್ನು ನಿಮ್ಮ ಅವಗಾಹನೆಗೆ ಒಪ್ಪಿಸುತ್ತಿದ್ದೇನೆ ಮೈ ಲಾರ್ಡ್” ಅಂತ ಹೇಳಿ, ಅದು ಸಿಗರೇಟು ಹಚ್ಚುತ್ತಾ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು. ರೈತ ಕೆಳಗೆ.

೫. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು,  ಮೂಗು ಚುರುಕಾಯಿತು. ನಮ್ಮ ಅಜ್ಜ, ಅಮ್ಮಂದಿರು ಹೇಳುತ್ತಿದ್ದ ಕತೆಯಲ್ಲಿ ಅನಾದಿಕಾಲದಿಂದ ಆಗುತ್ತಾ ಬಂದಂತೆ ಈ ಸಲ ಕಾಗೆ ಹಾಡು ಹೇಳಿತು. ಮಾಂಸದ ತುಂಡು ಕೆಳಗೆ ಬಿದ್ದಿತು. ನರಿ ನರಿಯ ನಗೆ ನಕ್ಕಿತು. “ಅಯ್ಯೊ, ಬೇಗ ಮಾಂಸದ ತುಂಡು ವಾಪಾಸ್ ಕೊಡು, ರೈತ ಕೋವಿ ತಗೊಂಡು ಬರ್ತಿದಾನೆ!” ಅಂತ ಕಾಗೆ ಕಿರುಚಿತು.

“ಯಾಕೆ ಕೊಡಬೇಕು?” ಅಂತ ಉದ್ಧಟ ಪ್ರಶ್ನೆ ನರಿ ಕೇಳಿತು.

“ರೈತನ ಕೈಯ್ಯಲ್ಲಿ ಕೋವಿ ಇದೆ. ನಾನಾದರೆ ಹಾರಿ ಹೋಗಿಬಿಡಬಹುದು. ಬೇಗ ಕೊಡು!”

ನರಿ ಪ್ರಾಣಭಯದಲ್ಲಿ ಮಾಂಸದ ತುಂಡು ವಾಪಾಸು ಎಸೆಯಿತು.

ತಿಂದು ತೇಗಿದ ಕಾಗೆ, “ಅಯ್ಯೊ, ನನ್ನ ಕಣ್ಣೇ ನನ್ನನ್ನ ಮೋಸ ಮಾಡ್ತಾ ಇದೆಯ ಅಥವಾ ನಾನೇ ನಿನ್ನನ್ನ ಮೋಸ ಮಾಡ್ತಾ ಇದೀನಾ? ನನಗಂತೂ ಗೊತ್ತಾಗ್ತಾ ಇಲ್ಲ. ನಿನಗೇನಾದರೂ ಅರ್ಥ ಆಗ್ತಾ ಇದೆಯಾ?” ಅಂತ ಕೇಳಿತು.

ಉತ್ತರ ಇರಲಿಲ್ಲ.

ಥರ್ಬರ್ ತೀರಿ ಹೋದದ್ದು ೧೯೬೧ರಲ್ಲಿ. ನಮ್ಮ ಇಂದಿನ ರಾಜಕೀಯ ನೋಡಿದ್ದರೆ ಈ ಹಳೆ ಕತೆಗೆ ಹೊಸತೇ ಆದ ಆರನೆ twist ಸಿಗುತ್ತಿತ್ತೇನೋ. ಅದು ಹೀಗಿದ್ದಿರಬಹುದು:

೬. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ  ಕೂತಿದ್ದನ್ನು ನೋಡಿದ ನರಿಯ ಕಣ್ಣು,  ಮೂಗು ಚುರುಕಾಯಿತು… ಇಷ್ಟೆಲ್ಲ ಬುದ್ಧಿ ಉಪಯೋಗಿಸಿ ಒಬ್ಬರನ್ನೊಬ್ಬರು outsmart ಮಾಡುವ ಗೊಡಗೆ ಎಲ್ಲಾ ಯಾಕೆ ಅಂತ ನರಿ ಒಂದು ಭಾರಿ ಸೂಟ್ ಕೇಸು ಇಟ್ಟುಕೊಂಡು  ಸುಮ್ಮನೆ ಸಿಗರೇಟು ಸೇದುತ್ತಾ ಮರದ ಕೆಳಗೆ ಬಂದು ನಿಂತಿತು. ಸೂಟ್ ಕೇಸನ್ನು ಕಂಡದ್ದೇ ಮಾಂಸದ ತುಂಡಿಗೇ ಜೀವ ಬಂದು , ಅದೇ ಕಾಗೆ ಕೊಕ್ಕನ್ನು ಮುರಿದು, ಜಿಗಿದು ಬಂದು ನರಿಯ ಮಡಿಲಿಗೆ ಬಂದು ಬಿದ್ದಿತು. ಆತ್ತ ಹಸಿದ ಕಾಗೆ ನರಿಯ ಸೂಟ್ ಕೇಸಿಗಿಂತ ಭಾರಿ ಸೂಟ್ ಕೇಸನ್ನು ಹುಡುಕಿಕೊಂಡು VIP ಶೋರೂಮಿಗೆ ಹೋಯಿತು.

P.S.: ನಮ್ಮ ಶ್ರೇಷ್ಠತೆಯ ಭ್ರಮೆಗಳು ಯಾವ ರೀತಿ ಇರಬಹುದು ಮತ್ತು ಈ ಭ್ರಮೆಗಳು ರಾಜಕೀಯವನ್ನು ಅರ್ಥೈಸುವ ಬಗೆಯನ್ನು ಎಷ್ಟು ಮಟ್ಟಿಗೆ ಮಂದ ಮಾಡಬಹುದು ಅನ್ನುವುದಕ್ಕೆ “White Tiger” ಖ್ಯಾತಿಯ ಅರವಿಂದ ಅಡಿಗ ಲೇಖನ ಒಂದು ಉದಾಯಹರಣೆ.  ಇಲ್ಲಿ ಓದಿ: http://timesofindia.indiatimes.com/home/sunday-toi/all-that-matters/Kannadigas-stand-up-for-Karnataka/articleshow/6762547.cms

ಇದಕ್ಕೆ contrast ಆಗಿ ಕರ್ನಾಟಕದ ರಾಜಕಾರಣವನ್ನು ಓದುವ ಇನ್ನೊಂದು ಬಗೆ: http://www.hindu.com/2007/12/04/stories/2007120453210400.htm

ಭೈರಪ್ಪನವರು ಬರೆದ ಹೆಂಗಸರ ಹಣೆಬರಹ
“ಕವಲು” ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು  ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ ಇಂಥ ಕೆಲಸ ಮಾಡಿದರೆ ಇದಕ್ಕೊಂದು ಬೆಲೆ. ಇಷ್ಟು ದಿನ ಆಗಿ ಕಾದಂಬರಿ ಹುಲುಮಾನವರಿಗೆ ಎಣಿಸಲಾಗದಷ್ಟು ಮುದ್ರಣಗಳನ್ನು  ಕಂಡ ಮೇಲೆ ಮತ್ತೆ ಇದರ ಬಗ್ಗೆ ಬರೆಯಲಿಕ್ಕೆ ನ್ಯೂಸ್ ಪೆಗ್ ಆದರೂ ಏನುಂಟು ಅಂತ ನಮಗೆ ನಾವು ಹೇಳಿಕೊಂಡು ಸುಮ್ಮನಾಗಿದ್ದೇವೆ. (ನಿಮಗೆಲ್ಲ ಗೊತ್ತಿರುವ ಹಾಗೆ ಪತ್ರಕರ್ತರಿಗೆ ಪೆಗ್ಗು ಮತ್ತು ನ್ಯೂಸ್ ಪೆಗ್ಗುಗಳೆರಡೂ ತುಂಬ ಮುಖ್ಯ.)

ಆದರೆ, ಮೊದಲಿನಷ್ಟು ದಿನಕ್ಕೆರಡಲ್ಲದಿದ್ದರೂ ಭೈರಪ್ಪನವರ ಬಗ್ಗೆ ಲೇಖನಗಳು ಬರುವುದಂತೂ ನಿಂತಿಲ್ಲ. ಅವರ ಹುಟ್ಟುಹಬ್ಬ ಅಂತಲೋ, ಹಾಸನದ ಅವರ ಊರಿಗೆ ಹೋದರು ಅಂತಲೋ, ಶಿವಮೊಗ್ಗೆಯಲ್ಲಿ ರಸಾನುಭವದ ಬಗ್ಗೆ ಲೆಕ್ಚರ್ ಅಂತಲೋ… ಹೀಗೆ. ಕೊನೆಗೆ ನಾವೆಲ್ಲ ಸೇಬು ತಿನ್ನಬೇಕಾ ಅಥವಾ ಪೇರಳೆಹಣ್ಣು ತಿನ್ನಬೇಕಾ ಅನ್ನುವ ಲೇಖನದಲ್ಲಿಯೂ ಭೈರಪ್ಪನವರ ಪ್ರಸ್ತಾಪ ನಾವು ಕಾಣಬಹುದು. ನ್ಯೂಸ್ ಪೆಗ್ ಅಂತೆಲ್ಲಾ ಹೇಳೋದೂ ನಮ್ಮಂಥ ಸೋಮಾರಿಗಳ ಇನ್ನೊಂದು ಲಕ್ಷಣ ಅನ್ನುವುದಕ್ಕೆ ಈ ಲೇಖನಗಳ ಜಡಿಮಳೆಯೇ ಸಾಕ್ಷಿ.

ಇರಲಿ. ಕಾದಂಬರಿಯ ಮುದ್ರಣಗಳ ಸಂಖ್ಯೆಯನ್ನೂ ಮೀರಿಸುವಷ್ಟು ವಿಮರ್ಷೆಗಳು ಈ ಕಾದಂಬರಿಗೆ ಮತ್ತು ಇದರ ಹಿಂದಿನ “ಆವರಣ”ಕ್ಕೆ ಈಗಾಗಲೆ ಬಂದಿರುವುದರಿಂದ ಮತ್ತೆ ವಿಮರ್ಷೆಯ ಸಾಹಸಕ್ಕೆ ನಾನು ಕೈಹಾಕುವುದಿಲ್ಲ. ನಿಜ ಹೇಳಬೇಕೆಂದರೆ ಕೊನೆಯವರೆಗೂ ಸಹನೆ ಉಳಿಸಿಕೊಂಡು ಓದಿ ಮುಗಿಸುವುದೇ ಒಂದು ಸಾಹಸ ಅನ್ನಿಸುವ ಈ ಕಾದಂಬರಿಗಳು ಚೆನ್ನಾಗಿಲ್ಲ ಅಂತ ಹೇಳುವುದಕ್ಕೆ ವಿಮರ್ಷೆಯ ಭಾಷೆ, ಪರಿಕರಗಳೆಲ್ಲಾ ಬೇಕಾ ಅಂತಲೇ ನನ್ನ ಪ್ರಶ್ನೆ.

ಆಧುನಿಕತೆಯ ಸೊಂಕಿನ ಹೆಂಗಸರನ್ನು ಭೈರಪ್ಪನವರು ಚಿತ್ರಿಸುವ ರೀತಿ ನಮ್ಮ ಏಕ್ತಾ ಕಪೂರ ತನ್ನ ಹಿಂದಿ ಸೀರಿಯಲ್ಲುಗಳಲ್ಲಿ ಚಿತ್ರಿಸುವ ವಿಷಕನ್ಯೆ ಹೆಂಗಸರಿಗಿಂತಲೂ ಒಂದು ಕೈ ಮೀರಿದ್ದು. ಇಬ್ಬರ TRP ರೇಟಿಂಗು ಒಂದನ್ನೊಂದು ಮೀರಿಸುವಂತೆ ಇರುವುದು ಸಹಜವೇ ಏನೊ.  ಸಾಮಾನ್ಯವಾಗಿ ಲೇಖಕರಿಗೆ ತಮ್ಮ ಖಳನಾಯಕ ಪಾತ್ರಗಳ ಬಗ್ಗೆಯೂ ಒಂದು ರೀತಿಯ ಮಾತೃ ವಾತ್ಸಲ್ಯ ಇರುತ್ತದೆ. ಆದ್ದರಿಂದಲೇ ಅವೂ ಕೂಡ ತೀರ ರಟ್ಟಿನ ಗೊಂಬೆಗಳಾಗದೆ ಜೀವ ತುಂಬಿಕೊಂಡಿರುತ್ತವೆ. ಅಮ್ಮ ಕೆಟ್ಟ ಮಕ್ಕಳಿಗೂ ಊಟ ಹಾಕದೆ ಸಾಯಿಸುವುದಿಲ್ಲವಲ್ಲ ನೋಡಿ, ಹಾಗೆ. ಆದರೆ ಥೇಟ್ ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಭೈರಪ್ಪನವರೂ ನೀತಿ ಸಂಹಿತೆ ಮೀರಿದ ಪಾತ್ರಗಳಿಗೆ starvation death ಸಜೆ ಕೊಟ್ಟುಬಿಡುತ್ತಾರೆ. (ಇವರಿಬ್ಬರ ಸಂಹಿತೆ ಸಂಪೂರ್ಣ ಒಂದೇ ಅಂತ ಇದರರ್ಥವಲ್ಲ.) ಈ ಕಾರಣಕ್ಕೆ “ಕವಲು” ಓದುವುದು ಕಷ್ಟ. ಇದು ಕಾದಂಬರಿಯ  ಮತ್ತು ಓದುಗಳ/ನ ಸೈದ್ಧಾಂತಿಕ ನಿಲುವಿನ ವೈರುಧ್ಯದ ಪ್ರಶ್ನೆ ಅಲ್ಲ.  ನಮ್ಮ ಸ್ತ್ರೀವಾದಿ, ಪುರುಷವಾದಿ, ಮೂರನೇ ಲಿಂಗವಾದಿ ನಿಲುವುಗಳು ಏನೇ ಇರಬಹುದು. ಕನಿಷ್ಟ ಕಾದಂಬರಿ ಓದಿಸಿಕೊಂಡು ಹೋಗಬೇಕಲ್ಲವಾ? ಇವರ ಹೊಸ ಕಾದಂಬರಿ ಯಾವ ರೀತಿಯ ಬೋರಂದರೆ ನಾನು ಹತ್ತನೆ ಕ್ಲಾಸು ಪರೀಕ್ಷೆ ಮುಗಿದ ನಂತರ ತುಂಬ ಇಷ್ಟ ಪಟ್ಟು ಓದಿದ “ಪರ್ವ”, “ವಂಶ ವೃಕ್ಷ” ಕಾದಂಬರಿಗಳ ಲೇಖಕರು ಇವರೇ ಅಂತ ಒಮ್ಮೊಮ್ಮೆ ನಂಬಲಿಕ್ಕೂ ಕಷ್ಟ. ಈ ಕಾದಂಬರಿಗಳ ಬಗ್ಗೆ ದೊಡ್ಡ ದೊಡ್ಡ ವಿಮರ್ಷಕರ ಅನುಮಾನಗಳೇನೇ ಇರಲಿ, ನನಗಂತೂ ಇವುಗಳು ಹಿಡಿದು ಓದಿಸಿಕೊಂಡು ಹೋದ ಕಾದಂಬರಿಗಳು.

ಆದರೆ “ಕವಲು”ವಿನ ಕತೆಯೇ ಬೇರೆ. ಈ ಕಾದಂಬರಿಯೇ ಅಲ್ಲದ ಕಾದಂಬರಿಯನ್ನು ಓದಬೇಕಾದರೆ ಒಂದೋ ಇಷ್ಟು ಸುದ್ದಿ ಆಗಿದೆಯಲ್ಲ ಇದರಲ್ಲಿ ಅಂಥಾದೇನಿದೆ ಅಂತ ಕಂಡುಹಿಡಿಯಲೇಬೇಕು ಅಂತ ಪಟ್ಟು ಹಿಡಿದು ಹಿಗ್ಗದೆಯೆ, ಕುಗ್ಗದೆಯೆ ನುಗ್ಗಿ ಓದುವ ಛಲ ಇರಬೇಕು ಅಥವಾ ಈ ಕಾದಂಬರಿಯ ಗಂಡು ಪಾತ್ರಗಳಷ್ಟೇ ನಮಗೂ ಗಿಡ್ಡ ಕೂದಲಿನ, ಬೋಳು ಹಣೆಯ, ಆಧುನಿಕ ಶಿಕ್ಷಣದಿಂದ ಕೆಟ್ಟು ಕುಲಟೆಯರಾದ ಹೆಂಗಸರ ಬಗ್ಗೆ ದ್ವೇಷ ಇರಬೇಕು ಅಥವಾ ನಿಜ ಸಂತರ ನಿರ್ಲಿಪ್ತತೆ ಇರಬೇಕು. ಭೈರಪ್ಪನವರ  ದೇಶವಿದೇಶದ ಜನಪ್ರಿಯತೆ ನೋಡಿದರೆ (ಪುಸ್ತಕದ ಬೆಲೆ ರೂಪಾಯಿ ಮತ್ತು ಡಾಲರ್ರುಗಳೆರಡಲ್ಲೂ ಮುದ್ರಿಸಿದ ಬೇರೆ ಯಾವ ಕನ್ನಡ ಪುಸ್ತಕ ನೋಡಿದ್ದೀರಿ?), ನಮ್ಮಲ್ಲಿ ಈ ಮೂರು ರೀತಿಯ ಜನ ಧಂಡಿಯಾಗಿ ಇರಬಹುದೇನೋ ಅಂತ ಅನುಮಾನ ಬರುತ್ತದೆ. ಮೋಸ ಅಂದರೆ ಪಾಪದ ಏಕ್ತಾ ಕಪೂರಳಿಗೆ ಸಾಹಿತ್ಯ-ಸಂಸ್ಕೃತಿ ಇತ್ಯಾದಿ high culture  paradigm ಒಳಗೆ ಪ್ರಚಾರ ದೊರೆಯುವುದೇ ಇಲ್ಲ. ಆದರೆ ಭೈರಪ್ಪನವರನ್ನು, “ಕವಲು” ಕಾದಂಬರಿಯನ್ನು ಬೈಯ್ಯುವವರೂ ಕೂಡ ತುಂಬಾ ಬುದ್ಧಿ ಖರ್ಚು ಮಾಡಿ, ವಿಮರ್ಷೆಯ ಪರಿಭಾಷೆಯನ್ನು ಪೋಲು ಮಾಡಿ ಬೈಯ್ಯುತ್ತಾರೆ! ಯಾಕೆ ಈ ತಾರತಮ್ಯವೋ ಗೊತ್ತಿಲ್ಲ.

ವಿಮರ್ಷೆ ಮಾಡುವುದಿಲ್ಲ ಅಂತ ಭಾಷೆ ಕೊಟ್ಟವಳು ಮತ್ತೆ ನಾನೂ ಅದೇ ಜಾಡು ಹಿಡೀತಾ ಇದ್ದೀನಿ ಅಲ್ಲವಾ?

ಬೇಡ ಬಿಡಿ.

ಇದನ್ನು ಇಲ್ಲಿಗೇ ಬಿಟ್ಟು, ಸುಮ್ಮನೆ ತಮಾಷೆಗೆ ನಾನು ಹೇಗೆ ಓದಲಾರದ “ಕವಲು” ಕಾದಂಬರಿಯನ್ನು ಓದಿ ಮುಗಿಸಿದೆ ಅಂತ ಮಾತ್ರ ಹೇಳ್ತೀನಿ. ಈ ಪುಸ್ತಕದಲ್ಲಿ ಸಿಕ್ಕಾಪಟ್ಟೆ ಕುಂಕುಮ ಇಡದ ಬೋಳು ಹಣೆಯ ಹೆಂಗಸರ ಪ್ರಸ್ತಾಪ ಬರುವುದು ಸರಿಯಷ್ಟೇ? ನಾನು ಪ್ರತಿ ಸಲ ಹಣೆ ಮತ್ತು ಕುಂಕುಮಗಳ ಪ್ರಸ್ತಾಪ ಬಂದಾಗ ಒಂದು ಕಡೆ ಗುರುತು ಹಾಕಿಕೊಳ್ಳುತ್ತಾ ಹೋಗಿ ಕೊನೆಯವರೆಗೆ ಎಷ್ಟಾಗಬಹುದು ಅಂತ ಏಣಿಸಲಿಕ್ಕೆ ಶುರು ಮಾಡಿದೆ. ಹೀಗೆ ನಾನೇ ಕಟ್ಟಿಕೊಂಡ ಆಟ ಪುಸ್ತಕಕ್ಕೆ ಒಂದು page-turner ಗುಣವನ್ನು ತಂದುಕೊಟ್ಟುಬಿಟ್ಟಿತು. ಐದಾರು ಪೇಜಾದರೂ  ಇನ್ನೂ ಮತ್ತೊಂದು ಹಣೆಯ ಪ್ರಸ್ತಾಪ ಬರದೆ ಹೋದಾಗ “ಅಯ್ಯೋ ಇನ್ನೂ ಇಲ್ಲವಾ?” ಅಂತ ತುಂಬಾ ನಿರಾಶೆ, ಚಡಪಡಿಕೆ ಕೂಡ ಆಗಲಿಕ್ಕೆ ಶುರುವಾಯಿತು. ಬೋಳು ಅಂತಷ್ಟೇ ಹೇಳಿ ಅಲ್ಲಿಗೆ ಬಿಡ್ತಾರಾ, ವೈಧವ್ಯದ ಕಳೆ ಅಂತಾರಾ, ಸಾಬರ ಹೆಂಗಸರ ಹಾಗೆ ಅಂತಾರಾ, ಅಪ್ಪಿತಪ್ಪಿ ಯಾವುದಾದರೂ ಕುಂಕುಮ ಇಡುವ ಕೆಟ್ಟ ಹೆಂಗಸರೂ ಸಿಗಬಹುದಾ… ಹೀಗೆ ಕತೆಯಲ್ಲಿಲ್ಲ ಕುತೂಹಲವನ್ನು ಈ ನನ್ನ ಹಣೆಯ ಹುಡುಕಾಟ ನನಗೆ ತಂದುಕೊಟ್ಟಿತ್ತು. ಗುರುತು ಹಾಕಿಕೊಂಡ ಹಾಳೆ ಎಲ್ಲೋ ಹಾಕಿಬಿಟ್ಟಿದ್ದೇನೆ ಆದ್ದರಿಂದ ಯಾವ ಯಾವ ಪೇಜಿನಲ್ಲಿ ಅಂತ ಹೇಳಲಿಕ್ಕೆ ಆಗುತ್ತಿಲ್ಲ (ಹುಡುಕಿ ಮತ್ತೆ ಆ ಪಟ್ಟಿ ಕೊಡುತ್ತೇನೆ). ಆದರೆ ನನಗೆ ನೆನಪಿದ್ದ ಹಾಗೆ ೨೯ ಕುಂಕುಮ ಮತ್ತು ಹಣೆಯ ಪ್ರಸ್ತಾಪಗಳು ಪುಸ್ತಕದಲ್ಲಿ ನನಗೆ ಸಿಕ್ಕವು. ಅಂದರೆ ಸರಾಸರಿ ಹತ್ತು ಪೇಜಿಗೆ ಒಮ್ಮೆ. ಭೈರಪ್ಪನವರು ಹೆಂಗಸರ ಹಣೆ, ಕೂದಲಿನ ಉದ್ದದ ಬಗ್ಗೆ ಇಷ್ಟೊಂದು ತಲೆ ಯಾಕೆ ಕೆಡಿಸಿಕೊಂಡಿದ್ದಾರೆ ಪಾಪ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ನನ್ನ ಎಣಿಕೆಯ ಆಟದ ದೆಸಿಯಿಂದ ನಾನಗೆ ಕಾದಂಬರಿ ಓದಿ ಮುಗಿಸಲಿಕ್ಕೆ motivation ಅಂತೂ ಸಿಕ್ಕಿತು.

ಓದುಗರಿಗೆ ಲೇಖರ ಹಂಗು ಇರಬೇಕಿಲ್ಲ ಅಂತ ದೊಡ್ಡ ವಿಮರ್ಷಕರು ಹೇಳಿದ್ದಾರಲ್ಲವಾ? ಆ ಥಿಯರಿಯೂ ಇಂಥದೇ ಯಾವುದೋ ಓದಿನ ಆಟದಲ್ಲಿ ಹುಟ್ಟಿರಬಹುದು!

Postscript: ನನ್ನ ಮೇಲೆ ತುಸು ಕೋಪ ಮಾಡಿಕೊಂಡ ಹಾಗೆ ಕಾಣುವ (despite the smileys!) ಆನಂದ ಅವರಲ್ಲಿ ಕ್ಷಮೆ ಯಾಚಿಸುತ್ತಾ, ತುಂಡು ಕೂದಲಿನ ಆಧುನಿಕ ಸ್ತ್ರೀಯಾದ ನಾನು ಮೊದಲು promise ಮಾಡಿದ ಹಾಗೆ ಕುಂಕುಮ-ಹಣೆ ಪ್ರಸ್ತಾಪ ಬರುವ ಪುಟಗಳ ಪಟ್ಟಿ ಕೊಡುತ್ತಿದ್ದೇನೆ: ೨೨, ೩೬, ೪೦, ೪೨, ೪೪, ೪೭, ೬೪, ೭೦, ೭೧, ೧೦೩, ೧೦೪, ೧೦೭, ೧೨೮, ೧೩೧, ೧೩೨, ೧೩೫, ೧೬೦, ೧೬೮, ೨೦೪, ೨೨೪, ೨೨೭, ೨೩೮, ೨೪೦, ೨೫೬, ೨೬೨, (೨೬೦-೨೭೦ ನಡುವೆ ಇನ್ನೊಂದು ಪ್ರಸ್ತಾಪ ಇದೆ, ಆದರೆ ಆ ಪೇಜ್ ನಂಬರ್ ನಾನು ಮಾಡಿಕೊಂಡ ಪೆನ್ಸಿಲ್ ನೋಟಿನಲ್ಲಿ ಮಸುಕಾಗಿಬಿಟ್ಟಿದೆ. ಒಟ್ಟು ಲೆಕ್ಕ ೨೬, ೨೯ ಅಲ್ಲ. Sorry! ೨೯೫ ನೇ ಪುಟದಲ್ಲಿ ಜಯಕುಮಾರನ ಮಗಳ ಸೀಮಂತದ ವಿವರಣೆಯಲ್ಲಿ ಅವಳ  ಸೀರೆ, ಹೂವು ಮುಡಿದ ಜಡೆ ಎಲ್ಲದರ ವಿವರವಿದೆಯೇ ಹೊರತು ಕುಂಕುಮದ ಬಗ್ಗೆ ಪ್ರಸ್ತಾಪ ಇಲ್ಲ. How disappointing!

ರೂಟ್ ಬಸ್ಸಿನಲ್ಲಿ ಕ್ಲಾಸು ಮಾಡುತ್ತಿದ್ದ ಕೀರಂ
ಕೀರಂ ಶಿಷ್ಯ ಕೋಟಿಯಲ್ಲಿ ನಾನೂ ಒಬ್ಬಳು ಅಂತ ಹೇಳಿಕೊಳ್ಳುವುದು “ರಾಜ್ ಕುಮಾರ್ ಚಿಕ್ಕಪ್ಪ ನಮ್ಮ ಅತ್ತೆಯ ಪಕ್ಕದ ಮನೆಯಲ್ಲಿ ಇದ್ದರು” ಅಂತ ಯಾವುದೋ ಬಾದರಾಯಣ ಸಂಬಂಧ ಹೇಳಿ ನಮ್ಮ ಕಲ್ಪನೆಯ ಕಿರೀಟಕ್ಕೆ ನಾವೇ ಒಂದು ನವಿಲು ಗರಿ ಸಿಕ್ಕಿಸಿಕೊಂಡ ಹಾಗೆಯೇ.  ಕೀರಂ ಯಾರಿಗೆ ಗುರು ಅಲ್ಲ ಹೇಳಿ. ಅವರ ಕ್ಲಾಸಿನಲ್ಲಿ ಕೂತು ಪಾಠ ಕೇಳದ ಅನೇಕರಿಗೆ ಇನ್ಯಾವುದೋ ಪರೋಕ್ಷ ರೀತಿಯಲ್ಲಿ ಇವರು ಪಾಠ ಹೇಳಿದವರೇ. ಕೀರಂ ಸಾವಿನ ಸುದ್ದಿ ಕೇಳಿದಾಗ ನನಗೆ ಅನ್ನಿಸಿದ್ದು ನಾನು ಎಷ್ಟೇ ಬಾದರಾಯಣ ಸಂಬಂಧ ಹುಡುಕಿಕೊಂಡು ಶಿಷ್ಯತ್ವವನ್ನು ಆರೋಪಿಸಿಕೊಂಡರೂ ಅವರಿಂದ ನಿಜವಾದ ಅರ್ಥದಲ್ಲಿ ಏನೂ ಕಲಿಯಲಿಲ್ಲವಲ್ಲ ಅಂತ. ನಾನು ಹೇಳುತ್ತಿರುವುದು ಅವರ ಪಂಪನಿಂದ ಹಿಡಿದು ಪೋಸ್ಟ್ ಮಾಡರ್ನಿಸಂವರೆಗಿನ ಪಾಂಡಿತ್ಯದ ಬಗ್ಗೆಯಷ್ಟೆ ಅಲ್ಲ, ಅವರ ವಿಶಿಷ್ಟ ಸಹಜತೆಯ ಬಗ್ಗೆ ಕೂಡ.

ಅವರನ್ನು ಮೊದಲು ನಾನು ಮತ್ತು ನನ್ನ ಗೆಳತಿ ರೇಖ ಕಂಡಿದ್ದು ಬೆಂಗಳೂರು ಯೂನಿವರ್ಸಿಟಿಯ ಕ್ಯಾಂಪಸ್ಸಿನಲ್ಲಿ. ಆಗ ನಮಗೆ ಕೆದರಿದ ತಲೆ, ಮುದುರಿದ ಖಾದಿ ಜುಬ್ಬ ಮತ್ತು ಹೆಗಲಲ್ಲಿ ಜೋಳಿಗೆ ಇರುವವರ ಬಗ್ಗೆಯೆಲ್ಲಾ ತುಂಬಾ ಅನುಮಾನ.  ಈ ರೀತಿಯ ವೇಷಧಾರಿಗಳೆಲ್ಲಾ ತಾನು intellectual ಅಂತ ಜಗಜ್ಜಾಹೀರು ಮಾಡಲಿಕ್ಕೆಯೇ ಹೊರಟಿರುತ್ತಾರೆ ಅಂತ. ನಮ್ಮ ಸುತ್ತ ಮುತ್ತ ಇದ್ದ ಅನೇಕರು ಈ ಥರದವರು. ಆದ್ದರಿಂದ ಮೊದಲು ನಾವು ಕೀರಂ ಅವರನ್ನು ನೋಡಿದಾಗ ಅವರನ್ನೂ ಇದೇ ಗುಂಪಿಗೆ ಸೇರಿಸಿಬಿಟ್ಟಿದ್ವಿ. ಕನ್ನಡ ಡಿಪಾರ್ಟುಮೆಂಟಿನ ನಾರಾಯಣಸ್ವಾಮಿ ಮತ್ತು ರಾಮಲಿಂಗಪ್ಪ ”ಪೆದ್ದಂಭಟ್ಟಿಯರೇ, ಇವರು ಹಾಗಲ್ಲ” ಅಂತ ಬುದ್ಧಿ ಹೇಳಿದ ನಂತರವೇ ನಾವು ಇವರು ಸಾಹಿತ್ಯಲೋಕದ ಸ್ಟಾರ್ ಅಂತ  starry-eyed ಆಗಿ ನೋಡಲಿಕ್ಕೆ ಶುರು ಮಾಡಿದ್ದು.

ನಮಗೆ ಇವರನ್ನು ಕನ್ನಡ ಡಿಪಾರ್ಟುಮೆಂಟಿನ ಹುಡುಗರು ದಯೆ ತೋರಿ ಪರಿಚಯಿಸಿದರೋ ನಾವೇ ಪರಿಚಯ ಮಾಡಿಕೊಂಡೆವೋ ನೆನಪಿಲ್ಲ. ಆದರೆ ನಮ್ಮ ರೂಟ್ ಬಸ್ಸಿನಲ್ಲಿ ಅನೇಕ ಬಾರಿ ಬರುತ್ತಿದ್ದ ಇವರ ಪಕ್ಕ ಏನಾದರೂ ಜಾಗ ಸಿಕ್ಕಿದರೆ ಒಳ್ಳೆ ಕ್ಲಾಸೇ ನಡೆಯುತ್ತಿತ್ತು. ಅವರ ಧಾಟಿ ಯಾವತ್ತೂ ಯಾರೋ ತಮ್ಮಷ್ಟೇ ಪಂಡಿತರ ಜೊತೆ ಮಾತಾಡಿದ ಹಾಗೆ. ಒಂದು ದಿನ ”ನೀವು ಗಾಯಿತ್ರಿ ಸ್ಪಿವಾಕ್ ಓದಿದೀರಾ?” ಅಂತ ಅವರಂದರೆ ನಾವು  ಕಣ್ ಕಣ್ ಬಿಟ್ಟು “ಇಲ್ಲ ಸಾರ್” ಅಂದಿದ್ದೆವು. “ಓದಬೇಕ್ರಿ ತುಂಬಾ ಚೆನ್ನಾಗಿ ಬರೀತಾರೆ” ಅಂದಿದ್ದರು. ನಾವು ಕಷ್ಟಪಟ್ಟು ಸಂಪಾದಿಸಿಕೊಂಡು ಓದಿದರೆ ಸುತರಾಂ ಒಂದಕ್ಷರವೂ ತಲೆ ಒಳಗೆ ಇಳಿದಿರಲಿಲ್ಲ ಅನ್ನೋದು ಬೇರೆ ಮಾತು. ಹೀಗೆ ನಮ್ಮದೇ ಡಿಪಾರ್ಟುಮೆಂಟಿನ ಟೀಚರ್ರುಗಳಿಗಿಂತ ಹೆಚ್ಚು ಹೊಸ ಪುಸ್ತಕಗಳ, ಲೇಖಕರ ಹೆಸರುಗಳನ್ನು ನಾವು ಕೀರಂ ಬಾಯಿಂದ ಆ ದಿನಗಳಲ್ಲಿ ಕೇಳಿದ್ವಿ.

ಈ ಲೆಕ್ಚರ್ರುಗಳಿಂದ ನಾವು ಎಷ್ಟು ಕಲಿತೆವೋ ಬಿಟ್ಟೆವೋ. ಆದರೆ ಎರಡು ಮುಖ್ಯ ಪಾಠಗಳನ್ನಂತೂ ಕಲಿತೆವು: ಮೊದಲನೆಯದಾಗಿ, ಕೃತಕತೆಯೇ ಇಲ್ಲದೆ ತಮ್ಮಂತೆ ತಾವು ಅನ್ನುವ ಸಹಜ ಭಾವದ ಮಂದಿ ಬುದ್ಧಿಜೀವಿಗಳ ನಡುವೆಯೂ ಇರಲಿಕ್ಕೆ ಸಾಧ್ಯ; ಎರಡನೆಯದಾಗಿ, ಕಾವ್ಯದ ಓರೆಕೋರೆ ಉಬ್ಬುತಗ್ಗುಗಳನ್ನೆಲ್ಲಾ  ದುರ್ಬೀನು ಹಿಡಿದು ವಿಮರ್ಷೆ ಮಾಡುವುದೆಂದರೆ ಕಾವ್ಯವನ್ನು ಖುಷಿ ಉಲ್ಲಾಸದೊಂದಿಗೆ ಓದುವುದನ್ನು ಮರೆತುಬಿಡುವುದೆಂದೇನೂ ಅಲ್ಲ. ಕೆದರಿದ ತಲೆ, ಮುದುರಿದ ಖಾದಿ ಜುಬ್ಬ, ಅಗಲ ನಗು, ಸ್ವಲ್ಪ ಒಡಕಲು ದನಿ, ಕಾವ್ಯ ಪ್ರೀತಿ, ಯಾವುದೇ ಮಾತು ಅಥವಾ ಬರಹದಲ್ಲಿ ಉಡಾಫೆ ಗುಣ ಇದೆ ಅನ್ನಿಸಿದಾಗ  ಸಟ್ಟನೆ ಬರುತ್ತಿದ್ದ ಕೋಪ… ಹೀಗೆ ಕೀರಂನಲ್ಲಿ ಯಾವುದೂ put on ಅಂತಲೋ stereotypical ಅಂತಲೋ ಯಾವತ್ತೂ ಅನ್ನಿಸಿದ್ದಿಲ್ಲ.

ಮತ್ತೆ ಅವರನ್ನು ನೋಡ್ತಾ ಇದ್ದದ್ದು ಸಭೆ ಸಮಾರಂಭಗಳಲ್ಲಿ (ಬೋರು ಹೊಡೆಸದೆ ಭಾಷಣ ಮಾಡುವ ಕಲೆ ಅರಿತ ಕೆಲವೇ ಭಾಷಣಕಾರರಲ್ಲಿ ಕೀರಂ ಒಬ್ಬರು, ಅಲ್ಲವಾ?), typical ಪತ್ರಕರ್ತೆಯಾಗಿ ಬರೆದ Storyಗೆ quoteಗಳನ್ನು ಹುಡುಕಿಕೊಂಡು ಹೊರಟಾಗ. ಬಸವನಗುಡಿಯ ಬಗ್ಗೆ ಅರ್ಜೆಂಟ್ ಆಗಿ ಏನೋ ಕಥೆ ಹೊಸೆಯುತ್ತಿರುವಾಗ ಅವರನ್ನು ಮಾತಾಡಿಸಿದ್ದೆ. ಹಳೆಯ ಬಸವನಗುಡಿ ನೋಡಬೇಕು ಅಂದರೆ ಬೆಳಗ್ಗೆ ೫ ರಿಂದ ೭ ರ ಒಳಗೆ ಗಾಂಧಿಬಜಾರಿಗೆ ಬರಬೇಕ್ರಿ ಅಂತ ಹೇಳಿ ಒಂದಷ್ಟು ಹಳೆ ಕತೆಗಳನ್ನು ಬಿಚ್ಚಿಟ್ಟಿದ್ದರು. ಬೆಂಗಳೂರಿನ ಏರಿಯಾಗಳ ಬಗ್ಗೆಯೂ ಸ್ಥಳಪುರಾಣಗಳನ್ನು ಬರೆಯಬೇಕಲ್ಲವಾ ಅಂದಿದ್ದರು. (ಕೀರಂ ಮತ್ತು ಸ್ಥಳ ಪುರಾಣದ ಬಗ್ಗೆ ರಶೀದ್ ತುಂಬಾ ಚೆಂದ ಬರೆದಿದ್ದಾರೆ: http://avadhi.wordpress.com/2010/08/07/%e0%b2%95%e0%b2%bf-%e0%b2%b0%e0%b2%82-%e0%b2%a8%e0%b2%be%e0%b2%97%e0%b2%b0%e0%b2%be%e0%b2%9c%e0%b3%8d-%e0%b2%8e%e0%b2%82%e0%b2%ac-%e0%b2%97%e0%b2%be%e0%b2%b0%e0%b3%81%e0%b2%a1%e0%b2%bf%e0%b2%97/)  ಮೌಕಿಕ ಪರಂಪರೆಯಲ್ಲಿ ಸಂಪೂರ್ಣ ಸಂಬಿಕೆ ಇರುವ ಕೀರಂ ಇದನ್ನೆಲ್ಲಾ ಬರೆಯುವ ಸಾಧ್ಯತೆಗಳು ಕಡಿಮೆ ಅಂತ ನಾನು, “ಸಾರ್, ನೀವು ಹೇಳಿ ನಾನು ಬರೆದುಕೊಳ್ಳುತ್ತೀನಿ” ಅಂದಿದ್ದೆ. ತಮ್ಮ ಎಂದಿನ generosity ತೋರಿಸಿ ನಕ್ಕು “ಬನ್ನಿ, ಬನ್ನಿ ಮಾತಾಡೋಣ” ಅಂದಿದ್ದರು. Story ಯಿಂದ story ಗೆ ಹಾರುವ ನನ್ನ ಕ್ಷಣಿಕ ಲೊಳಲೊಟ್ಟೆಯ ಲೋಕದಲ್ಲಿ ಈ ಮಾತೆಲ್ಲ ಮರೆತೇ ಹೋಗಿತ್ತು. ಮೊನ್ನೆ ಅಕ್ಷತಾ ಬ್ಲಾಗಿನಲ್ಲಿ ಕೀರಂ ಲಿಪಿಕಾರಳಾಗಬೇಕು ತನಗೆ ಅಂತ ಆಸೆ ಬರೆದಿದ್ದು ಓದಿ (http://avadhi.wordpress.com/2010/08/07/%e0%b2%95%e0%b2%bf%e0%b2%b0%e0%b2%82-%e0%b2%b8%e0%b2%b0%e0%b3%8d-%e0%b2%a8%e0%b2%bf%e0%b2%ae%e0%b2%97%e0%b3%8a%e0%b2%82%e0%b2%a6%e0%b3%81-%e0%b2%aa%e0%b2%a4%e0%b3%8d%e0%b2%b0/) ಈ ಚುರುಕು ಹುಡುಗಿ ಮಾಡಿಯೇ ಬಿಡುತ್ತಾಳೆ ಅಂತ ಸ್ವಲ್ಪ ಹೊಟ್ಟೆಕಿಚ್ಚೇ ಆಗಿತ್ತು.

ಇನ್ನೊಂದು ಸಾರಿ ಒಂದನೆ ತರಗತಿಯಲ್ಲಿ ಮಕ್ಕಳಿಗೆ ಇಂಗ್ಲಿಷ್ ಕಲಿಸಬೇಕಾ ಅನ್ನುವ ಪ್ರಶ್ನೆ ಬಂದಾಗಲೂ ಮಾಮೂಲಿನಂತೆ ಅವರ quote ಕೇಳಿ ಫೋನ್ ಮಾಡಿದ್ದೆ. ಕನ್ನಡ ಮೇಷ್ಟ್ರು ಅಂದರೆ ಇದಕ್ಕೆ ವಿರೋಧವೇ ಇರಬಹುದು ಎನ್ನುವ ಲೆಕ್ಕಾಚಾರಕ್ಕೆ ವಿರುದ್ಧವಾಗಿ, ಭಾಷಾ ಕಲಿಕೆಯ ಹಿಂದಿನ ರಾಜಕೀಯದ ಬಗ್ಗೆ ಮಾತಾಡಿ, ಇಂಗ್ಲೀಷ್ ಕಲಿಕೆಯನ್ನು ಬೆಂಬಲಿಸಿದ್ದರು.  ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಕೀರಂ ರಾಜಕೀಯದ ಬಗ್ಗೆ ಮಾತಾಡುತ್ತಿದ್ದರು. ಇಂದಿನ ಪ್ರಜಾವಾಣಿಯ ಲೇಖನದಲ್ಲಿ ಎಸ್. ಆರ್. ವಿಜಯ ಶಂಕರ್ ಕೀರಂ ಅವರು ಉಡುಪಿಯ ಭಾಷಣದಲ್ಲಿ ರಾಜಕೀಯ ಮತ್ತು ಸಾಹಿತ್ಯದ ಸಂಬಂಧದ ಬಗ್ಗೆ ಆಡಿದ ಮಾತಿನ ಪ್ರಸ್ತಾಪ ಮಾಡಿದ್ದಾರೆ. ಮಾತು ಭಾಷೆಯ ರಾಜಕೀಯದಿಂದ ಹಿಡಿದು ತಮ್ಮ ನೆಚ್ಚೆನ ಕವಿ ಬೇಂದ್ರೆಯವರೆಗೆ ಏನೇ ಇರಬಹುದು. ಒಟ್ಟಾರೆ ಯಾವತ್ತೂ ಕೀರಂ ಹೃದಯದಾಳದಿಂದ ಹುಟ್ಟುವ genuine passion ಇಲ್ಲದೆ, ಸುಮ್ಮನೆ effectಗೆ ಇರಲಿ ಅಂತ ಮಾತಾಡಿದ್ದೇ ಇಲ್ಲವೇನೋ.

ಕೊನೆಯಲ್ಲಿ ಬೇಂದ್ರೆಯ ಬಗ್ಗೆ ನಿರರ್ಗಳ ಮಾತಾಡಿ, ಕಾವ್ಯದ ಥೆರಪಿಟಿಕ್ ಗುಣದ ಬಗ್ಗೆ ಹೇಳಿ ಮನೆಗೆ ಹೋದವರು ಮತ್ತೆ ಸುಮ್ಮನೆ ಇಲ್ಲವಾದದ್ದೂ ಕೂಡ ಎಷ್ಟು ಸಹಜ “ಕೀರಂತನ” ಅನ್ನಿಸುವುದಿಲ್ಲವಾ? ಈ ರೀತಿ ಸಹಜತೆಯೇ ಸ್ಥಾಯಿಭಾವವಾದ ಎಷ್ಟು ಮಂದಿ ನಮ್ಮ ಜೀವನದಲ್ಲಿ ನಮಗೆ ಸಿಕ್ಕಿಯಾರು?

ಗೀತೆಯ ಬಗ್ಗೆ ಸುಮ್ಮನೆ ಹೀಗೇ ಮಾತಿಗೆ
ಜಾಸ್ತಿ ತಿಳಿದುಕೊಳ್ಳದ ವಿಷಯದ ಬಗ್ಗೆ ಮಾತಾಡೋದು ಸರಿ ಅಲ್ಲ ಅನ್ನುವುದು ಸಾಮಾನ್ಯ ಜ್ನಾನ. ಅದರಲ್ಲೂ  ಧರ್ಮಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮಾತಾಡೋದಂದರೆ ಒಂಥರ ನಾಚಿಕೆ ಮುಳ್ಳನ್ನು ಮುಟ್ಟವುದಕ್ಕೆ ಹೋದ ಹಾಗೆ. ನಮ್ಮ ಈಗಿನ ಪರಿಸರದಲ್ಲಿ ‘ಧ’ ಅಂತ ಬಾಯಿ ಬಿಟ್ಟು ‘ರ್ಮ’ ಅಂತ ಬಾಯಿ ಮುಚ್ಚುವ ಒಳಗಾಗಿ ಮುಳ್ಳು ಚುಚ್ಚುವುದಷ್ಟೇ ಅಲ್ಲ, ಠಕ್ಕನೆ ಎಲೆಗಳೆಲ್ಲಾ ಮುಚ್ಚಿ ಹೋಗಿ ಮಾತಾಡುತ್ತಿದ್ದ ವಿಷಯದ ಸ್ವರೂಪವೇ ಕಾಣದ ಹಾಗೆ ಆಗಿಬಿಡುತ್ತದೆ.  ಅದರಲ್ಲೂ ಭಗವದ್ಗೀತೆಯಂತಹ ಪಠ್ಯದ ಬಗ್ಗೆ ಹೇಳಲಿಕ್ಕೆ ಹೊಸತು  ಅಂತ ಏನಿದ್ದೀತು? ನೂರಾರು ಅನುವಾದಗಳಿಗೆ, ತರಾವರಿ ಭಾಷ್ಯಗಳಿಗೆ, ಒಂದಕ್ಕೊಂದು ವಿರೋಧಿಯಾದ ಪಂಥಗಳಲ್ಲಿ ಭಕ್ತಿಗೆ, ನಂಬಿಕೆಯ ಚೌಕಟ್ಟಿನ ಒಳಗೂ ಅದರ ಆಚೆಗೂ ಬಿಸಿಬಿಸಿ ಚರ್ಚೆ-ಜಗಳಗಳಿಗೆ ಮೂಲವಾಗಿರುವ, ಆ ಕಾಲದ ಶಂಕರರಿಂದ ಹಿಡಿದು ಈ ಕಾಲದ ಗಾಂಧಿ, ತಿಲಕ್, ರಾಜಾಜಿಯವರೆಗೆ ಎಷ್ಟಷ್ಟೊಂದು ಜನರು ತುಂಬಾ ತಲೆಕೆಡಿಸಿಕೊಂಡು ಅವರವರ ಭಾವಕ್ಕೆ ಭಕುತಿಕೆ ತಕ್ಕನಾಗಿ ಒಗ್ಗಿಸಿಕೊಂಡ ಗ್ರಂಥ ಅಲ್ಲವಾ ಅದು? ಹೊಸತು ಹೇಳಲೇಬೇಕೆಂದು ಛಲ ಇದ್ದರೆ ಹಳೆಯದ್ದನ್ನೆಲ್ಲಾ ಒಟ್ಟು ಹಾಕಿಕೊಂಡು ಹತ್ತು ವರ್ಷ ಓದಬೇಕಾದೀತು.

ಆದರೆ ಆಸಕ್ತಿ ಕೆರಳಿಸುವ ವಿಷಯ ಕಣ್ಣಿಗೆ ಕಾಣಿಸಿದಾಗ ಬರೆಯದೆ ಇರುವುದಾದರೂ ಹೇಗೆ ಹೇಳಿ. ಅದೂ ಒಂಥರಾ itch. ಈಗ ನನಗೆ itch ಹತ್ತಿಸಿರುವುದು ಇಸ್ಕಾನ್ ಸಂಸ್ಥೆಯ ಪ್ರಕಟಣೆಯಾದ “ಭಗವದ್ಗೀತಾ ಯಥಾರೂಪ” ಪುಸ್ತಕದಲ್ಲಿ ಗೀತೆಯ ಮೂಲ ಶ್ಲೋಕಗಳ ಭಾವಾರ್ಥವನ್ನು ವಿವರಿಸುತ್ತಾ ಹೇಳುವ ಕೆಲವು ಸಾಲುಗಳು:

“…ನಡತೆಯ ವಿಷಯ ಹೇಳುವುದಾದರೆ ಮನುಷ್ಯನ ನಡತೆಗೆ ಮಾರ್ಗದರ್ಶನ ಮಾಡುವ ಅನೇಕ ನಿಯಮ ನಿಬಂಧನೆಗಳಿವೆ. ಉದಾಹರಣೆಗೆ ಮನು ಸಂಹಿತೆಯು ಮನು ಕುಲದ ಕಾನೂನು. ಇವತ್ತಿಗೂ ಹಿಂದೂಗಳು ಮನುಸಂಹಿತೆಯನ್ನು ಅನುಸರಿಸುತ್ತಾರೆ. ಪಿತ್ರಾರ್ಜಿತ ಕಾನೂನುಗಳು ಮತ್ತು ಇತರ ಕಾನೂನು ಅಂಶಗಳು ಈ ಗ್ರಂಥದಿಂದ ಬಂದಿವೆ. ಹೆಂಗಸಿಗೆ ಸ್ವಾತಂತ್ರ್ಯವನ್ನು ಕೊಡಬಾರದೆಂದು ಮನು ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗೆಂದರೆ ಹೆಂಗಸರನ್ನು ದಾಸರಂತೆ, ಗುಲಾಮರಂತೆ ನಡೆಸಿಕೊಳ್ಳಬೇಕೆಂದಲ್ಲ. ಆದರೆ ಅವರು ಮಕ್ಕಳು ಇದ್ದಂತೆ. ಮಕ್ಕಳಿಗೆ ಸ್ವಾತಂತ್ರ್ಯವನ್ನು ಕೊಡುವುದಿಲ್ಲ, ಆದರೆ ಅವರು ಗುಲಾಮರಂತೆ ಇರುತ್ತಾರೆ ಎಂದು ಅರ್ಥವಲ್ಲ. ರಾಕ್ಷಸರು ಇಂತಹ ಆದೇಶಗಳನ್ನು ಮರೆತಿದ್ದಾರೆ. ಗಂಡಸರಿಗಿರುವಷ್ಟು ಸ್ವಾತಂತ್ರ್ಯವನ್ನು ಹೆಂಗಸರಿಗೂ ಕೊಡಬೇಕೆಂದು ಅವರು ಯೋಚಿಸುತ್ತಾರೆ. ಹಾಗಿದ್ದರೂ ಜಗತ್ತಿನ ಸಾಮಾಜಿಕ ಸ್ಥಿತಿಯನ್ನು  ಅದು ಸುಧಾರಿಸಿಲ್ಲ. ವಾಸ್ತವವಾಗಿ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಹೆಂಗಸರಿಗೆ ರಕ್ಷಣೆಯನ್ನು ಕೊಡಬೇಕು. ಚಿಕ್ಕ ವಯಸ್ಸಿನಲ್ಲಿ ಅವಳ ತಂದೆಯೂ, ಯೌವ್ವನದಲ್ಲಿ ಅವಳ ಗಂಡನೂ ಮತ್ತು ಮುಪ್ಪಿನಲ್ಲಿ ಬೆಳೆದ ಗಂಡುಮಕ್ಕಳೂ ರಕ್ಷಣೆಯನ್ನು ಕೊಡಬೇಕು. ಮನುಸಂಹಿತೆಯ ಪ್ರಕಾರ ಅದು ಯೋಗ್ಯವಾದ ಸಾಮಾಜಿಕ ನಡತೆ. ಆದರೆ ಆಧುನಿಕ ವಿದ್ಯಾಭ್ಯಾಸವು ಹೆಂಗಸಿನ ಬದುಕಿನ ಒಂದು ವಿಸ್ತರಿತ ಪರಿಕಲ್ಪನೆಯನ್ನು ಕೃತಕವಾಗಿ ಸೃಷ್ಟಿಸಿದೆ. ಇದರಿಂದ ಮಾನವ ಸಮಾಜದಲ್ಲಿ ವಾಸ್ತವವಾಗಿ ಮದುವೆಯೆಂಬುದು ಕಲ್ಪನೆಯಷ್ಟೇ ಆಗಿದೆ. ಹೆಂಗಸಿನ ನೈತಿಕ ಸ್ಥಿತಿಯೂ ಈಗ ಅಷ್ಟೇನೂ ಚೆನ್ನಾಗಿಲ್ಲ. ಹೀಗೆ ರಾಕ್ಷಸರು ಸಮಾಜಕ್ಕೆ ಒಳಿತಾಗುವ ಯಾವುದೇ ಬೋಧನೆಯನ್ನೂ ಒಪ್ಪಿಕೊಳ್ಳುವುದಿಲ್ಲ. ಅವರು ಮಹರ್ಷಿಗಳ ಅನುಭವವನ್ನು, ಋಷಿಗಳು ವಿಧಿಸಿದ ನಿಯಮ ನಿಬಂಧನೆಯನ್ನೂ ಅನುಸರಿಸದೆ ಇರುವುದರಿಂದ ರಾಕ್ಷಸೀಜನದ ಸ್ಥಿತಿಯು ಈಗ ತುಂಬ ದುಃಖಕರವಾಗಿದೆ.”  (ಅಧ್ಯಾಯ ೧೬, ಶ್ಲೋಕ  ೭ ರ ಭಾವಾರ್ಥ, ಪುಟ ೬೮೯)

ಮೆಲ್ಕಂಡ ಭಾವಾರ್ಥಕ್ಕೆ ಮೂಲ ಶ್ಲೋಕದ ಅನುವಾದ ಇಂತಿದೆ: “ಅಸುರೀ ಪ್ರಕೃತಿಯವರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಯದು. ಅವರಲ್ಲಿ ಶುಚಿತ್ವವಿಲ್ಲ, ಸನ್ನಡತೆ ಇಲ್ಲ, ಸತ್ಯವಿಲ್ಲ.”

“ರಾಜ್ಯದ ಮತ್ತು ಸಮುದಾಯದ ಸಾಮಾನ್ಯ ಆಧ್ಯಾತ್ಮಿಕ ಬೆಳವಣಿಗೆಗಾಗಿ ಒಳ್ಳೆಯ ಜನರೇ ಪ್ರಭಾವಶಾಲಿಗಳಾಗುವಂತೆ ವರ್ಣಾಶ್ರಮ ಧರ್ಮದ ತತ್ವಗಳನ್ನು ರೂಪಿಸಲಾಗಿತ್ತು. ಇಂತಹ ಜನತೆಗೆ  ಸ್ತ್ರೀಯರ ಪಾತಿವ್ರತ್ಯ ಮತ್ತು ನಿಷ್ಠೆಯೇ ಆಧಾರ. ಮಕ್ಕಳು ಹೇಗೆ ಸುಲಭವಾಗಿ ದಾರಿ ತಪ್ಪಬಹುದೋ ಹಾಗೆ ಸ್ತ್ರೀಯರೂ ಸುಲಭವಾಗಿ ಭ್ರಷ್ಟರಾಗಬಹುದು. ಆದುದರಿಂದ ಮಕ್ಕಳಿಗೂ ಸ್ತ್ರೀಯರಿಗೂ ಕುಟುಂಬದ ಹಿರಿಯರಿಂದ ರಕ್ಷಣೆಯು ಅಗತ್ಯ. ಹಲವಾರು ಧಾರ್ಮಿಕ ವಿಧಿಗಳಲ್ಲಿ ಮಗ್ನರಾದ ಸ್ತ್ರೀಯರು ದಾರಿ ತಪ್ಪಿ ವ್ಯಭಿಚಾರಕ್ಕಿಳಿಯುವುದಿಲ್ಲ. ಚಾಣಾಕ್ಯ ಪಂಡಿತರ ಪ್ರಕಾರ ಸ್ತ್ರೀಯರು ಸಮಾನ್ಯವಾಗಿ ಬಹಳ ಜಾಣರಲ್ಲವಾಗಿ ಅವರು ನಂಬಿಕೆಗೆ ಯೋಗ್ಯರಲ್ಲ. ಆದುದರಿಂದ ಧಾರ್ಮಿಕ ವಿಧಿಗಳ ಹಲವಾರು ಕೌಟುಂಬಿಕ ಸಂಪ್ರದಾಯಗಳಲ್ಲಿ ಅವರು ಸದಾ ಮಗ್ನರಾಗಿರಬೇಕು. ಅವರ ಪಾತಿವ್ರತ್ಯ ಮತ್ತು ನಿಷ್ಟೆಯಿಂದ ವರ್ಣಾಶ್ರಮ ವ್ಯವಸ್ಥೆಯಲ್ಲಿ ಭಾಗವಹಿಸಬಲ್ಲ ಜನತೆಯು ಸೃಷ್ಟಿಯಾಗುತ್ತದೆ. ಇಂತಹ ವರ್ಣಾಶ್ರಮ ಧರ್ಮವು ವಿಫಲವಾದರೆ ಸಹಜವಾಗಿ ಮಹಿಳೆಯರಿಗೆ ಪುರುಷರೊಂದಿಗೆ ಕೆಲಸ ಮಾಡಿ ಬೆರೆಯಲು ಸ್ವಾತಂತ್ರ್ಯ ದೊರೆಯುತ್ತದೆ. ಆಗ ವ್ಯಭಿಚಾರವು ಹೆಚ್ಚಿ ಅನಪೇಕ್ಷಿತ ಜನತೆ ಸೃಷ್ಟಿಯಾಗುವ ಅಪಾಯ ಉಂಟಾಗುತ್ತದೆ. ಹೊಣೆಗೇಡಿ ಪುರುಷರು ಸಮಾಜದಲ್ಲಿ ವ್ಯಭಿಚಾರವನ್ನು ಪ್ರಚೋದಿಸುತ್ತಾರೆ. ಹೀಗೆ ಅನಪೇಕ್ಷಿತ ಮಕ್ಕಳು ಮಾನವಕುಲವನ್ನು ತುಂಬಿ ಯುದ್ಧ ಮತ್ತು ಕ್ಷಾಮಗಳ ಅಪಾಯ ತಲೆದೋರುತ್ತದೆ.” (ಅಧ್ಯಾಯ ೧, ಶ್ಲೋಕ ೪೦ರ ಭಾವಾರ್ಥ, ಪುಟ ೬೧)

ಇದು ಮೂಲ ಶ್ಲೋಕ: “ಹೇ ಕೃಷ್ಣ, ಕುಟುಂಬದಲ್ಲಿ ಅಧರ್ಮವು ಪ್ರಧಾನವಾದಾಗ ಕುಲಸ್ತ್ರೀಯರು ನೀತಿಭ್ರಷ್ಟರಾಗಿ ಅನಿಷ್ಟ ಸಂತಾನ ಸೃಷ್ಟಿಯಾಗುತ್ತದೆ.”

ಇತ್ಯಾದಿ.

ಗೀತೆಯಲ್ಲಿಯೋ, ಮನು ಸ್ಮೃತಿಯಲ್ಲಿಯೋ ಹೆಂಗಸರ, ಶೂದ್ರರ, ಅಸ್ಪ್ರಶ್ಯರ ಬಗ್ಗೆ ಇರುವ ಶ್ಲೋಕಗಳನ್ನು ಉದ್ಧರಿಸಿ ನೋಡಿ ಇಲ್ಲಿ ಹೀಗಿದೆ ಅನ್ನುವುದು ಹಳೆ ಕತೆ. ಈ ಕೆಲಸವನ್ನೆಲ್ಲಾ ಆಗಲೇ ಅನೇಕರು ಮಾಡಿಯಾಗಿದೆ. ಉದಾಹರಣೆಗೆ ಇದು ಗೀತೆಯ ಬಗ್ಗೆ ಅಂಬೇಡ್ಕರ್ ಮಾತು: “I reject the Hindu social  philosophy propounded in Bhagvad Gita, based  as it is on the Triguna of  Sankhya Philosophy which in my judgement is a  cruel perversion of the  philosophy of Kapila, and which had made the  caste system of graded  inequality the law of Hindu social life.” ಇಸ್ಕಾನ್ ಲೆಕ್ಕದಲ್ಲಿ  ನೋಡುವುದಾದರೆ “ಮೋಸಗಾರ ಕಪಿಲನ ಸಾಂಖ್ಯ ಪ್ರತಿಪಾದನೆ” ಮತ್ತು “ಸರ್ವ ಶೂನ್ಯವಾದ, ಭಕ್ತಿ  ಶೂನ್ಯವಾದ ಬೌದ್ಧ ಪಂಥ”ಕ್ಕೆ ಅಂಟಿಕೊಂಡಿರುವ “ಅಮೇರಿಕದಲ್ಲಿ ಜನಪ್ರಿಯವಾಗುತ್ತಿರುವ  ಹಲವು ಹುಸಿಧರ್ಮ”ಗಳು ಮಾತ್ರವೇ ಅಲ್ಲದೆ ಗೀತೆಯ ಮಾಯಾವಾದಿ ಅರ್ಥಾತ್ ಅದ್ವೈತ  ವ್ಯಾಖ್ಯಾನಗಳೂ ಕೂಡ ಕೆಲಸಕ್ಕೆ ಬಾರದವು.

ಕಾಲಾತೀತ ಅನ್ನಿಸಿಕೊಳ್ಳುವ ಧರ್ಮಗ್ರಂಥಗಳೂ ಸೇರಿದಂತೆ, ಯಾವುದೋ ಒಂದು ಕಾಲಘಟ್ಟದಲ್ಲಿ ಸೃಷ್ಟಿಯಾದ ಪಠ್ಯಗಳಲ್ಲಿ  ಈ ಕಾಲದ ಪುರ್ವಾಗ್ರಹಗಳು ಅಡಕವಾಗಿರುವುದು ಆಶ್ಚರ್ಯ ಅಲ್ಲ. ಆದರೆ ಆಶ್ಚರ್ಯ ಅನ್ನಿಸಿವುದು ಆಧುನಿಕ ಯುಗದಲ್ಲಿ, ಆಧುನಿಕ ಪರಿಕರಗಳನ್ನೆಲ್ಲವನ್ನೂ ಬಳಸಿಕೊಂಡು ದೇಶ ವಿದೇಶಗಳಲ್ಲಿ ಗೀತಾ ಪ್ರಚಾರ ಮಾಡುವ (ಉದಾಹರಣೆಗೆ ಇಸ್ಕಾನಿನ ಇಡೀ ಗೀತಾ ಪಾಠ ನೆಟ್ ನಲ್ಲಿ ಇದೆ. ಇದು ನಾನು ಮೊದಲು ಉದ್ಧರಿಸಿದ ಭಾವಾರ್ಥದ ಇಂಗ್ಲಿಷ್ ಪಠ್ಯ: http://www.asitis.com/16/7.html), ಮಿಶಿನರಿ ಅತ್ಯುತ್ಸಾಹದಿಂದ ಗೀತೆಯನ್ನು ಮನೆಮನೆಗೆ ತಂದು, mobile ವ್ಯಾನುಗಳಲ್ಲಿ ಇಟ್ಟುಕೊಂಡು ಮಾರುವ, ಇಸ್ಕಾನ್ ಸಂಸ್ಥೆ ಈ ಥರದ ಮಾತುಗಳನ್ನು ತನ್ನ ಪುಸ್ತಕಗಳಲ್ಲಿ ಕೊಂಚವೂ ಅಳುಕಿಲ್ಲದೆ ಇದೇ ಗೀತೆಯ ಭಾವಾರ್ಥ, ಇದು ಅಂದಿಗೂ ಇಂದಿಗೂ ಎಂದೆಂದಿಗೂ ಸತ್ಯ ಎಂದು ಹೇಳುತ್ತದಲ್ಲಾ ಎಂಬುದು. ಧಾರ್ಮಿಕ ಗ್ರಂಥದಲ್ಲಿ (ಇದರಲ್ಲಿ ನಿಮಗಿಷ್ಟವಾದ ಧರ್ಮದ ನಿಮಗಿಷ್ಟವಾದ ಗ್ರಂಥದ ಹೆಸರನ್ನು ಹಾಕಿಕೊಳ್ಳಬಹುದು) ಎಂಥಾ ಆಧುನಿಕತೆ ಇದೆ ಗೊತ್ತ ಅಂತ ಹೇಳಿಕೊಳ್ಳುತ್ತಾ ಇದೇ ಆಧುನಿಕ ಮನುಷ್ಯನಿಗೆ ಸರಿ ಹೊಂದುವಂಥದ್ದು ಅನ್ನುವುದು ಈಗ ತುಂಬಾ ಕಂಡುಬರುವ ಸ್ಟೈಲು. ಆಧುನಿಕತೆ ತಂದಿರುವ ರೋಗಗಳಿಗೆಲ್ಲಾ ನಮ್ಮ ಈ ಧರ್ಮಗ್ರಂಥದಲ್ಲಿಯೇ ಔಷಧಿ ಇದೆ ಅನ್ನುವುದು ಇನ್ನೊಂದು ಸ್ಟೈಲು. ಎರಡನೆ ವರಸೆಗೆ ಹೆಚ್ಚು ಹತ್ತಿರವಾಗಿದ್ದು ಮೊದಲನೆಯ ವರಸೆಯನ್ನೂ ಅಗತ್ಯ ಬಿದ್ದಾಗ ಬಳಸಿಕೊಳ್ಳುವಂತ ಸಂಸ್ಥೆಗಳಿಗೂ ಕೊರತೆ ಇಲ್ಲ. ಇದೇ ಗುಂಪಿಗೆ ಸೇರಿದ ಇಸ್ಕಾನ್  ಸಂಸ್ಥೆಯ ಗೀತೆಯ ಅವತರಣಿಯ ಭರ್ಜರಿ ಮಾರಾಟ ಆಗುತ್ತಾ ಇದೆ. ಇಸ್ಕಾನ್ ತಂದಿರುವ ಈ ಪಠ್ಯ ಅತ್ಯಂತ ಸುಲಭಕ್ಕೆ ಸಿಗುವ ಗೀತೆಯ ಪಠ್ಯವಷ್ಟೆ ಅಲ್ಲ, ಅವರೇ ಹೇಳಿಕೊಂಡಿರುವಂತೆ ವಿಶ್ವದ ವಿವಿಧ ಭಾಷೆಗಳಲ್ಲಿ ೨ ಕೋಟಿ ಮಾರಾಟವಾಗಿದೆಯಂತೆ. ಇದರ ಕನ್ನಡ ಅವತರಣಿ ಕಳೆದ ೨೦ ವರ್ಷಗಳಲ್ಲಿ ೩೭ ಮುದ್ರಣಗಲನ್ನು ಕಂಡಿದ್ದು ನಾಲ್ಕು ಲಕ್ಷ ಮಾರಾಟವಾಗಿ ಅತಿ ಹೆಚ್ಚು ಮಾರಾಟವಾದ ಪಠ್ಯೇತರ ಪುಸ್ತಕ ಅಂತ ದಾಖಲೆ ಸ್ಥಾಪಿಸಿದೆ ಅನ್ನುವುದು ಇಸ್ಕಾನ್ ಅವರ ಹೇಳಿಕೆ. ಮಕ್ಕಳಿಗಾಗಿಯೂ ಅನೇಕ ಗೀತಾ ಪಠಣದ ಕಾಂಪಿಟೀಷನ್ನುಗಳನ್ನು, ಕಾರ್ಯಕ್ರಮಗಳನ್ನು ಇವರು ಆಗಾಗ ಹಮ್ಮಿಕೊಂಡು ಪ್ರೈಸ್ ಆಗಿ ಗೀತೆಯ ಪ್ರತಿಗಳನ್ನು ಕೊಡುತ್ತಾರೆ. ಕೊಂಡವರೆಲ್ಲರೂ ಪುಟ ೬೮೯ರ ವರೆಗೂ ಓದಿ  ಒಪ್ಪುತ್ತಾರೆಯೋ ಅಥವಾ ಸುಮ್ಮನೆ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೋ ಎಂಬುದು ಬೇರೆಯೇ ಮಾತು ಬಿಡಿ.

ಪ್ರಶ್ನಾತೀತವಾಗೆ ಯಾವುದನ್ನಾದರೂ ಸಂಪೂರ್ಣ ನಂಬಿ ನೆಚ್ಚುವವರ ಮತ್ತು ಪ್ರಶ್ನೆಗಳ ಜೊತೆಜೊತೆಗೆ ಭಕ್ತಿಯನ್ನು ಮುಚ್ಚಟೆಯಿಂದ ಕಾಪಾಡಿಕೊಳ್ಳುವ ಶಕ್ತಿ ಇರುವವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ನನ್ನಂತಹ ಸ್ಥಾಯಿಭಾವದಲ್ಲಿ ಅನುಮಾನ ಪ್ರವೃತ್ತಿಯವರಾದವರಿಗೆ (ಅ-ಧಾರ್ಮಿಕರು ಅಂತ ಬೇಕಾದರೂ ಅನ್ನಿ) ಗೀತೆ ಮೊದಲೇ ಎನೇನನ್ನೋ ಸಮನ್ವಯ ಮಾಡಲು ಹೋಗಿ ಸಿಕ್ಕಾಪಟ್ಟೆ ಕಲಸಿ ಹೋದಂತೆ, ವಿರೋಧಾಭಾಸಗಳಿಂದ ತುಂಬಿದಂತೆ ಕಾಣುವ, ನಾವೀಗಾಗಲೇ ಇರುವುದಕ್ಕಿಂತ confuse ಮಾಡಿಸುವ ಪಠ್ಯ.  ಅರ್ಜುನನಿಗೂ ನನ್ನಂತೆಯೇ confuse ಆಗಿ ಈ motivational counselling ಕೇಳಿ ಅರ್ಥ ಮಾಡಿಕೊಳ್ಳುವ ಗೋಜಿಗಿಂತ ಯುದ್ಧ ಮಾಡುವುದೇ ಸುಲಭ ಅಂತ ಬಿಲ್ಲು ಎತ್ತಿ ಹೊರಟಿರಲೂಬಹುದು ಯಾರಿಗೆ ಗೊತ್ತು? ಉದಾಹರಣೆಗೆ, ನನ್ನಲ್ಲಿ ಎಲ್ಲವೂ ಇದೆ, ಆದರೆ ಎಲ್ಲದರಲ್ಲೂ ನಾನಿಲ್ಲ, ನಾನು ಅಭಿವ್ಯಕ್ತಿಯ ಭಾಗವಲ್ಲ ಮತ್ತು ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುವವರು ಎನ್ನುವ ಕೃಷ್ಣ ಪರಮಾತ್ಮನೇ (ಅಧ್ಯಾಯ ೯) ಮತ್ತೊಂದೆಡೆ ಪ್ರತಿಯೊಂದು ಐಹಿಕ ಯಂತ್ರದ ಹೃದಯದಲ್ಲಿ ಕುಳಿತು ಎಲ್ಲಾ ಜೀವಿಗಳ ತಿರುಗಾಟವನ್ನು ನಿರ್ದೇಷಿಸುವನು ನಾನೇ ಅಂತಲೂ ಅನ್ನುತ್ತಾನೆ (ಅಧ್ಯಾಯ ೧೮). ಹದಿನೆಂಟನೆ ಅಧ್ಯಾಯದಲ್ಲಿ “ವಿಮರ್ಶಿಸಿ ನಿನ್ನ ಇಷ್ಟದಂತೆ ಮಾಡು”  ಅನ್ನುವ celebrated ಮಾತೂ ಕೂಡ ಹೇಳಿದ ಸಂದರ್ಭದಲ್ಲಿ  — ಅದಕ್ಕೆ ಐದು ಶ್ಲೋಕದ ಹಿಂದೆ “ನನ್ನ ಮಾತನ್ನು ಕೇಳದೆ ಹೋದರೆ ಮುಳುಗಿ ಹೋಗುತ್ತೀಯೆ” ಎಂದೂ ಹೇಳಿರುತ್ತಾನೆ ಕೃಷ್ಣ –  ನನಗಂತೂ ಸುಮ್ಮನೆ ಒಂದು ಕೇವಿಯಟ್ಟಿನ ಹಾಗೆಯೇ ತೋರುತ್ತದೆ. ಗೀತೆಯಲ್ಲಿ ಈ ವಿರೋಧಾಭಾಸಗಳು ಯಾಕೆ ಅನ್ನುವ ಬಗ್ಗೆ ಸೌಮೇನ್ ಡೇ ಬರೆದ ಲೇಖನ  ಚೆನ್ನಾಗಿದೆ ಅನ್ನಿಸಿತು (http://eawc.evansville.edu/essays/de.htm). ಈ ಗ್ರಂಥ  ಉದ್ಭವವಾದ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಡಿ.ಡಿ. ಕೋಸಾಂಬಿಯವರು ಇನ್ನೂ  ವಿಸ್ತ್ರತವಾಗಿ ಸುಮಾರಷ್ಟು ಬರೆದಿರುವುದು ನಮಗೆಲ್ಲಾ ಗೊತ್ತು. ಸತ್ಯ ಹೇಳಬೇಕೆಂದರೆ ರಸಿಕರ ರಾಜ, ಬೆಣ್ಣೆ ಕಳ್ಳ, ರಂಗಿನಾಟದ ಚೆಂದದ ಕೃಷ್ಣ ಹೀಗೆ ಎಡೆಬಿಡದೆ ಇಂದ್ರೀಯ ನಿಗ್ರಹದ ಬಗ್ಗೆ ಮಾತಾಡುವುದೇ ನನ್ನಂತಹ ಯುದ್ಧ ಮತ್ತು ಕ್ಷಾಮಗಳಿಗೆ ಕಾರಣಕರ್ತರಾದ ಹೆಂಗಸರಿಗೆ ಬೇಸರ ತರುತ್ತದೆ.ಅದರ ಮಧ್ಯೆ ಈ ರೀತಿಯ “ಭಾವಾರ್ಥ”ಗಳ ಒಗ್ಗರಣೆ ಇದ್ದರೆ ಇನ್ನೂ ಬೇಜಾರು.

ಇದೆಲ್ಲಾ ತರಲೆ ವಾದಗಳೇ ಬೇಡ ಅನ್ನುವವರು, ಇಡೀ ಚರ್ಚೆಯಿಂದ ಸುಲಭವಾಗಿ “ಅಯ್ಯೋ ಅಷ್ಟೂ ಗೊತ್ತಿಲ್ಲವಾ, ಸತ್ಯ ಯಾವಾಗಲೂ ಹಾಗೆಯೇ. ವಿರೋಧಾಭಾಸಗಳಿಂದ ಕೂಡಿದ್ದು” ಅಂದು ನುಣುಚಿಕೊಂಡುಬಿಡಬಹುದು. ಅಥವಾ ಅನುಮಾನ ಪ್ರವೃತ್ತಿಯವರಿಗೆ ಗೀತೆ ಅರ್ಥ ಆಗುವುದೇ ಇಲ್ಲ ಅಂತ ಗಾಂಧಿ ಹೇಳಿದಂತೆಯೂ ಹೇಳಬಹುದು. ಗೀತೆಯ ಬಗ್ಗೆ ಗಾಂಧಿಯ ಮಾತು ಹೀಗಿದೆ: “The Gita is the universal mother. She turns away nobody. Her door is  wide open to anyone who knocks. A true votary of Gita does not know what disappointment is.  He ever dwells in perennial joy and peace that passeth understanding. But that peace and  joy come not to skeptic or to him who is proud of his intellect or learning. It is  reserved only for the humble in spirit who brings to her worship a  fullness of faith and an undivided singleness of mind. There never was a man who worshipped her in that spirit and  went disappointed. I find a solace in the Bhagavad-Gita that I miss even in the Sermon on the  Mount. When disappointment stares me in the face and all alone I see not one ray of  light, I go back to the Bhagavad-Gita. I find a verse here and a verse there , and I  immediately begin to smile in the midst of overwhelming tragedies — and my life has been  full of external tragedies — and if they have left no visible or indelible scar on me, I  owe it all to the teaching of Bhagavad-Gita.”  (ದೈವೀ ಕಲ್ಪನೆಯು ವರ್ಣನಾತೀತ ಮತ್ತು ಅಮೂರ್ತ ಎಂದು ಹೇಳಲು ಹೊರಟಾಗಲೂ ಕೂಡ ಅದು ಹೇಗೋ ಪುಲ್ಲಿಂಗವಾಗಿಯೇ ಇರುವಂತೆ ತೋರುವ ಗೀತೆಯನ್ನು ಎಲ್ಲರನ್ನೂ ಆಲಂಗಿಸುವ “ಜಗನ್ಮಾತೆ” ಅಥವಾ universal mother ಎಂದು ಗಾಂಧಿ ಕರೆಯುವುದು ನನಗೆ ತುಂಬ ಕುತೂಹಲಕರ ಅನ್ನಿಸುತ್ತದೆ.)

ಬೇಕಾದಷ್ಟು ಬೇರೆಬೇರೆ ಅನುವಾದಗಳು ಇರುವಾಗ ಇಸ್ಕಾನ್ ಅವತರಣಿಯನ್ನೇ ಓದಿ  ಇಷ್ಟೆಲ್ಲಾ ಮಾತು ಬೆಳೆಸಬೇಕಾ ಅನ್ನಬಹುದು. ಮೊದಲನೆಯದಾಗಿ ಇಸ್ಕಾನ್ ಗೀತೆ ಎಲ್ಲಕ್ಕಿಂತ ಧಾರಾಳವಾಗಿ ಸಿಗುವಂಥದು. ಎರಡನೆಯದಾಗಿ ಈ ಗೀತೆಯ ಜೊತೆ ಕನ್ನಡ ಓದುಗರು ಗೌರವಿಸುವ ಇಬ್ಬರ ಹೆಸರು ತಳುಕು ಹಾಕಿಕೊಂಡಿದೆ.  ಮೂಲದಲ್ಲಿ ಇಸ್ಕಾನ್ ನ ಪ್ರಭುಪಾದರ ಈ “ಯಥಾರೂಪ”ವನ್ನು ಕನ್ನಡಕ್ಕೆ ತಂದಿರುವುದು ಎಲ್.ಎಸ್. ಶೇಷಗಿರಿರಾಯರು. “ವಿಮರ್ಶಕರಿಂದ ಭಗವದ್ಗೀತಾ ಯಾಥಾರೂಪದ ಪ್ರಶಂಸೆ” ಎಂಬ ತಲೆಬರಹದಡಿಯಲ್ಲಿ ಮೊದಲ ಪ್ರಶಂಸೆ ಇರುವುದು ಅನಂತಮೂರ್ತಿಯವರದ್ದು. ಇವರು ಭಗವದ್ಗೀತೆಯ ಬಗ್ಗೆ ಒಟ್ಟಾರೆಯಾಗಿ ಹೇಳುವುದಷ್ಟೇ ಅಲ್ಲದೆ (“ನನ್ನ ಬಾಳಿನ ಬೆಳಕು” , “ಮತೀಯ ಗೆರೆಗಳನ್ನು ಮೀರಿ ನಿಂತಿರುಯ ಗ್ರಂಥ” ಇತ್ಯಾದಿ) ಈ ಕನ್ನಡ ಅವತರಣಿಯ ಬಗ್ಗೆ ಹೀಗಂದಿದ್ದಾರೆ: “ಅನುವಾದಕರು ಸಾಹಿತ್ಯವನ್ನು ಓದಿಕೊಂಡಿದ್ದವರಾದ್ದರಿಂದ, ಪುಸ್ತಕವು ಸಾಹಿತ್ಯಕ ಗುಣಗಳನ್ನು ಅಳವಡಿಸಿಕೊಂಡು ಸಮೃದ್ಧವಾಗಿ ಬಂದಿದೆ.”

ಇರಬಹುದೇನೋ. ಆಧುನಿಕ ವಿದ್ಯಾಭ್ಯಾಸದಿಂದ ರಾಕ್ಷಸೀ ಗುಣಗಳನ್ನು ಪಡೆದುಕೊಂಡ ನನ್ನ ನೇತ್ರಗಳಿಗೆ ಮಾತ್ರ ಈ ಭವ್ಯ ಗುಣಗಳು ಕಾಣಿಸುತ್ತಲೇ ಇಲ್ಲ.