ಬರೆಯುವ ಕಾಯಕದಿಂದಾಚೆ…

ದಿನ ಬೆಳಗಾದರೆ ಬರೆಯುವುದೇ ಕೆಲಸ ಆದವರ ಬರವಣಿಗೆ ಒಂದು ಥರದ routineಗೆ ಬಿದ್ದುಬಿಡುತ್ತದೆ. ಒಂದು ಇಂಟ್ರೊ, ಒಂದು ಬಾಡಿ, ಒಂದು ಎಂಡಿಂಗ್… ಹೀಗೆ. ಎಲ್ಲವೂ inverted pyramid. ಅದರ ಆಚೆ ಎನೂ ಹೊಸ ತರಹದ್ದನ್ನು ಬರೆಯುವ ಸಾಧ್ಯತೆಯೇ ಕಳೆದು ಹೋಗಬಹುದೇನೋ ಎಂಬ ಭಯ ಶುರುವಾಗುತ್ತದೆ. ಅದರಲ್ಲೂ ವಯಸ್ಸಾಗುತ್ತಾ ಹೋದಂತೆ. ಇಂಗ್ಲಿಶ್ ಪೇಪರಿನಲ್ಲಿ ಕೆಲಸ ಮಾಡುವ ನನ್ನಂತ ಮಂದಿಗೆ ಕನ್ನಡ ಬರೆಯುವುದೇ ಮರೆತು ಹೋದರೆ ಎಂಬ ಇನ್ನೊಂದು ಭಯ. ಆದಕ್ಕೆ ಈ ಬ್ಲಾಗ್. ತುಂಬ selfish ಕಾರಣಕ್ಕೆ. ಸುಮ್ಮನೆ ಡೈರಿಯಲ್ಲಿ ಬರೆಯಬಹುದಲ್ಲ ಬ್ಲಾಗು ಗೀಗೆಲ್ಲ ಯಾಕೆ ಅಂತ ಕೇಳಬಹುದು. ಹೌದು. ಕೇಳಬಹುದು. ಉತ್ತರ ಸಧ್ಯಕ್ಕಂತು ಇಲ್ಲ. ಆದರೂ ಇರಲಿ. ಅಗಾಧ ಸೈಬರ್ ಲೋಕದ ಒಂದು ಮೂಲೆಯಲ್ಲಿ ಇದೂ ಒಂದಿದ್ದರೆ ನಷ್ಟವಂತೂ ಇರಲಾರದು ಎಂಬ ನಂಬಿಕೆಯೊಂದಿಗೆ… ನಮಸ್ಕಾರ.

Advertisements

6 ಟಿಪ್ಪಣಿಗಳು »

 1. ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ
  ಹಾಡುವುದು ಅನಿವಾರ್ಯ ಕರ್ಮ ನನಗೆ ..

  Secondly, someone adviced :`live such a life that you dont need to hide your diary’. Probably, that is why blogs were invented.

 2. hpn said

  ಸೈಬರ್ ಲೋಕಕ್ಕೆ ಸ್ವಾಗತ 🙂

 3. G N Mohan said

  ‘ಬ್ಲಾಗ್’ ಮಂಡಲದಲ್ಲಿ ‘ಭಾಗೇಶ್ರೀ ‘
  ನಿಮ್ಮ ದಿನನಿತ್ಯದ ಇನ್ವರ್ಟೆಡ್ ಪಿರಮಿಡ್ ಬದುಕಿನಲ್ಲಿ ಈ ಅಧ್ಯಾಯಕ್ಕೆ ಮೇಲಿನ ತಲೆಬರಹ ಕೊಡಬಹುದೇನೋ?
  ನಿಮ್ಮ ಬರಹ ಮತ್ತೆ ಸಿಗುವುದು ಖುಷಿ ಸಂಗತಿ.
  -ಜಿ ಎನ್ ಮೋಹನ್

 4. jogi said

  ಡಿಯರ್ ಭಾಗೇಶ್ರೀ,
  ನಿಮ್ಮನ್ನು ಎಲ್ಲಿ ಓದೋದು ಅಂತ ಗೊತ್ತಿರಲಿಲ್ಲ. ಸದ್ಯ ಇಲ್ಲಿ ಸಿಕ್ಕಿದ್ದೀರಲ್ಲ. ಸುಸ್ವಾಗತ. ಒಂದು ವೆಲ್ ಕಮ್ ಡ್ರಿಂಕ್ ಜೊತೆ.
  ಗಾಲಿಬ್ ಅನುವಾದ ಚೆನ್ನಾಗಿದೆ. ಮೂಲ ನೆನಪಿಲ್ಲ. ಮೂಲ ಸಾಲುಗಳನ್ನೂ ಕೊಟ್ಟಿದ್ದರೆ
  -ಜೋಗಿ

 5. ಬ್ಲಾಗಮಂಡಲದಲ್ಲೂ ಬಾಗೇಶ್ರೀ ಆಲಿಸಬಹುದಲ್ಲ. ಅನುವಾದ ಚೆನ್ನಾಗಿದೆ. ಹಾಗೆಯೇ ನಿಮ್ಮ ಪದ್ಯಗಳನ್ನೂ ಹಾಕಿ.

 6. sidrapal said

  kela dinagala hinde nanna sangrahadallidda ‘Bhavana’ oduttiddaga nivu kandiri…neevu allalli sikkagalu kannadalli bareyuttiri endu allivargu gottiralilla sorry kanri…enmele blog odthini.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: