ನಾಟಿ ಕಥಲು ವ್ಯಥಲೇನಾ?

ಅಂದರೆ “ನಿನ್ನೆಯ ಕಥೆಗಳು ಬರೀ  ಗೋಳೇನಾ?” ಅಂತ. ಭಾನುಮತಿ ೧೯೫೧ನಲ್ಲಿ ರಿಲೀಸ್ ಆದ ಮಲ್ಲೇಸ್ವರಿ ಎಂಬ ತೆಲುಗು ಸಿನೆಮಾದಲ್ಲಿ “ಅವ್ನಾ ನಿಜಮೇನಾ?” ಎಂಬ ಹಾಡಿನಲ್ಲಿ ಹಾಡಿನ ಒಂದು ಸಾಲು.

ಇವತ್ತು ಗಣೇಶ ಹಬ್ಬಕ್ಕೆ ರಜ. ಇಡೀ ದಿನ ಹಳೆ ಹಾಡುಗಳನ್ನು ಕೇಳ್ತಾ ಇದ್ದೇನೆ. ಈ ಹಾಡಿನ ಬಗ್ಗೆ ಗೂಗಲ್ ಮಾಡಿದರೆ ಯೂಟ್ಯೂಬ್ನಲ್ಲಿ ಎನ್ ಟಿ ಆರ್ (ವಯಸ್ಸು ಕಾಣಿಸಬಾರದು ಅಂತ ಮುಖಕ್ಕೆ ಮೈದಾಹಿಟ್ಟಿನಂತೆ ಮೇಕಪ್ ಹಚ್ಚುವುದಕ್ಕೆ ಮುಂಚಿನ ಕಾಲದ ರೂಪದಲ್ಲಿ) ಮತ್ತು ಭಾನುಮತಿಯ ಈ ಹಾಡಿನ ತುಣುಕು ಕೂಡ ಸಿಕ್ಕಿ ಖುಶಿ ಆಯಿತು. ಮತ್ತೆ ಒಂದಷ್ಟು ಜಿಕ್ಕಿ, ಬಾಲ ಸರಸ್ವತಿ, ಶಂಶಾದ್ ಬೇಗಂ, ಗೀತಾ ದತ್… ಹೀಗೆ ಏನೇನೋ random ಆಗಿ ಹಾಡುಗಳನ್ನು ತುಂಬ ದಿನದ ನಂತರ ಒಂದೇ ಸಮ ಕಾರಿನಲ್ಲಿ, ಮನೆಯಲ್ಲಿ ಕೇಳುತ್ತಾ ಇದ್ದೇವೆ. ಹಬ್ಬದ ಹುಚ್ಚು ಶಾಪಿಂಗ್ ಗಿಜಿಗಿಜಿ, ಟ್ರಾಫಿಕ ಜ್ಯಾಮು ದಿನಾ ಆಗುವಷ್ಟು ಕಿರಿಕಿರಿ ಆಗ್ತಾ ಇಲ್ಲ.

ಈಗ ಇಪ್ಪತ್ತು ಇಪ್ಪತ್ತೆರಡು ವರ್ಷ ವಯಸ್ಸಾಗಿರುವ ನಮ್ಮ ಆಫೀಸಿನ ಹುಡುಗಿಯರಿಗೆ “ಕ್ಲಾಸಿಕ್” ಹಾಡುಗಳು ಅಂದರೆ ಎಂಬತ್ತರ ದಶಕದ, ಹೆಚ್ಚೆಂದರೆ ಎಪ್ಪತ್ತರ ದಶಕದ ಹಾಡುಗಳು. ಅಭಿಮಾನ್ ಗಿಂತ ಅಂತು ಖಂಡಿತ ಹಿಂದೆ ಹೋಗುವುದಿಲ್ಲ. ಸಂಗೀತದ ಬಗ್ಗೆ ಆಸಕ್ತಿ ಇರುವ ಹುಡುಗಿಯೊಬ್ಬಳಿಗೆ ಮೊನ್ನೆ ಸೈಗಲ್ ಕೇಳಬೇಕು ನೀನು ಅಂತ ಹೇಳಲಿಕ್ಕೆ ಹೋಗಿ ಅವಳು “ಅಯ್ಯೊ ತಾಯಿ ಹಳತು ಅಂತ ಮೂಗಲ್ಲಿ ಹಾಡುವ ಗೋಳಾಟದ ಹಾಡನ್ನೆಲ್ಲಾ ಹೊಗಳುವುದು ಅತಿಯಾಯಿತು” ಅಂದುಬಿಟ್ಟಳು. “ಇಲ್ಲಮ್ಮ, ನೀನು ಮುಖೇಶ್ ಮತ್ತು ಸೈಗಲ್ ರನ್ನು confuse ಮಾಡಿಕೊಳ್ತಾ ಇದ್ದೀಯ, ಆದರೆ ನೋಡು ಮುಖೇಶ್ ಮೂಗಲ್ಲಿ ಹಾಡೋದರಿಂದಲೇ ಅವನು ಅಷ್ಟು ಚೆಂದ” ಎಂತೆಲ್ಲ ಬೇಡದ advice ಕೊಟ್ಟು, ಕೊನೆಗೆ ನನಗೆ ನಿಜವಾಗಿಯೂ ಅಷ್ಟೊಂದು ವಯಸ್ಸಾಗಿ ಹೋಯಿತಾ ಅಂತ ಅನುಮಾನ ಕೂಡ ಬಂದುಬಿಟ್ಟಿತು.

ಈ ಐವತ್ತರ ದಶಕದ ಹಾಡುಗಳು ಅಂದರೆ ನನಗೆ ಯಾಕೆ ಇಷ್ಟು ಅಷ್ಟ ಎಂತ ಹಾಗೇ ಯೋಚನೆ ಬಂತು. ನನಗೆ ತೀರ ಇಷ್ಟವಾಗುವ ಹಾಡುಗಳು ನಾನು ಹುಟ್ಟುವುದಕ್ಕೆ ಸುಮಾರು ಹದಿನೈದು ಇಪ್ಪತ್ತು ವರ್ಷ ಮುಂಚೆಯ ಜಮಾನಾಕ್ಕೆ ಸೇರಿದವು. ಅಂದರೆ, ಅದ್ಯಾವುದೋ ಹದಿನಾರರ ಹರೆಯದಲ್ಲಿ ಕೇಳಿದ ಹಾಡಿನ ಜೊತೆ ನಮ್ಮ ಮೊದಲ ಪ್ರೇಮ ಇತ್ಯಾದಿ ಮಧುರ ಅನುಭವಗಳೂ ಬಲವಾಗಿ ಅಂಟಿಕೊಂಡುಬಿಡುವುದರಿಂದ, ಆ ಗುಂಗಿನಿಂದ ಹೊರ ಬರಲಾರದೆ “ಈಗಿನ ಹಾಡೆಲ್ಲ ಬಿಡಿ ಕೆಲಸಕ್ಕೆ ಬಾರದ್ದು” ಅಂತ ಹೇಳಿಬಿಡುವ ಲೆಕ್ಕಾಚಾರಕ್ಕಂತೂ ಅದು ಸೇರುವುದಿಲ್ಲ. ಹಾಗೇನಾದರೂ ಇದ್ದರೆ ನನ್ನ ಮಟ್ಟಿಗೆ ೮೦ರ ದಶಕದ ಕನ್ನಡ ಹಾಡುಗಳು ಇದ್ದಾವು.

ಹಾಗಾದರೆ ಒಂದು ತಲೆಮಾರಿಗೆ ಕ್ಲಾಸಿಕ್ ಎನ್ನಿಸುವುದು ಅವರ ಅಪ್ಪ ಅಮ್ಮ ಮನೆಯಲ್ಲಿ ಗುನುಗುತ್ತಿದ್ದ ಅವರ ಹರೆಯದ ಹಾಡುಗಳು ಇರಬಹುದೆ?! ಹಾಗಿದ್ದಲ್ಲಿ ಈಗ ಇಪ್ಪತ್ತು ವಯಸ್ಸಾಗಿರುವ ಮಂದಿಗೆ ೭೦ರ ದಶಕಕ್ಕಿಂತ ಹಿಂದಿನ ಹಾಡುಗಳ ಬಗ್ಗೆ ಖಬರೇ ಇಲ್ಲದಿರುವುದು ಸಹಜವೇ. rec.music.indian.misc (RMIM) ಎಂಬ ಯೂಸರ್ ಗ್ರೂಪ್ ಸದಸ್ಯರ ಮೀಟಿಂಗ್ ಒಂದರ ಬಗ್ಗೆ ರಿಪೋರ್ಟ್ ಮಾಡಲಿಕ್ಕೆ ಹೋದಾಗ ಅವರು ೩೦ ಮತ್ತು ೪೦ರ ದಶಕದ ಸಂಗೀತದ ಬಗ್ಗೆ ಮಾತಾಡುತ್ತಿದ್ದುದನ್ನು ಕೇಳಿದಾಗ ನನಗೆ ಕ್ಲಾಸಿಕ್ ಎನ್ನುವುದು ಎಷ್ಟು relative ಅಂತ ಮನವರಿಕೆ ಆಗಿತ್ತು.

ಇದನ್ನೆಲ್ಲಾ ಒಪ್ಪಿಯೂ, ೫೦ರ ಈ  ಹಾಡುಗಳ ಬಗ್ಗೆ objective ಆಗಿ (ಹಾಗಂತ ಏನೂ ಇಲ್ಲ ಅನ್ನುವುದಾದರೆ, ಕನಿಷ್ಟ nostalgiaದ ದಟ್ಟ ಅಫೀಮಿನ ಅಲೆಯಲ್ಲಿ ತೇಲದೆ) ಯೋಚಿಸಿದಾಗ ಒಂದೆರಡು ಕಾರಣಗಳಿಗಾದರೂ ಈ ಜಮಾನದ ಹಾಡುಗಳು ಚೆಂದ ಅನ್ನಿಸುತ್ತದೆ.

ಮೊದಲನೆಯದಾಗಿ ಇಲ್ಲಿ background ಸಂಗೀತ ನಿಜವಾಗಿಯೂ backgroundನಲ್ಲಿಯೇ ಇರುತ್ತದೆ. ಅದಕ್ಕಿಂದ ಹೆಚ್ಚಾಗಿ ನನಗೆ ಇಷ್ಟವಾಗುವುದು ಆ ಕಾಲದ ಹಾಡುಗಾರರ ದನಿಯ ಸಹಜತೆ ಮತ್ತು ವೈವಿಧ್ಯ. ವಿಶೇಷವಾಗಿ ಸ್ತ್ರೀ ದನಿಗಳು. ಹೆಣ್ಣು ಧ್ವನಿ ಅಂದರೆ ಇಷ್ಟೇ ತೆಳು (ಕೀರಲು ಅನ್ನಬಹುದು) ಇರಬೇಕು ಎನ್ನುವ stereotype ಗಟ್ಟಿಯಾಗಿ ನೆಲೆ ಊರುವುದಕ್ಕೆ ಮುಂಚೆ ಇದ್ದ ಜಿಕ್ಕಿ, ಬಾಲ ಸರಸ್ವತಿ, ಶಂಶಾದ್ ಬೇಗಂ, ನೂರ್ ಜಹಾನ್, ಗೀತಾ ದತ್ ಇತ್ಯಾದಿ ದನಿಗಳನ್ನು (RMIM ಮಂದಿಯನ್ನು ಕೇಳಿದರೆ ಇದಕ್ಕೆ ಹತ್ತು ಹೆಸರು ಸೇರಿಸಿಯಾರು!) ನಂತರದ ದನಿಗಳಿಗೆ ಹೋಲಿಸಿದರೆ ಅವು ಎಷ್ಟೊಂದು ಸಹಜ ಮತ್ತು full bodied  ಅನ್ನಿಸುತ್ತವೆ! ದನಿಯನ್ನು ಖುಲ್ಲಾ ಬಿಟ್ಟು ನಾಭಿಯಿಂದ ಹಾಡುವುದು “ಸ್ತ್ರೀ ಸಹಜ”ವೇ ಅಲ್ಲ ಅನ್ನಿಸಿಬಿಡುವಷ್ಟರ ಮಟ್ಟಿಗೆ ಬರಬರುತ್ತಾ ಈ ರೀತಿಯ ದನಿಗಳು ವಿರಳವಾಗುತ್ತಾ ಹೋದವು. ಲತಾ ನಂತರವಂತೂ ಹೇಳಹೆಸರಿಲ್ಲ ಅನ್ನವಬಹುದು (ಅಲ್ಲಲ್ಲಿ ಆಶಾ ಬಿಟ್ಟರೆ).

ಈಗಲೂ “different” ಅಂತ ಕರೆಸಿಕೊಳ್ಳುವ, ಹೀಗೆ different ಆಗಿರುವುದರಿಂದಲೇ ಮಾರ್ಕೇಟು ಇರುವ ಕೆಲ ದನಿಗಳು ಇವೆ. ಉದಾಹರಣೆಗೆ ಶುಭಾ ಮುದ್ಗಲ್. ಆದರೆ ಈ ಥರದ different ದನಿಗಳನ್ನು ನಮ್ಮ ಮಾರ್ಕೇಟು ಒಂದು ಮೌಲ್ಡಿಗೆ ಹಾಕಿ ಅದರ ಇತರ ಸಾಧ್ಯತೆಯನ್ನೇ ಕೊಂದುಬಿಡುತ್ತದೆ. ಗೀತ ದತ್ ಅಳುಬುರುಕು ಹಾಡುಗಳನ್ನು ಹಾಡಿದಷ್ಟೇ ಸಹಜವಾಗಿ ತುಂಟ ಹಾಡುಗಳನ್ನೂ ಹಾಡಿದ್ದಾಳೆ. ಉದಾಹರಣೆಗೆ “ಮೆರ ಸುಂದರ್ ಸಪ್ನಾ ಬೀತ್ ಗಯಾ” ಮತ್ತು “ಛೋಡ್ ದೋ ಆಚಲ್ ಜಮಾನಾ ಕ್ಯಾ ಕಹೆಗ?” ಹೋಲಿಸಿ ನೋಡಿ. ಬಾಲ ಸರಸ್ವತಿ ತೆಲುಗಿನ ದೇವದಾಸ್ ಚಿತ್ರದಲ್ಲಿ “ಇಂತ ತೆಲಿಸಿ ಉಂಡಿ” ಪಕ್ಕಾ ಕರ್ನಾಟಕ್ ಸ್ಟೈಲಿನಲ್ಲಿ ಹೇಳಿ ಅದೇ ಸಿನೆಮಾದಲ್ಲಿ ಯಾವುದೇ ಗಮಕಗಳಿಲ್ಲದೆ “ತಾನೆ ಮಾರೆನಾ? ನಮ್ಮೇ ಮಾರೆನಾ?” ಎಂದೂ  ಹಾಡುವುದು ನನಗೆ ತುಂಬ ವಿಶೇಷ ಅನ್ನಿಸುತ್ತದೆ. ೭೦, ೮೦ರ ದಶಕಗಳಲ್ಲಿ ಕೆಲವು ತುಂಬ ಚೆಂದ ಅನ್ನಿಸುವ ಹಾಡುಗಳು ಇವೆಯಾದರೂ ದನಿಗಳ ವೈವಿಧ್ಯ, ಸಹಜತೆಯಂತೂ ಕಡಿಮೆಯಾಗುತ್ತಾ ಹೋಯಿತು.

ಹೀಗೆ ಓಬಿರಾಯನ ಕಾಲದ ಹಾಡುಗಳ ಬಗ್ಗೆ ನನಗಿರುವ ಪ್ರೀತಿಯ ಬಗ್ಗೆ ಆಲೋಚಿಸಿತ್ತಾ ಇರುವಾಗ ಎಂ.ಜೆ. ಅಕ್ಬರ್ ಬರೆದ ಲೇಖನವೊಂದರ “ಕ್ಲಾಸಿಕ್ ಅಂದರೆ ಏನು?” ಎಂಬ ಕಷ್ಟದ ಪ್ರಶ್ನೆಯ ಸುತ್ತಲಿನ ಯೋಚನೆಗಳು ನೆನೆಪಾಗುತ್ತವೆ: “Perhaps the most authentic indicator is the average life of a hit song. Popular music of the sixties and seventies still packs the shelves of shops, and even the fifties get a healthy look-in. Current hits are like floodtides. They swamp the market and then disappear. They are suddenly everywhere, and suddenly nowhere. How many songs can you remember from the last 21 years? How many songs can you forget from the 21 years previous to Rafi’s death? Hamburger versus biryani: if you don’t know the difference, you’ll never get it.” (ಈಗಾಗಲೇ ಓದದೆ ಇದ್ದವರು ಇಡೀ ಲೇಖನವನ್ನು ಇಲ್ಲಿ ಓದಿ: http://www.deccanherald.com/Content/Aug182008/editpage2008081785110.asp. ಇದರ ಬಗ್ಗೆ churumuri.com ನಲ್ಲಿ ಆದ ಚರ್ಚೆಯನ್ನೂ ನೋಡಿ).

ಇಷ್ಟೆಲ್ಲಾ ಹೇಳಿದ ನಂತರವೂ ಇಡೀ ಅಕ್ಬರ್ ಲೇಖನ ರಫಿ ಮತ್ತು ಮುಖೇಶ್ ಸುತ್ತಲೇ ಗಿರಕಿ ಹೊಡೆದು ಅದಕ್ಕಿಂತ ಹಿಂದೆ ಹೋಗದೆ ಇರುವುದು ಆಶ್ಚರ್ಯ!

Advertisements

3 ಟಿಪ್ಪಣಿಗಳು »

 1. vijayraj said

  yes. classic annOdu yaavagloo relative.
  aadaroo ivattina haaDugaLella innippatu varshagaLa nanatara classic annisikoLLutta? nange anumaana ide ( kelavu haadugaLa horatu padisi)

  heNNina dhwani heege irbeku anno stereotype ge apavaadavaagi innobbaru iddare… ghazal singer abidaa parveen. cd sikkidre omme keli nOdi… ondsala avara ghazal kELi naanu avra fan aagbitte…

 2. bageshree said

  ಹೌದು. ಅಬಿದಾ ನನಗೂ ಇಷ್ಟ. ಅವರು ಹಾಡಿದ ಬಾಬಾ ಬುಲ್ಲೆ ಶಾ ಹಾಡುಗಳು ತುಂಬಾ ಚೆನ್ನಾಗಿವೆ. ಆದರೆ ನುಸ್ರತ್ ಫತೆಹ್ ಅಲಿಗೆ ಇವರನ್ನು compare ಮಾಡುವ ಒಂದು ಕೆಟ್ಟ ಚಾಳಿ ಇವರ ಹಾಡುಗಳನ್ನು advertise ಮಾಡುವ ಎಲ್ಲಾ ಕಂಪನಿಗಳಿಗೂ ಇರುವುದು ಬೇಜಾರಷ್ಟೆ. ಎಲ್ಲಾದನ್ನೂ ಯಾವುದಾದರೂ ಒಂದು categoryಗೆ ಸೇರಿಸಿಯೇ ನೋಡಬೇಕೆಂಬ compulsion ಯಾಕೇ ಗೊತ್ತಿಲ್ಲ.

 3. Anupama said

  This piece just got me nostalgic, Bageshree….I have grown up listening to Malleshwari and Jikki songs, thanks to my dad…And now, for somebody to recall them, is really surprising….i don’t know if you have watched the movie..NTR is as usual handsome and is best, and its such a simple love story… A classic movie, by all standards…

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: