Archive for ಅಕ್ಟೋಬರ್, 2008

ಬೇಂದ್ರೆ ಪದ್ಯ ಓದಿದರೆ ಕೀರಂ ತರ ಓದಬೇಕು!

ಪಟಾಕಿಯ ಗಲಾಟೆ ಮನೆಯ ಆಚೆ ಎಷ್ಟೆಂದರೆ ಟಿವಿ full ವಾಲ್ಯುಮ್ ಕೊಟ್ಟರೂ ಕೇಳ್ಸೋದು ಕಷ್ಟ. ತಮಾಷೆ ತಮಾಷೆಯಲ್ಲಿಯೇ ಹೆಣ್ಣು-ಗಂಡು, ಗಂಡು-ಗಂಡು ಇತ್ಯಾದಿ confusing ಸಂಬಂಧಗಳನ್ನು ಸೀರಿಯಸ್ಸಾಗಿಯೇ ನೋಡುವ “ಕ್ವೀನ್ಸ್” ಎಂಬ ಸ್ಪಾನಿಶ್ ಸಿನಿಮಾ ಒಂದನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ತೆಪ್ಪಗೆ ಇದ್ದೇನೆ. (ಭಾಷೆ ಅರ್ಥವಾಗದಿದ್ದರೂ ಭಡ ಭಡ ಸದ್ದಿನ ಹಿನ್ನೆಲೆಗೆ ಸಿನೆಮಾ ನೋಡುವುದು ಕಿರಿಕಿರಿ.) ಈ ಸ್ಪಾನಿಶ್ ಸಿನೆಮಾ, ಬರವಣಿಗೆಗೆಲ್ಲ ಇದೊಂದು ಭಾರಿ ಶಕ್ತಿ ಅಲ್ಲವಾ? ಶ್ರೀಮದ್ಗಾಂಭೀರ್ಯ ಮೆರೆಯದೆ ಗಂಭೀರವಾದದ್ದನ್ನು ಹೇಳಿಬಿಡುವುದು.

ನಮ್ಮ ಮನೆದೇವರಾದ ಟೀವಿ ಹೀಗೆ ಮೌನಿಯಾದದ್ದರಿಂದ ಬೇಂದ್ರೆಯ “ಗಂಗಾವತರಣ” ಪುಸ್ತಕ ಹಿಡಿದು ಕೂತಿದ್ದೇನೆ. ನೆನ್ನೆ ಕೀರಂ ಅವರು ಬೇಂದ್ರೆಯ ಬಗ್ಗೆ ಮಾತಡುವುದನ್ನು ಕೇಳಲಿಕ್ಕೆ ಹೋಗಿದ್ದೆ. “ಕೆವಿ ಸುಬ್ಬಣ್ಣ ಆಪ್ತ ಸಮೂಹ” ಎಂಬ ಸಾಹಿತ್ಯ ಮತ್ತು ಸಿನೆಮಾ ಅಸಕ್ತರ ಗುಂಪೊಂದು ಅದನ್ನು ಆಯೋಜಿಸಿತ್ತು. ಅದೇ ಗುಂಗು ಇನ್ನೂ ಸ್ವಲ್ಪ. Read the rest of this entry »

Comments (8)

ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು

ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.

ರೋಲಾಂಡ್ ಬಾರ್ಥ್‌ನ ಹಾಗೆ “death of the author” ಬಗ್ಗೆ ಪೂರ್ತಿ ನಂಬಿಕೆ ಇಟ್ಟು, ಒಂದು ಪಠ್ಯದ ಓದು ಯಾವ್ಯಾವ ದಿಕ್ಕಿನಲ್ಲಿ ಬೇಕಾದರೂ ಹರಿಯಬಹುದು ಎಂದು ಮನದಟ್ಟು ಮಾಡಿಕೊಂಡು, ವೈದೇಹಿ ಕತೆಯ ಹಳೆಯ ಓದಿನ ಭಾರವನ್ನು ಬದಿಗಿಟ್ಟ ನಂತರವೇ ಈ ಸಿನೆಮಾ ನೋಡಲಿಕ್ಕೆ ಸಾಧ್ಯ. ಆದ್ದರಿಂದ ಋಷಿ, ನದಿ, ಸಿನೆಮಾ ಎಲ್ಲದರ ಮೂಲಗಳನ್ನೂ ಬಿಟ್ಟು ಮುಂದಿನ ಮಾತು. Read the rest of this entry »

Comments (8)