Archive for ನವೆಂಬರ್, 2008

ನೀಲುವಿನ ಜಾಡು ಹಿಡಿದು…

ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. “ನೀಲಿ ಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತು ಅಳೆಯುವ ಮರುಳೇ!” ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇ ತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ. ಹಾದಿಮನಿಯ ಚಿತ್ರಗಳ ನಿತ್ಯ ದಿಗಂಬರಿ, ನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ.

ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂ ಇಲ್ಲದಿರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ವಿದ್ವಾಂಸರು ಸ್ಟಾರ್ಚ್ ಹಾಕಿ ಗಟ್ಟಿ ಮಾಡಿಟ್ಟ ವಿಮರ್ಶೆ ಅನ್ನುವ ಪದವನ್ನು ಬದಿಗಿಟ್ಟು ಈಕೆಯ ಮೀನಹೆಜ್ಜೆಗಳನ್ನು ಅರಸುವ ಪ್ರಯತ್ನ ಮಾಡಿದರೆ ವಾಸಿ.  Read the rest of this entry »

Advertisements

Comments (4)