ನೆರುಡಾನನ್ನು ಅನುಸರಿಸಿ

(ಈ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಹಿಗ್ಗಾಮಗ್ಗಾ ಹೊಡೆದಾಟ ಟಿವಿಯಲ್ಲಿ ನೋಡಿ ಇದರ ಹದಿನೈದು ವರ್ಷದ ಹಿಸ್ಟರಿ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕು, ಬ್ಲಾಗಲ್ಲಿ ಬರೀಬೇಕು ಅಂತ ಕೂತವಳ ಕಣ್ಣಿಗೆ ನೆರುಡಾ ಪದ್ಯಗಳು ಬಿದ್ದು ಈಗ ಕತೆ ಬೇರೆ ಆಗಿದೆ. ಈ ಸ್ಪಾನಿಶ್ ಕವಿಗಳು ರೆವಲ್ಯುಶನ್ನಿನಿಂದ ಹಿಡಿದು ರೊಮಾನ್ಸಿನವರೆಗೆ ಎಲ್ಲವನ್ನೂ ಇಷ್ಟು ಲಿರಿಕಲ್ಲಾಗಿ ಹೇಗೆ ಬರೀತಾರಪ್ಪ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡೇ ಎರಡು ರೂಪಾಂತರದ ಪ್ರಯತ್ನ. ನಾನು original ಪದ್ಯಗಳ ಜೊತೆ ಸಿಕ್ಕಾಪಟ್ಟೆ ಜಾಸ್ತಿಯೇ liberty ತೆಗೆದುಕೊಂಡಿರುವುದರಿಂದ ರೂಪಾಂತರ ಅಥವಾ ನೆರುಡಾ ಪ್ರೇರಿತ ಅನ್ನುವುದೇ ಲೇಸು. ಮಸೂದೆ ಮತ್ತೊಮ್ಮೆ.)

1. ಬೆಸ್ತನ ಹಾಡು

ನಡುಗಡ್ಡೆ, ಸುತ್ತ ಕಡಲು.

ಉಕ್ಕಿ ಉಕ್ಕುಕ್ಕೊ ಒಡಲು.

 

ಈ ಗಳಿಗೆ ಹೌದು

ಮತ್ತೊಂದು ಗಳಿಗೆ ಅಲ್ಲ

ಹೌದು ಅಲ್ಲ, ಹೌದು ಅಲ್ಲಲ್ಲ

ಕೂಗುತಿದೆ ನೀಲಿ ಕೊರಳು.

 

ಸುಮ್ಮನಿರಲಾರದಲೆ

ಬುಸುಗುಡುತ ಉಸಿರುತಿದೆ

ಅಲ್ಲಲ್ಲಿ ಇಲ್ಲಿಲ್ಲಿ

ನನ್ನ ಹೆಸರು.

 

ಬಂಡೆಗೊಮ್ಮೆ ಫಟೀರ್ ಹೊಡೆದು

ಮತ್ತೆ ಮುನಿದ ಕೆನ್ನೆಯ

ನೇವರಿಸಿ, ಮುತ್ತಿಟ್ಟು,

ನೆನೆಸಿ, ಲಲ್ಲೆಗರೆಯುತಿದೆ.

 

ಏಳು ನಾಲಿಗೆಗಳ ಹಸಿರು ಪ್ರಾಣಿ…

ಇದನು ಕುನ್ನಿಯೆನ್ನಿ, ಹುಲಿಯೆನ್ನಿ 

ಎದೆ ತಟ್ಟಿ ತನ್ನ ಹೆಸರ ತಾನೇ

ಉಗ್ಗುಗ್ಗಿ ಹೇಳುತಿರುವ ಕಡಲೇ ಅನ್ನಿ.

 

ಓ ಕಡಲೇ, ನನ್ನ ಸಖ ಕಡಲೇ,

ಕೋಪತಾಪ, ನೀರ ಭರ

ಎಲ್ಲ ಕಟ್ಟಿಟ್ಟು

ಅಭಯ ಹಸ್ತವ ತೋರು.

 

ಬರಿಯ ಬೆಸ್ತರು ನಾವು.

ತಡಿಯ ಬಡಪಾಯಿಗಳು.

ಕೊರೆವ ಚಳಿ, ಸುಡುವ ಹಸಿವು

ತಂದಿಟ್ಟ ವೈರಿ ನೀನು.

 

ಛಡಿ ಏಟು, ಕರ್ಕಶ ಬೈಗುಳಕ್ಕೆ

ಸ್ವಲ್ಪ ತೆರೆ ಎಳೆದು

ನಿನ್ನ ಹಸಿರು ಖಜಾನೆ ಧಾರಾಳ ತೆರೆ,

ಮೊಗೆಮೊಗೆದು ಕೊಡು ಹೊಳೆವ ಬೆಳ್ಳಿ.

 

ಸಧ್ಯಕ್ಕೆ, ದಿನದ ಊಟಕ್ಕೆ, ಒಂದಷ್ಟು ಮೀನು ಕೊಡು.

 

2. ಹಿಂಡಿ ಹಿಪ್ಪೆಯಾದ ಆತ್ಮ

 

ಕಳೆದು ಹೋಗುತ್ತಲಿದೆ ಮತ್ತೊಂದು ಮುಸ್ಸಂಜೆ

ಇಂದು ನಾವು ಕೈಕೈ ಹಿಡಿದು ನಡೆದದ್ದು ಯಾರೂ ನೋಡಲಿಲ್ಲ.

 

ರಾತ್ರಿಯ ನೀಲಿ ಕೌದಿ ನಿಧಾನವಾಗಿ ಭೂಮಿ ಹೊದ್ದ ಹಾಗೆ

ದೂರದ ಬೆಟ್ಟದ ಮೇಲೆ ಸೂರ್ಯನ ಕೊನೆಯ ಬಂಗಾರದೋಕುಳಿ.

 

ಒಮ್ಮೆಮ್ಮೆ ಸೂರ್ಯ ನನ್ನ ಮುಷ್ಟಿಯಲಿ ಸಿಕ್ಕಿ ಸುಡುವುದುಂಟು

ಹಿಂಡಿದ ಆತ್ಮದ ಕಡುಗಪ್ಪು ದುಃಖದಲಿ ನಿನ್ನ ನೆನಪು ತೋಯುವುದುಂಟು.

 

ಅಂದು ಎಲ್ಲಿದ್ದೆ ನೀನು? ಯಾರು ನಿನ್ನ ಜೊತೆಗಿದ್ದರು? ಏನು ಮಾತಾಯಿತು?

ನೂರು ಕಡಲಾಚೆ ನೀನಿದ್ದಾಗ ಹೀಗೆ ಪ್ರೀತಿ ಉಕ್ಕಿ ಬರುವುದು ಯಾಕೆ?

 

ಓದದ ಪುಸ್ತಕ ಮಗುಚಿ ಬಿದ್ದು ಒದ್ದಾಡುತ್ತಿದೆ ಒಂದು ಮೂಲೆಯಲಿ

ಒದೆ ತುಂದು ಮಲಗಿದ ನಾಯಿಯಂತೆ ಕಾಲ ಬಳಿ ಹಳೆಯ ಶಾಲು.

 

ನೀನು ಮೆಲ್ಲಮೆಲ್ಲಗೆ ಹೊರಟು ಹೋಗುವುದೇ ಹೀಗೆ

ಪ್ರತಿಮೆಗಳನಳಿಸುತ್ತಾ ಸಂಜೆ ಮುಸ್ಸಂಜೆಯಾಗುವ ಹಾಗೆ.

 

Advertisements

10 ಟಿಪ್ಪಣಿಗಳು »

 1. b.beerbasha said

  ನೆರೂಡನನ್ನು ಕನ್ನಡಕ್ಕೆ ತಂದಿದ್ದೆ ಖುಯ “ಷಯ. ಇಂಗ್ಲೀಷ್ ಭಾಷೆ ಮತ್ತು ನೆರೂಡ ಎರಡನ್ನೂ ಬಲ್ಲ ನಿಮ್ಮಂತವರು ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಾಗಿ ತೊಡಗಿಸಿಕೊಂಡರೆ ನಮಗೆ ಇನ್ನೂ ಖು.
  ಕನ್ನಡದಲ್ಲಿ ನೆರೂಡನ ಬಗ್ಗೆ ಆಗಿರುವ ಕೆಲಸ ತುಂಬಾ ಕಡಿಮೆ. ಕ”ತೆಗಳನ್ನು ಅನುವಾದಿಸಿ, ಕೊರತೆಗಳನ್ನು ಒಂದಿಷ್ಟು ನೀಗಿಸುವ ಕೆಲಸ ನಿ”ಂದಲೂ ಆಗಿರುವುದು ಸಂತೋಷ
  ಕ”ತೆ ಅನುವಾದ ಚೆನ್ನಾಗಿದೆ.
  – ಬಿ. ಪೀರ್‌ಬಾಷ

 2. kannadake bandiruva neroda nige mosavaagilla .kavithe ropadalli kannadake neroda barali

 3. sandeep said

  ಕವಿತೆಗಳ ಅನುವಾದ ಚೆನ್ನಾಗಿದೆ. ಕನ್ನಡದಲ್ಲಿ ನೆರೂಡನ ಅನುವಾದ ಸಾಕಷ್ಟು ಆಗಿದೆ. ತೇಜಸ್ವಿನಿ ನಿರಂಜನ (ಮರಳಿ ಬರುವೆ), ನಿಸಾರ್ ಅಹ್ಮದ್ (ಬರಿ ಮರ್ಯಾದಸ್ಥರೆ) ಕವಿತೆಗಳ ಅನುವಾದವಾಗಿದ್ದರ್, ನಯನಾ ಕಾಶ್ಯಪ್ ನೆರುಡಾ ಆತ್ಮಕಥೆ ‘ನೆನಪು ತೆರೆದ ಕವಿ ಮನ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಇವೆಲ್ಲ ಕನ್ನಡದಲ್ಲಿ ಬಂದ ನೆರೂಡನ ಬಗ್ಗೆ ವಿವರಗಳು. ಆಗಾಗ ಲಂಕೇಶ್, ನಾಗಭೂಷಣ ಸ್ವಾಮಿ ಕವಿತೆಗಳನ್ನು ಅನುವಾದಿಸಿದ್ದಾರೆ. ಬಾಗೇಶ್ರೀ ಮೇಡಂ, ನೀವೂ ಪುಸ್ತಕ ರೂಪದಲ್ಲಿ ನೆರೂಡನನ್ನು ಕನ್ನಡಿಗರಿಗೆ ಕೊಡಿ.
  -ಸಂದೀಪ

 4. Bageshree said

  ಹೌದು. ನೆರುಡಾ ಪದ್ಯಗಳು ಬಹಳಷ್ಟು ಕನ್ನಡಕ್ಕೆ ಬಂದಿವೆ. After all he is everyone’s pet poet! Youtube ನಲ್ಲಿ ನೆರುಡ ಪದ್ಯಗಳ rendering ಸಾಕಷ್ಟಿವೆ. ನೆರುಡಾ ಲವ್ ಪೊಯಮ್ ಗಳಲ್ಲಿ ನನಗೆ ತುಂಬ ಇಷ್ಟ ಆದ ಒಂದು ಪದ್ಯದ ಇಂಗ್ಲಿಷ್ ಮತ್ತು ಸ್ಪಾನಿಶ್ rendering link ಇಲ್ಲಿದೆ. ಒಂದು ತುಂಬ ಹಳೆಯ ವಿಡಿಯೋ. ಆದರೆ ಅದರ guitar ತುಂಬಾ ಚೆನ್ನಾಗಿದೆ.

 5. Bageshree said

  Sorry. ಲಾಸ್ತ್ ಟೈಮ್ ಯಾಕೊ ಇಂಗ್ಲಿಷ್ rendering link ಆಗಲಿಲ್ಲ. ಇಲ್ಲಿದೆ:

 6. ಬಸವರಾಜು said

  ನೆರೂಡ ಅಂದಾಕ್ಷಣ ಯಾಕೋ ಲಂಕೇಶರು ನೆನಪಾದರು. ಆತನ ಹೆಸರಿನಿಂದ ಹಿಡಿದು ಪದ್ಯ, ಪುಸ್ತಕಗಳು, ಫೋಟೋಗಳು ಎಲ್ಲವೂ ನಮಗೆ ಗೊತ್ತಾಗಿದ್ದೇ ಲಂಕೇಶರಿಂದ. ಈಗ ನಿಮ್ಮ ಕಡೆಯಿಂದೊಷ್ಟು. ಎರಡು ಪದ್ಯಗಳ ಅನುವಾದವೂ ಚೆನ್ನಾಗಿದೆ. ಇನ್ನಷ್ಟು ಬರೆಯಿರಿ.
  -ಬಸವರಾಜು

 7. samay siddhartha said

  At last i found a huge space to get neruda, neelu, ki.ram… and many to mention.
  We are grateful to you bageshree

 8. vidyajoseph said

  neruda is my perennial favourite – to teach, to read, to dream about… wonderfully done… do try a hand at Tonight as well..

  vidya

 9. ತುಂಬಾ ಇಷ್ಟವಾಯ್ತು. ನಿಮ್ಮ ಬ್ಲಾಗ್ ಕೂಡ.
  ನಲ್ಮೆ,
  ಚೇತನಾ ತೀರ್ಥಹಳ್ಳಿ

 10. T.Surendra Rao said

  naanu nerudana kavithegalannella odilla. kelavannu maatra. nimma anuvvada hidisitu. nimma prayatna munduvareyali. shubhavaagali.

  T Surendra Rao

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: