ಮೈಕೆಲ್ ಎಂಬ ಮಾಂತ್ರಿಕನಿಗೆ ಕಾಡಿದ್ದು ಯಾವ ಪೀಡೆ?

ಮೈಕೆಲ್ ಜಾಕ್ಸನ್ ತನ್ನ ಕೊನೆ ಶೋ ಗೆ ಬಂಗಾರದ ನೀರು ಎರೆದ ಪೆಟ್ಟಿಗೆಯಲ್ಲಿ ಲಾಸ್ ಎಂಜಲಿಸ್ಸಿನಲ್ಲಿ ತಯಾರಾಗ್ತಾ ಇದ್ದಾನೆ. ಅವನ ಮೆಮೊರಿಯಲ್ ಸರ್ವೀಸ್ ನೋಡಲಿಕ್ಕೂ ಟಿಕೆಟ್ಟುಗಳಿವೆಯಂತೆ…

ಈ ಮೂಳೆ-ರಹಿತ ಮಾಂತ್ರಿಕ ಸತ್ತ ದಿನದಿಂದ ಪೇಪರ್ರುಗಳ ತುಂಬ ಇವನ ಒಂದಲ್ಲ ಒಂದು ಪುರಾಣ : ಇವನ ಸಾವಿಗೆ ಹೊಣೆ ಯಾರು? ಅವನಿಗೆ ಸಾಲ ಎಷ್ಟಿತ್ತು? ಜುಲೈನಲ್ಲಿ ಆಗಬೇಕಿದ್ದ ಅವನ ಲಂಡನ್ ಟೂರ್ ಅವನ ಸಾಲದ ಹೊರೆಯನ್ನು ತಗ್ಗಿಸುತ್ತಿತ್ತೆ? ಸಾಯುವಾಗ ಅವನ ತಲೆಯಲ್ಲಿ ಎಷ್ಟು ಕೂದಲು ಉಳಿದಿತ್ತು? ಹೊಟ್ಟೆಯಲ್ಲಿ ಎಷ್ಟು ಔಷಧಿ ತುಂಬಿತ್ತು? ಅವನ ಮಕ್ಕಳ ನ್ಯಾನಿ ಅವನ ಬಗ್ಗೆ ಏನೇನು ಹೇಳ್ತಾಳೆ?… ಇತ್ಯಾದಿ. 

ಇದೆಲ್ಲಾ ಓದಿ, ಓದಿ ಬೇಜಾರಾಗಿ ಅವನ ಕೆಲವು ಹಾಡುಗಳ ವಿಡಿಯೊ ಸುಮ್ಮನೆ ನೋಡುತ್ತಾ ಕೂತಿದ್ದೆ. ಜಾಕ್ಸನ್ ಚೆಹರೆ ಬದಲಾಗುತ್ತಾ ಹೋಗಿದ್ದನ್ನು ಬಿಂಬಿಸುವ ಬಿಬಿಸಿ ವೀಡಿಯೊ ನೋಡುತ್ತಿದ್ದಾಗ (http://news.bbc.co.uk/2/hi/entertainment/8121391.stm) ನನ್ನ ೯ ವರ್ಷದ ಮಗಳು ತಾನೂ ಕುತೂಹಲದಿಂದ ನನ್ನ ಜೊತೆ ನೋಡತೊಡಗಿದಳು. ಮುಗಿದ ಮೇಲೆ ತುಂಬಾ ಆಶ್ಚರ್ಯದಿಂದ “ಅಷ್ಟು ಕ್ಯೂಟ್ ಆಗಿದ್ದ ಹುಡುಗ ಇಷ್ಟು ದೆವ್ವದ ಥರ ಆಗಿದ್ದು ಹೇಗಮ್ಮ?” ಅಂತ ಕೇಳಿದಳು. ನನಗೆ ಥಟ್ಟನೆ ನೆನಪಾದದ್ದು ಕೆ.ವಿ.ಅಯ್ಯರ್ ಅವರ “ರೂಪದರ್ಶಿ”. ಆ ಕಾದಂಬರಿಯಲ್ಲಿ ಮೈಕೆಲ್ ಏಂಜಲೋ ಬಾಲ ಏಸುವಿನ ಚಿತ್ರ ಬರೆಯಲು ಕರೆತಂದ ರೂಪದರ್ಶಿಯೇ ಕೊನೆಗೆ  ಜೂಡಾಸ್ ಚಿತ್ರ ಬರೆಯುವಾಗಲೂ ರೂಪದರ್ಶಿಯಾಗಿ ಒದಗುತ್ತಾನೆ.

ಈಗ ನಲವತ್ತರ ಆಸುಪಾಸಿನಲ್ಲಿರುವ ಬಹಳ ಜನರಿಗೆ ಜಾಕ್ಸನ್ nostalgiaಯದ ಒಂದು ಅಂಗ. ನನ್ನ ಗಂಡ ತಾನು ಮೊಟ್ಟ ಮೊದಲು public ಆಗಿ ನೃತ್ಯ ಮಾಡಿದ್ದು “Beat It” ಹಾಡಿಗೆ ಅಂತ ನೆನೆಸಿಕೊಳ್ಳುತ್ತಾ ಇದ್ದ. ನಾನು ಮತ್ತು ನನ್ನ ತಮ್ಮ ಮೊದಲ ಬಾರಿ ಜಾಕ್ಸನ್ನಿನ ಈ ಹಾಡು ಕೇಳಿದಾಗ ಆಗ ತಾನೆ ಬೆಂಗಳೂರಿಗೆ ಬಂದು ಕಣ್ಕಣ್ಣು ಬಿಡ್ತಾ ಇದ್ದೆವು. ನಮಗೆ ಇವನ ಅಮೇರಿಕನ್ accentನಲ್ಲಿ “ಬೀಟ್ ಇಟ್” ಅನ್ನುವುದು ಥೇಟ್ “ಪೀಡೆ” ಅನ್ನುವ ಹಾಗೆ ಕೇಳಿಸಿ, ಇವನ್ಯಾಕೆ “ಪೀಡೆ, ಪೀಡೆ” ಅಂತ ಹಾಡ್ತಾನೆ ಅಂತ ಅನ್ನಿಸಿತ್ತು. (ಈಗಲೂ ಬೇಕಾದರೆ ಕನ್ನಡದ ಕಿವಿಯಿಂದ ಈ ಹಾಡು ಕೇಳಿ, ನಿಮಗೂ ಹಾಗೇ ಕೇಳಿಸೀತು!) ಯಾರಿಗಾದರೂ ಕೇಳಿದರೆ ಅವರು ನಮ್ಮನ್ನು ಗುಗ್ಗು ಅಂದುಕೊಳ್ಳಬಹುದು ಅನ್ನುವ ಭಯಕ್ಕೆ ನಮ್ಮನಮ್ಮಲ್ಲೇ ಮಾತಾಡಿಕೊಂಡು ಸುಮ್ಮನಾಗಿಬಿಟ್ಟೆವು.

ಆ ಪದಗಳು ಏನು ಅಂತ ನಮಗೆ ಅರ್ಥ ಆಗಿದ್ದು ಬಹಳ ನಂತರದಲ್ಲಿಯೇ ಆದರೂ ನಮಗೆ ಜಾಕ್ಸನ್ ಆಗಲೆ ಹತ್ತಿರದವನಾಗಿದ್ದ. ಈತನ ವಿಧವಿಧ ತಿಕ್ಕಲುಗಳು, ಇವನ ಸಂಗೀತ-ನೃತ್ಯದ ಸಮ್ಮೋಹನ ಕಲೆ ಮತ್ತು MTV, pepsi ಇತ್ಯಾದಿ ವಾಣಿಜ್ಯ ಉದ್ದಿಮೆಗಳು ಕೈಕೈ ಹಿಡಿದು ನಡೆದ ರೀತಿ ಇತ್ಯಾದಿಗಳ ಬಗ್ಗೆ ನಾವು ಆಗ ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಆದರೆ ಯಾರಾದರೂ ಚೆನ್ನಾಗಿ western ಶೈಲಿ ನೃತ್ಯ ಮಾಡಿದರೆ “ಏನವನು ಮೈಕೆಲ್ ಜಾಕ್ಸನ್ ಅಂದುಕೊಂಡಿದ್ದಾನ?” ಅಂತ ಕನ್ನಡದ ಕುಲಪುತ್ರರಾದ ನಾವು ಹೊಟ್ಟೆಕಿಚ್ಚಿನಿಂದ ಹೇಳುವಷ್ಟು ಅವನು ನಮ್ಮ ಭಾಷೆಯ ಭಾಗವಾಗಿದ್ದ. ಪ್ರಭುದೇವ ಮತ್ತು ಅವನಷ್ಟು ಪ್ರಸಿದ್ಧಿಗೆ ಬರದ ಅನೇಕ ನೃತ್ಯಗಾರರ eternal inspiration ಜಾಕ್ಸನ್ನೇ ಅನ್ನುವದನ್ನು ಯಾರೂ ಅಲ್ಲಗಳೆಯುವಂತಿಲ್ಲ. ನಮ್ಮ ೮೦ರ ದಶಕದ ಸಿನೆಮಾ ನೃತ್ಯಗಳಲ್ಲಿ ಜಾಕ್ಸನ್ನನ ಛಾಪು ಗಾಢವಾಗಿಯೇ ಕಾಣುತ್ತದೆ. ಮೊನ್ನೆ ನಮ್ಮ ಯಾವುದೋ ಕನ್ನಡ ವಾಹಿನಿಯಲ್ಲಿ ಬರುವ “ಕುಣಿಯೋಣು ಬಾರ” ಎಂಬ ಮಕ್ಕಳ ಡಾನ್ಸ್ ಸ್ಫರ್ಧೆ ನೋಡುವಾದ ಈಗಲೂ ಜಾಕ್ಸನ್ ಶೈಲಿ ನಮ್ಮನ್ನು ಎಷ್ಟು ಆವರಿಸಿದೆ ಅನ್ನಿಸಿತು.

ಸಂಗೀತವನ್ನು ಕಿವಿಗಲ್ಲ ಕಣ್ಣಿಗೆ ಉಣಬಡಿಸಬಹುದು ಎಂದು ಪ್ರಪಂಚಕ್ಕೆ ತೋರಿಸಿಕೊಟ್ಟವನೇ ಜಾಕ್ಸನ್. ಬರೀ ಜಾಕ್ಸನ್ ಅನ್ನುವಂತೆಯೂ ಇಲ್ಲ. MTV ಆಗ ತಾನೆ ಜನಪ್ರಿಯವಾಗುತ್ತಿದ್ದ ಆ ಸಂದರ್ಭದಲ್ಲಿ ಜಾಕ್ಸನ್ನನ್ನ ನೃತ್ಯ-ಸಂಗೀತಗಳ ಮಿಶ್ರಣ ನ ಭೂತೊ-ನ ಭವಿಷ್ಯತಿ ಅನ್ನುವ ಮಟ್ಟಿನ ಪ್ರಚಾರ, ದುಡ್ಡಿನ ಸುರಿಮಳೆಯನ್ನು ಕಂಡಿತು. ಇದೇ ಕಾರಣಕ್ಕೆ ಅವನನ್ನು “musician” ಅನ್ನಬಾರದು “performer” ಅನ್ನಬೇಕು ಅನ್ನುವ ವಾದವೂ ಇದೆ. ಜಾಕ್ಸನ್ ಹಾಡುಗಳನ್ನು ತಾನೇ compose ಮಾಡುತ್ತಿರಲಿಲ್ಲ. ಅವನ ಶೋಗಳಲ್ಲಿ ಅವನ moonwalk, ಲೈಟುಗಳು, trickಗಳು ಹಾಡಿನಷ್ಟೆ ಬಹಳ ಮುಖ್ಯ. ಅವನನ್ನು performer ಅಂತಲೇ ಕರೆಯಿರಿ, ಯಾವತ್ತೂ commerce ಕೈ ಗಟ್ಟಿ ಹಿಡಿದೇ ನರ್ತಿಸಿದ ಕಲಾವಿದ  ಅಂತಲೇ ಅನ್ನಿ. ಈ ಯಾವ analysis ಕೂಡ ಇವನು ಸ್ಲಮ್ ಬಾಲಕರಿಂದ ಹಿಡಿದು ನಮ್ಮ ಬಾಲಿವುಡ್ ನೃತ್ಯ ನಿರ್ದೇಶಕರವರೆಗೆ ಎಲ್ಲರನ್ನೂ ಸಮ್ಮೋಹನಗೊಳಿಸಿದವನು ಎಂಬ ಸತ್ಯವನ್ನು ಒರೆಸಿ ಹಾಕುವುದಿಲ್ಲ.

ಎಂತಹ superhuman success ಕತೆ ಕೊನೆಗೆ ಆರೋಗ್ಯ, ಮನಸ್ಸು, ದುಡ್ಡು ಎಲ್ಲವೂ ಸರ್ವನಾಶ ಆಗಿ ಹೋದ ಸ್ಥಿತಿ ತಲುಪಿದ್ದು ಯಾಕೆ? ಹೇಗೆ?

ಜಾಕ್ಸನ್ ಮತ್ತೆ ಮತ್ತೆ ತನ್ನ ಬಾಲ್ಯದ ಕತೆ ಹೇಳಿಕೊಂಡಿದ್ದಾನೆ. ಅವನ working class ಅಪ್ಪ ತನ್ನ ಮಕ್ಕಳ ಸಂಗೀತದ ಪ್ರತಿಭೆಯನ್ನು ಗುರುತಿಸಿ ಅವರನ್ನು ಮುಂದೆ ತರಬೇಕೆಂಬ ಒಂದೇ ಹಂಬಲದಿಂದ ಅವರನ್ನು ಹಗಲು-ರಾತ್ರಿ ತಾಲೀಮ್ ಮಾಡಿಸುತ್ತಿದ್ದ. ತುಂಬ ಪುಟ್ಟ ಹುಡುಗನಾಗಿದ್ದಾಗಲೇ performer ಆಗಿಬಿಟ್ಟ ಇವನಿಗೆ ಬಾಲ್ಯ ಅಂತಲೇ ಇರಲಿಲ್ಲ. ಅವನ ನಂತರದ ಅನೇಕ ತಿಕ್ಕಲುಗಳಿಗೆ — ಉದಾಹರಣೆಗೆ Neverland ಅನ್ನುವ ಕೋಟೆ ಕಟ್ಟಿಕೊಂಡು ತಾನು ಪೀಟರ್ ಪ್ಯಾನ್ ಅನ್ನುವ ಭ್ರಮೆಯಲ್ಲಿ ಬದುಕಿದ್ದು, ತನ್ನ ದನಿ, ಚಹರೆಗಳೆರಡರಲ್ಲೂ ಬಾಲ್ಯದ ಲಕ್ಷಣಗಳನ್ನು ಉಳಿಸಿಕೊಂಡಿದ್ದು, ಮಕ್ಕಳ ಜೊತೆ ಮಲಗಿ paedophile ಎಂಬ ನಿಂದನೆ ಎದುರಿಸಿದ್ದು  ಹೀಗೆ ನೂರಾರು — ಇವನ ಎಡವಟ್ಟು ಬಾಲ್ಯವೇ ಕಾರಣ ಎಂಬುವವರಿದ್ದಾರೆ.

ಹಾಗಂತ ಹೇಳಿ ಬಿಟ್ಟುಬಿಡುವುದು ಸುಲಭ. ಅವನೇನೂ ಬಾಯಲ್ಲಿ ಬೆರಳಿಟ್ಟರೆ ಕಚ್ಚಲು ಬರದ ಮೂರ್ಖನೂ ಆಗಿರಲಿಲ್ಲ. ಹಾಡುಗಾರ ಮಾತ್ರವಲ್ಲದೆ ಒಂದು ಕಾಲದಲ್ಲಿ ಒಳ್ಳೆ businessman ಆಗಿದ್ದವನು ಇವನು. ೮೦ ದಶಕದ ಅಂತ್ಯದ ಹೊತ್ತಿಗೆ ಇವನ ತಾರವರ್ಚಸ್ಸು ಕಡಿಮೆಯಾದ ಹಾಗೆ ಒಂದು ಕಡೆ business ಬಿದ್ದು ಹೋದರೆ ಇನ್ನೊಂದೆಡೆ ಇವನ ಅನೇಕಾನೇಕ ಹುಚ್ಚುಗಳೂ ಪರಾಕಾಷ್ಠೆ ಮುಟ್ಟತೊಡಗಿದವು. ಒಂದು ಕಾಲದಲ್ಲಿ ಪ್ರಚಾರಕ್ಕಾಗಿ ಬೇಕಂತಲೇ tabloidಗಳಿಗೆ ಆಹಾರ ಒದಗಿಸುತ್ತಿದ್ದ ಜಾಕ್ಸನ್ನಿಗೆ ತನಗೆ ಸಾಕೆನ್ನಿಸಿದಾಗ ಅವುಗಳ ಬೆನ್ನು ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾಗಲೇ ಇಲ್ಲ. ಇದು ಯಾವ ಮಟ್ಟಕ್ಕೆ ತಲುಪಿತೆಂದರೆ ಜಾಕ್ಸನ್ ಬಗ್ಗೆ ಪುಂಕಾನುಪುಂಕವಾಗಿ ಬರುತ್ತಿದ್ದ ಸುದ್ದಿಗಳಲ್ಲಿ ನಿಜ ಎಲ್ಲಿ ಅಡಗಿದೆ ಎನ್ನುವ ಪ್ರಶ್ನೆಯೇ ಕಷ್ಟವಾಯಿತು. (ಸತ್ತ ಮೇಲೂ ಇದೇ ಪರಿಸ್ಥಿತಿ ಇದೆ!)

ಅದರಂತೆಯೇ ಅವನ ಬದಲಾಗುತ್ತಾ ಹೋದ ಮುಖ ಮುಖವೇ ಅಥವಾ ಮುಖವಾಡವೇ ಅನ್ನುವ ಪ್ರಶ್ನೆಯೂ ಪ್ರಶ್ನೆಯಾಗಿಯೇ ಹೋಯಿತು. ನಿಜವಾಗಿಯೂ vitiligo ರೋಗ ಬಚ್ಚಿಡಲಿಕ್ಕೆ ಅವನು ಮೊದಲ ಶಸ್ತ್ರಚಿಕಿತ್ಸೆ ಮಾಡಿಕೊಂಡಿದ್ದಾ ಅಥವಾ ಅವನ ಒಳಗೆ ತನ್ನ ಬಣ್ಣದ ಬಗ್ಗೆಯೇ ಅಡಗಿದ್ದ ದ್ವೇಷದಿಂದಲಾ? ಗೊತ್ತಿಲ್ಲ. ಒಟ್ಟಿನಲ್ಲಿ ಅವನ ಚರ್ಮದ ಬಣ್ಣ ಬಿಳಿಯಾಯಿತು, ಮೂಗು ಮತ್ತು ಗಲ್ಲ ಇನ್ನೇನು ಬಿದ್ದೇ ಹೋಗುತ್ತದೇನೋ ಅನ್ನುವಷ್ಟು ಮಟ್ಟಿಗೆ ಚೂಪಾಯಿತು. ನೂರಾರು ಶಸ್ತ್ರಚಿಕಿತ್ಸೆಗಳಾದವು, ಅವುಗಳ ಕಲೆ ಬಚ್ಚಿಡುವುದಕ್ಕೆ ಮತ್ತಷ್ಟು ಶಸ್ತಚಿಕಿತ್ಸೆಗಳಾದವು. ನೋವುಗಳನ್ನು ನುಂಗುವುದಕ್ಕೆ ತರಾವರಿ ಮಾತ್ರೆಗಳನ್ನು ನುಂಗತೊಡಗಿದ… ಕರಿಯ ಕ್ಯೂಟ್ ಹುಡುಗ ಬೆಳ್ಳಗಾಗುತ್ತಾ, ಆಗುತ್ತಾ ಕೊನೆಗೆ ಮೋಹಿನಿ ದೆವ್ವದಂತೆ ಆದ.

ನಮ್ಮನಮ್ಮ ತಲೆಯೊಳಗಣ ದೆವ್ವಗಳು, ಜೀವನದ ವೈಚಿತ್ರ್ಯಗಳು, ಏಳುಬೀಳುಗಳು, ಇದರೆಲ್ಲದರೊಳಗೆ ಮಿಳಿತವಾದ ವಾಣಿಜ್ಯ ಉದ್ಯಮ ಎಲ್ಲಾ ಸೇರಿ ಮನುಷ್ಯನ ಚೆಹರೆಯನ್ನು (ಜಾಕ್ಸನ್ನಿನ caseನಲ್ಲಿ ಮುಖದ ಚೆಹರೆಯೂ ಸೇರಿದಂತೆ) ಹೇಗೆ ಸಂಪೂರ್ಣ ಬದಲಿಸಿಬಿಡಬಲ್ಲವು ಅಲ್ಲವಾ?! ಒಮ್ಮೆ ಬೇಕಂತ ಸುತ್ತ ಕಟ್ಟಿಕೊಂಡ image, ಸಾಮ್ರಾಜ್ಯ, ವಾಣಿಜ್ಯ ವಹಿವಾಟುಗಳ ಬಲೆ ಎಲ್ಲ ಅವನನ್ನೇ ನುಂಗತೊಡಗಿದವು. ಒಂಥಾರಾ ಇದು ಹುಲಿ ಏರುವ ಸಮಾಚಾರ. ಹತ್ತಿದ ಮೇಲೆ ಇಳಿದರೆ ಹುಲಿಯ ಆಹಾರ ಆಗಬೇಕು. ಪ್ರಸಿದ್ಧಿ ಸಂಪೂರ್ಣ ನೆಲದ ಹಂಗು ತೊರೆದು superhuman ಹಂತ ತಲುಪಿದಾಗ ಬಾಲಏಸು ಜೂಡಾಸ್ ಆಗುವುದು ಅನಿವಾರ್ಯವೇ ಇರಬಹುದು.

P.S:  ಮೈಕೆ ಜಾಕ್ಸನ್ ಬಗ್ಗೆ ಬಂದ ಅನೇಕ ಲೇಖನಗಳಲ್ಲಿ ನನಗೆ ಇಷ್ಟವಾದ ಎರಡು Guardian ಲೇಖನದ ಲಿಂಕ್ ಇಲ್ಲಿದೆ:  http://www.guardian.co.uk/music/2009/jun/26/michael-jackson-death-in-la ಮತ್ತು http://www.hindu.com/2009/06/30/stories/2009063055970900.htm

Advertisements

6 ಟಿಪ್ಪಣಿಗಳು »

 1. balu said

  ನಾನು ಜ್ಯಾಕ್ಸನ್ ನ ಡೇಂಜರಸ್ ಹಾಡು ಮೊದಲು ಕೇಳಿದಾಗ ಏನು ಅರ್ಥ ಆಗಿರಲಿಲ್ಲ. ಆಮೇಲೆ ಎಷ್ಟೋ ವರ್ಷಗಳ ನಂತರ ಗೂಗಲ್ ಮಾಡಿ ತಿಳಿಯೋಕು ಮೊದಲು ಅವನು ಇಷ್ಟ ಆಗಿದ್ದ. ಅವನ ಡಾನ್ಸ್, ಬಣ್ಣ ಬದಲಾದದು, ಅವನ ಮಕ್ಕಳು.. ಎಲ್ಲ ತಿಕ್ಕಲು ಗಳ ನಡುವೆನು ಇಷ್ಟ ಆಗಿದ್ದ.

  ನಿಮ್ಮ ಕೊನೆಯ ಸಾಲು “ಪ್ರಸಿದ್ಧಿ ಸಂಪೂರ್ಣ ನೆಲದ ಹಂಗು ತೊರೆದು superhuman ಹಂತ ತಲುಪಿದಾಗ ಬಾಲಏಸು ಜೂಡಾಸ್ ಆಗುವುದು ಅನಿವಾರ್ಯವೇ ಇರಬಹುದು.” ತುಂಬ ಅರ್ಥ ಪೂರ್ಣ ಅನ್ನಿಸಿತು.

 2. ಓಳ್ಳೆಯ ವಿಮರ್ಷೆ, ಲೇಖನಕ್ಕಾಗಿ ಧನ್ಯವಾದಗಳು

  -ಶೆಟ್ಟರು

 3. ನನಗೂ ಮೊದ್ಲು ಮೈಕಲ್‌ ಜಾಕ್ಸನ್‌ ಬಗ್ಗೆ ‘ಒಂಥರಾ’ಒಪೀನಿಯನ್‌ ಇತ್ತು. ಆತ ಸತ್ತ ಮೇಲೆ ಅವನ ಒಂದಿಷ್ಟು ಆಲ್ಬಂಗಳನ್ನ ನೋಡಿದ್ದು. ಈಗ ಅದ್ಯಾಕೋ ಬೇಜಾರಾಗ್ತಿದೆ. ಬರಹ ಚೆನ್ನಾಗಿದೆ.

 4. natarajhuliyar said

  hi
  nice to see your kannada write -up after a longtime.

 5. ma.naa.krishna murthy said

  maichel na bagge vimarsheyeno chennagide.aadare vimarshe poorti avana tikkalugala bagge avana vyavahaara(business)na bagge maatrave giriaki hodedu,avana vyaktithvada bagge elloo belaku chelluvudilla.taanu dudida kotyaantara dollar hanadalli bahu paalu avanu charitigalige,anatha makkala kalyanakkagi denige needuva bagge elloo kamentisuvudilla.maike obba huccaniginta enoo kadime iruvudilla embudu estu satyavo,avanu jagattinedege belesikonda maanaveeyateya vyaktitvavoo aste satya.pop jagattinalli yaaroo eradastu ettarakkeridavana sadaneyannoo ondastu hogalidare michael jackson ge santhoshavaguttadeyo illavo,odida kelavarigaadaroo santhoshavasuttade,naanenu avana abhimaaniyalla..

 6. keshava prasad said

  lekhana chennagide

  keshava prasad b kidoor

  http://nudichaitra.blogspot.com

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: