Archive for ಅಕ್ಟೋಬರ್, 2009

ಗಾಂಧಿತಾತ ಎಂಬ ಬ್ರಾಂಡ್

ಮೊದಲ ಬಾರಿ ಈ ಸುದ್ದಿಯನ್ನು PTI ಟಿಕ್ಕರ್ ನಲ್ಲಿ ನೋಡಿದಾಗ ಇದ್ಯಾವ ತಮಾಷೆ ಅನ್ನಿಸಿತು. ಮರುದಿನ ಪೇಪರ್ರುಗಳಲ್ಲಿ ಇದೇ ಸುದ್ದಿ: ಮೋ ಬ್ಲಾ ಎನ್ನುವ MNC ಸಂಸ್ಥೆ ೧೪೦ನೇ ಗಾಂಧಿಜಯಂತಿಯ ದಿನದಂದು  limited edition ಪೆನ್ನುಗಳನ್ನು ತಂದಿದೆ. ಅದರ ೧೮ ಕ್ಯಾರೆಟ್ ಬಂಗಾರದ ನಿಬ್ಬಿನ ಮೇಲೆ ಗಾಂಧಿ ಚಿತ್ರ ಇದೆ. ಗಾಂಧಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರದ ದ್ಯೋತಕವಾಗಿ (೨೪೧ ಮೈಲಿಗಳು) ಕೇವಲ ೨೪೭ limited edition ಪೆನ್ನುಗಳನ್ನು ಮಾಡಲಾಗಿದೆ. ಈ ಪೆನ್ನಿಗೆ ಖಾದಿಯ ನೂಲಿನ ಬಟ್ಟೆಯಂತಹ finish ಇದೆ… ಇತ್ಯಾದಿ. ಬೆಲೆ: ಕೇವಲ ೧೪ ಲಕ್ಷ. ಪೆನ್ನನ್ನು ಬಿಡುಗಡೆ ಮಾಡಿದ್ದು ಗಾಂಧಿಯ ಮರಿಮಗ ತುಷಾರ್ ಗಾಂಧಿ.  (http://beta.thehindu.com/news/national/article26755.ece) Read the rest of this entry »

Advertisements

Comments (1)