ಭಾರತ ಬಿಟ್ಟು ಎಲ್ಲಿಗೆ ತೊಲಗುವುದು?

ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಮೇಲೆ ಇನ್ನು ಏನು ದಾರಿ ಉಂಟು.

ಕಾಗೇರಿಯವರು ಆ ರೀತಿ ಕೋಲಾರದಲ್ಲಿ ಹೇಳಿದ ದಿನ ಅವರ ಒಂದು ಪಕ್ಕ ಪೇಜಾವರ ಶ್ರೀಗಳೂ ಇನ್ನೊಂದೆಡೆ ನಮ್ಮ ಸ್ಕೂಲುಗಳಲ್ಲಿ ಭಗವದ್ಗೀತೆ ಅಭಿಯಾನ ನಡೆಸಿ ಸಿಕ್ಕಾಪಟ್ಟೆ ಪುಣ್ಯ ಕಟ್ಟಿಕೊಂಡಿರುವ ಸೊಂದಾ ಶ್ರೀಗಳೂ ವಿರಾಜಮಾನರಾಗಿದ್ದರು. ಅದರಿಂದ ಅವರಿಗೆ ಸಿಕ್ಕಾಪಟ್ಟೆ ಉಮೇದು ಬಂದು ಇದು ಶಾಖೆಯ ಕಾರ್ಯಕ್ರಮ ಅಲ್ಲ  ಎಂಬುದನ್ನು ಒಂದು ಕ್ಷಣ ಮೈಮರೆತು ಹೇಳಿರಬಹುದಾ ಅಂತ ಅನ್ನಿಸಿತು. ಮುಂದಿನ ದಿನ ಮಂತ್ರಿಗಳ ಮಾಮೂಲಿ ಸ್ಟೈಲಿನಲ್ಲಿ ನಾನು ಹಾಗೆ ಹೇಳಲೇ ಇಲ್ಲ, ನನ್ನನ್ನು ಮಿಸ್ ಕೋಟ್ ಮಾಡಿದ್ದಾರೆ ಅಂತ ಹೇಳಿಯಾರು ಅಂದುಕೊಂಡಿದ್ದೆ. ಆದರೆ ಹಾಗೇನೂ ಆಗಲಿಲ್ಲ. ಅಷ್ಟೆ ಅಲ್ಲದೆ ಅವರ ಪಾರ್ಟಿಯ ಭೀಷಣ ಭಾಷಣಕಾರರಾದ ಈಶ್ವರಪ್ಪ ಅದೇ ಅರ್ಥದ ಮಾತುಗಳನ್ನು ಪುನರುಚ್ಛರಿಸಿದ್ದಾರೆ.

ಇನ್ನೂ ಆಶ್ಚರ್ಯವೆಂದರೆ ಯಾವುದೇ ಅನುಮಾನ ಇಲ್ಲದೆ ಫಾಸಿಸ್ಟ್ ಅಂತ ಕರೆಯಬಹುದಾದ  ಕಾಗೇರಿಯವರ ಮಾತನ್ನು ಖಂಡಿಸಬೇಕಾದಷ್ಟು ಯಾರೂ ತಕ್ಷಣದಲ್ಲಿ ಖಂಡಿಸಿಲಿಲ್ಲ. ಭೈರಪ್ಪನವರ ಕಾದಂಬರಿಯ ಬಗ್ಗೆ ತುಂಬಾ ತಲೆಕೆಡಿಕೊಂಡ ಮಂದಿಯೂ ಸೇರಿದಂತೆ ಎಲ್ಲರೂ ಒಬ್ಬ ಮಂತ್ರಿಯ ನೇರ ಧಮಕಿಯ ಬಗ್ಗೆ ಅದೇನೂ ವಿಶೇಷ ಅಲ್ಲ ಎಂಬಂತೆ ತಣ್ಣಗಿರುವುದು ಆಶ್ಚರ್ಯವೇ.

ಈ ಅಭಿಯಾನ ಶುರುವಾದ ಮೊದಲ ಹಂತದಲ್ಲಿ ಎದ್ದ ಪ್ರಶ್ನೆಗಳಿಗೆ ಇದು ಸರ್ಕಾರಿ ಕಾರ್ಯಕ್ರಮ ಅಲ್ಲ, ಖಡ್ಡಾಯ ಅಲ್ಲ ಅಂತ ಮತ್ತೆ ಮತ್ತೆ ಇಲಾಖೆಯ ಅಧಿಕಾರಿಗಳು, ಮಂತ್ರಿಗಳು ಹೇಳುತ್ತಾ ಇದ್ದರು. ತಾವು ಡಿಡಿಪಿಐಗಳಿಗೆ ಕಳಿಸಿದ ಸರ್ಕ್ಯುಲರ್ರುಗಳಲ್ಲಿ ಟ್ರೈನಿಂಟ್ ಗೆ ಪ್ರಾಧ್ಯಾಪಕರನ್ನು ಕಳಿಸುವುದು ಖಡ್ಡಾಯ ಅಂದಾಗಲೂ ಎಲ್ಲಾ ಮಕ್ಕಳು ಭಾಗವಹಿಸುವುದು ಖಡ್ಡಾಯ ಅಂತ ನೇರ ಹೇಳದೆ ambiguity ಕಾದುಕೊಂಡಿದ್ದರು.

ಎರಡು ವರ್ಷಗಳ ನಂತರ ಸಚಿವರು ಗೀತೆ ಬೇಡದವರು ದೇಶ ಬಿಟ್ಟು ಹೋಗಿ ಅನ್ನುತ್ತಿರುವುದು ಗಮನಿಸಬೇಕಾದ ಬದಲಾವಣೆ. ಇದನ್ನು ಗಮನಿಸದೆ ಹೋದಲ್ಲಿ ಅದು ಅಪಾಯಕಾರಿ ಕುರುಡುತನವಾದೀತು. ಮೌಲಿಕ ಶಿಕ್ಷಣ ಎಂಬ ನೇಪದಲ್ಲಿ ಗೀತೆಯನ್ನು ಹೇಳಿಕೊಡುತ್ತಿರುವುದರ ಹಿಂದಿನ ತರ್ಕವನ್ನೂ ಗಮನಿಸಬೇಕು. ನೈತಿಕತೆಯನ್ನು ಧರ್ಮಕ್ಕೂ, ಧರ್ಮವನ್ನು ಹಿಂದೂ ಧರ್ಮಕ್ಕೂ, ಹಿಂದೂ ಧರ್ಮವನ್ನು ಭಗವದ್ಗೀತೆಗೂ ನೇರ ಇಲ್ಲಿ ಸಮೀಕರಿಸಲಾಗುತ್ತಿದೆ.

ಇಲ್ಲಿ ನಾವೆಲ್ಲಾ ಒಮ್ಮೆ ಗೋಲ್ವಾಲ್ಕರ್ ಅವರು ಹೇಳಿದ ಒಂದು ಮಾತನ್ನು ನೆನೆದರೆ ಒಳಿತು:

“From the standpoint sanctioned by the experience of shrewd nations, the non-Hindu people in Hindustan must either adopt the Hindu culture and language, must learn to respect and revere Hindu religion, must entertain no idea but the glorification of Hindu nation i.e. they must not only give up their attitude of intolerance and ingratitude towards this land and its age long traditions, but must also cultivate the positive attitude of love and devotion instead; in one word, they must cease to be foreigners or may stay in the country wholly subordinated to the Hindu nation, claiming nothing, deserving no privileges, for less any preferential treatment, not even the citizen’s rights.

("We Or Our Nationhood Defined", 1938, Page 52) 

ನಮ್ಮ  ದೇಶದಲ್ಲಿ ಭಗವದ್ಗೀತೆಯನ್ನು ಒಪ್ಪಿ ಪೂಜಿಸುವವರು, ಅದನ್ನು ಪ್ರಶ್ನಿಸಿ ಅದರ ಜೊತೆ ಜಗಳ ತೆಗೆದವರೂ, ಅದನ್ನು ಸಂಪೂರ್ಣ ತಿರಸ್ಕರಿಸುವವರೂ (ಹಿಂದೂಗಳೂ, ಹಿಂದೂಗಳಲ್ಲದವರೂ ಸೇರಿದಂತೆ) ಇದ್ದಾರೆ. ನನಗೆ ವೈಯ್ಯಕ್ತಿಕವಾಗಿ ಗೀತೆಯ ಬಗ್ಗೆ ಇರುವ ಜಗಳಗಳ ಬಗ್ಗೆ ಹಿಂದೆ “ಗೀತೆಯ ಬಗ್ಗೆ ಸುಮ್ಮನೆ ಹೀಗೇ ಮಾತಿಗೆ” ಅನ್ನುವ ಲೇಖನ ಹೋದ ವರ್ಷ ಇದೇ ಬ್ಲಾಗಿನಲ್ಲಿ ಬರೆದಿದ್ದೆ.  ಅದನ್ನೇ ಮತ್ತೆ ಹೇಳುವ ಬದಲು ಲಿಂಕ್ ಕೊಟ್ಟಿದ್ದೇನೆ:

https://bageshree.wordpress.com/2010/06/29/%E0%B2%97%E0%B3%80%E0%B2%A4%E0%B3%86%E0%B2%AF-%E0%B2%AC%E0%B2%97%E0%B3%8D%E0%B2%97%E0%B3%86-%E0%B2%B8%E0%B3%81%E0%B2%AE%E0%B3%8D%E0%B2%AE%E0%B2%A8%E0%B3%86-%E0%B2%B9%E0%B3%80%E0%B2%97%E0%B3%87/

ಅದೇನೆ ಇದ್ದರೂ, ಇವತ್ತಿನ ಸಂದರ್ಭದಲ್ಲಿ ಪ್ರಶ್ನೆ ಭಗವದ್ಗೀತೆಯ ಸಾರ ಏನು ಅನ್ನುವುದೂ ಅಲ್ಲ. ಅವೆಲ್ಲಾ ಆಯ್ಕೆಯ ಪ್ರಶ್ನೆ. ಈ ಆಯ್ಕೆ ಮಾಡುವ ಹಕ್ಕನ್ನು ನಮ್ಮ  ಸಂವಿಧಾನ ಸ್ಪಷ್ಟವಾಗಿ ಕೊಡುತ್ತದೆ. ಮತ್ತು ಯಾವುದೇ ಧರ್ಮ ಸಂಹಿತೆ ಮತ್ತು ಅದರ ಗುರುತುಗಳನ್ನು ಇನ್ನೊಬ್ಬರ ಮೇಲೆ ಹೇರುವ ಹಕ್ಕು ಯಾರಿಗೂ ಇಲ್ಲ ಅಂತಲೂ ಹೇಳುತ್ತದೆ.

ಸರ್ಕಾರಿ ಶಾಲೆ ನಮ್ಮ ಸಂವಿಧಾನ ಚೌಕಟ್ಟಿನೊಳಗೇ ಇರುವ ಸೆಕ್ಯುಲರ್ ಸ್ಫೇಸ್ ಅನ್ನುವುದನ್ನು ನಾವು ಒಪ್ಪುವುದಾದರೆ ಕಾಗೇರಿಯವರ ಮಾತಿನ ಅರ್ಥ ಏನು ಎಂಬುದನ್ನು ಗಂಭೀರವಾಗಿ ಪರಿಗಣಿಸಿ ಯೋಚಿಸಬೇಕು.  (In fact, ಗೀತೆ ಬೇಡದವರು ದೇಶವನ್ನೇ ಬಿಟ್ಟು ತೊಲಗಿ ಎಂದು ಹೇಳಿದ ಸಂದರ್ಭದಲ್ಲಿ ಇದು ಬರೀ ಶಾಲೆಯ ಪ್ರಶ್ನೆಯಷ್ಟೇ ಕೂಡಾ ಅಲ್ಲ!) ಇನ್ನು ನಾವು ಸೆಕ್ಯುಲರ್ ಆದ್ದರಿಂದ ಎಲ್ಲಾ ಧರ್ಮಗ್ರಂಥಗಳನ್ನೂ ನಮ್ಮ ಶಾಲೆಗಳಲ್ಲಿ ಕಲಿಸೋಣವೇ? ಅದೂ ಮಾಡಬಹುದು. ಆದರೆ ಗಣಿತ, ಸಯನ್ಸ್ ಎಲ್ಲಾ ಕೈಬಿಟ್ಟು ಇದೇ ಕಲಿಸುತ್ತಾ ಕೂರಬೇಕಾದೀತು. ಕಲಿಸಬೇಕಾದನ್ನು ಕಲಿಸಲಾಗದ, ಎಲ್ಲದರ ಬಗ್ಗೆ ಮಕ್ಕಳಿಗೆ ಸಹಜವಾಗಿಯೇ ಇರುವ ಕುತೂಹಲ, ಆಸಕ್ತಿ, ಪ್ರಶ್ನೆಗಳನ್ನು ಪೊರೆಯಲಾರದ, ಕಲಿಕೆಯಲ್ಲಿ ಖುಶಿ ನೀಡಲಾರದ ಶಾಲೆಗಳಲ್ಲಿ ಇಂದು ನಾವು ತುರುಕಬೇಕಾಗಿರುವುದು ಧಾರ್ಮಿಕ ಗ್ರಂಥಗಳ ಪಾಠವೇ?

P.S.: By the way, ಇನ್ನೊಂದು ಮಾತು. ನಮ್ಮ ರಾಜ್ಯ ಬರಬರುತ್ತಾ ಪುರಾತನ ಈಜಿಪ್ಟಿನಲ್ಲಿ ಇದ್ದಂತೆ ಪುರೋಹಿತರ ಆಡಳಿತದ ರಾಜ್ಯ ಆಗುವ ಲಕ್ಷಣಗಳು ಕಾಣುತ್ತಿವೆ ಅಲ್ಲವೇ? ಹಳ್ಳಿಗುಡಿಯಲ್ಲಿ ರೈತರ ಹೋರಾಟಕ್ಕೆ ಕ್ಯಾರೆ ಅನ್ನದೆ ಕೂತಿದ್ದ ಸರ್ಕಾರ ತೋಂಟದಾರ್ಯರಿಗೆ ಹೆದರಿ ಪೋಸ್ಕೋಗೆ ಗದಗದಿಂದ ಗಾಡಿ ಕಟ್ಟಲಿಕ್ಕೆ ಹೇಳಿದೆ. ಕೆಲ ರೈತರು ನಾವು ಭೂಮಿ ಕೊಡುತ್ತೇವೆ ಅಂತ ಯೆಡ್ಯೂರಪ್ಪನವರನ್ನು ಭೇಟಿ ಮಾಡಿ ಹೇಳಿದಾಗ ಅವರು “ನೀವು ಸ್ವಾಮಿಯವರ permission ತಗೊಂಡು ಬನ್ನಿ” ಅಂತ ಹೇಳಿ ಕಳಿಸಿದರು!  ಪೇಜಾವರರು ಉಪವಾಸ ಕೂರುತ್ತೇನೆ ಅಂತ ಹೆದರಿಸಿದ ಮೇಲೆ ಮಂಗಳೂರಿನ SEZ ಕೈಯಿಟ್ಟ ನೋಟಿಫಿಕೇಶನ್ನು ಕೈಗೇ ತೆಗೆದುಕೊಂಡು ಹೋಗಿ ಕೊಟ್ಟು ಕಾಲಿಗೆ ಬಿದ್ದು ಬಂದಿದೆ. ಈಗ ನಮ್ಮ ಶಾಲೆಗಳಲ್ಲಿ ನೀತಿ ಪಾಠ ಹೇಳುವ ಕಾಂಟ್ರಾಕ್ಟೂ  ಸ್ವಾಮಿಜಿಗಳಿಗೇ. ಮುಂದೆ ಏನು?


Advertisements

27 ಟಿಪ್ಪಣಿಗಳು »

 1. satish, hassan said

  ನಿಜ. ನಮಗೆ ಬೇರೆ ದಾರಿಯಿಲ್ಲ. ಒಂದೋ ಹಿಂದೂ ಮಹಾಸಾಗರ ಅಥವಾ ಹಿಮಾಲಯ. ದಿನೇಶ್ ಅಮಿನ್ ಮಟ್ಟು ಕೂಡಾ ಇದೇ ವಿಚಾರವಾಗಿ ಇಂದಿನ ತಮ್ಮ ಅಂಕಣದಲ್ಲಿ ಬರೆದಿದ್ದಾರೆ. ಕಾಗೇರಿಗೆ ತಾನು ಸಂವಿಧಾನ ಮೂಲ ತತ್ವಗಳಿಗೆ ಧಕ್ಕೆ ತರದಂತೆ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದ್ದು ಮರೆತು ಹೋದಂತಿದೆ.
  ಶಾಲೆಗಳಲ್ಲ್ಲ್ಲ್ಗಭಗವದ್ಗೀತೆ ಬೋಧಿಸಲು ಹೇಳುವ ಕಾಗೇರಿಯವರು ಭಗವದ್ಗೀತೆಯನ್ನು ಸಂಪೂರ್ಣವಾಗಿ ಓದಿದ್ದಾರೆ ಎಂದು ಸಹಜವಾಗಿ ಎಲ್ಲರೂ ನಿರ್ಧಾರಕ್ಕೆ ಬರಬಹುದು. ಆದರೆ, ಭಗವದ್ಗೀತೆಯನ್ನು ಓದಿದ ಒಬ್ಬ ಮಹಾಶಯ, ಹೀಗೆ ತನ್ನ ನಂಬಿಕೆಯನ್ನು ಪ್ರಶ್ನೆ ಮಾಡುವವರನ್ನು ದೇಶ ಬಿಟ್ಟು ತೊಲಗಿ ಎನ್ನವುದಾದರೆ, ಭಗವದ್ಗೀತೆ ಓದಿನ ಪರಿಣಾಮ ಏನು? ಇಂತಹದೇ ಪರಿಣಾಮ ಭಗವದ್ಗೀತೆ ಓದುವ ಎಲ್ಲ ಮಕ್ಕಳ ಮೇಲೂ ಆಗುವುದಾದರೆ!!

 2. T.R.CHANDRASEKHARA said

  it is interesting to note that the Bhagavadgeetha is a sacred book for bhramins, the man who is propogating this to be tought in the schools is not only our education minister but also he is a bharmin. The math which has taken this as its mission belongs to bhramins and invariably its swami is also a bhramin. The support to this propoganda comes from mostly bhramins. It is a grang conspiracy of vedic culture aganist SC, ST and OBCs.
  T.R.Chandrasekhara.

 3. ರವಿ said

  ರೋಮ್ ನಗರ ಹೊತ್ತಿ ಉರಿಯುತ್ತಿರುವಾಗ ರಾಜ ನೀರೋ ಪಿಟೀಲು ಬಾರಿಸುತ್ತಿದ್ದನಂತೆ.. ಕುಂತಲ್ಲಿ ನಿಂತಲ್ಲಿ ಬಾಂಬ್ ಇಟ್ಟಿರುವಾಗ, ನೀವು ಸಂವಿಧಾನ ಓದಲು ಹೇಳ್ತೀರಿ, ಅವರು ಗೀತೆ ಓದಲು ಹೇಳ್ತಾರೆ..

 4. D.S.Nagabhushana said

  ಟಿ.ಆರ್‍.ಚಂದ್ರಶೇಖರ್‍ ಅವರ ವಾದ ಇಡೀ ಚರ್ಚೆಯನ್ನು ದಿಕ್ಕುತಪ್ಪಿಸುವಂತಿದೆ. ಇದು ಜಾತಿ ರಾಜಕಾರಣ ಮಾಡುವ ವಿಷಯವೂ ಅಲ್ಲ, ಹೊತ್ತೂ ಅಲ್ಲ. ನಾನು ನನ್ನ ಬಾಲ್ಯದಲ್ಲಿ ಭಗವದ್ಗೀತೆಯ ಮೊದಲ ಉಚಿತ ಪ್ರತಿ ಪಡೆದದ್ದು, ವೀರಶೈವರ ಮಠವಾದ ಸಿದ್ಧಗಂಗಾ ಮಠದ ನಮ್ಮೂರ ಶಾಖಾ ಮಠದಿಂದ, ಅದರ ಬಗೆಗಿನ ಮೊದಲ ಪ್ರವಚನ ಕೇಳಿದ್ದೂ, ಆ ಶಾಖಾ ಮಠದ ಸ್ವಾಮಿಯೊಬ್ಬರಿಂದಲೇ!
  ಸರ್ಕಾರದ ಭಗವದ್ಗೀತಾ ಆಭಿಯಾನದ ಹಿಂದೆ ಎಲ್ಲ ಜಾತಿಗಳ ಫ್ಯಾಸಿಸ್ಟರೂ ಇದ್ದಾರೆ. ದಲಿತರೂ ಇದ್ದರೆ ಆಶ್ಚರ್ಯವಿಲ್ಲ. ಇದನ್ನು ದಿನೇಶ್ ಅಮೀನ್ ಮಟ್ಟು ಅವರಂತೆ (ಇಂದಿನ ಪ್ರಜಾವಾಣಿ ಅಂಕಣ) ವೈಚಾರಿಕ ವಿವರಣೆ ಮೂಲಕ ಎದುರಿಸಬೇಕೇ ಹೊರತು ಹೀಗೆ ಜಾತಿ ಆಧಾರಿತ ವಾದದದಿಂದಲ್ಲ. ಇಂದಿನ ಬಿಜೆಪಿ ಸರ್ಕಾರದ ಬೆನ್ನ ಹಿಂದೆ ಮುಖ್ಯವಾಗಿ ರಾಜ್ಯದ ಮೂರು ಮುಖ್ಯ ಜಾತಿಗಳ ಮೂರು ಮಠಗಳಿವೆ ಎಂಬುದನ್ನು ನಾವು ಗಮನಿಸಬೇಕು.
  -ಡಿ.ಎಸ್.ನಾಗಭೂಷಣ

 5. Vishwaradhya Myosre said

  ಮಾನ್ಯರೇ, ನನ್ನ ಅಭಿಪ್ರಾಯದಲ್ಲಿ ಈ ಚರ್ಚೆ ಸಾದುವೂ ಅಲ್ಲ ಸಿಂಧುವೂ ಅಲ್ಲ ಏಕೆಂದರೆ , ಯಾರ ಮಾತಿನ ವಿಷಯದ ಬಗ್ಗೆ ಈ ಚರ್ಚೆ ಯಾಗಬೇಕು ಅನ್ನುವ ಪ್ರಶ್ನೆ ಉಧ್ಭವ ಅಗುತ್ತೆ , ಸನ್ಮಾನ್ಯ ಸಚಿವರು ಗಣ್ಯಾತಿಗಣ್ಯರು ಅಂತ ಒಪ್ಪಬಹುದು , ಕೇವಲ ಅವರು ಜನ ಪ್ರತಿನಿದಿಗಳು ಅಷ್ಟೇನೇ ಹೊರತು ಅವರು ವಿಧಿಸಿರುವ ಅಥವ ವಿದಿಸಬೇಕಿಂದಿರುವ ಶಾಸನ ದ ವೈಚಾರಿಕ ಪ್ರಭುದ್ಧರಲ್ಲ
  ಎಂಬುದನ್ನು ಚಿಂತಿಸಬೇಕಾಗುತ್ತದೆ. ರಾಜಕಾರಿಣಿಗಳ ಬಹುಮುಖ ನೀತಿ ಕೇವಲ ಕೆಲವರನ್ನು ಓಲೈಸುವ ದಿಕ್ಕಿನಲ್ಲಿ ಇರುತ್ತದೆಯೇ ಹೊರತು ಜನಹಿತದಕದೆ ಇರುವುದಿಲ್ಲ ಅಥವಾ ಅವರಿಗೆ ಅದು ಬೇಕಾಗಿರುವುದೂ ಇಲ್ಲ . ನಾ ……………………ದರೆ…………..ದೆವಲೋಕ ಹಾಳಾ?

  ವಿಶ್ವಾರಾಧ್ಯ ಮೈಸೂರು

 6. I have point to make here. Yes I do agree that Bhagavd geeta gives lot information which is eternal and does not have any boundaries. It will teach every individual on how to lead life.
  But it also says be truthful, honest……and so on.
  Kageri why don’t you start this lessons from you corrupt CM and ministers?

  Thanks and Regards,
  Giri H RamMohan

 7. Raju said

  ಸುರೇಶಣ್ಣ ಹಾಗೂ ಮಿತ್ರರಿಗೆ ,
  (ಮೊದಲಿಗೆ ನಾನು ವಿಶ್ವೇಶ್ವರ ಕಾಗೇರಿಯವರ ಮಾತಿಗೆ ಧ್ವನಿ ಗೂಡಿಸುತ್ತಿಲ್ಲ ಮತ್ತು ಅವರನ್ನು ಸಮರ್ಥಿಸಿಕೊಳ್ಳುತ್ತಿಲ್ಲ ಆದರೆ “ಶಾಲೆಯಲ್ಲಿ ಭಗವದ್ಗೀತೆ ಗೆ ವಿರೋಧ ” ಇ ಸಂಗತಿಯ ಬಗ್ಗೆ baರೆಯುತ್ತಿದ್ದೇನೆ. )
  ಶಾಲೆಯಲ್ಲಿ ಭಗವದ್ಗೀತೆ ಕಲಿಸುವುದರಿಂದ ಯಾರಿಗೆ ನಷ್ಟ ? ಭಾರತ ದೇಶದಲ್ಲಿ ಹುಟ್ಟಿದ ನಾಗರಿಕರಿಗೆ ನಮ್ಮ ದೇಶದ ಪವಿತ್ರ ಗ್ರಂಥ ಭಗವದ್ಗೀತೆಯ ಸಾರವನ್ನು ತಿಳಿದುಕೊಳ್ಳುವುದು , ತಿಳಿಸಿ ಕೊಡುವುದು ಯಾವ ರೀತಿಯಲ್ಲಿ ತಪ್ಪಾಗುತ್ತೆ. ? ಓದುವ ಮಕ್ಕಳಿಗೆ ಕಲಿಕೆಯ ಜೊತೆ ಗೀತೆಯ ಸಾರವನ್ನು ತಿಳಿಸಿಕೊಟ್ಟರೆ ಧರ್ಮ, ಸಂಸ್ಕೃತಿಯ ಬಗ್ಗೆ ತಿಳಿಸಿ ಕೊಟ್ಟಂತೆ ಆಗುವುದಿಲ್ಲವೇ ? ನಮ್ಮ ದೇಶದ ಹಿಂದೂ ಗಳ ಪವಿತ್ರ ಗ್ರಂಥ ದ ಬಗ್ಗೆ ತಿಳಿಸಲು ಹೊರಟಾಗ ಯಾಕೆ ವಿರೋಧಿಸುತ್ತಾರೋ ಅರ್ಥವಾಗುತ್ತಿಲ್ಲ.
  ಹೋಗಲಿ ೧೧೦ ಕೋಟಿ ಭಾರತೀಯರಲ್ಲಿ ಅದೆಷ್ಟು ಜನರಿಗೆ ಭಗವದ್ಗೀತೆಯ ಬಗ್ಗೆ ತಿಳಿದಿದೆ ? ಕೆಲವೇ ಜನರಿಗೆ ಮಾತ್ರವೇ ಅದರ ಬಗ್ಗೆ ತಿಳಿದಿದೆ. ಕೆಲ ಹಾಗೂ ಮಧ್ಯಮ ವರ್ಗದ ಗ್ರಾಮೀಣ ಜನರಿಗೆ ಗೀತೆಯ ಬಗ್ಗೆ ಏನು ತಿಳಿದಿದೆ ತಿಳಿಸುವವರು ಯಾರು ? ನಮಗೂ ಶಾಲೆಯಲ್ಲಿ ಹೇಳಿಕೊಟ್ಟಿದ್ದರೆ ಯಾವತ್ತು ನಮಗೂ ತಿಳಿದಿರುತಿತ್ತು. ಶಾಲೆಯಲ್ಲಿ ಹೇಳಿಕೊಡುವುದು ಅಪರಾಧ ಎಂದಾದರೆ ಮನೆಯಲ್ಲಿ ಗೀತೆಯ ಬಗ್ಗೆ ತಿಳಿಸಿಕೊಡುವವರು ಯಾರು ? ಮನೆಯಲ್ಲಿ ಗೀತೆಯ ಬಗ್ಗೆ ತಿಳಿದಿದ್ದರೆ ಮಕ್ಕಳಿಗೆ ತಿಳಿಸಿಕೊಡಬಹುದು ಹೀಗಿದೆ ಪರಿಸ್ಥಿತಿ. ಅಲ್ಲೂ ಇಲ್ಲ ಇಲ್ಲಿ ಇಲ್ಲ ಅಂತಾದರೆ ಗೀತೆಯ ಸಾರಾಂಶ ತಿಳಿದುಕೊಳ್ಳುವುದು ಹೇಗೆ ?
  ದಯವಿಟ್ಟು ತಪ್ಪು ತಿಳಿಯಬೇಡಿ ನಾನು ಯಾರ ಮನಸ್ಸನ್ನು ನೋಯಿಸಲು ಬರೆಯುತ್ತಿಲ್ಲ ” ಒಂದೆ ಕಡೆ ಕೂತು ಬರೆಯುವುದಕ್ಕಿಂತ ಸುತ್ತ ಮುತ್ತಲಿನಲ್ಲಿ ನಡೆಯುವ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಒಮ್ಮೆ ನೋಡಿ. ಉದಾಹರಣೆ ಗೆ : ಬೆಂಗಳೂರಿನ ಪೂರ್ವ, ಕೇಂದ್ರ , ಉತ್ತರ ಭಾಗದಲ್ಲಿ ಕೆಲವು ಶಾಲೆಗಳು ನಡೆಯುತ್ತಿರುವುದು ಕ್ರಿಶ್ಚಿಯನ್ ಶಾಲೆಗಳು
  ಪ್ರಾರ್ಥನೆ ಯಿಂದ ಶುರುವಾಗುತ್ತೆ ಕ್ರೈಸ್ತರ ಗೀತೆಗಳು, ಒಂದು ಸಬ್ಜೆಕ್ಟ್ ಇರುತ್ತೆ ಅದು ಬೈಬಲ್ ಬಗ್ಗೆ ಅದರ ಬಾಯಿ ಪಾಠ ಮಾಡಬೇಕು ಅದಕ್ಕೆ ಇಷ್ಟು ಅಂತ ಅಂಕಗಳು ಇರುತ್ತವೆ.
  ಸ್ಲೋ ಪಾಯಿಸನ್ ತರಹ ಯಾರಿಗೂ ತಿಳಿಯದ ಹಾಗೆ ಗುಪ್ತಗಾಮಿನಿಯ ಹಾಗೆ ಒಳಗೊಳಗೇ ಮತಾಂತರ ಮಾಡುತ್ತಾ ಹೋಗುತ್ತಿದ್ದಾರೆ ಉದಾಹರಣೆಗೆ : ನನಗೆ ಕಾಲು ಬಿದ್ದೊಗಿದ್ದಾಗ ಅದನ್ನೇ ನೆಪ ಮಾಡಿಕೊಂಡು ಅವರ ಧರ್ಮಕ್ಕೆ ಮತಾಂತರಕ್ಕೆ ಪ್ರಯತ್ನಿಸಿದ್ದರು. ಮತ್ತೊಂದು ಕಡೆ ಅನ್ಯ ರು ತಮ್ಮದೇ ಆದ ಹಾದಿಯಲ್ಲಿ ಅವರ ಧರ್ಮವನ್ನು ಅವರ ಧರ್ಮ ಗ್ರಂಥವನ್ನು ಅದರ ತಿರುಳನ್ನು ಹೇಳಿಕೊಡುತ್ತಾರೆ . ಇವೆಲ್ಲಾ ನಮ್ಮ ಕಣ್ಣ ಮುಂದೇನೆ ನಡೆಯುತ್ತಿರುವಾಗ, ನಮ್ಮ ದೇಶದ ಪವಿತ್ರ ವಾದ ಗೀತೆಯ ಸಾರಾಂಶವನ್ನು ಬೋಧಿಸುವುದು ತಪ್ಪೆಂದು ಯಾಕೆ ಭಾವಿಸುತ್ತಾರೋ ಅರ್ಥವಾಗುತ್ತಿಲ್ಲ . ಜಾತ್ಯಾತೀತ ರಾಷ್ಟ್ರ ಅನ್ನೋ ಭಾವನೆ ಎಲ್ಲರಲ್ಲೂ ಇದ್ದಿದ್ದರೆ ನಮ್ಮ ದೇಶದಲ್ಲಿ ಭ ಯೋತ್ಪಾದನೆ , ಬಾಂಬ್ ಸಿಡಿತಗಳು ಅಮಾಯಕರ ಬಲಿಗಳು ಆಗುತ್ತಿರಲಿಲ್ಲ. ಎಲ್ಲದಕ್ಕೂ ತಪ್ಪು ಹುಡುಕುವ ಕೆಲಸ ಮಾಡುವುದಕ್ಕಿಂತ ವಾಸ್ತವವನ್ನು ಅರಿಯಬೇಕು. ಇವತ್ತಿನ ಮೋಸದ ಭ್ರಷ್ಟ , ಸ್ವಾರ್ಥ, ಪರಾವಲಂಬಿ . ಬದುಕು, ಸುಳ್ಳು, ದ್ರೋಹ, ವ್ಯಭಿಚಾರ ಗಳು ಮಾನವನು ತನ್ನ ತನವನ್ನೇ ಕಳೆದುಕೊಂಡು ದುರಾಸೆಗೆ ಬಲಿಯಾಗಿ ಯಾವತ್ತು ಏನೆಲ್ಲಾ ಅನಾಹುತಗಳು ಆಗುತ್ತಿರುವ ಇಂತಹ ಸಂದರ್ಭದಲ್ಲಿ ನಮ್ಮ ಧರ್ಮ ಪ್ರಚಾರ ಇವ ತ್ತಿನ ಮಕ್ಕಳಿಗೆ ಬೇಕು ನಮ್ಮ ದೇಶದ ಧರ್ಮ ಗ್ರಂಥ ದ ಬಗ್ಗೆ ತಿಳಿದು ಕೊಳ್ಳುವುದರಲ್ಲಿ ಯಾವ ತಪ್ಪು ಇಲ್ಲ.
  ನಾನು ಯಾವುದೇ ರಾಜಕೀಯ ಪಕ್ಷದ ಪರ ವಾದ ಮಂಡಿಸುತ್ತಿಲ್ಲ
  ಇವತ್ತಿನ ದಿನಗಳಲ್ಲಿ ಏನೇ ಆದರೂ ಅದಕ್ಕೆ ಪ್ರತಿಕ್ರಿಯೆ ಕೊಡುವುದು ಬಹಳ ಸುಲಭ : ಗದಗ್ ನಲ್ಲಿ ಪೋಸ್ಕೊ ಗಾಗಿ ಹೋರಾಟ ಮಾಡುವಾಗ ಸ್ಪಂದಿಸಿದ ಸರ್ಕಾರ ಅದನ್ನು ನಿಲ್ಲಿಸಿತು. ಒಬ್ಬ ಸ್ವಾಮಿಜಿಯ ನೇತ್ರತ್ವ ಇತ್ತು . ಮಂಗಳೂರಿನ ಲ್ಲಿ ಪೇಜಾವರ ಶ್ರೀ ಗಳ ಹೋರಾಟದಲ್ಲೂ ಸರ್ಕಾರ ಹಿಂದೆ ಸರಿಯಿತು “ಅದಕ್ಕೂ ಟೀಕೆ ಮಾಡುತ್ತಾರೆ ಒಂದು ವೇಳೆ ಸರ್ಕಾರ ಬಲವಂತವಾಗಿ ಭೂಮಿ ವಶ ಪಡಿಸಿಕೊಂಡರೂ ಅದಕ್ಕೂ ವಿರೋಧ ಮಾಡುತ್ತಾರೆ. ಅದಕ್ಕೂ ಟೀಕೆ ಮಾಡುತ್ತಾರೆ. ”
  ಅವರವರ ಧರ್ಮ ಅವರಿಗೆ ಹೆಚ್ಚು, ಅದು ಇದ್ದೆ ಇರುತ್ತೆ ಅದನ್ನು ಬಿಡಿ
  ನಮ್ಮ ಮಿತ್ರರು ಇವತ್ತು ಬಡಜನರನ್ನು ಕಾಡುತ್ತಿರುವ ನಮ್ಮನ್ನು ಕಾಡುತ್ತಿರುವ ಬೃಹತ್ ಭ್ರಷ್ಟಾಚಾರ ಭೂತವನ್ನು ನಿರ್ನಾಮ ಮಾಡಲು ಮುಂದಾಗಬೇಕು ಅದಕ್ಕೆ ಯಾರಿಗೂ ಆಸಕ್ತಿ ಇಲ್ಲ ನಮಗೇಕೆ ಅಂತ ಸುಮ್ಮನಿರುವ ಬದ್ಲು ಅದನ್ನು ಮತ್ತ ಹಾಕುವ ಕಾರ್ಯಕ್ಕೆ ತಮ್ಮದೇ ಆದ ಸಲಹೆ ಗಳನ್ನೂ ಕಾರ್ಯಗಳನ್ನು ಮಾಡಬೇಕು.
  ಚಿಂತಕರು, ಬುದ್ದಿ ಜೀವಿಗಳು, ಪತ್ರಕರ್ತರು ಭ್ರಷ್ಟಾಚಾರವನ್ನು ತಡೆಯಲು ಪ್ರಯತ್ನ ಮಾಡಿ
  ರಾಜು

 8. kashi said

  ಚಂದ್ರಶೇಖರ ಮಹಾಶಯರೇ , ಗೀತೆಯನ್ನು ಭೋದಿಸಿದ ಕೃಷ್ಣ ಯಾದವ ಅದನ್ನು ಭೋದಿಸಿದ್ದು ಕ್ಷತ್ರಿಯನಾದ ಅರ್ಜುನನಿಗೆ, ಅದನ್ನು ಹಾಗೆ ಬರೆದ ವೇದವ್ಯಾಸ ಬ್ರಾಹ್ಮಣನಲ್ಲ. ಹಾಗಿರುವಾಗ ನೀವೆ ಹೇಳುವಂತೆ ಇದನ್ನು ಪವಿತ್ರವೆಂದು ಒಪ್ಪಿಕೊಂಡಿರುವ ಬ್ರಾಹ್ಮಣರು ನಿಮಗೆ ಗುಣ ಗ್ರಾಹಿಗಳಾಗಿ ಕಾಣುವುದಿಲ್ಲವೇ? ಇದರಲ್ಲಿ ಹಿಂದುಳಿದ ವರ್ಗಗಳಿಗೆ ಆಗುವ ತೊಂದರೆ ಆದರು ಏನು?ಸುಮ್ಮನೆ ಎಲ್ಲದಕ್ಕೂ ಬ್ರಾಹ್ಮಣರನ್ನು ಏಕೆ ಎಳೆದು ತರುತ್ತೀರಿ? ಬ್ರಾಹ್ಮಣರ ಭೂಮಿ ಹಕ್ಕನ್ನು ಕಸಿದುಕೊಂಡಾಯಿತು, ಸರ್ಕಾರಿ ಉದ್ಯೋಗ ಅವಕಾಶಗಳನ್ನು ಕಸಿದುಕೊಂಡಾಯಿತು, ಎಲ್ಲಾ ಸವಲತ್ತುಗಳನ್ನು ಕಸಿದುಕೊಂಡಾಯಿತು.ಕೇವಲ ೩೦ ವರ್ಷಗಳಲ್ಲಿ ಬ್ರಾಹ್ಮಣ ವರ್ಗವನ್ನು ಅತ್ಯಂತ ಹಿಂದುಳಿದ ಗುಂಪಾಗುವಂತೆ ಮಾಡಿದ ಕೀರ್ತಿ ನಮ್ಮ ಎಲ್ಲಾ ಸರ್ಕಾರಗಳಿಗೆ ಸಲ್ಲ ಬೇಕು. ಇಷ್ಟಾದರೂ ಬ್ರಾಹ್ಮಣಜನಾಂಗದ ಬಗ್ಗೆ ಸೆಲ್ಪ್ ಬ್ರಾಂಡೆಡ್ “ಬುದ್ದೀಜೀವಿಗಳೆಂಬ” ಜನಕ್ಕೆ ಇರುವ ಈರ್ಷೆ ಆದರೂ ಏಕೆ? ಸಮಾಜದ ಎಲ್ಲಾ ದೋಷಗಳಿಗೂ ಕೇವಲ ಬ್ರಾಹ್ಮಣರನ್ನು ದೂಷಿಸುವ ಇವರ ಇರುವ ಮನೊಸ್ಥಿತಿಗೂ, ಯಹೂದ್ಯರ ಬಗ್ಗೆ ಹಿಟ್ಲರ್ನಿಗಿದ್ದ ಮನೋಸ್ಥಿತಿಗೂ ಏನಾದರೂ ವ್ಯತ್ಯಾಸವಿದೆಯೆ?
  ಗೀತೆಯನ್ನು ವಿವಾದಗ್ರಸ್ತಗೊಳಿಸಿದ ಬ್ರಾಂಡೆಡ್ ಬುದ್ದೀಜೀವಿಗಳು ಭ್ರಷ್ಟಾಚಾರ ವಿರುದ್ಧದ ಹೋರಾಟಕ್ಕೆ ಸಂಭದಿಸಿದಂತೆ ಮೌನವಗಿರುವುದರ ಒಣಗುಟ್ಟು ಒಳಗುಟ್ಟು ಏನು?

 9. ಭಗವದ್ಗೀತೆಯ ಅಭಿಯಾನದ ಹಿಡನ್ ಅಜೆಂಡ ಎಲ್ಲರಿಗೂ ತಿಳಿದದ್ದೆ. ಶೈಕ್ಷಣಿಕ ವಲಯದಲ್ಲಿ ಆರ್.ಎಸ್.ಎಸ್ ನ ಪ್ರಭಾವದ ವಿಷಬೀಜ ಬಿತ್ತುವ ಯೋಜನೆಗಳು ಇದೊಂದೆ ಅಲ್ಲ, ಇತ್ತೀಚೆಗೆ ನಾಮಕರಣಗೊಂಡ ಎಲ್ಲಾ ವಿಶ್ವವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರೂ ಕೂಡ ಆರ್.ಎಸ್.ಎಸ್ ಹಿನ್ನೆಲೆಯವರು, ಇನ್ನು ಇವರನ್ನು ಬಳಸಿಕೊಂಡು ವಿಶ್ವವಿದ್ಯಾಲಯಗಳಲ್ಲೂ ಹಿಂದುತ್ವದ ವಿಷಬೀಜ ಬಿತ್ತುವ ತಯಾರಿಗಳನ್ನು ಮಾಡುತ್ತಿದ್ದಾರೆ. ಇಂತಹ ಹತ್ತಾರು ಯೋಜನೆಗಳು ಅವರ ಬತ್ತಳಿಕೆಯಲ್ಲಿವೆ. ಈ ಎಲ್ಲಾ ಯೋಜನೆಗಳ ಪರವಾದ ಜನಾಭಿಪ್ರಾಯಗಳು ಮೂಡುವಂತೆ ಅವರುಗಳೆಲ್ಲಾ ಮಾದ್ಯಮಗಳನ್ನು ಶಕ್ತಿಯುತವಾಗಿ ಬಳಸಿಕೊಳ್ಳುತ್ತಿದ್ದಾರೆ. ಈ ತರಹದ ಯೋಜನೆಗಳ ಅಪಾಯಗಳ ಬಗ್ಗೆ ಜನಾಭಿಪ್ರಾಯವನ್ನು ರೂಪಿಸಲು ಪ್ರಗತಿಪರವಾದ ಆಲೋಚನೆ ಇರುವವರು ಮಾದ್ಯಮಗಳನ್ನು ಹೆಚ್ಚು ಹೆಚ್ಚು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಅಗತ್ಯವಿದೆ.

 10. mahesh said

  ಭಾರತ ಬಿಟ್ಟು ತೊಲಗಿ ಎಂದು ಹೇಳಲು ಇವರ್ಯಾರು, ಜನಾಂಗೀಯ ಸಾಮರಸ್ಯಕ್ಕೆ ಕಿಚ್ಚು ಹಚ್ಚ ಹೊರಟಿರುವ ಇವರ ಸರ್ವಾಧಿಕಾರಿ ಧೋರಣೆಗೆ ಧಿಕ್ಕಾರ. ಮೊದಲು ಇಂತಹವರನ್ನು ಭಾರತದಿಂದಲೇ ಗಡಿಪಾರು ಮಾಡಬೇಕು. ಭಗವದ್ಗೀತೆ ಸಕಲ ಮನುಕುಲಕ್ಕೆ ಬೇಕಾದದ್ದು, ಅದನ್ನು ಪಠಣ ಮಾಡಲು ಹಾಗೂ ಪಾಲಿಸಲು ಅವರವರ ಇಚ್ಛೆಗೆ ಬಿಟ್ಟದ್ದು. ಬಲವಂತದಿಂದ ಏನನ್ನು ಮಾಡಲು ಸಾಧ್ಯವಿಲ್ಲ. ಜವಾಬ್ದಾರಿ ಸ್ಥಾನದಲ್ಲಿದ್ದು ಸಮಾಜಮುಖಿಯಲ್ಲಿ ಕಾರ್ಯ ನಿರ್ವಹಿಸಲು ಯೋಗ್ಯವಲ್ಲದವರು ಗೀತೆಯ ಬಗ್ಗೆ ಮಾತನಾಡಿ ಅದರ ಗೌರವಕ್ಕೆ ಧಕ್ಕೆ ಉಂಟು ಮಾಡಬಾರದು, ಇದಕ್ಕೆ ಪೂರಕವಾಗಿ ಹಿರಿಯರಾದ ರಾಮಾಜೋಯಿಸರು ಟಿ.ವಿ. ವಾಹಿನಿಯಲ್ಲಿ ಸಚಿವರ ಹೇಳಿಕೆಗೆ ಸಮರ್ಥನೆಯನ್ನು ನೀಡಿರುವುದು ವಿಷಾದನೀಯ.
  -ಮಹೇಶ್ ಎಂ. ಗೌಡ

 11. Raju said

  ಇಲ್ಲಿ ನಡೆಯುತ್ತಿರುವ ವಾದಗಳು ಹೇಗಿವೆ ಅಂದರೆ ನಮ್ಮ ತಾಯಿಯನ್ನು ನಾನೇ ಜರಿಯುತ್ತಿದ್ದೇವೆ. ನಮ್ಮನ್ನು ನಾವುಗಳೇ ಹೀಯಾಳಿಸಿ ಕೊಳ್ಳುತ್ತಿದ್ದೇವೆ.
  ಇಲ್ಲಿ ಕಾಮೆಂಟ್ ಮಾಡುತ್ತಿರುವವರೆಲ್ಲ ಹಿಂದೂಗಳೇ ಇದರ ಬರೆಯುತ್ತಿರುವುದು ಸಹ ನಮ್ಮ ಹಿಂದೂಗಳೆನೆ. ನಮ್ಮ ಧರ್ಮವನ್ನು ನಾವೇ ಟೀಕಿಸುತ್ತಿದ್ದೇವೆ.
  ಇದು ನಮ್ಮ ಹಿಂದೂಗಳ ದುರ್ಭಾಗ್ಯ. ವಾಸ್ತವವಾಗಿ ನಮ್ಮದೇಶದಲ್ಲಿ ವಾಸಮಾಡುವ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಎಲ್ಲರಿಗೂ ಅವರವರ ಧರ್ಮ ಮುಖ್ಯವಾಗಿರುತ್ತದೆ. ನಮ್ಮ ಧರ್ಮವನ್ನು ನಮ್ಮದಲ್ಲ ಅನ್ನಲು ಸಾಧ್ಯವೇ ಇಲ್ಲ. (ಕೆಲವರು ಗುಪ್ತಗಾಮಿನಿಯ ರೀತಿಯಲ್ಲಿ ಆಮಿಷಗಳನ್ನು ಒಡ್ಡಿ ಅವರ ಧರ್ಮ ಕ್ಕೆ ಮತಾಂತರ ಮಾಡಿಕೊಳ್ಳುತ್ತಿದ್ದಾರೆ ) (ಇನ್ನು ಕೆಲವರು ಇಡೀ ವಿಶ್ವದಲ್ಲಿ ತಮ್ಮ ಧರ್ಮ ಮಾಯಾ ವಾಗಬೇಕು ಎಂದು ಧರ್ಮದ ಹೆಸರಿನಲ್ಲಿ ಪ್ರಾಣತ್ಯಾಗ ಮಾಡಿ ಹೋರಾಡುತ್ತಿದ್ದಾರೆ ) ಇಷ್ಟೆಲ್ಲಾ ನಡೆಯುತ್ತಿರುವುದರ ಹಿಂದೆ ಧರ್ಮ ವೆ ಮುಖ್ಯವಾಗಿದೆ. ಅರಿತುಕೊಳ್ಳಬೇಕು. ನಮ್ಮ ಹಿಂದುಗಳೇ ನಮ್ಮ ಹಿಂದೂ ಧರ್ಮದ ಹೆಸರಿನಲ್ಲಿ
  ಬೇಡದ ಚರ್ಚೆಗಳನ್ನು ಮಾಡುತ್ತಿದ್ದಾರೆ. ಅದು ಬಿಟ್ಟರೆ ಪ್ರಪಂಚದ ಬೇರೆ ಯಾವುದೇ ಧರ್ಮೀಯರು ತಮ್ಮ ಧರ್ಮದ ಬಗ್ಗೆ ತಾವೇ ಜರಿಯುವುದನ್ನು ಕೇಳಿದ್ದಿರಾ? ನೋಡಿದ್ದಿರಾ? ಹಾಸ್ಯ, ಕುಚೋದ್ಯ, ಅವಹೇಳನಕಾರಿ ಬರಹಗಳು ಇತ್ಯಾದಿಗಳು ಮಾಡುತ್ತಿರುವುದು ಹಿಂದೂ ಧರ್ಮದಲ್ಲಿಯೇ ಬೇರೆ ಧರ್ಮೀಯರು ತಮ್ಮ ಧರ್ಮದ ಮೇಲೆ ಅದೆಷ್ಟು ಪ್ರೀತಿ, ಮಮಕಾರ, ತಮ್ಮ ಧರ್ಮಕ್ಕೆ ಅವಹೇಳನಕಾರಿ ಯಾಗಿ ಒಂದೆ ಒಂದು ಪದ ಹೊರ ಬಂದರೂ ಹೊತ್ತಿ ಉರಿದ ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ.
  ದಯವಿಟ್ಟು ಅವಹೇಳನಕಾರಿ ಯಾಗಿ ಬರೆಯಬೇಡಿ ನಮ್ಮ ಧರ್ಮಕ್ಕೆ ನಾವು ಬೆಲೆಕೊಡೋಣ. ಕಾಪಾಡೋಣ. ಇಲ್ಲಿ ಬಿಜೆಪಿ. ಜೆಡಿಎಸ್ , ಕಾಂಗ್ರೆಸ್ ಇವೆಲ್ಲ ವನ್ನು ದೂರವಿತ್ತು ಒಬ್ಬ ಹಿಂದೂವಾಗಿ ಯೋಚಿಸಿ ನಂತರ ಬರೆಯಿರಿ.

 12. y.mariswamy said

  Bhagavad Gita legitimizes fuor fold caste system. It preaches karma sidhantha. It is a strange/unknown scripture for non Brahman communities. Even 1 % of people don’t know about this book. If Mr.Kageri wants to preach Bhagavad Gita, first he has to resign for his ministership. Our’s is a secular state and it is not the duty of the state to preach Brahminical Gita to non Brahman children, who are studying in the government schools.

  If Bhagavad Gita preaches human values, then let the BJP and sangha parivar people to inculcate those real values first, rather than preaching hatredness.

  Regards,
  Y.Mariswamy

 13. kumar said

  hi. Good article but seems not original.

 14. karthikeyhegde said

  Please go through article in the below link also
  http://avisblog.wordpress.com/2011/07/21/bhagavad-gita/

  I cant understand why people tend to replay or write big big atrticle on any news produced by news factories without verifying its genuines.

  • Bageshree said

   ಪ್ರಿಯ ಕಾರ್ತಿಕೇಯರೆ,
   ಈ ಕೆಳಗಿರುವುದು ಕಾಗೇರಿಯವರು ಕೋಲರದ ಘಟನೆ ನಡೆದ ಒಂದು ವಾರದ ನಂತರ ಟೈಮ್ಸ್ ಆಫ್ ಇಂಡಿಯಾದ ಸಂದರ್ಶನದಲ್ಲಿ ಮಾಡಿರುವ ಹೇಳೀಕೆ. ಇದೂ verify ಮಾಡದೆ ಬರೆದಿರುವುದು ಅನ್ನಿಸುವುದೆ?
   ವಿಶ್ವಾಸದೊಂದಿಗೆ
   ಬಾಗೇಶ್ರೀ

   Kageri rechants his rhetoric over Gita

   TIMES NEWS NETWORK

   Bangalore/Kolar: Primary and secondary education minister Vishweshwara Hegde Kageri is sticking to his guns on his controversial remark over the introduction of the Bhagavad Gita in schools.
   When TOI sought his comments on his statement,Kageri said: This country believes in the Bhagavad Gita.Those who oppose it and believe in philosophies that are not of this country can go elsewhere and propagate it, he said on Tuesday.
   At the valedictory of the Gita Abhiyan last week in Kolar,the minister came down on those who oppose the introduction of the sacred text,which he said is aimed at inculcating ethical values among children.Those opposing it are influenced by western culture.Such people are welcome to leave our country and can go elsewhere.
   Asked why the government suddenly wants introducing the Gita in schools,the minister said: Its not a government programme.It was not initiated by our government.In fact,in 2007,the Gita was introduced by the Sondha Swarnavalli Mutt of Uttara Kannada district in all districts of the state.We are not financing it;we are just encouraging it, he said.
   Asked what he would do if other communities also come up with similar demands,the minister said: We will encourage any good work.
   The Bhagavad Gita is accepted as one of the greatest epics of all times.No light can challenge sunlight,no other religious epic can compete with Bhagavad Gita.Ethical values preached in the Gita have been accepted by many foreign countries,so theres no point discussing the merits and demerits of the Gita, he said.
   Pointing out that Gita Abhiyan has been successfully conducted in jails to help inmates,the minister questioned why those who are opposing the programme now did not raise their voice when the Abhiyan was taken up in jails.
   He said the seer of Sondha Swarnavalli Mutt,Sri Gangadharendra Saraswathi Swamy,has been carrying on the Abhiyan to create awareness among the people.

 15. ಸಾವಿತ್ರಿ said

  ಈ ಕೆಳಗಿನ ಬ್ಲಾಗ್ ಲಿಂಕ್ ನಲ್ಲೊಂದು ಲೇಖನ ಚೆನ್ನಾಗಿದೆ, ಓದಿ
  http://prajaprabhutva.blogspot.com/2011/07/blog-post_20.html

 16. karthikeyhegde said

  “Such people are welcome to leave our country and can go elsewhere.”

  Deos this sentence exactly stands for Desha bittu tholagi in your view ??

 17. B V VIJAY said

  WHETHER WE SHOULD TEACH ‘BHAGWADGEETA’ OR NOT,i HAVE TWO POINTS TO SAY
  1) IT’S NOT A CRIME TO LEARN ANY RELIGIOUS SAYINGS,CAN BE GEETA,KHURAN,BIBLE OR GRANTH SAHIB. HOW MUCH ONE CAN UNDERSTAND IT IS LEFT TO THE LEARNER. ALL RELIGIOUS BOOKS SAY THE SAME PHILOSOPHY OF LIVING LIVE HARMONIOUSLY.
  2) WELL COMING TO OUR SOOOOOO CALLED MINISTER,LET HIM LEARN ALL THE RELIGIOUS BOOKS, HE “”WILL”” SURELY UNDERSTAND THE MEANING OF ALL SAYINGS,&WHEN HE COMPARES(IF HE CAN) HE WILL SURELY MAY STEP BACK. WHAT OATH HE HAS TAKEN IN THE ASSEMBLY IS NOTHING TO DO WITH THEIR DAY-TO-DAY SCAMS, THIS IS ONE THING HE MAY BE TRYING TO DEVIATE FROM THE CURRENT STATE OF AFFAIRS OF OUR C.M & HIS BEST GOONS SO PLEASE INFORM THE MATTER STRAIGHT TO GOVERNOR,HE IS THE ONE CAN SOLVE THIS PETTY PROBLEM

 18. ಉತ್ತಮ ಬರೆಹ..ಜೈಹೋ..

 19. shreepadu said

  ನೀವುಗಳು ., ಯಾರ ಮಾತನ್ನ ಬೇಕಾದರೂ ನಿಮಗೆ ಬೇಕಾದ ಹಾಗೆ ತಿರುಚಿಕೊಳ್ಳುವಷ್ಟು ಬುದ್ದಿವಂತರು.ಅವರ ಮಾತುಗಳನ್ನ ನಾನು ಕೇಳಿದ್ದೇನೆ.ಅವರೆಲ್ಲೂ ಹಾಗೆ ಹೇಳಿಲ್ಲ.ಅವರ ಭಾಷಣದ ಧ್ವನ್ಯಾರ್ಥವೆ ಬೇರೆ ಇತ್ತು.ಭಗವದ್ಗೀತೆ ಕಲಿಯದವರು ದೇಶ ಬಿಟ್ಟು ಹೋಗಲಿ ಹೇಳಿದ ಒಂದೇ ಒಂದು ವಾಕ್ಯ ತೋರಿಸಿ.ಉಹು ಯಾವುದು ಪತ್ರಕರ್ತನ ಪೂರ್ವಗ್ರಹ ಪೀಡಿತ ಮನಸ್ಥಿತಿ ಆ ತರಹದ್ದೊಂದು ಸುದ್ದಿ ಹರಡುವ ಹಾಗೆ ಮಾಡಿದೆ.

 20. shreepadu..ಈ ಮಾತನ್ನು ಕಾಗೇರಿಯವರು ಹೇಳಿದ್ದರೆ..ತುಂಬಾ ಒಳ್ಳೆಯದಿತ್ತು.

 21. Sanjyothi.V.K said

  ಭಾಗ್ಯಶ್ರೀ, ನಿಮ್ಮ ಬರಹ ಬಹಳ ಸ್ಪಷ್ಟವಾಗಿ ಹೇಳಬೇಕಾದ್ದನ್ನ ಹೇಳಿದೆ.

 22. It is not a coincidence that respected minister Kageri and Swarnavalli Matt belongs to same caste, Havyaka Brahmins. A talk is going on around us as to how only Swarnavalli matt got this contract of preaching Bhagavdgeeta in schools, than any other Hindu matt. When bypassing Supreme Court Judgement cash rich Gokarna Temple was handed over to Ramachandrapura Matt(another matt of Havyaka Brahmins) by BJP Govt., it is said that Swarnavalli Matt challenged the action of the Govt. Govt. had to yeild. The respected minister might have mediated the between the Govt and the matt. Govt. promised that Swarnavalli matt will be granted a project of 15 crores. That is how the project of Bhagavadgeeta Abhiyana in Schools came into being. We have to find the veracity of this story. Let us leave it to the intelligence dept.
  Having said all this, when we claim that Bhagavadgeeta is the holy script of Hindus, my only question is why only brahmins preach Bhagavadgeeta and not other caste matts? Who has given contract of preaching Hindutva only to brahmins? It is here we have to suspect their motive. Is it not an attempt to foist vedic culture on the people?
  India is a country of umpteen number of cultures. Thousands of castes. Hundreds of languages. Scores of different faiths.That is the speciality of
  our great natiion. Unity in diversity is the special nature of our country, that is Bharath.
  Ruling people always use tricks to see that people not think about their real burning problems, the root cause for which are the ruling people only. Raising emotional issues they try to keep the people fighting each other on such issues forgetting their woes. That is how they can easily loot people.
  The only intention of Bhagavadgeeta Abhiyana is not educating students but communalising young minds through which only they think of capturing political power and retaining power.
  I fully endorse Bhagesree’s write up.
  T Surendra Rao Bangalore

 23. The fundamentalism of any of the religion, region and language as equally bad, irrespective of who supports it, and whatever way it is done.

 24. Bharatiya said

  Githe beda ennuvavaru HINDU gale alla. Deashadroehigalu.

 25. “ಭಗವದ್ಗೀತೆ ಒಪ್ಪದವರು ದೇಶ ಬಿಟ್ಟು ತೊಲಗಲಿ” ಎಂದ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗ್ಡೆ ಕಾಗೇರಿಯವರ ಹೇಳಿಕೆ ಅಪ್ರಭುದ್ದ ಮತ್ತು ಸಂವಿಧಾನ ವಿರೋಧಿಯಾಗಿದೆ. ಈ ಹೇಳಿಕೆಯನ್ನು ದೇಶಪ್ರೇಮಿಗಳು ತೀವ್ರವಾಗಿ ಖಂಡಿಸಬೇಕಾಗುತ್ತದೆ.
  ಈ ರಾಷ್ಟ್ರದ ಗ್ರಂಥ ಸಂವಿಧಾನವೇ ಹೊರತು ಭಗವದ್ಗೀತೆಯಲ್ಲ. ಭಾರತ ಹಲವು ಧರ್ಮ, ಜಾತಿ, ಭಾಷೆ, ಪಂಗಡ, ಆಚರಣೆಯಿಂದ ಕೂಡಿದ ದೇಶವೆಂಬುದನ್ನು ಸಚಿವರು ಮರೆತಿದ್ದಾರೆ, ನಮ್ಮ ಸಂವಿಧಾನದ ಅನುಚ್ಚೇದ 19(1) ರಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವುದನ್ನು ಸಚಿವರು ಅರಿತು ಮಾತನಾಡುವುದು ಒಳಿತು. ಪ್ರಭುತ್ವವನ್ನು ಪ್ರಶ್ನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಹಕ್ಕಾಗಿದೆ. ಪ್ರಶ್ನಿಸಿದವರನ್ನು ದೇಶದಿಂದ ಹೊರ ಹಾಕಿ ಎನ್ನುವ ವಿವೇಕ ಇಲ್ಲದ ಈ ಹೇಳಿಕೆ ಪ್ರಜಾಪ್ರಭುತ್ವ ವಿರೋಧಿ ಮತ್ತು ಹಿಟ್ಲರನ ಫ್ಯಾಸಿಸ್ಟ್ ದೋರಣೆಯ ಅನುಕರಣೆಯಾಗಿದೆ.
  ಪ್ರಾಥಮಿಕ ಮತ್ತು ಫೌಢಶಾಲೆಗಳಲ್ಲಿ ಭಗವದ್ಗೀತೆ ಕಂಠಪಾಠ ಅಭಿಯಾನ ನಡೆಸಲು ಶೀರಸಿಯ ಸೋಂದಸ್ವರ್ಣವಲ್ಲಿ ಸಂಸ್ಥಾನಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಶಿಕ್ಷಣ ಇಲಾಖೆ, ಸರ್ಕಾರಿ ಶಾಲೆ ಹಾಗು ಶಿಕ್ಷಕರಿಗೆ ಆದೇಶಿಸುವ ಮೂಲಕ ರಾಜ್ಯದ ಬಿ.ಜೆ.ಪಿ. ಸಕರ್ಾರ ತನ್ನ ಕೋಮುವಾದಿ ಅಜೆಂಡವನ್ನು ಮುಗ್ದ ಮನಸ್ಸಿನ ಶಾಲಾ ಮಕ್ಕಳ ಮೇಲೆ ಹೇರುತ್ತಿರುವುದು ಖಂಡನೀಯ. ಈ ಅಭಿಯಾನವನ್ನು ನಡೆಸಲು ಅವಕಾಶ ನೀಡಬಾರದು ಹಾಗು ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಪ್ರಚಾರ ಹಾಗು ಧಾಮರ್ಿಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು. ಯಾವುದೇ ಧರ್ಮಪ್ರಚಾರಕ್ಕೆ ಸಕರ್ಾರಿ ಶಾಲೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು.
  ಶಾಲೆಗಳು ಯಾವುದೇ ಒಂದು ಧರ್ಮದ ಆಸ್ತಿಯಲ್ಲ, ಅಲ್ಲಿ ಹಿಂದು, ಮುಸ್ಲಿಮ್, ಸಿಖ್, ಜೈನ ಹಾಗೂ ಇತರೆ ಧರ್ಮದಲ್ಲಿ ನಂಬಿಕೆ ಇರುವವರು ಅಥವ ಧರ್ಮದಲ್ಲಿ ನಂಬಿಕೆ ಇಲ್ಲದವರೂ ಕೂಡ ಅಭ್ಯಾಸ ಮಾಡುತ್ತಿದ್ದಾರೆ. ಯಾವುದೇ ಒಂದು ಧಾಮರ್ಿಕ ಗ್ರಂಥವನ್ನು ಶಾಲೆಗಳಲ್ಲಿ ಪ್ರಸಾರ ಮಾಡುವುದು ಭಾರತ ಸಂವಿಧಾನದ ಧರ್ಮ ನಿರಪೇಕ್ಷ ತತ್ವಕ್ಕೆ ವಿರುದ್ದವಾಗಿದೆ. ಶಾಲೆಗಳನ್ನು ಧರ್ಮದ ಪ್ರಸಾರ ಕೇಂದ್ರಗಳನ್ನಾಗಿಸಲು ಹೊರಟಿರುವ ರಾಜ್ಯ ಸಕರ್ಾರದ ಕ್ರಮ ಫ್ಯಾಸಿಸ್ಟ್ ಮನೋಭಾವದ್ದಾಗಿದೆ.
  ಭಗವದ್ಗೀತೆ ಪ್ರಶ್ನಾತೀತ ಗ್ರಂಥವಲ್ಲ ಎಂದುಕೊಂಡರೆ ಅದು ಮೂರ್ಖತನವಾದೀತು. ಆರ್ಯರ ಆಗಮನದಿಂದಲೇ ಪುರೋಹಿತಶಾಹಿ ವ್ಯವಸ್ಥೆಯ ಹೇರಿಕೆಯ ವಿರುದ್ದ ಪ್ರತಿಭಟನೆಗಳು ನಡೆಯುತ್ತಾ ಬಂದಿವೆ. ವೈಧಿಕ ಪರಂಪರೆಯನ್ನು ಧಿಕ್ಕರಿಸಿದ ಶಿವಶರಣ ಕ್ರಾಂತಿಕಾರಿ ಬಸವಣ್ಣನವರ ಹೋರಾಟವನ್ನು ಸಚಿವರು ನೆನಪಿಸಿಕೊಳ್ಳಲಿ,. ಹಿಂದೂ ಧರ್ಮದಲ್ಲಿನ ಜಾತಿ ಪದ್ದತಿಯನ್ನು ಪ್ರಶ್ನಿಸಿ ಕನಕದಾಸರು, ಕಭೀರ ದಾಸರು ಮತ್ತಿತರ ಶರಣರು ಹೋರಾಡಿದ ಇತಿಹಾಸವಿದೆ. ಭಗವದ್ಗೀತೆಯ ಕುರಿತಾಗಿ ಕೆಲವು ಪ್ರಶ್ನೆಗಳಿದ್ದು ಅವುಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾಗಿದೆಯೆಂದು ಸ್ವಾಮಿ ವಿವೇಕಾನಂದರು ಹೇಳಿರುವುದನ್ನು ಈ ಸನಾತನಿಗಳು ಮರೆತಿದ್ದಾರೆ. ಮನುಷ್ಯ ಮನುಷ್ಯರ ನಡುವಿನ ಜಾತಿ ಭೇದವನ್ನು ಸಮರ್ಥಿಸುವ ಮನುಸ್ಪ್ರುತಿಯನ್ನು ಡಾ.ಬಿ.ಆರ್.ಅಂಬೇಡ್ಕರ್ ರವರು ಸುಟ್ಟು ಹಾಕಿ ತಿರಸ್ಕರಿಸಿದ್ದನ್ನು ಸಚಿವರು ಮನದಟ್ಟುಮಾಡಿಕೊಳ್ಳಬೇಕು.
  ಭಗವದ್ಗೀತೆ ರಾಷ್ಟ್ರೀಯ ಗ್ರಂಥವೂ ಅಲ್ಲ, ಎಲ್ಲಾ ಹಿಂದುಗಳ ಪವಿತ್ರ ಗ್ರಂಥವೂ ಅಲ್ಲ. ಬದಲಾಗಿ ಕೆಲ ವೈದಿಕರ ಗ್ರಂಥವಷ್ಟೇ ಎಂದು ಸಚಿವರು ತಿಳಿಯಬೇಕಾಗಿದೆ. ಇದನ್ನು ಸಾರ್ವತ್ರೀಕರಣಗೊಳಿಸುವುದು ಸಂವಿಧಾನಕ್ಕೆ ತೋರಿದ ಅಪಚಾರ. ಪ್ರಜಾಪ್ರಭುತ್ವ, ಸಂವಿಧಾನ, ಶಾಸಕಾಂಗ ಇವುಗಳು ರಚಿತವಾಗಲು ವಿದೇಶಿ ತಜ್ಞರ ಕೊಡುಗೆಯನ್ನ ಯಾರೂ ಮರೆಯುವಂತಿಲ್ಲ. ಈ ನಾಡಿನಲ್ಲಿ ವೈಚಾರಿಕ ಕ್ರಾಂತಿಗೆ ಕರೆ ನೀಡಿದ ರಾಷ್ಟಕವಿ ಕುವೆಂಪುರವರ ಸಾಹಿತ್ಯವನ್ನು ಓದಿ ವಿಶ್ವ ಮಾನವನಾಗಲು ಕಾಗೇರಿಯವರು ಪ್ರಯತ್ನಿಸಿದರೆ ಅದು ಶಿಕ್ಷಣ ಸಚಿವರ ಸ್ಥಾನಕ್ಕೆ ಸಲ್ಲುವ ಗೌರವ.
  ಭಗವದ್ಗೀತೆಯಲ್ಲಿ ಚಾತುರ್ವರ್ಣ್ಯ, ಜಾತಿವ್ಯವಸ್ಥಯನ್ನು ಸಮರ್ತಿಸಲಾಗಿದೆ. ಯಾವುದೇ ಪ್ರತಿಫಲ ನಿರೀಕ್ಷಿಸದೇ ಸುಮ್ಮನೇ ದುಡಿಯಬೇಕು ಪ್ರತಿಫಲ ನೀಡುವುದು ದೇವರಿಗೆ ಬಿಟ್ಟಿದ್ದು ಎನ್ನುವ ಗೀತೆಯಸಾರ ಗುಲಾಮಗಿರಿ ಮತ್ತು ಪಾಳೇಗಾರಿ ವ್ಯವಸ್ಥೆಯನ್ನು ಪ್ರೋಸ್ತಾಯಿಸುವಂತಿದೆ. ಎದು ಶ್ರಮಶಕ್ತಿಯನ್ನು ಕಡೆೆಗಣಿಸುತ್ತದೆ. ಪುನರ್ಜನ್ಮ, ಪಾಪ-ಪುಣ್ಯ, ಆಸ್ತಿಗಾಗಿ ಸಹೋದರನ್ನು ಕೊಲ್ಲು ಹೀಗೆ ಮೌಡ್ಯತೆಯನ್ನ ಸಾರುವ ಜೀವವಿರೋಧಿ ಸಂದೇಶಗಳು ಗೀತೆಯಲ್ಲಿವೆ. ಹೀಗಾಗಿ ಇದು ಸರ್ವಸಮ್ಮತವಲ್ಲ. ಇದನ್ನು ಅನುಸರಿಸುವುದು ಕೆಲವರ ಖಾಸಗೀ ವಿಚಾರ. ಸರ್ಕಾರಿಶಾಲೆಗಳಲ್ಲಿ ಅಭಿಯಾನದ ಮೂಲಕ ಅಧಿಕೃತಗೊಳಿಸುವುದು ಸಂವಿಧಾನ ವಿರೋಧಿ ಕ್ರಮವಾಗಿದೆ.
  ಸರ್ಕಾರಿ ಶಾಲೆಗಳು ಅಗತ್ಯ ಮೂಲಭೂತ ಸೌಲಭ್ಯಗಳಿಲ್ಲದೆ ನರಳುತ್ತಿವೆ, ಸುಮಾರು ಶೇ 58 ರಷ್ಟು ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳಿಲ್ಲ. ಶಿಕ್ಷಣ ವ್ಯಾಪಾರೀಕಣ, ಡೊನೇಷನ್ ಹಾವಳಿಯನ್ನು ನಿಯಂತ್ರಿಸಲು ಸಕರ್ಾರ ಮುಂದಾಗುತ್ತಿಲ್ಲ. ಬದಲಾಗಿ ಈ ರೀತಿಯ ಕೋಮುವಾದಿ ಚಟುವಟಿಕೆಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿರುವುದು ಸರ್ಕಾರದ ಹೊಣೆಗೇಡಿತನವಾಗಿದೆ. ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಒಪ್ಪದಿರುವ ಭಗವದ್ಗೀತೆಯನ್ನು ಶಾಲೆಗಳಲ್ಲಿ ಭೋಧಿಸುವ ಅಗತ್ಯವಿಲ್ಲ. ಸಂವಿಧಾನ ಬದ್ದ ಶಾಲೆಗಳು ಆರ್.ಎಸ್.ಎಸ್. ಕೇಂದ್ರಗಳಾಗಬೇಕಿಲ್ಲ. ಅಪ್ರಾಪ್ತ ಎಳೇ ಮಕ್ಕಳಲ್ಲಿ ಬಲವಂತದ ಮತ ಪ್ರಚಾರ ಮಾಡುತ್ತಿರುವ ತಾವು ಕಾನೂನು ಉಲ್ಲಂಘಿಸುತ್ತಿದೆ. ಇಂತಹ ಸಂವಿಧಾನ ವಿರೋಧಿ ಅಭಿಯಾನವನ್ನು ರಾಜ್ಯ ಸಕರ್ಾರ ಕೂಡಲೇ ಹಿಂಪಡೆಯಬೇಕು ಮತ್ತು ಶಿಕ್ಷಣ ಸಚಿವ ಕಾಗೇರಿ ರಾಜ್ಯದ ಜನತೆಯಲ್ಲಿ ಕ್ಷಮೆಯಾಚಿಸಬೇಕು.
  – ಹೆಚ್.ಆರ್.ನವೀನ್ ಕುಮಾರ್
  ಬೆಂಗಳೂರು

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: