ಭಾರತ ಬಿಟ್ಟು ಎಲ್ಲಿಗೆ ತೊಲಗುವುದು?

ನಾನು ಮತ್ತು ನನ್ನಂಥ ಇನ್ನೂ ಅನೇಕರಿಗೆ ಈಗ ಎರಡು ಆಯ್ಕೆಗಳು ಇದ್ದ ಹಾಗಿದೆ: ಒಂದೋ ಗಂಟುಮೂಟೆ ಕಟ್ಟಿಕೊಂಡು ಹಿಮಾಲಯ ದಾಟಿ ಹೋಗುವುದು ಅಥವಾ ವಿರುದ್ಧ ದಿಕ್ಕಿನಲ್ಲಿ ಚಲಿಸಿ “ಹಿಂದೂ”ಮಹಾಸಾಗರದಲ್ಲಿ ಲೀನವಾಗುವುದು.  ನಮ್ಮ  ಶಿಕ್ಷಣ ಸಚಿವರಾದ ಕಾಗೇರಿಯವರು ಭಗವದ್ಗೀತೆ ಬೇಡವಾದವರು ಭಾರತ ಬಿಟ್ಟು ತೊಲಗಿ ಎಂದು ಹೇಳಿದ ಮೇಲೆ ಇನ್ನು ಏನು ದಾರಿ ಉಂಟು. Read the rest of this entry »

Advertisements

Comments (27)

ತೇಜಸ್ವಿ ಎಂಬ ‘ಹೀರೋ’ ಬಗ್ಗೆ

ಕೃಷಿ, ಶಿಕಾರಿ, ಚಿತ್ರಗ್ರಹಣ, ಸಂಗೀತ, ಪರಿಸರ ಅಧ್ಯಯನ, ಲೋಹಿಯಾ ಚಳುವಳಿ, ರೈತ ಚಳುವಳಿ, ಕನ್ನಡ ಕಂಪ್ಯೂಟಿಂಗ್… ಕೊನೆಗೆ ಸ್ಕೂಟರ್ ರೆಪೇರಿ… ಹೀಗೆ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ಸಕಲಕಲಾವಲ್ಲವನ್ ಪೂರ್ಣಚಂದ್ರ ತೇಜಸ್ವಿ. ನಮ್ಮ ಟೀವಿಗಳಲ್ಲಿ ಎಲ್ಲದರ ಬಗ್ಗೆಯೂ ಮಾಡುವ ಹಾಗೆ ಕನ್ನಡ ಸಾಹಿತ್ಯ ಲೋಕದ  ”ಹೀರೋ”ಗಳ ಬಗ್ಗೆ ರೇಟಿಂಗ್ ಏನಾದರೂ ಮಾಡಿದರೆ ನಮ್ಮಂತ ಮಧ್ಯವಯಸ್ಕ ಹೆಂಗಸರಂತೂ en-masse ಮೊದಲ ಸ್ಥಾನಕ್ಕೆ ತೇಜಸ್ವಿಗೆ ವೋಟ್ ಹಾಕಿಯೇವು . ಹೀರೋತನವನ್ನು ಮೆರೆಯದೆ, ಈ ನಮ್ಮ ಉಳಿದ ಪೇಟೆ ಸಾಹಿತಿ ಹೀರೋಗಳ ಸಹವಾಸ ಜಾಸ್ತಿ ಸಹಿಸಿಕೊಳ್ಳುವುದು ಕಷ್ಟ ಅನ್ನುವ ಧಾಟಿಯಲ್ಲಿ ಮಲೆನಾಡಿನ ಮೂಲೆಗೆ ಹೋಗಿ ಇದ್ದುಬಿಟ್ಟ ಕಾರಣಕ್ಕೆ ತೇಜಸ್ವಿ ಇನ್ನಷ್ಟು ಹೀರೋ!
Read the rest of this entry »

Comments (5)

ಕಣ್ಣು ಪಿಳಿಪಿಳಿ, ಬಾಯಿ ಪಚಪಚ… ಭಾಗ ೨

ಕಾಟ್-ಕ-ನಾಲಾದಲ್ಲೊಂದು ಗುಡಿಸಲು

ನೈನಿತಾಲ್ ಮತ್ತು ಕಾಲಧುಂಗಿಯ ಆಚೆಯ ಜನರಿಗೆ ಜಿಮ್ ಕಾರ್ಬೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಕಾರ್ಬೆಟ್ ಹೆಸರು ಹೇಳಿದ ಕೂಡಲೆ ಇಲ್ಲಿನ ಜನ ಅವನ ಹೆಸರಿಟ್ಟಿರುವ ರಾಷ್ಟ್ರೀಯ ಅರಣ್ಯಧಾಮದ ಬಗ್ಗೆಯೇ ಮಾತಾಡುತ್ತಿದ್ದೇವೆ ಅಂತ ಅಂದುಕೊಂಡುಬಿಡುತ್ತಾರೆ. ಆದರೆ ನರಭಕ್ಷಕ ಹುಲಿ ಅಂದರೆ ಮಾತ್ರ ಬಹಳ ಉತ್ಸುಕರಾಗಿ ಅವು ಮನುಷ್ಯರನ್ನು ಹೇಗೆ ಕೊಂದು ತಿಂದು ತೇಗಿದವು ಅಂತ ವಿವರವಾಗಿ ಕತೆ ಹೇಳಲಿಕ್ಕೆ ಶುರು ಮಾಡುತ್ತಾರೆ.

Read the rest of this entry »

ನಿಮ್ಮ ಟಿಪ್ಪಣಿ ಬರೆಯಿರಿ

ಕಣ್ಣು ಪಿಳಿಪಿಳಿ, ಬಾಯಿ ಪಚಪಚ…

ಮೊನ್ನೆ ಟೈಗರ್ ಸೆನ್ಸಸ್ ಮಾತು ಆಫೀಸಿನಲ್ಲಿ ಚರ್ಚೆ ಆಗುತ್ತಿದ್ದಾಗ ನನಗೆ ನಮ್ಮ ತಾತ ಹೇಳುತ್ತಿದ ಹುಲಿ ಬೇಟೆಯ ಕತೆ, ಅಜ್ಜಿ ಅಮ್ಮ ಚಿಕ್ಕಮ್ಮಂದಿರು ಹೇಳುತ್ತಿದ್ದ “ಕೆಂಪು ಕಣ್ಣಜ್ಜಿ” ಕತೆ ನೆನಪಾಗಿ ನಾವು ಈಗ ಹುಲಿಯ ಬಗ್ಗೆ ಮಾತಾಡುವ ರೀತಿಗೂ ಬಾಲ್ಯದಲ್ಲಿ ನನಗಿದ್ದ ಹುಲಿಯ ಕಲ್ಪನೆಗೂ ಎಷ್ಟು ಅಜಗಜಾಂತರ ಅನ್ನಿಸಿತು.

Read the rest of this entry »

Comments (1)

ಫೈಜ್ ಗೆ ನೂರು – ಭಾಗ ೨

ಕತ್ತಲು  ಕವಿಯುವುದು ಮತ್ತು ಬೆಳಕು ಮೂಡುವುದರ ಬಗ್ಗೆ ಅದೆಷ್ಟು ಕವಿಗಳು ಬರೆದಿದ್ದಾರೋ! ಜಾನ್ ಡನ್ ತನ್ನ ಪ್ರೇಯಸಿಯಿಂದ ತನ್ನನಗಲಿಸುವ ಸೂರ್ಯನನ್ನು “busy old fool” ಅಂತ ಬೈದು ಜಾಲಾಡುವುದರಿಂದ ಹಿಡಿದು “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಅಂತ ಹಾಡುವ ನಮ್ಮದೇ ಖಾಸಾ ಕವಿರತ್ನ ಕಾಳಿದಾಸನವರೆಗೆ… ಲಕ್ಷಲಕ್ಷ.

ಫೈಜ್ ನ ಸುಮಾರು ಕವಿತೆಗಳೂ  ಬೆಳಕು, ನೆರಳು, ಕತ್ತಲೆಯ ಇಮೇಜುಗಳ ಸುತ್ತ ಹೆಣೆದವು. ಇಲ್ಲಿ ನನಗೆ ಚೆಂದ ಅನ್ನಿಸಿದ ಎರಡು ಸ್ವಲ್ಪ ಧೀರ್ಘ ಮತ್ತು ಒಂದು ಪುಟ್ಟ ಕವನದ ಅನುವಾದ ಇದೆ. ಎರಡನೆಯದು ಟಿಪಿಕಲ್ ಫೈಜ್ ಪದ್ಯ. ತುಂಬಾ ರೊಮ್ಯಾಂಟಿಕ್ ಇಮೆಜುಗಳಿಂದ ಶುರುವಾಗಿ ಮತ್ತೆ ಇನ್ನೆಲ್ಲಿಗೋ ಓದುಗರನ್ನು ಎಳೆದುಕೊಂಡು ಹೋಗುವಂಥದು.

ನಿಜ ಹೇಳಬೇಕೆಂದರೆ ಮೂರನೆಯದು ಅನುವಾದ ಅನ್ನಿಸಿಕೊಳ್ಳಲಾರದೇನೋ. ಅಲ್ಲಿ ಬಳಸುವ “ಸಾಕಿಗರಿ” ಅನ್ನುವ ಶಬ್ದಕ್ಕೆ ಏನು ಹೇಳುವುದಪ್ಪ ಅಂತ ಹುಡುಕ ಹೊರಟು ಅದು ಬೇರೆಯೇ ಆಗಿಬಿಟ್ಟಿದೆ. ಸಾಕಿ ಅನ್ನುವ ಪದವನ್ನು ಕನ್ನಡ ಗಜಲುಗಳಲ್ಲಿ ಬಳಸುತ್ತಾರಾದರೂ ಅದು ಸರಿ ಹೋಗೋದಿಲ್ಲ ಅನ್ನಿಸಿ ಅದನ್ನು ಬಿಟ್ಟು  ಬೇರೆ ಅರಸಿದ್ದರ ಫಲ ಮೂರನೆ ಪದ್ಯ. ಕನ್ನಡದಲ್ಲಿ ನಾವು ಜಾಣತನದಿಂದ ಭಾವಾನುವಾದ ಅನ್ನುವ ಪದ ಬಳಸಿ ಎಂಥ ಆಟ ಆಡಿಯೂ ತಪ್ಪಿಸಿಕೊಳ್ಳಬಹುದಲ್ಲ. ಆ ಧೈರ್ಯದ ಮೇಲೆ ಮೂರನೆಯದನ್ನೂ ಸೇರಿಸುತ್ತಿದ್ದೇನೆ! Read the rest of this entry »

Comments (3)

ಫೈಜ್ ಗೆ ನೂರು

ಫೈಜ್ ಅಹಮೆದ್ ಫೈಜ್ ಬದುಕಿದ್ದರೆ ಈ ಫೆಬ್ರವರಿಗೆ ನೂರು ವರ್ಷ ತುಂಬುತ್ತಿತ್ತು. ಫೈಜ್ ತುಂಬಾ ಜನರ ಫೇವರೆಟ್  ಕವಿ. ಪ್ರೇಮದ ಬಗ್ಗೆ ಮುಟ್ಟಿದರೆ ಮುದುರೀತು ಅನ್ನುವಷ್ಟು ಕೋಮಲ-ಮಧುರವಾಗಿ ಮತ್ತು ಕ್ರಾಂತಿಯ ಬಗ್ಗೆ ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ ಫೆವರೇಟ್ ಆಗದೆ ಇರಲಿಕ್ಕೆ ಹೇಗೆ ಸಾಧ್ಯ ಅಲ್ಲವಾ? “ಮೇರೆ ಮೆಹಬೂಬ್ ಮುಜ್ಸೆ ಪೆಹಲೀಸಿ ಮೊಹಾಬ್ಬತ್ ನ ಮಾಂಗ್”ನಂತ ಕವಿತೆಗಳಲ್ಲಿಯಂತೂ ಫೈಜ್ ಇವನ್ಯಾವ ಮಾಯಕಾರನಪ್ಪ ಅನ್ನಿಸುವ ಹಾಗೆ ಪ್ರೇಮ ಮತ್ತು ರೋಮಾಂಟಿಕ್ ಪ್ರೇಮದಾಚದ ಕ್ರೂರ ಪ್ರಪಂಚ ಎರಡರ ಬಗ್ಗೆಯೂ ಬರೆಯುತ್ತಾನೆ. ಈ ಪದ್ಯದಲ್ಲಿ ಆಧುನಿಕ ಕಾವ್ಯ ಮತ್ತು ಸಾಂಪ್ರದಾಯಿಕ ಉರ್ದು ಕವಿತ್ವದ ಭಾವುಕ, ಭಾವಗೀತಾತ್ಮಕ ಪ್ರತಿಮೆಗಳನ್ನು ಒಟ್ಟೊಟ್ಟಿಗೆ ಬಳಸುತ್ತಾನೆ ಈ ಮಾರ್ಕ್ಸಿಸ್ಟ್ ಕವಿ.

Read the rest of this entry »

Comments (2)

ಕಾಗೆ ನರಿಗಳ ಹೊಸ ಅವತಾರಗಳು

ನಾವು ಸ್ಕೂಲಿಗೆ ಹೋಗ್ತಿದ್ದಾಗ ಏಕಪಾತ್ರಾಭಿನಯ ಬಹಳ popular ಆಗಿತ್ತು. ಈಗ ಬೆಂಗಳೂರಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಹೀಗೆಂದರೇನಂತಲೂ ನೆಟ್ಟಗೆ ಗೊತ್ತಿದ್ದ ಹಾಗಿಲ್ಲ.   ಧರಣಿ ಮಂಡಲ ಮಧ್ಯದ ಕರ್ನಾಟ ದೇಶದೊಳ್ ಇಂದು ರಾರಾಜಿಸುತ್ತಿರುವ ರಾಜಕಾರಣಿಗಳ ಪ್ರತಿಭೆ ನೋಡಿ ನನಗೆ ನಮ್ಮ ಸ್ಕೂಲಿನಲ್ಲಿ ನಾವು ಆಡುತ್ತಿದ್ದ ಏಕಪಾತ್ರಾಭಿನಯ ನೆನಪಾಯಿತು. “ಇಲ್ಲಿ ನಿಂತರೆ ಪಕ್ಷಕ್ಕೆ ನಿಷ್ಟ, ಇಲ್ಲಿ ನಿಂತರೆ ಭಿನ್ನಮತೀಯ” ಅಂತ ಸಲೀಸಾಗಿ ನಟನೆಯ ಶೈಲಿ, ದನಿಯನ್ನು  ಬದಲಾಯಿಸುವ ವರ್ತೂರ್ ಪ್ರಕಾಶರು, ರೇಣುಕಾಚಾರ್ಯರು…   “ಇಲ್ಲಿ ನಿಂತರೆ ಜಾತ್ಯಾತೀತ, ಇಲ್ಲಿ ನಿಂತರೆ ‘ಜಾತ್ಯಾತೀತ ಅಂದರೆ ಏನ್ರೀ’ ಅಂತ ಕೇಳುವವನು” ಅಂತ ಉವಾಚಿಸುವ ನಮ್ಮ ಅದ್ವಿತೀಯ ಕುಮಾರ ಪ್ರತಿಭೆ… ಇವರಲ್ಲಿ ಯಾರಾದ್ರೂ ನಮ್ಮ   ಸ್ಕೂಲಿನಲ್ಲಿದ್ದಿದ್ದರೆ ಎಂಥಾ ದೊಡ್ಡ ಸ್ಟಾರುಗಳೇ ಆಗ್ತಿದ್ರಲ್ಲ ಅಂತ!

Read the rest of this entry »

Comments (1)

« Newer Posts · Older Posts »